ಇವರು ಸಿದ್ದರಾಮಯ್ಯ ಅಲ್ಲ, ಬೆಂಕಿರಾಮಯ್ಯ: ಆರ್.ಅಶೋಕ್ ಟೀಕೆ
ಬೆಂಗಳೂರು: ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಿಗೇ ಹೋದರೂ ಪೆಟ್ರೋಲ್, ಬೆಂಕಿ ಪೊಟ್ಟಣ ಇಟ್ಟುಕೊಂಡೇ ಹೋಗಿರುತ್ತಾರೆ. ಹಾಗೆಯೇ ತೆಗೆದು ಬೆಂಕಿಹಚ್ಚುವ ಕೆಲಸ ಮಾಡುತ್ತಾರೆ. ಇದರಿಂದ ಅವರು ಸಿದ್ದರಾಮಯ್ಯ ಅಲ್ಲ, ಬೆಂಕಿರಾಮಯ್ಯ ಎಂದು ಮಾಜಿ ಮುಖ್ಯಮಂತ್ರಿ ಆರ್. ಅಶೋಕ್ ಟೀಕಿಸಿದ್ದಾರೆ.
ದೇವನಹಳ್ಳಿ ಬಳಿ ಬಿಜೆಪಿ ವಿಸ್ತಾರಕರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, “ಜಾತಿ ಒಡೆಯುವ ಕೆಲಸದ ಜತೆಗೆ ನಾಡಧ್ವಜದ ವಿಷಯ ಇಟ್ಟುಕೊಂಡು ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಪ್ರತ್ಯೇಕತೆಯ ಕೂಗು ಕೇಳುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ ಬಳಿಕ ಕಾಂಗ್ರೆಸ್ಸಿನವರು ಪತರಗುಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಎದುರಿಸಲಾಗದೆ ಹಿಂಬಾಗಿಲಿನಿಂದ ಹೋರಾಟಕ್ಕೆ ಮುಂದಾಗಿ ರಾಜ್ಯದಲ್ಲಿ ಒಡಕು ಮೂಡಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಬಿಜೆಪಿ ವ್ಯಕ್ತಿಯಾಧಾರಿತ ಪಕ್ಷ ಅಲ್ಲ. ಇದು ತತ್ತ್ವ, ಸಿದ್ಧಾಂತ ಆಧಾರಿತ ಪಕ್ಷವಾಗಿದೆ. ಆದರೆ ದೇವೇಗೌಡರು ಇರದಿದ್ದರೆ ಜೆಡಿಎಸ್, ಸೋನಿಯಾ ಗಾಂಧಿ ಇರದಿದ್ದರೆ ಕಾಂಗ್ರೆಸ್ ಉಳಿಯಲ್ಲ. ಹಾಗಾಗಿ ನಮ್ಮ ಪಕ್ಷವೇ ಗೆಲ್ಲುತ್ತದೆ. ಕಾಂಗ್ರೆಸ್ ಈಗಾಗಲೇ ಇಬ್ಭಾಗವಾಗಿದೆ ಎಂದು ಹೇಳಿದ್ದಾರೆ.
Leave A Reply