ಪಾಕ್ ಕ್ರಿಕೆಟಿಗರ ಸ್ವಾಗತಕ್ಕೆ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಯಾರೂ ಬಂದಿಲ್ಲ!
ಇಂತಹ ದುರವಸ್ಥೆಯನ್ನು ಪಾಕಿಸ್ತಾನ ಅನುಭವಿಸುತ್ತಿದೆ. ಪಕ್ಕಾ ಭಿಕ್ಷುಕರ ದೇಶವಾಗಿರುವ ಪಾಕಿಸ್ತಾನಕ್ಕೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಯಾರೂ ಮರ್ಯಾದೆ ಕೊಡುತ್ತಿಲ್ಲ. ಅದರಲ್ಲಿಯೂ ಇತ್ತೀಚೆಗೆ ನಡೆದ ವಿಶ್ವಕಪ್ ನಲ್ಲಿ ದಯನೀಯ ಸೋಲಿನ ಬಳಿಕ ಪಾಕಿಸ್ತಾನಕ್ಕೆ ಇನ್ನಷ್ಟು ಅವಮಾನ ಅವರ ಮಾಜಿ ಕ್ರಿಕೆಟಿಗರಿಂದಲೇ ಆಗಿದೆ. ನಿತ್ಯ ಕೆಜಿಗಟ್ಟಲೆ ಬಿರಿಯಾನಿ ತಿಂದರೆ ಮೈದಾನದಲ್ಲಿ ದೇಹ ಬಗ್ಗತ್ತಾ ಎಂದು ಅವರದ್ದೇ ಹಳೆ ಕ್ರಿಕೆಟಿಗರಿಂದ ಉಗಿಸಿಕೊಂಡು ಪಾಕ್ ತಂಡಕ್ಕೂ ಸಾಕುಸಾಕಾಗಿದೆ. ಇನ್ನು ತಂಡದ ರೂಪುರೇಶೆ ಚರ್ಚೆಯಾಗುತ್ತಿರುವ ಹೊತ್ತಿಗೆ ಕಪ್ತಾನ ಅದನ್ನು ಗಂಭೀರವಾಗಿ ತೆಗೆದುಕೊಳ್ಳದೇ ಬಿರಿಯಾನಿ ತರಹ ಏನನ್ನೋ ಮುಕ್ಕುತ್ತಿರುವ ವಿಡಿಯೋ ಕೂಡ ಇತ್ತೀಚೆಗೆ ವೈರಲ್ ಆಗಿತ್ತು. ಆಡುವುದಕ್ಕಿಂತ ತಿನ್ನಲು ಜಾಸ್ತಿ ಮಹತ್ವ ಕೊಟ್ಟ ಪಾಕಿ ಕ್ರಿಕೆಟಿಗರಿಗೆ ಈಗ ಹೊರದೇಶದಲ್ಲಿಯೂ ಅಂತಹ ಪ್ರಾಮುಖ್ಯತೆ ಸಿಗುವುದು ಡೌಟು ಎನ್ನುವುದು ಈಗ ಸಾಬೀತಾಗಿದೆ.
24 ಗಂಟೆ ಪ್ರಯಾಣ ಮಾಡಿ ಸಿಡ್ನಿಗೆ ಬಂದಿಳಿದ ಪಾಕ್ ಕ್ರಿಕೆಟಿಗರಿಗೆ ವಿಮಾನ ನಿಲ್ದಾಣದಲ್ಲಿ ಆಸ್ಟ್ರೇಲಿಯಾದ ಶಿಷ್ಟಾಚಾರದ ಯಾವ ಅಧಿಕಾರಿಯೂ ಬಂದು ಎದುರುಗೊಂಡಿಲ್ಲ. ಹೋಗಲಿ, ಪಾಕಿಸ್ತಾನದ ರಾಯಭಾರಿ ಕಚೇರಿಯಿಂದ ಕನಿಷ್ಟ ಒಬ್ಬ ಗುಮಾಸ್ತನೂ ಸ್ವಾಗತಕ್ಕೆ ಬರಲಿಲ್ಲ. ಎಲ್ಲಿಯ ತನಕ ಎಂದರೆ ವಿಮಾನ ನಿಲ್ದಾಣದಲ್ಲಿ ಕ್ರಿಕೆಟಿಗರ ಲಗೇಜಿಗೆ ಕೈಕೊಡಲು ಒಬ್ಬನೇ ಒಬ್ಬ ವ್ಯಕ್ತಿ ಇರಲಿಲ್ಲ. ಕೊನೆಗೆ ತಂಡದ ಹೊಸ ಕಪ್ತಾನ ಶಾನ್ ಮಸೂದ್ ತಾವೇ ಲಗೇಜುಗಳನ್ನು ಮಿನಿ ಲಾರಿಯೊಂದಕ್ಕೆ ತುಂಬಿಸಿ ಸಹ ಆಟಗಾರರ ನೆರವಿಗೆ ಮುಂದಾದ ಫೋಟೋ ಮಾತ್ರ ಎಲ್ಲೆಡೆ ಈಗ ವೈರಲ್ ಆಗಿದೆ.
ಒಟ್ಟಿನಲ್ಲಿ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲು ಪಾಕಿಸ್ತಾನ ಸಿಡ್ನಿಗೆ ಬಂದಿದೆ. ಇಲ್ಲಿಯವರೆಗೆ ಆಸ್ಟ್ರೇಲಿಯಾ ನೆಲದಲ್ಲಿ ಪಾಕಿಸ್ತಾನ ಒಂದೇ ಒಂದು ಟೆಸ್ಟ್ ಸರಣಿ ಗೆದ್ದಿಲ್ಲ. 2019 ರ ಬಳಿಕ ಪ್ರಥಮ ಬಾರಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಪಾಕಿಸ್ತಾನ ಇಲ್ಲಿ ಕನಿಷ್ಟ ಒಂದು ಪಂದ್ಯವನ್ನಾದರೂ ಗೆಲ್ಲುತ್ತಾ ಎಂದು ಕಾದು ನೋಡಬೇಕಿದೆ. ಯಾಕೆಂದರೆ ಕೊನೆಯ ಬಾರಿ ಆಸ್ಟ್ರೇಲಿಯ ಪ್ರವಾಸ ಕೈಗೊಂಡ ಪಾಕಿಸ್ತಾನ 2-0 ಅಂತರದಲ್ಲಿ ಸೋತಿತ್ತು. ಆಗ ಅಜರ್ ಆಲಿ ಕಪ್ತಾನರಾಗಿದ್ದರು.
Leave A Reply