ಐಸಿಸ್ ನೆಂಟರಿದಂದ ಲಂಡನ್ ರೈಲು ಸುರಂಗಮಾರ್ಗದಲ್ಲಿ ಸ್ಫೋಟ!
ಲಂಡನ್ : ಸುರಂಗಮಾರ್ಗವಾಗಿ ಸಂಚರಿಸುತ್ತಿದ್ದ ರೈಲೊಂದರಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಹಠಾತ್ತನೆ ಬೆಂಕಿ ಕಾಣಿಸಿಕೊಂಡು 29ಕ್ಕೂ ಅಧಿಕ ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿರುವ ಘಟನೆ ಲಂಡನ್ ನಗರದ ಪಾರ್ಸನ್ಸ್ ಗ್ರೀನ್ ಅಂಡರ್‍ಗ್ರೌಂಡ್ ಸ್ಟೇಷನ್‍ನಲ್ಲಿ ಸಂಭವಿಸಿದೆ. ಅಗ್ನಿ ದುರಂತವೆಂದೇ ಭಾವಿಸಾಲಗಿದ್ದ ಘಟನೆಯ ಪ್ರಾಥಮಿಕ ತನಿಖೆಯಲ್ಲಿ ಪ್ರಾಯೋಗಿಕ ಬಾಂಬ್‍ನಿಂದ ಸ್ಫೋಟಕ್ಕೆ ಯತ್ನಿಸಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಲಂಡನ್ ಪೊಲೀಸರಿಗೆ ಹೊಗೆಯ ಹರಡುವಿಕೆಗೆ ಕಾರಣವಾದ ಸುಟ್ಟ ವಸ್ತುಗಳ ಜಾಗದಲ್ಲಿ ದೊರೆತ ಟೈಮರ್ ದೊರೆತಿದ್ದು ಇದು ಬಾಂಬ್ ಸ್ಫೋಟದ ಸಂಚು ಎಂದು ದೃಢಪಡಿಸಿದೆ. ಇಡೀ ದಿನ ಲಂಡನ್ ನಗರದಾದ್ಯಂತ ಆತಂಕದ ಛಾಯೆ ಕವಿದಿತ್ತು. ಬ್ರಿಟನ್ ಪ್ರಧಾನಿ ತೆರೇಸಾ ಮೇ ಘಟನೆಯನ್ನು ಖಂಡಿಸಿದ್ದು, “ಈ ಪ್ರಯತ್ನವನ್ನು ಗಂಭೀರವಾಗಿ ಪರಿಗಣಿಸಲೇಬೇಕು’ ಎಂದು ಎಚ್ಚರಿಸಿದ್ದಾರೆ. ಐಸಿಸ್ ಸಂಘಟನೆ ಶುಕ್ರವಾರ ಸಂಜೆ ವೇಳೆಗೆ ತನ್ನ ಮುಖವಾಣಿ ಅಮಾಕ್‍ನಲ್ಲಿ “ಲಂಡನ್ ಸ್ಫೋಟಕ್ಕೆ ಕಾರಣವಾದವರು ಐಸಿಸ್‍ನೊಂದಿಗೆ ನಂಟು ಹೊಂದಿರುವವರು’ ಎಂದು ಘೋಷಿಸಿದೆ. ಜನಸಂದಣಿ ಹೆಚ್ಚಿರುವ ಸಂದರ್ಭವನ್ನೇ ಗುರಿಯಾಗಿಸಿ ಬೆಂಕಿಯ ಉಂಡೆಯನ್ನು ರೈಲಿನೊಳಗೆ ಹಾದುಹೋಗುವ ಟ್ಯೂಬ್‍ನೊಳಗೆ ಉರುಳಿ ಬಿಡಲಾಗಿದೆ. ಇದರಿಂದ ಹಬ್ಬಿದ ದಟ್ಟ ಹೊಗೆಯಿಂದಾಗಿ ಪ್ರಯಾಣಿಕರು ಉಸಿರಾಡಲು ಸಂಕಷ್ಟ ಪಡುವಂತಾಗಿದೆ. ಜತೆಗೆ ಬೋಗಿ ತುಂಬಾ ಶಾಖದ ಝಳಕ್ಕೆ ಮುಖವೆಲ್ಲಾ ಸುಟ್ಟಂತಾಗಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಘಟನೆ ಕುರಿತು ಆತುರದಲ್ಲಿ ಟ್ವೀಟ್ ಮಾಡಿ ಬ್ರಿಟಿಷರ ಕೆಂಗಣ್ಣಿಗೆ ಗುರಯಾಗಿದ್ದಾರೆ. ಟ್ವಿಟ್‍ನಲ್ಲಿ ಅವರು ” ಕಾನೂನು ಪಾಲಕರ ಎದುರಿಗೇ ಸ್ಫೋಟದ ರೂವಾರಿಗಳು ಓಡಾಡಿಕೊಂಡಿದರೂ ಮುನ್ನೆಚ್ಚರಿಕೆ ವಹಿಸದ ಫಲ ಈಗ ಲಂಡನ್ ಜನತೆ ಅನುಭವಿಸುವಂತಾಗಿದೆ’ ಎಂದು ನಿರ್ಣಯಕೊಟ್ಟಿದ್ದಾರೆ.
ಇದಕ್ಕೆ ಲಂಡನ್ ಪ್ರಧಾನಿ ಮೇ ಖಾರವಾಗಿಯೇ ಪ್ರತಿಕ್ರಿಯಿಸಿ, ” ತನಿಖೆ ಆರಂಭವಾಗಿರುವಾಗ ಅದರಲ್ಲಿ ಮೂಗು ತೂರಿಸಿ ತೀರ್ಪು ಕೊಡುವುದು ಯಾರಿಗೂ ಭೂಷಣವಲ್ಲ. ಈ ಹೇಡಿ ಕೃತ್ಯದ ತನಿಖೆಯನ್ನು ಶೀಘ್ರವಾಗಿ ಮುಗಿಸಿ ಆರೋಪಿಗಳನ್ನು ಪತ್ತೆಹಚ್ಚುತ್ತಾರೆ ಎಂಬ ನಂಬಿಕೆ ನನಗಿದೆ ” ಎಂದಿದ್ದಾರೆ.
Leave A Reply