ಹನಿಟ್ರಾಪ್ ಕೇಸಿನಲ್ಲಿ ರಾಜಣ್ಣ ಮನವಿ! ನಂತರದ ಕಥೆ!

ರಾಜ್ಯದಲ್ಲಿ ಸಚಿವರೊಬ್ಬರು ತಮ್ಮ ಮೇಲೆ ಹನಿಟ್ರಾಪ್ ಪ್ರಯತ್ನ ಆಗಿದೆ ಎಂದು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ, ನಂತರ ಗೃಹಸಚಿವರಿಗೆ ಮುಂದಿನ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿರುವ ಘಟನೆ ಕರ್ನಾಟಕದ ಇತಿಹಾಸದಲ್ಲಿ ಪ್ರಥಮ ಎನ್ನಬಹುದು. ಸಚಿವ ರಾಜಣ್ಣ ಅವರು ವಿಧಾನಸಭೆಯಲ್ಲಿ ಇದನ್ನು ಪ್ರಸ್ತಾವಿಸಿದ ನಾಲ್ಕೈದು ದಿನಗಳ ನಂತರ ಗೃಹ ಸಚಿವರಿಗೆ ಮನವಿಯನ್ನು ನೀಡಿದ್ದಾರೆ. ಈ ಬಗ್ಗೆ ಮುಂದಿನ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಗೃಹ ಸಚಿವ ಜಿ ಪರಮೇಶ್ವರ್ ಮಾಧ್ಯಮಗಳಿಗೆ ಹೇಳಿದ್ದಾರೆ.
ಈ ಪ್ರಕರಣದ ಮುಂದಿನ ಪರಿಣಾಮಗಳೇನು?
1. ರಾಜಣ್ಣ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದು.
2. ಸರಕಾರದಿಂದ ಸಿಐಡಿ ಅಥವಾ ಎಸ್ ಐಟಿ ತನಿಖೆಗೆ ನೀಡುವುದು.
3. ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸುವುದು.
ಈ ಎಲ್ಲಾ ಆಯ್ಕೆಗಳು ರಾಜ್ಯ ಸರಕಾರದ ಮುಂದಿವೆ. ಬೇಕಾದರೆ ಸಿಬಿಐಗೂ ಕೊಡಬಹುದು. ಆದರೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಬೇರೆ ಬೇರೆ ಪಕ್ಷಗಳ ಸರಕಾರಗಳು ಇರುವುದರಿಂದ ಸಿಬಿಐಗೆ ಈ ಪ್ರಕರಣ ಹೋಗುವ ಸಾಧ್ಯತೆ ಕಡಿಮೆ ಇರುತ್ತದೆ.
ಇನ್ನು ಫಲಿತಾಂಶ ಏನು ಬಂದರೆ ಏನು ಆಗಬಹುದು:
1. ಹನಿಟ್ರಾಪ್ ಮಾಡಿದ್ದು ಯಾರು ಎಂದು ಗೊತ್ತಾದರೆ ಅವರು ಆಡಳಿತ ಪಕ್ಷದವರಾದರೆ ಸರಕಾರ ಇಕ್ಕಟ್ಟಿಗೆ, ವಿಪಕ್ಷದವರಾದರೇ ಸ್ಪಷ್ಟ ಮೇಲುಗೈ.
2. ಸಿದ್ಧರಾಮಯ್ಯ ಬಣದವರು ಆಡಳಿತ ಪಕ್ಷದ ತಮ್ಮ ವಿರೋಧಿಗಳೇ ಆಗಿರಲಿ ಎಂದು ಬಯಸಬಹುದು.
3. ವಿಪಕ್ಷಗಳಲ್ಲಿ ಒಂದು ಬಣ ತಮ್ಮ ವಿರೋಧಿ ಪಾಳಯದವರೇ ಸಿಕ್ಕಿಬೀಳಲಿ ಎಂದು ಬಯಸಬಹುದು.
4. ಯಾರೂ ಸಿಕ್ಕಿಬೀಳದೇ ಹೋದರೆ ರಾಜಣ್ಣ ಮುಜುಗರಕ್ಕೆ ಒಳಗಾಗಬಹುದು.
5. ಈ ತನಿಖೆ ಕನಿಷ್ಟ ಆರು ತಿಂಗಳು ದಾಟಿದರೆ ಆಗ ಸ್ಪಷ್ಟತೆ ಸಿಗುವ ತನಕ ಸಿಎಂ ಬದಲಾವಣೆಗೆ ಹೈಕಮಾಂಡ್ ಮುಂದಾಗದೇ ಇರಬಹುದು.
ಒಟ್ಟಿನಲ್ಲಿ ರಾಜಕೀಯ ಪಡಸಾಲೆಯಲ್ಲಿ ಮುಂದಿನ ಮೂರು ವರ್ಷ ಏನೇ ಆದರೂ ಈ ವಿಷಯ ಚರ್ಚೆಯಲ್ಲಿ ಇರುವುದಂತೂ ಸ್ಪಷ್ಟ.
Leave A Reply