• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಇಂಟರ್ ಲಾಕಿಂಗ್ ಕೇಂದ್ರ ಸ್ಥಾನ ಪಶ್ಚಿಮ ಬಂಗಾಲದಲ್ಲಿ!

Hanumanth Kamath Posted On June 8, 2023


  • Share On Facebook
  • Tweet It

ಭಾರತದ ಅತೀ ದೊಡ್ಡ ರೈಲು ದುರಂತಗಳಲ್ಲಿ ಒಂದಾಗಿರುವ ಬಲಸೋರ್ ರೈಲು ದುರಂತದ ಹಿಂದಿನ ನಿಜವಾದ ಸತ್ಯ ಜಗತ್ತಿಗೆ ಗೊತ್ತಾಗಬೇಕಿದೆ. ಆ ಸತ್ಯ ತಿಳಿಯಲು ಇಡೀ ಪ್ರಪಂಚ ಕಾಯುತ್ತಿದೆ. ಕೋರಮಂಡಲ ಎಕ್ಸಪ್ರೆಸ್ ರೈಲು ದುರಂತ ಜರುಗಲು ಕಾರಣಗಳೇನು? ಅಂದಾಜು 280 ರಷ್ಟು ಪ್ರಯಾಣಿಕರು ಮೃತರಾದ ಘಟನೆಯ ಬಗ್ಗೆ ಸಿಬಿಐ ತನಿಖೆಗೆ ಕೊಟ್ಟರೆ ಅದಕ್ಕೆ ಕಾಂಗ್ರೆಸ್, ಟಿಎಂಸಿ ಸಹಿತ ವಿಪಕ್ಷಗಳ ವಿರೋಧ ಯಾಕೆ? ಅವರಿಗೆ ತನಿಖೆ ಸೂಕ್ತವಾದ ಮೂಲಗಳಿಂದ ಆಗುವುದು ಬೇಡವೇ?
ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ವಿಪಕ್ಷಗಳಿಗೆ ಯಾಕೆ? ಲೋಕಸಭಾ ಚುನಾವಣೆಗೆ ಒಂದು ವರ್ಷಕ್ಕಿಂತಲೂ ಕಡಿಮೆ ಸಮಯ ಇರುವಾಗ ಕೇಂದ್ರ ಸರಕಾರದ ವರ್ಚಸ್ಸಿಗೆ ದಕ್ಕೆ ತರಲು ಏನಾದರೂ ಪ್ರಯತ್ನಗಳು ಕಾಣದ ಕೈಗಳಿಂದ ನಡೆಯುತ್ತವೆ ಎನ್ನುವ ಸೂಕ್ಷ್ಮವನ್ನು ಈ ಮೊದಲೇ ರಾಜಕೀಯ ವಿಶ್ಲೇಷಣಾಕಾರರು ವ್ಯಕ್ತಪಡಿಸಿದ್ದರು. ಈ ನರಮೇಧದ ಮೂಲಕ ಅಂತಹ ವಿಷ್ನಸಂತೋಷಿಗಳು ತಮ್ಮ ಕುಕೃತ್ಯದಲ್ಲಿ ಯಶಸ್ವಿಯಾದರಾ? ಅದರ ಜಾಡು ಹಿಡಿದು ಸಿಬಿಐ ಹೊರಟಿದೆ. ಈಗ ಸಿಬಿಐ ತನಿಖೆಯನ್ನು ವಿರೋಧಿಸುವವರ ಹಿಂದಿನ ಉದ್ದೇಶ ಏನು? ಪ್ರಪಂಚ ಸತ್ಯ ತಿಳಿಯಲು ಕಾಯುತ್ತಿದೆ.

ಇಂಟರ್ ಲಾಕಿಂಗ್ ಕೇಂದ್ರ ಸ್ಥಾನ ಪಶ್ಚಿಮ ಬಂಗಾಲದಲ್ಲಿ!

ಈ ರೈಲ್ವೆ ಟ್ರಾಕ್ ಗಳಲ್ಲಿ ಇರುವ ಇಂಟರ್ ಲಾಕಿಂಗ್ ವ್ಯವಸ್ಥೆಯ ಬಗ್ಗೆ ತಿಳಿದರೆ ಈ ದುರಂತದ ಹಿಂದಿನ ಮಜಲು ನಮಗೆ ಅರ್ಥವಾಗುತ್ತದೆ. ಒಂದು ವೇಳೆ ಒಂದು ರೈಲು ಮುಖ್ಯ ಹಳಿಯಿಂದ ಲೂಪ್ ಲೈನಿಗೆ ಶಿಫ್ಟ್ ಆಗುವ ಅವಶ್ಯಕತೆ ಇದ್ದರೆ ಆಧುನಿಕ ತಂತ್ರಜ್ಞಾನದಿಂದ ತಯಾರಿಸಲಾದ ಸಾಫ್ಟ್ ವೇರ್ ಮೂಲಕ ರೈಲಿಗೆ ನಿರ್ದೇಶನ ಬರುತ್ತದೆ. ಆಗ ಇಂಟರ್ ಲಾಕಿಂಗ್ ವ್ಯವಸ್ಥೆ ಮೂಲಕ ಇದು ಸರಳವಾಗಿ ನಡೆಯುತ್ತದೆ. ಭಾರತದ ರೈಲ್ವೆ ಇಂಟರ್ ಲಾಕಿಂಗ್ ನಿಯಂತ್ರಣ ವ್ಯವಸ್ಥೆ ಪ್ರಪಂಚದ ಅತ್ಯಂತ ಉತ್ತಮ ತಂತ್ರಜ್ಞಾನವನ್ನು ಹೊಂದಿದ್ದು ಅದು ಎಲ್ಲಿಯೂ ಲೋಪ ಹೊಂದಿಲ್ಲ. ಏಷ್ಯಾದ ಅತೀ ಶ್ರೇಷ್ಟದರ್ಜೆಯ ಇಂಟರ್ ಲಾಕಿಂಗ್ ವ್ಯವಸ್ಥೆ ಭಾರತದ್ದು ಆಗಿದ್ದು, ಕೇಂದ್ರ ಸ್ಥಾನ ಪಶ್ಚಿಮ ಬಂಗಾಲದ ಬಂದೇಲ್ ನಲ್ಲಿದ್ದು, ರೈಲುಗಳ ಸಮರ್ಪಕ ಓಡಾಟ ಮತ್ತು ನಿರ್ಧರಿತ ವೇಗದ ಮೇಲೆ ಕಣ್ಣು ಇಡುತ್ತದೆ.
ರೈಲಿನಲ್ಲಿ ಪ್ರಯಾಣಿಸುವವರು ಖಂಡಿತವಾಗಿಯೂ ಲೂಪ್ ಲೈನ್ ಬಗ್ಗೆ ಕೇಳಿರುತ್ತೀರಿ, ನೋಡಿರುತ್ತೀರಿ ಮತ್ತು ಕ್ರಾಸಿಂಗ್ ಸಂದರ್ಭದಲ್ಲಿ ಲೂಪ್ ಲೈನ್ ಮೇಲೆ ನಿಂತು ಪಕ್ಕದ ಟ್ರಾಕಿನಲ್ಲಿ ಬೇರೆ ರೈಲು ಓಡಿದ್ದನ್ನು ನೋಡಿರುತ್ತೀರಿ. ಲೂಪ್ ಲೈನ್ ಎಂದರೆ ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿಯಾಗಿ ನಿರ್ಮಿಸಲಾಗುವ ಹಳಿ. ಇದು ಯಾವುದೇ ರೈಲು ನಿಲ್ದಾಣದಲ್ಲಿ ಇರುವ ಸಾಮಾನ್ಯ ವ್ಯವಸ್ಥೆ. ಫ್ಲಾಟ್ ಫಾರಂನ ಕೆಲವೇ ಗಜಗಳ ದೂರದಲ್ಲಿ ಮುಖ್ಯ ರೈಲ್ವೆ ಟ್ರ್ಯಾಕ್ ನಿಂದ ಬೇರ್ಪಟ್ಟ ಲೂಪ್ ಲೈನ್ ನಂತರ ನಿರ್ದಿಷ್ಟ ದೂರದ ಬಳಿಕ ಮತ್ತೆ ಜೊತೆಯಾಗುವ ವ್ಯವಸ್ಥೆಯಾಗಿರುತ್ತದೆ.ಈ ಮೂಲಕ ಮುಖ್ಯ ಟ್ರಾಕಿನಲ್ಲಿ ಸೂಪರ್ ಫಾಸ್ಟ್ ರೈಲುಗಳ ಸಂಚಾರಕ್ಕೆ ಇದು ಅನುಕೂಲಕರವಾಗಿರುತ್ತದೆ. ಲೂಪ್ ಲೈನ್ ಇದನ್ನು ಗೂಡ್ಸ್ ರೈಲುಗಳ ನಿಲುಗಡೆ ಅಥವಾ ಕ್ರಾಸಿಂಗ್ ವ್ಯವಸ್ಥೆಗೆ ನಿರ್ಮಿಸಲಾಗಿರುತ್ತದೆ.

ಆ ಮುಸ್ಸಂಜೆ ಏನಾಯಿತು?

ಹಾಗಾದರೆ ಈಗ ಕೋರಮಂಡಲ ಎಕ್ಸಪ್ರೆಸ್ ದುರಂತ ಹೇಗಾಯಿತು? ಏನಾಯಿತು, ಆ ಮುಸ್ಸಂಜೆಯಲ್ಲಿ. ಕೋರಮಂಡಲ್ ಎಕ್ಸಪ್ರೆಸ್ ಗಂಟೆಗೆ 128 ಕಿಲೋಮೀಟರ್ ವೇಗದಲ್ಲಿ ಗ್ರೀನ್ ಟ್ರಾಕ್ ನಲ್ಲಿ ಓಡುತ್ತಿತ್ತು. ಅದು ಗ್ರೀನ್ ಟ್ರಾಕ್ ನಲ್ಲಿ ಹೋಗಲು ಅದಕ್ಕೆ ಗ್ರೀನ್ ಸಿಗ್ನಲ್ ಕೂಡ ದೊರಕಿತ್ತು. ಇನ್ನು ಲೂಪ್ ಲೈನ್ ನಲ್ಲಿ ಅಗಾಗಲೇ ಗೂಡ್ಸ್ ರೈಲೊಂದು ನಿಂತಿತ್ತು. ಮುಖ್ಯ ಟ್ರಾಕಿನಲ್ಲಿ ಗಂಟೆಗೆ 128 ಕಿ.ಲೋ ಮೀಟರ್ ವೇಗದಲ್ಲಿ ಸಂಚರಿಸಲು ಅನುಮತಿ ಪಡೆದುಕೊಂಡಿದ್ದ ಕೋರಮಂಡಲ್ ಎಕ್ಸಪ್ರೆಸ್ ಕೊನೆಯ ಕ್ಷಣದಲ್ಲಿ ಮುಖ್ಯ ಟ್ರಾಕಿನಿಂದ ಲೂಪ್ ಲೈನಿಗೆ ಶಿಫ್ಟ್ ಆಗಿದ್ದು ಯಾಕೆ ಎನ್ನುವುದೇ ನಿಗೂಢವಾಗಿದೆ. ಸಾಫ್ಟ್ ವೇರ್ ನಿಂದ ಬಂದ ಸಂದೇಶದಿಂದ ಸ್ವಯಂಚಾಲಿತವಾಗಿ ರೈಲು ಮುಖ್ಯ ಟ್ರಾಕಿನಿಂದ ಲೂಪ್ ಲೈನಿಗೆ ಬದಲಾಯಿಸಲ್ಪಟ್ಟಿತ್ತು.
ಭಾರತದ ಇಂಟರ್ ಲಾಕಿಂಗ್ ವ್ಯವಸ್ಥೆ ಬಹಳ ಸುರಕ್ಷಿತವಾಗಿರುವ ತಂತ್ರಜ್ಞಾನವಾಗಿದೆ. ಯಾರಾದರೂ ಮನುಷ್ಯರು ಉದ್ದೇಶಪೂರ್ವಕವಾಗಿ ಸಾಫ್ಟ್ ವೇರ್ ನಲ್ಲಿ ಕೈ ಆಡಿಸದೇ ಹೋದರೆ ಅದರ ದತ್ತಾಂಶ ಬದಲಾಯಿಸಲು ಸಾಧ್ಯವಿಲ್ಲ. ಇದರ ಅರ್ಥ ಎಲ್ಲವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿಯೇ ಈ ಕೃತ್ಯ ಮಾಡಲಾಗಿದೆ. ಇಂಟರ್ ಲಾಕಿಂಗ್ ಸಿಸ್ಟಮ್ ಆಜ್ಞೆಗಳನ್ನು ಉದ್ದೇಶಪೂರ್ವಕವಾಗಿಯೇ ಬದಲಾಯಿಸಲಾಗಿದೆ. ಈ ತಂತ್ರಜ್ಞಾನವನ್ನು ಚೆನ್ನಾಗಿ ಅರಿತಿರುವ ವ್ಯಕ್ತಿಯಿಂದಲೇ ಈ ಕೃತ್ಯ ನಡೆದಿದೆ.

ಹೆಚ್ಚು ಸಾವು ಸಂಭವಿಸುವ ಸಂಚು ಇತ್ತಾ?

ಕೋರಮಂಡಲ್ ಎಕ್ಸಪ್ರೆಸ್ ಟ್ರಾಕ್ ಬದಲಾಯಿಸಿದ ಹೆಚ್ಚು ಕಡಿಮೆ ಅದೇ ಹೊತ್ತಿನಲ್ಲಿ ಪಕ್ಕದ ಹಳಿಯಲ್ಲಿ ಅತೀ ವೇಗದಲ್ಲಿ ಸಂಚರಿಸುವ ಡುರಾಟೋಂ ಎಕ್ಸಪ್ರೆಸ್ ಕೂಡ ಹಾದು ಹೋಗಿದೆ. ಕೋರಮಂಡಲ ಎಕ್ಸಪ್ರೆಸ್ ಲೂಪ್ ಲೈನಿನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಹೊಡೆದು ಅದರ ಬೋಗಿಗಳು ಡುರಾಂಟೋ ಎಕ್ಸಪ್ರೆಸ್ಸಿನ ಮೇಲೆ ಬಿದ್ದಿವೆ. ಇದರಿಂದ ಅತೀ ಹೆಚ್ಚಿನ ಸಾವು ನೋವು ಸಂಭವಿಸಿರುವುದು ನಮ್ಮ ಕಣ್ಣ ಮುಂದಿದೆ. ಮೇಲ್ನೋಟಕ್ಕೆ ಇದೊಂದು ಅಪಘಾತ ಎನ್ನುವುದಕ್ಕಿಂತ ವ್ಯವಸ್ಥಿತ ರೀತಿಯಲ್ಲಿ ನಡೆಸಿದ ಭೀಕರ ನರಮೇಧ ಎನ್ನಬಹುದು. ಈ ಕೃತ್ಯದ ಹಿಂದೆ ಪ್ರಭಾವಿ ಕೈಗಳು ಕೆಲಸ ಮಾಡಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಇದನ್ನು ತನಿಖೆ ಮಾಡಲು ಸಿಬಿಐ ತನಿಖಾ ಸಂಸ್ಥೆಯೇ ಸೂಕ್ತವಾಗಿದೆ. ಅಪಘಾತದ ದೃಶ್ಯವನ್ನು ಮಾಧ್ಯಮಗಳಲ್ಲಿ ನೋಡುವಾಗ ನಿಮಗೆ ನಡೆದ ಘನಘೋರ ದುರಂತದ ಚಿತ್ರಣ ಸಿಗಬಹುದು. ಈಗ ಇರುವ ಪ್ರಶ್ನೆ ಎಂದರೆ ಹಾಗಾದರೆ ಇದರ ಹಿಂದಿರುವ ವ್ಯಕ್ತಿ ಯಾರು? ಸ್ವಯಂಚಾಲಿತವಾಗಿ ನಿಯಂತ್ರಣಕ್ಕೆ ಒಳಪಟ್ಟಿರುವ ಇಂಟರ್ ಲಾಕಿಂಗ್ ವ್ಯವಸ್ಥೆಯ ಸಂಕೇತಗಳನ್ನು ಬದಲಾಯಿಸಿ ಇಷ್ಟು ದೊಡ್ಡ ಹತ್ಯಾಕಾಂಡ ನಡೆಯಲು ಸಂಚು ಹೂಡಿದ್ದು ಯಾರೆಂದು ಈಗ ಗೊತ್ತಾಗಬೇಕಿದೆ. ಅದು ಆದಷ್ಟು ಬೇಗ ತಿಳಿಯಲಿ. ಭವಿಷ್ಯದಲ್ಲಿ ಇಂತಹ ಘಟನೆ ಆಗದಿರಲಿ ಎನ್ನುವುದು ಹಾರೈಕೆ..

 

 

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumanth Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumanth Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search