ಹಾಡುಹಗಲೇ ಶಾಲಾ ಕೊಠಡಿಯೊಳಗೆ ಪ್ರಾಂಶುಪಾಲನಿಂದ ಅತ್ಯಾಚಾರ
ನರಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಹೆಣ್ಣುಮಗುವೊಂದನ್ನು ಅತ್ಯಾಚಾರ ಮಾಡಿದ ಖಾಸಗಿ ಶಾಲೆಯ ಪ್ರಾಂಶುಪಾಲನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಬಾಲಕಿ ಡಿಸ್ಲೆಕ್ಸಿಯಾ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದಳು. ಆದ್ದರಿಂದ ಅವಳು ಕಲಿಕೆಯಲ್ಲಿ ಹಿಂದೆ ಬಿದ್ದಿದ್ದಳು. ಹತ್ತು ವರ್ಷವಾಗಿದ್ದರೂ ಇನ್ನು ಎರಡನೇ ತರಗತಿಯಲ್ಲಿಯೇ ಕಲಿಯುತ್ತಿದ್ದಳು. ಇದನ್ನು ಗಮನಿಸುತ್ತಿದ್ದ ಶಾಲೆಯ ಪ್ರಿನ್ಸಿಪಾಲ್ ಲ್ಯಾಂಬರ್ಟ್ ಪುಷ್ಪರಾಜ್ ಆಕೆಯನ್ನು ಬೆಳಿಗ್ಗೆ 11. 30 ರ ಸುಮಾರಿಗೆ ಶಾಲೆಯ ಖಾಲಿ ಕೊಠಡಿಯೊಳಗೆ ಕರೆದುಕೊಂಡು ಹೋಗಿ ಕೈಗೆ ಕೇಕ್ ಕೊಟ್ಟು ಅತ್ಯಾಚಾರ ಮಾಡಿದ್ದಾನೆ. ಗುರುವಾರ ಮಧ್ಯಾಹ್ನ 3.30 ರ ಸುಮಾರಿಗೆ ಶಾಲೆ ಮುಗಿಸಿ ಮನೆಗೆ ಬಂದ ಬಾಲಕಿಗೆ ತಾಯಿ ಸ್ನಾನ ಮಾಡಿಸಿ ಕರೆತರುವಾಗ ಗುಪ್ತಾಂಗದಲ್ಲಿ ರಕ್ತದ ಕಲೆಗಳು ಕಂಡುಬಂದಿವೆ. ಈ ಬಗ್ಗೆ ತಾಯಿ ಕೇಳಿದಾಗ, ಕೊಠಡಿಯೊಳಗೆ ನಡೆದ ಘಟನೆಯನ್ನು ಬಾಲಕಿ ವಿವರಿಸಿದ್ದಾಳೆ. ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ವರ್ತೂರು ಠಾಣೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿ ಪ್ರಾಂಶುಪಾಲ ಲ್ಯಾಂಬರ್ಟ್ ಪುಷ್ಪರಾಜನನ್ನು ಬಂಧಿಸಿದ್ದಾರೆ. ಆರೋಪಿ ಈ ಹಿಂದೆ ಶಾಲೆಯ ಬೇರೆ ವಿದ್ಯಾರ್ಥಿನಿಯರಿಗೆ ಹೀಗೆ ಲೈಂಗಿಕ ಕಿರುಕುಳ ನೀಡಿದ್ದಾನೆಯೇ ಎಂದು ತನಿಖೆ ನಡೆಸಲು ಸಾರ್ವಜನಿಕರಿಂದ ಆಗ್ರಹ ಕೇಳಿಬಂದಿದೆ. ಆರೋಪಿ ಪ್ರಾಂಶುಪಾಲನಿಗೆ ಸದ್ಯ 65 ವರ್ಷ ವಯಸ್ಸಾಗಿದ್ದು, ಇಂತವನ ಕೈಯಲ್ಲಿ ಮಕ್ಕಳ ಭವಿಷ್ಯವನ್ನು ಕೊಟ್ಟಿರುವುದಕ್ಕೆ ಅಲ್ಲಿ ಕಲಿಯುತ್ತಿರುವ ಇತರ ಮಕ್ಕಳ ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ
Leave A Reply