• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಕಾಶ್ಮೀರ ಫೈಲ್ಸ್ ಗಿಂತಲೂ ಭಯಾನಕವಾಗಿತ್ತು ಅಂದಿನ ಗೋವಾ ಫೈಲ್ಸ್!

ಸಂತೋಷ್ ಕುಮಾರ್ ಮುದ್ರಾಡಿ Posted On August 30, 2023
0


0
Shares
  • Share On Facebook
  • Tweet It

ಮತಾಂತರವಾಗಿ ಇಲ್ಲದಿದ್ದರೆ ಸ್ಥಳಾಂತರವಾಗಿ, ಹಿಂದೂ ಧರ್ಮವನ್ನು ಬಿಡಿ,ಇಲ್ಲದಿದ್ದರೆ ಜೀವ ಬಿಡಿ. ಈ ಘೋಷಣಾ ವಾಕ್ಯ ಮೊಳಗಿದ್ದು ದೂರದ ಕಾಶ್ಮೀರದಲ್ಲಿಯಲ್ಲ. ಇಲ್ಲೇ ನಮ್ಮ ಪಕ್ಕದ ಗೋವಾ ರಾಜ್ಯದಲ್ಲಿ. ಇವು ಸರಿ ಸುಮಾರು 15ನೇ ಶತಮಾನದಲ್ಲಿ ಪೋರ್ಚುಗೀಸರ ದಬ್ಬಾಳಿಕೆಯ ಪ್ರಭಾವದಿಂದ ನಿತ್ಯವೂ ಕೇಳುತ್ತಿದ್ದ ಮಾತುಗಳು.

ನಾವು ಓಡಿ ಹೋದೇವು ಆದರೆ ಮತಾಂತರವಾಗುವುದಿಲ್ಲ. ಬೇಕಾದರೆ ಜೀವ ಬಿಡುವೆವು ಆದರೆ ಹಿಂದೂ ಧರ್ಮ ಬಿಡುವುದಿಲ್ಲ. ನಮ್ಮ ಸಂಸ್ಕೃತಿ ಹಾಗೂ ನಮ್ಮ ಪರಂಪರೆಯನ್ನು ಮರೆತು ನಾವು ಬದುಕಿ ಅರ್ಥವಿಲ್ಲ. ಎನ್ನುವ ದಿಟ್ಟ ನಿರ್ಧಾರದಿಂದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದ ಗೌಡ ಸಾರಸ್ವತ ಸಮಾಜದ ಚರಿತ್ರೆ ಸಂಸ್ಕೃತಿಯ ಬಗ್ಗೆ ಅಭಿಮಾನವಿದ್ದವರು ಕೇಳಲೇಬೇಕು. ಹಾಗೂ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು.

ಹಿಂದೂ ಸಮಾಜ, ಭಾರತದ ಬಹುತೇಕ ಭಾಗಗಳಲ್ಲಿ ಮತಾಂಧರ ದೌರ್ಜನ್ಯಕ್ಕೆ ಒಳಗಾಗಿದೆ. ಅದರಲ್ಲಿ ಎದ್ದು ಕಾಣುವುದು ಕಾಶ್ಮೀರ ಹಾಗೂ ಗೋವಾ. ಏಕೆಂದರೆ ಎರಡು ರಾಜ್ಯಗಳು ಮತಾಂಧರ ಕತ್ತಿಯ ಪೆಟ್ಟಿಗೆ ತನ್ನನ್ನು ಪೂರ್ತಿ ಬದಲಿಸಿಕೊಂಡಿದೆ. ಅಳಿದುಳಿದವರು ಕೆಲವು ಕಡೆ ಬದುಕು ಕಟ್ಟಿಕೊಂಡಿದ್ದಾರೆ. ಇದರಲ್ಲಿ ಗೋವಾದ ಬ್ರಾಹ್ಮಣ ಸಮಾಜ ಬಹಳ ವಿಶೇಷವಾಗಿ ಎದ್ದು ಕಾಣುತ್ತದೆ. ಮತಾಂತರಕ್ಕೆ ಒಗ್ಗದ ಕೆಲವರು ತಮ್ಮನ್ನು ತಾವು ಆ ನೆಲದಲ್ಲಿ ಸಮರ್ಪಿಸಿಕೊಂಡರು. ಕೆಲವರು ಮತಾಂತರವಾಗದೆ ಹಾಗೂ ಸಾಯದೆ, ಓಡಿ ಹೋಗಿ ಮತ್ತೊಂದು ಕಡೆಯಲ್ಲಿ ಇದ್ದಷ್ಟು ಮಟ್ಟಿಗೆ ತಮ್ಮ ಬದುಕನ್ನು ಸಾಗಿಸಿದ್ದಾರೆ ಆದರೆ ಅವರಿರುವ ಕಡೆಯಲ್ಲೆಲ್ಲ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ ಮಹತ್ವಪೂರ್ಣ ಸಮಾಜ ಇವತ್ತಿಗೆ ಕೇವಲ ಗೌಡ ಸಾರಸ್ವತ ಸಮಾಜ ಮಾತ್ರ.

ಆ ಕಾಲದ ಗೋವಾದ ಪರಿಸ್ಥಿತಿಯನ್ನು ಒಮ್ಮೆ ಕಣ್ಣಾಡಿಸಿದರೆ ಪೋರ್ಚುಗೀಸರ ದೌರ್ಜನ್ಯ ಎಷ್ಟರಮಟ್ಟಿಗಿತ್ತು ಎಂದು ನಾವು ಕಂಡುಕೊಳ್ಳಬಹುದು. ಮೊದಲಿಗೆ ಅವರು ತಮ್ಮ ವ್ಯಾಪ್ತಿಯಲ್ಲಿ ಕೆಲಸವನ್ನು ಕೊಡುವ ಆಸೆ ತೋರಿಸಿ ಮತಾಂತರಸಿದರು.ಮತ್ತೆ ಮೋಸದಿಂದ ಭೂಮಾಲೀಕರಾಗಿ ಪರಿವರ್ತನೆಯಾದ ಮೇಲೆ ಭೂಮಿಯನ್ನು ಕೊಡುವುದಾಗಿ ಕೆಲವರನ್ನು ಪರಿವರ್ತಿಸಿದರು. ಆಸೆಗೆ ಮೋಹಕ್ಕೆ ಬಲಿಯಾದವರು ಇಷ್ಟರಲ್ಲಿ ಮತಾಂತರವಾಗಿದೆ. ಉಳಿದವರು ಬಹುತೇಕ ಬ್ರಾಹ್ಮಣರು ಮಾತ್ರ. ಆಗ ಇವರನ್ನು ಮತಾಂತರಿಸಬೇಕಾದರೆ ಕೊಲ್ಲುವುದು ಹಾಗೂ ಭೀಕರತೆಯನ್ನು ತೋರಿಸುವುದು ಅನಿವಾರ್ಯವಾಯಿತು. ಪೋರ್ಚುಗೀಸರು ತಮ್ಮ ಮತ ವಿಸ್ತಾರಕ್ಕಾಗಿ ಅದಕ್ಕೂ ಹೇಸಲಿಲ್ಲ. ಒಂದೋ ಮತಾಂತರವಾಗಿ ಇಲ್ಲದಿದ್ದರೆ ಸಾಯಿರಿ” ಎಂದು ಹೇಗೆ ಕಾಶ್ಮೀರದಲ್ಲಿ ಬೆಳ್ಳಂ ಬೆಳಗ್ಗೆ ಘೋಷಣೆಯಾಯಿತಲ್ಲವೇ.ಅದೇ ರೀತಿಯಾಗಿ ಇಲ್ಲಿಯೂ ಕೂಡ ನೇರವಾಗಿ ಬ್ರಾಹ್ಮಣರನ್ನು ಹತ್ತಿಕ್ಕಲು ಪ್ರಾರಂಭವಾಯಿತು. ಸತತ ಒಂದೆರಡು ಶತಮಾನಗಳಷ್ಟು ಕಾಲ ಬ್ರಾಹ್ಮಣರಕ್ತ ಸಿಕ್ತ ಚರಿತ್ರೆ ಅಲ್ಲಿ ಕಾಣುತ್ತದೆ.

ಏನಾದರಾಗಲಿ ನಮ್ಮ ರಕ್ತಕ್ಕೆ ಉಚಿತವಾದ ಜೀವನವನ್ನೇ ಮಾಡಬೇಕು ಎನ್ನುವ ಏಕೈಕ ಧ್ಯೇಯವನ್ನಿಟ್ಟುಕೊಂಡ ಈ ಸಮಾಜದ ಹಿರಿಯರು ಗೋವಾದಿಂದ ಕಾರವಾರ, ಉಡುಪಿ, ಮಂಗಳೂರು, ಕೇರಳದ ಕಡೆಗೆ ಸಾಗಿದರೆ ಮತ್ತೆ ಕೆಲವರು ಅತ್ತ ಮಹಾರಾಷ್ಟ್ರದ ಬದಿಗೆ ಸಾಗಿ ಜೀವನ ಕಂಡು ಕೊಂಡರು. ತಮ್ಮಲ್ಲಿ ಎಷ್ಟು ಹಣವಿದೆಯೋ ಅಷ್ಟು ದೂರಕ್ಕೆ ಸಾಗಿ ಅಲ್ಲಲ್ಲಿಯೇ ವಾಸ್ತವ್ಯ ಹೂಡಿದರು. ಸ್ಥಳಾಂತರವಾದ ಸಮಯದಲ್ಲಿ ತಮ್ಮ ಜೀವನ ಹಾಗೂ ವೃತ್ತಿ ಎಲ್ಲವನ್ನು ಬದಲಿಸಿಕೊಳ್ಳಬೇಕಾಗುವುದು ಅನಿವಾರ್ಯವಾಗುತ್ತದೆ. ಭೂ ಮಾಲೀಕರಾಗಿದ್ದ ಇವರು ಅನಂತರದ ಕಾಲದಲ್ಲಿ ಅನಿವಾರ್ಯವಾಗಿ ಬದಲಾಗಬೇಕಾಯಿತು.ತಮ್ಮ ಬುದ್ಧಿವಂತಿಕೆಯನ್ನು ಹಾಗೂ ಅದರಲ್ಲೂ ಲೆಕ್ಕಾಚಾರದ ವಿಷಯದಲ್ಲಿ ವಿಶಿಷ್ಟರಾಗಿದ್ದವರು ವ್ಯಾಪಾರದಲ್ಲಿ ತಮ್ಮ ಬದುಕನ್ನು ಕಂಡುಕೊಂಡರು. ಮತ್ತೆ ಕೆಲವರು ವೈದಿಕ ವೃತ್ತಿಯನ್ನು ಅವಲಂಬಿಸಿಕೊಂಡರು. ಎಲ್ಲಿ ಹೋದರೂ ಕೂಡ ವಿದ್ಯೆಯನ್ನು ಸಾಧಿಸಿಕೊಳ್ಳುವ ಇವರ ಛಲ ಬಿಡಲೇ ಇಲ್ಲ.

ಪರಂಪರೆಯಲ್ಲಿ ಬಂದ ರಕ್ತದ ಗುಣ ಹಾಗೂ ಬೌದ್ಧಿಕ ಶಕ್ತಿ ಇವರನ್ನು ಎಲ್ಲಾ ಕಡೆ ತಲೆಯೆತ್ತಿ ಬದುಕುವಂತೆ ಮಾಡಿದೆ. ವಲಸೆ ಬಂದ ಸಮಾಜ ಇಷ್ಟೊಂದು ಮಟ್ಟಿಗೆ ಸ್ಥಾನ ಹಾಗೂ ಮಾನವನ್ನು ಪಡೆದುಕೊಳ್ಳುವುದು ಸುಲಭದ ವಿಚಾರವಲ್ಲ. 500 ವರ್ಷದ ಹಿಂದೆ ನಿರ್ಗತಿಕರಾದ ಇವರು ಸುಮಾರು ಈಗಿನ 100 ವರ್ಷಗಳ ಕಾಲದಲ್ಲಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಆ ಕ್ಷೇತ್ರವನ್ನು ಕೂಡ ಬಹಳ ಎತ್ತರಕ್ಕೆ ತಂದಿದ್ದಾರೆ. ವೈದ್ಯಕೀಯವಾಗಲಿ, ರಾಜಕೀಯವಾಗಲಿ ಸಾಂಸ್ಕೃತಿಕವಾಗಲಿ, ಧಾರ್ಮಿಕವಾಗಲಿ ಎಲ್ಲಾ ಕ್ಷೇತ್ರಗಳಲ್ಲೂ ಈ ಸಮಾಜದವರು ಎದ್ದು ಕಾಣುತ್ತಾರೆ.

ಅದಮ್ಯವಾದ ಉತ್ಸಾಹ ಹಾಗೂ ಪರಂಪರೆಯಿಂದ ಬಂದ ಅಂತ:ಶಕ್ತಿ ಎನ್ನುವುದು ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಈ ಬ್ರಾಹ್ಮಣ ಸಮಾಜ ಉತ್ತಮ ಉದಾಹರಣೆ. ಇಷ್ಟೇ ಅಲ್ಲದೆ ನಮ್ಮ ಸನಾತನ ಸಂಸ್ಕೃತಿಯ ಕೇಂದ್ರ ಬಿಂದುವಾದ ವಿದ್ಯೆ,ಜಪ, ಅನುಷ್ಠಾನ, ಸತ್ಸಂಗ, ಭಜನೆ ಸಾಧ್ಯವಿದ್ದಷ್ಟು ಮಟ್ಟಿಗೆ ಉಳಿಸಿ, ಬೆಳೆಸಿ, ಪಸರಸುತ್ತಿರುವ ಒಂದು ವಿಶಿಷ್ಟ ಸಮಾಜ. ತಮ್ಮನ್ನು ತಾವು ಬಂದ ಸ್ಥಳಕ್ಕೆ ಹೇಗೆ ಬದಲಾಯಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಇವರ ಭಾಷಾ ಪ್ರಯೋಗ ಹಾಗೂ ದೇವತಾರಾಧನೆಯೇ ದೊಡ್ಡ ಸಾಕ್ಷಿ. ಸಾವಿರ ವರ್ಷದಿಂದ ಇದ್ದವರಿಗೂ ಇಲ್ಲಿಯ ಕನ್ನಡ ಹಾಗೂ ತುಳು ಭಾಷೆಗಳು ಬರುವುದಿಲ್ಲ. ಅಂತದ್ದರಲ್ಲಿ ಇವರು ಸ್ಪಷ್ಟವಾಗಿ ಮಾತನಾಡುವುದು ಕಂಡರೆ ಆಶ್ಚರ್ಯವಾಗದೆ ಇರಲು ಸಾಧ್ಯವಿಲ್ಲ. ಉಡುಪಿ ಮಂಗಳೂರಿನಲ್ಲಿ ಆ ಕಾಲದಲ್ಲಿದ್ದ ಹಂಪಿಯ ರಾಜಶ್ರಯವನ್ನು ಪಡೆದು, ಅಲ್ಲಿಯತನಕ ಇವರ ಆರಾಧನೆಯಲ್ಲಿ ಕಂಡುಬರದ ವೆಂಕಟರಮಣನನ್ನು ಇಷ್ಟದೇವರನ್ನಾಗಿಸಿಕೊಂಡರು. ತಾವುಗಳು ಅನುಭವಿಸಿದ ದೌರ್ಜನ್ಯವನ್ನು ಮರೆತು ಸ್ನೇಹ ಭಾವದಿಂದ ವರ್ತಿಸುತ್ತಾ ಹಿಂದೂ ಸಮಾಜದ ಏಳಿಗೆಯಲ್ಲಿ ಬಹು ದೊಡ್ಡ ಪಾತ್ರವನ್ನು ವಹಿಸಿದ ಈ ಸಮಾಜದ ಚರಿತ್ರೆ ಎಲ್ಲರಿಗೂ ಆದರ್ಶವಾಗಬೇಕು. ಇದರೊಂದಿಗೆ ಗೋವಾದಿಂದ ಬಂದು ನಂತರ ಭಾರತವನ್ನೇ ತಮ್ಮದಾಗಿಸಿಕೊಂಡ ಈ ಸಮಾಜದ ಚಿಂತನೆಯ ವಿಸ್ತಾರವನ್ನು ಎಲ್ಲರೂ ಒಮ್ಮೆ ಅವಲೋಕಿಸಿ ಆದರ್ಶವಾಗಿಸಿಕೊಳ್ಳಬೇಕು..

0
Shares
  • Share On Facebook
  • Tweet It




Trending Now
ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
ಸಂತೋಷ್ ಕುಮಾರ್ ಮುದ್ರಾಡಿ July 7, 2025
ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
ಸಂತೋಷ್ ಕುಮಾರ್ ಮುದ್ರಾಡಿ July 7, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು
    • ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
  • Popular Posts

    • 1
      ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • 2
      ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • 3
      ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • 4
      ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 5
      20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!

  • Privacy Policy
  • Contact
© Tulunadu Infomedia.

Press enter/return to begin your search