ಟಿಪ್ಪೂ ಕುರಿತು ನಿಮಗೆಷ್ಟು ಗೊತ್ತು? ಒಂದಿಷ್ಟು ಮಾಹಿತಿ ತಿಳ್ಕೊಳ್ಳಿ
ದೇವಟ್ಟಿಪರಂಬು ಹತ್ಯಾಕಾಂಡ
ಮಡಿಕೇರಿ ತಾಲೂಕು ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದ ವಿಶಾಲ ಮೈದಾನ ಈ ದೇವಟ್ಟಿಪರಂಬು. ಮೈದಾನದಂಚಿನಲ್ಲಿ ಕಾವೇರಿ ತಣ್ಣಗೆ ಹರಿಯುತ್ತಾಳೆ. ಸುತ್ತಲೂ ಬೆಟ್ಟಸಾಲುಗಳು. ಟಿಪ್ಪುವಿನ ವಿರುದ್ಧ ಹೋರಾಟ ಮಾಡುತ್ತಿದ್ದ ಆಗಿನ ಕೊಡಗಿನ ನಾಲ್ಕುನಾಡು ಮತ್ತು ಬೇಂಗುನಾಡುಗಳ ಕೊಡವರು ಆ ಬೆಟ್ಟಸಾಲುಗಳಲ್ಲಿ, ಅದರ ತಪ್ಪಲಿನ ಊರುಗಳಲ್ಲಿ ಅವಿತು ಆಕ್ರಮಣ ಮಾಡುತ್ತಿದ್ದರು. 1786ರ ಒಂದು ದಿನ ಟಿಪ್ಪು ಆ ಸೀಮೆಗಳಲ್ಲಿ ಡಂಗುರ ಹೊಡೆಸಿ ತಾನು ಯುದ್ಧದಿಂದ ಬೇಸತ್ತಿದ್ದೇನೆ. ತನಗೆ ಕೊಡವರ ಭೂಮಿ ಬೇಡ, ಅವರ ಸ್ನೇಹಕ್ಕೆ ಹಾತೊರೆಯುತ್ತಿzನೆ. ಅಯ್ಯಂಗೇರಿಯ ದೇವಟ್ಟಿಪರಂಬು ಮೈದಾನದಲ್ಲಿ ತಾನೊಂದು ಔತಣಕೂಟವನ್ನು ಏರ್ಪಡಿಸುತ್ತಿತ್ತೇನೆ. ತನ್ನಂತೆ ತಾವೂ ಕೂಡಾ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಬನ್ನಿ ಗೆಳೆತನದಿಂದ ಬಾಳೋಣ ಎಂದು ಪ್ರಚಾರ ಮಾಡಿದ. ಸತತ ಯುದ್ಧದಿಂದ ಹೈರಾಣಾಗಿದ್ದ ಸ್ನೇಹಜೀವಿ ಕೊಡವರು ಟಿಪ್ಪುವಿನ ಬಣ್ಣದ ಮಾತುಗಳಿಗೆ ಮರುಳಾದರು. ಅಯ್ಯಂಗೇರಿ ಗ್ರಾಮದ ದೇವಟ್ಟಿಪರಂಬು ಮೈದಾನಕ್ಕೆ ಬಂದು ಸೇರಿದರು. ಎರಡು ನಾಡುಗಳ ಗ್ರಾಮಸ್ಥರ ಜೊತೆಗೆ ದಕ್ಷಿಣ ಕೊಡಗಿನಿಂದ ಹೋರಾಟಕ್ಕೆ ಬಂದಿದ್ದ ಯೋಧರೆಲ್ಲರೂ ಸೇರಿ ಸುಮಾರು 70 ಸಾವಿರ ಕೊಡವರು ದೇವಟ್ಟಿಪರಂಬು ಮೈದಾನಕ್ಕೆ ಬಂದು ಸೇರಿದರು.
ಮೈದಾನದ ಮುಕ್ಕಾಲು ಭಾಗ ಕಾಡುಗಳಿಂದಾವೃತವಾಗಿತ್ತು. ಆ ಕಾಡುಗಳಲ್ಲಿ ಮುಸಲ್ಮಾನ ಮತ್ತು ಫ್ರೆಂಚ್ ಸೈನಿಕರು ಅವಿತು ಕುಳಿತಿದ್ದರು. ಬರಿಗೈಯಲ್ಲಿ ಬಂದಿದ್ದ ಕೊಡವರ ಮೇಲೆ ಟಿಪ್ಪು ಸೇನೆ ಎರಗಿತು. ಅದು ಕರ್ನಾಟಕ ಹಿಂದೆಂದೂ ಕಾಣದ ಭೀಕರ ನರಮೇಧ. ಹೆಂಗಸರು ಮಕ್ಕಳನ್ನು ನಿರ್ದಯವಾಗಿ ತರಿಯಲಾಯಿತು. ಅಂದು ಸ್ಥಳದ ಸತ್ತ ಕೊಡವರ ಸಂಖ್ಯೆ 35 ಸಾವಿರಕ್ಕೂ ಹೆಚ್ಚು!
ಆಕರ – ಗೆಝೆಟಿಯರ್ ಆಫ್ ಕೂರ್ಗ್, ಜಿ. ರಿಜ್ಟೆರ್, 18702. ದೇವಟ್ಟಿಪರಂಬು ಹತ್ಯಾಕಾಂಡದ ನಂತರ
ಟಿಪ್ಪುವು ಕೊಡವ ಜನರ ಭೂಮಿ ಮನೆಗಳನ್ನು ಮುಸಲ್ಮಾನರಿಗೆ ಜಹಗೀರಾಗಿ ಕೊಟ್ಟು ಈ ರೀತಿ ಆಜ್ಞೆಯನ್ನು (ಇಸ್ತಿಹಾರ್) ಹೊರಡಿಸಿದನು ಈ ಪ್ರದೇಶವನ್ನು ನಿಮಗೆ ಜಹಗೀರಾಗಿ ಕೊಡಲ್ಪಟ್ಟಿದೆ. ಈ ಪ್ರದೇಶದ ಬೆಟ್ಟಗಳಲ್ಲಿರುವ ಜನರನ್ನು (ಅಳಿದುಳಿದ ಕೊಡವರನ್ನು) ನೀವು ನಿರ್ಮೂಲಪಡಿಸಬೇಕೆಂಬುದು ನಮ್ಮ ರಾಜಾಜ್ಞೆಯಾಗಿರುವುದರಿಂದ ನಮ್ಮ ದೃಷ್ಟಿಯಿಂದ ತಪ್ಪಿಸಿಕೊಂಡು ಹೋಗಿರುವವರನ್ನು ಹುಡುಕಿ ಹಿಡಿದು ಕೊಲ್ಲುವುದು ನಿಮಗೆ ದೊಡ್ಡ ಬಹುಮಾನದ ಕೆಲಸವೆಂದು ತಿಳಿದಿರತಕ್ಕದ್ದು. ಅವರ ಕುಟುಂಬ ಮಕ್ಕಳೆಲ್ಲವೂ ನಿಮಗೆ ಗುಲಾಮರಾಗಿರತಕ್ಕದ್ದು.
– ’ಪಟ್ಟೋಲೆ ಪಳಮೆ’ 1924ರ ಐತಿಹಾಸಿಕ ದಾಖಲೆ
ಹತ್ಯಾಕಾಂಡದ ನಂತರ ಕೊಡಗಿನ ಸಾಮಾಜಿಕ ವ್ಯವಸ್ಥೆಯೇ ಬುಡಮೇಲಾಯಿತು. 1786ರ ಹೊತ್ತಲ್ಲಿ 1500ದಷ್ಟಿದ್ದ ಕೊಡವ ಕುಟುಂಬಗಳ ಸಂಖ್ಯೆ 840ಕ್ಕೆ ಇಳಿಯಿತು. ಭಾಗಮಂಡಲ, ಬೇಂಗೂರು, ಕೋಪಟ್ಟಿ ಮೊದಲಾದ ಊರುಗಳಲ್ಲಿ ಜನರೇ ಖಾಲಿಯಾದರು.
ಮುಂದೆ ಬ್ರಿಟಿಷರು ಟಿಪ್ಪುವನ್ನು ಕೊಂದು ಕೊಡಗಿನಲ್ಲಿ ಆಡಳಿತ ವ್ಯವಸ್ಥೆ ರೂಪಿಸುವ ಹೊತ್ತಿನಲ್ಲಿ ಹತ್ಯಾಕಾಂಡದ ಪರಿಣಾಮವನ್ನೂ ಅವರು ಎದುರಿಸಬೇಕಾಯಿತು. ಜನಸಂಖ್ಯೆ ಕೊರತೆಯನ್ನು ನೀಗಿಸಲು ಸುಳ್ಯದಿಂದ ಜನರನ್ನು ಕರೆತಂದು ಕೊಡಗಿನಲ್ಲಿ ಜಮೆ ಮಾಡಲಾಯಿತು.
ಲೂಟಿಯಾದ ದೇವಸ್ಥಾನಗಳು ಪೂಜಾ ಕೈಂಕರ್ಯಗಳಿಲ್ಲದೇ ಹಾಳುಬಿದ್ದವು.
ಭೂಮಾಲಿಕರಿಲ್ಲದ ಕೃಷಿ ಭೂಮಿಯ ಸುಧಾರಣೆಗೆ ಬ್ರಿಟಿಷರು ಕೊಡಗಿನ ಕಂದಾಯ ಪದ್ದತಿಯನ್ನು ಮರುಪರಿಶೀಲನೆ ಮಾಡಬೇಕಾಯಿತು.
ಲೂಟಿಯಾದ ದೇವಸ್ಥಾನಗಳು ಪೂಜಾ ಕೈಂಕರ್ಯಗಳಿಲ್ಲದೇ ಹಾಳುಬಿದ್ದವು.
ಭೂಮಾಲಿಕರಿಲ್ಲದ ಕೃಷಿ ಭೂಮಿಯ ಸುಧಾರಣೆಗೆ ಬ್ರಿಟಿಷರು ಕೊಡಗಿನ ಕಂದಾಯ ಪದ್ದತಿಯನ್ನು ಮರುಪರಿಶೀಲನೆ ಮಾಡಬೇಕಾಯಿತು.
ಆಕರ – ಗೆಝೆಟಿಯರ್ ಆಫ್ ಕೂರ್ಗ್, ಜಿ. ರಿಜ್ಟೆರ್, 1870
3. ಗಂಜಾಂ ಮತಾಂತರ ಪ್ರಕರಣ
ದೇವಟ್ಟಿಪರಂಬುವಿನ ಹತ್ಯಾಕಾಂಡದ ನಂತರ ಸೆರೆ ಹಿಡಿದ ಸಾವಿರಾರು ಹಿಂದೂ ಸ್ತ್ರೀಯರನ್ನು ಟಿಪ್ಪುವು ಮುಸಲ್ಮಾನರಿಗೆ ಕೊಡುಗೆಯಾಗಿ ಕೊಟ್ಟನು. ಬಹುಸಂಖ್ಯೆಯಲ್ಲಿದ್ದ ಮಕ್ಕಳನ್ನು ನಪುಂಸಕರನ್ನಾಗಿಸಿದ ಅಥವಾ ಸುನ್ನತ್ ಮಾಡಿ ಮತಾಂತರಿಸಿದ.
80 ಸಾವಿರ ಕೊಡವರನ್ನು ಟಿಪ್ಪು ಸೈನ್ಯ ಬಂಧಿಸಿ ವೀರಾಜಪೇಟೆ-ಬಿಳುಗುಂದ-ಅಮ್ಮತ್ತಿ-ಹುಣಸೂರು ಮಾರ್ಗವಾಗಿ ಶ್ರೀರಂಗಪಟ್ಟಣದ ಗಂಜಾಂಗೆ ಎಳೆದೊಯ್ಯಿತು. ಈ ಮಹಾ ಕ್ರೌರ್ಯದ ಯಾತ್ರೆ ನಡುವಿನಲ್ಲೇ ಅನೇಕರು ಹೆಣವಾದರು. ಹೆಂಗಸರು ಮಕ್ಕಳೆನ್ನದೇ ಪ್ರಾಣಿಗಳಂತೆ ಹಿಂಡು ಮಾಡಿ ಕರೆದೊಯ್ಯಲಾಯಿತು. ಏಳುಬೀಳಿನ ಮುಳ್ಳು ದಾರಿಯಲ್ಲೇ ಗರ್ಭಿಣಿಯರಾದ ಕೊಡವ ಹೆಂಗಸರು ಮಕ್ಕಳನ್ನು ಹೆತ್ತರು. ಕೊಡವ ಯೋಧರನ್ನು ಸರಪಳಿಗಳಿಂದ ಬಂಧಿಸಲಾಗಿತ್ತು. ತಪ್ಪಿಸಿಕೊಳ್ಳಲೆತ್ನಿಸುವವರನ್ನು ಪ್ರಪಾತಕ್ಕೆ ದೂಡಲಾಯಿತು.
ಗಂಜಾಂನಲ್ಲಿ ಪ್ರಾಣಬೀತಿಯನ್ನೊಡ್ಡಿ ಕೊಡವ ಕೈದಿಗಳನ್ನು ಮತಾಂತರಿಸಲಾಯಿತು. ಬಲತ್ಕಾರವಾಗಿ ಸುನ್ನತಿ ಮಾಡಲಾಯಿತು. ಒಪ್ಪದವರನ್ನು ಎಲ್ಲರೆದುರೇ ಆನೆಯ ಕಾಲಿಗೆ ಕಟ್ಟಿ ಎಳೆಸಲಾಯಿತು, ಚಿತ್ರಹಿಂಸೆ ಮಾಡಿ ಕೊಲ್ಲಲಾಯಿತು. ಹಲವರನ್ನು ಹುಲಿಯ ಬೋನಿಗೆ, ಕೊಳದ ಮೊಸಳೆಗಳಿಗೆ ಹಾಕಿ ಕೊಲ್ಲಲಾಯಿತು.
ಹೀಗೆ ಮತಾಂತರಗೊಂಡ ಯೋಧರ ಒಂದು ಸೈನ್ಯದ ತುಕಡಿಯನ್ನು ರಚಿಸಲಾಯಿತು. ಇದಕ್ಕೆ ’ಅಹಮದೀಯ ಸೈನ್ಯ’ ಎಂದು ಹೆಸರಿಟ್ಟು ಯುದ್ಧಗಳಲ್ಲಿ ಬಳಸಿಕೊಳ್ಳಲಾಯಿತು.
ಆಕರ – ಹಿಸ್ಟರಿ ಆಫ್ ಮೈಸೂರು, ಮಾರ್ಕ್ಸ್ ವಿಲ್ಕ್ಸ್
4. ಐನ್‌ಮನೆಗೆ ಬೆಂಕಿ
ಕೊಳಕೇರಿ ಮಡಿಕೇರಿ ತಾಲೂಕಿನ ಒಂದು ಸಣ್ಣ ಊರು. ಬಿzಟಂಡ ಎಂಬ ಕೊಡವ ಕುಟುಂಬದ ಐನ್ ಮನೆ ಈ ಕೊಳಕೇರಿಯಲ್ಲಿದೆ. ಟಿಪ್ಪು ವಿರುದ್ಧ ಹೋರಾಡಿದ ಸೇನೆಯಲ್ಲಿ ಈ ಬಿzಟಂಡ ಮನೆಯ ೪೦ ಜನ ಯೋಧರಿದ್ದರು. ಒಂದು ದಿನ ರಾತ್ರಿ ಕೊಳಕೇರಿಗೆ ದಾಳಿ ಇಟ್ಟ ಟಿಪ್ಪು ಬಿದ್ದಾಟಂಡ ಐನ್‌ಮನೆಗೆ ಬೆಂಕಿ ಇಟ್ಟ. ಹುಲ್ಲಿನ ಮನೆ ಬೆಂದು, ಮನೆಯಲ್ಲಿದ್ದವರೆಲ್ಲರೂ ಸತ್ತರು. ಹೆರಿಗೆಗೆಂದು ತವರಿಗೆ ತೆರಳಿದ್ದ ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಹೊರತುಪಡಿಸಿ ಸಂಪೂರ್ಣ ಬಿzಟಂಡ ಕುಟುಂಬ ಮತಾಂಧನ ಉರಿಗೆ ಬಲಿಯಾಯಿತು. ಇಂದಿಗೂ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದಲ್ಲಿ ಸುಟ್ಟುಹೋದ ಬಿದ್ದಾಟಂಡ ಐನ್ ಮನೆಯ ಪಳಯುಳಿಕೆಗಳನ್ನು ಕಾಣಬಹುದು. ಹೊಸದಾಗಿ ನಿರ್ಮಿಸಲಾದ ಬಿದ್ದಾಟಂಡ ಐನ್‌ಮನೆ ಪಳಯುಳಿಕೆಗಳನ್ನು ಕಾಣಬಹುದು.
5. ಕೊಡಗಿನ ಆಕ್ರಮಣ
1770ರ ದಶಕದ ಆರಂಭದ ಕಾಲದ ಹೈದರಾಲಿ ಕೊಡಗನ್ನು ಆಕ್ರಮಣ ಮಾಡಿಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದ. ಒಮ್ಮೆ ಪಿರಿಯಾಪಟ್ಟಣ ಮೂಲಕ ಮುಳ್ಳುಸೋಗೆಯ ಮೇಲೆ ಆಕ್ರಮಣ ಮಾಡಿದ ಹೈದರಾಲಿ ಪೆಟ್ಟು ತಿಂದು ಶ್ರೀರಂಗಪಟ್ಟಣಕ್ಕೆ ಮರಳಿದ್ದ. ಮತ್ತೊಮ್ಮೆ ದಕ್ಷಿಣ ಕೊಡಗಿನ ಮೂಲಕ ನುಗ್ಗಲು ಪ್ರಯತ್ನ ಪಟ್ಟು ಅಲ್ಲೂ ಮಾರಣಾಂತಿಕವಾಗಿ ಪೆಟ್ಟು ತಿಂದು ಪಲಾಯನ ಮಾಡಿದ್ದ. ಈ ಯುದ್ಧದಲ್ಲಿ ಹೈದರ ತನ್ನ ಇಬ್ಬರು ಸರದಾರರನ್ನು ಕೂಡ ಕಳೆದುಕೊಂಡಿದ್ದ. ಕೊನೆಗೆ ಕೊಡಗಿನ ಆಸೆಯನ್ನು ಹೊತ್ತುಕೊಂಡೇ ಹೈದರ್ ಸತ್ತ.
1782ರಲ್ಲಿ ಹೈದರಾಲಿ ಸತ್ತ ನಂತರ ಉತ್ತರಾಧಿಕಾರಿಯಾಗಿ ಬಂದ ಟಿಪ್ಪು ಕೊಡಗನ್ನು ವಶಪಡಿಸಿಕೊಳ್ಳುವ ಹುಮ್ಮಸ್ಸಿನಲ್ಲಿ ಕೊಡಗಿನತ್ತ ಧಾವಿಸಿದ. ಆತ ಕೂಡಾ ತನ್ನ ತಂದೆಯಂತೆಯೇ ಹಲವು ಬಾರಿ ಪೆಟ್ಟು ತಿಂದು ಮೈಸೂರಿಗೆ ಹಿಂದಿರುಗಿದ. ಮಡಿಕೇರಿ ಮತ್ತು ಮುಳ್ಳುಸೋಗೆ (ಕುಶಾಲನಗರ) ಬಿಟ್ಟರೆ ಟಿಪ್ಪುವಿನ ಸಂಪೂರ್ಣ ಕೊಡಗಿನ ಆಸೆ ಈಡೇರಲೇ ಇಲ್ಲ. ಮಡಿಕೇರಿ ಕೋಟೆಗೆ ತನ್ನ ಸೇನಾನಿ ಜಾಫರ್ ಕೂಲಿ ಬೇಗನನ್ನು ಕಿದಾರನನ್ನಾಗಿ ನೇಮಕ ಮಾಡಿದ ಟಿಪ್ಪು ಮಡಿಕೇರಿಯನ್ನು ಜಾಫರಾಬಾದ್ ಎಂದು ನಾಮಕರಣ ಮಾಡಿದ.
ಭಾಗಮಂಡಲಕ್ಕೆ ತನ್ನ ಸೈನ್ಯದೊಡನೆ ಧಾವಿಸಿ ಅರ್ಚಕರನ್ನು ಕೊಂದು ಭಗಂಡೇಶ್ವರ ದೇವಸ್ಥಾನದ ಎರಡು ಕಲ್ಲಿನ ಆನೆಗಳನ್ನು ಮುರಿಸಿದ (ಅದು ಇಂದಿಗೂ ಮುರಿದ ಸ್ಥಿತಿಯಲ್ಲಿದೆ). ಟಿಪ್ಪು ಭಾಗಮಂಡಲದ ಠಿಕಾಣಿ ಹೂಡಿದ. ಭಗಂಡೇಶ್ವರನ ದೇವಸ್ಥಾನದಲ್ಲಿ ಸೇನೆಯನ್ನು ಜಮೆ ಮಾಡಿದ. ಕೊಡಗಿನ ಜನರು ಭಗಂಡೇಶ್ವರನನ್ನು ಆರಾಧಿಸುತ್ತಾರೆಂದೇ ಭಾಗಮಂಡಲವನ್ನು ‘ಅಬ್ಜಲಾಬಾದ್’ ಎಂದು ಮರುನಾಮಕರಣ ಮಾಡಿದ.
ಆಕರ – ಹಿಸ್ಟರಿ ಆಫ್ ಮೈಸೂರು ಅಂಡ್ ಕೂರ್ಗ್, ಲೂಯಿಸ್ ರೈಸ್, 1878
6. ಅವಿನಾಶಿ ಭಗಂಡೇಶ್ವರ
ಭಾಗಮಂಡಲದ ಭಗಂಡೇಶ್ವರನ ಸನ್ನಿಧಿಗೆ ದಾಳಿಯಿಟ್ಟ ಟಿಪ್ಪು ಕಲ್ಲಿನ ಆನೆಗಳನ್ನು ಮುರಿಸಿದ ಗರ್ಭಗುಡಿಗೆ ನುಗ್ಗಿದರೆ ಒಳಗೆ ಭಗಂಡೇಶ್ವರನೇ ಇಲ್ಲ. ಪಾನಿಪೀಠವೂ ಇಲ್ಲ, ಲಿಂಗವೂ ನಾಪತ್ತೆ! ಏಕೆಂದರೆ ಟಿಪ್ಪು ಭಾಗಮಂಡಲಕ್ಕೆ ಧಾವಿಸುತಿದ್ದಾನೆ ಎಂದು ಸುದ್ದಿ ತಿಳಿದಾಗ ಅಲ್ಲಿನ ಅರ್ಚಕ ಸಮಯಪ್ರಜ್ಞೆಯನ್ನು ಮೆರೆದ. ಲಿಂಗವನ್ನು ಪಾನಿಪೀಠ ಸಮೇತ ಕಾಡಿಗೆ ಹೊತ್ತೊಯ್ದು ಬಿದಿರ ಮೇಳೆಗಳ ನಡುವೆ ಅವಿತಿರಿಸಿ ಕರಾವಳಿಗೆ ಓಡಿಹೋದ. ಹೋಗುವ ಮುನ್ನ ಆತ ಪಕ್ಕದ ಊರಿನ ವ್ಯಕ್ತಿಯೊಬ್ಬನಲ್ಲಿ ಈ ವಿಷಯ ತಿಳಿಸಿದ್ದ.
ಇತ್ತ ದೇವಸ್ಥಾನದಲ್ಲಿ ದೇವರಿಲ್ಲ, ನಿತ್ಯಪೂಜೆಯಿಲ್ಲ. ಅಂಥ ಹೊತ್ತಲ್ಲಿ ಚೇರಂಬಾಣೆ ಸಮೀಪದ ಬೇಂಗೂರು ಎಂಬ ಗ್ರಾಮದ ಪಟ್ಟಮಾಡ ಉತ್ತಯ್ಯನೆಂಬ ವ್ಯಕ್ತಿ ಧರ್ಮರಕ್ಷಣೆಯ ಹೊಣೆಯನ್ನು ಹೊತ್ತ. ತನ್ನೂರಿನ ಬ್ರಾಹ್ಮಣ ಬಾಲಕನೊಬ್ಬನನ್ನು ಹೆಗಲಮೇಲೆ ಹೊತ್ತು ದಿನಾ ಮುಂಜಾನೆ ಕಾಡಿಗೆ ಹೋಗುತ್ತಿದ್ದ ಉತ್ತಯ್ಯ.
ಆ ಬಾಲಕನಿಂದ ಬಿದಿರ ಮೇಳೆಯೊಳಗೆ ಭಗಂಡೇಶ್ವರನಿಗೆ ಪೂಜೆ ಮಾಡಿಸುತ್ತಿದ್ದ. ದೇವಸ್ಥಾನ ಹಾಳಾದರೂ ಭಗಂಡೇಶ್ವರನ ಪೂಜೆ ತಪ್ಪದಂತೆ ನೋಡಿಕೊಂಡ.
ಧರ್ಮರಕ್ಷಣೆಗಾಗಿ ಬ್ರಾಹ್ಮಣ ಹುಡುಗನನ್ನು ಹೊರುತ್ತಿದ್ದ ಉತ್ತಯ್ಯ ನಂತರ ತಾನೂ ಮದ್ಯಮಾಂಸಗಳನ್ನು ತ್ಯಜಿಸಿದ ಬದುಕಿದ. ಇಂದಿಗೂ ಭಾಗಮಂಡಲದಲ್ಲಿ ಪೂಜೆಯ ಮೊದಲ ಪ್ರಸಾದ ಆ ಪುಣ್ಯಾತ್ಮ ಪಟ್ಟಮಾಡ ವಂಶಸ್ಥರಿಗೆ.
ಆಕರ – ಹಿಸ್ಟರಿ ಆಫ್ ಮೈಸೂರು ಅಂಡ್ ಕೂರ್ಗ್, ಲೂಯಿಸ್ ರೈಸ್, 1878
————————————————————————–
7. ಟಿಪ್ಪುವಿನಿಂದ ಧ್ವಂಸವಾದ ದೇವಾಲಯಗಳು
ಕೊಡಗಿನ ಕುಶಾಲನಗರದಿಂದ ಪೊನ್ನಂಪೇಟೆಯವರೆಗೆ ಟಿಪ್ಪು ನಾಶಮಾಡಿದ ದೇವಸ್ಥಾನಗಳ ಕುರುಹುಗಳು ಇಂದಿಗೂ ಕಾಣುತ್ತವೆ. ಆತನ ಕ್ರೂರತೆಯ ಕಥೆಯನ್ನು ಹೇಳುತ್ತವೆ.
ಕೊಳಕೇರಿ ಗ್ರಾಮದ ಉಮಾಮಹೇಶ್ವರ ದೇವಸ್ಥಾನ (1956ರಲ್ಲಿ ಜೀರ್ಣೋದ್ದಾರವಾಯಿತು)
ಕೊಳಕೇರಿ ಮಹಾದೇವರ ದೇವಸ್ಥಾನ (2005ರಲ್ಲಿ ಜೀರ್ಣೋದ್ದಾರವಾಯಿತು)
ಪೊನ್ನಂಪೇಟೆ ಸಮೀಪ ನಡಿಕೇರಿ ಗೋವಿಂದ ಸ್ವಾಮಿ ದೇವಸ್ಥಾನ (ಹೈದರ್ ದಾಳಿ)
ಪೊನ್ನಂಪೇಟೆ ಸಮೀಪ ಬೇಗೂರು ಓಣಿಲಯ್ಯಪ್ಪ ದೇವಸ್ಥಾನ (ಹೈದರ್ ದಾಳಿ)
ಅಪ್ಪಂಗಳ ಮಾದೂರಪ್ಪ ದೇವಸ್ಥಾನ (2014ರಲ್ಲಿ ಜೀರ್ಣೋದ್ದಾರವಾಗಿದೆ)
ಅರಮೇರಿಯ ಭಗವತಿ ದೇವಸ್ಥಾನ (ಈಗಲೂ ಪಾಳುಬಿದ್ದಿದೆ)
ಅರ್ವತ್ತೋಕ್ಲು ಈಶ್ವರ ದೇವಸ್ಥಾನ
ಕದನೂರು ಭಗವತಿ ದೇವಸ್ಥಾನ
ಮಲೆತಿರಿಕೆ ದೇವಸ್ಥಾನ
ಬೊಳ್ಳುಮಾಡು ಈಶ್ವರ ದೇವಸ್ಥಾನ
ಐಮಂಗಲ ಈಶ್ವರ ದೇವಸ್ಥಾನ
ಕುಶಾಲನಗರ ಮತ್ತು ಶುಂಠಿಕೊಪ್ಪದ ಎಲ್ಲ ದೇವಸ್ಥಾನಗಳು
ವಿರಾಜಪೇಟೆ ಸಮೀಪದ ಅರಮೇರಿಯ ಭಗವತಿ ದೇವಸ್ಥಾನ
8. ಫ್ರೆಂಚರ ಗುಂಡುಗಳು
ಕರ್ನಾಟಕ ಕಂಡ ಮಹಾನ್ ಕ್ರೂರಿ ದೊರೆಗಳಲ್ಲೊಬ್ಬನಾದ ಟಿಪ್ಪು ಹೆಗಲಿಗೆ ಕೋವಿ ಇಟ್ಟು ಫ್ರೆಂಚರು ಮಲಬಾರ್ ಮತ್ತು ಮಂಗಳೂರನ್ನು ಗೆಲ್ಲುವ ಕನಸನ್ನು ಕಾಣುತ್ತಿದ್ದರು. ಅದಕ್ಕೆ ಪ್ರಬಲ ಅಡ್ಡಿಯಾಗಿದ್ದವರು ಕೊಡವರು. ಫ್ರೆಂಚ್ ಮಿಲಿಟರಿ ಜನರಲ್ ಎಂ. ಲಾಲಿ ಕೊಡವರ ಗೆರಿ ಯುದ್ಧಗಳ ಬಗ್ಗೆ ಚಿಂತಿತನಾಗಿದ್ದ. ಫ್ರಾನ್ಸಿನಿಂದ ಹೆಚ್ಚಿನ ಮದ್ದುಗುಂಡುಗಳನ್ನು ತರಿಸುವುದಾಗಿ ಟಿಪ್ಪುವಿಗೆ ಮಾತು ಕೊಟ್ಟ ಲಾಲಿ ಹಡಗಿನಿಂದ ಪುದುಚೇರಿಗೆ ಹೆಚ್ಚುವರಿ ಶಸ್ತ್ರಾಸ್ತ್ರಗಳನ್ನು ತರಿಸಿದ.
ಈ ಪ್ರಸಂಗ 1780ರಿಂದ 85ರ ನಡುವೆ ನಡೆದಿರಬಹುದು ಎಂದು ಕೊಡಗಿನ ಖ್ಯಾತ ಇತಿಹಾಸಜ್ಞ ಬಾಚರಣಿಯಂಡ ಅಪ್ಪಣ್ಣನವರು ಹೇಳುತ್ತಾರೆ. ಹೀಗೆ ಪುದುಚೇರಿಯಿಂದ ಎತ್ತುಗಳ ಬೆನ್ನ ಮೇಲೆ ಹೇರಿಕೊಂಡು ಬಂದ ಈ ಉಂಡೆಗಳನ್ನು ಕೊಡವರು ತಡಿಯಂಡಮೋಳ್ ಬೆಟ್ಟದಿಂದ ಇಳಿಸಲು ಬಿಡಲೇ ಇಲ್ಲ. ಆಗ ಕಾಡುಪಾಲಾದ ಕಬ್ಬಿಣದ ಗುಂಡುಗಳೇ ಇವು.
ಗುಂಡುಗಳು ಕೈತಪ್ಪಿದ ಆಕ್ರೋಶ ಟಿಪ್ಪು ಮತ್ತು ಫ್ರೆಂಚರಿಗೆ ಕೊಡವರ ಮೇಲಿನ ದ್ವೇಷವನ್ನು ಇಮ್ಮಡಿ ಮಾಡಿತು. ಅದರ ಪರಿಣಾಮವೇ ದೇವಟ್ಟಿಪರಂಬು ಹತ್ಯಾಕಾಂಡ
ಆಕರ – ಹೊಸದಿಗಂತ ಪತ್ರಿಕೆಯಲ್ಲಿನ ಲೇಖನ, ಸಂತೋಷ್ ತಮ್ಮಯ್ಯ
9. ಟಿಪ್ಪು ವಿರುದ್ಧ ಹೋರಾಡಿದ ಕೊಡವ ವೀರರು
ಕೊಡಗಿಗೆ ದಾಳಿ ಮಾಡುತ್ತಿದ್ದ ಹೈದರ್ ಮತ್ತು ಟಿಪ್ಪು ದಾಳಿಯನ್ನು ಸಮರ್ಥವಾಗಿ ಎದುರಿಸಿ ಬಲಿದಾನಿಗಳಾದ ಕೊಡವ ವೀರಪುರುಷರನ್ನು ಇಂದಿಗೂ ಆಯಾಯ ಕೊಡವ ಮನೆತನಗಳು ಮಹಾಪುರುಷರು ಎಂದು ಆರಾಧಿಸುತ್ತಿವೆ. ವರ್ಷಂಪ್ರತಿ ಅವರ ಸಮಾಧಿಗಳಲ್ಲಿ ಉತ್ಸವಗಳು ನಡೆಯುತ್ತವೆ. ಇಂಥಲ್ಲಿ ಸರ್ಕಾರ ಟಿಪ್ಪು ಜಯಂತಿ ಆಚರಿಸಿದರೆ ಆ ಕುಟುಂಬಗಳಿಗೆ ಹೇಗಾಗಬಹುದು? ಅವರ ಮನಸ್ಥಿತಿ ಹೇಗಿರಬಹುದು? ಈ ಮಹಾಪುರುಷರು ಸ್ವಧರ್ಮ ಮತ್ತು ಸ್ವರಾಜ್ಯಕ್ಕಾಗಿ ಟಿಪ್ಪು ಮತ್ತು ಹೈದರ್ ವಿರುದ್ಧ ಹೋರಾಟ ನಡೆಸಿದ್ದರು. ಈಗ ಸರ್ಕಾರ ಟಿಪ್ಪುವನ್ನೇ ಸ್ವಾತಂತ್ರ್ಯ ಹೋರಾಟಗಾರ ಎಂದರೆ ಸರ್ಕಾರ ಕೊಡವರನ್ನೇನು ಸ್ವಾತಂತ್ರ್ಯ ವಿರೋಧಿಗಳೆಂದು ಭಾವಿಸುತ್ತದೆಯೇ? ಅವರ ಹೋರಾಟಕ್ಕೆ, ಬಲಿದಾನಕ್ಕೆ ಬೆಲೆಯೇ ಇಲ್ಲವೇ?
10. ಟಿಪ್ಪು ವಿರುದ್ಧ ಹೋರಾಡಿದ ಕೊಡವ ವೀರರು
ಕುಟಿರ ಪೊನ್ನಣ್ಣ ಮತ್ತು ಮಾಣಿಚ್ಚ ಸೋದರರು
ಒಮ್ಮೆ ಹೈದರ್ ತನ್ನ ಇಬ್ಬರು ಪಠಾಣ್ ಸರದಾರನ್ನು ಕುಶಾಲನಗರ ಮೂಲಕ ಕೊಡಗಿಗೆ ಕಳುಹಿಸಿದ್ದ. ಕುಟಿ ಪೊನ್ನಣ್ಣ ಮತ್ತು ಮಾಣಿಚ್ಚ ಸೋದರರು ನೇರವಾಗಿ ಹೈದರ್ ಸರದಾರರ ಮೇಲೆ ಏರಿಹೋಗಿ ಅವರ ರುಂಡ ಹಾರಿಸಿದರು. ಕುಶಾಲನಗರದ ಬೈಚನಹಳ್ಳಿಯಲ್ಲಿದ್ದ ವೀರ ಪೊನ್ನಣ್ಣನ ಸಮಾಧಿ ಈಗ ಬೆಂಗಳೂರು-ಬಂಟ್ವಾಳ ಹೆದ್ದಾರಿಯಲ್ಲಿ ಸಮಾಧಿ ಸಮಾಧಿಯಾಗಿದೆ
ಅಪ್ಪಚ್ಚೀರ ಮಂದಣ್ಣ
ಮಡಿಕೇರಿ-ಭಾಗಮಂಡಲ ರಸ್ತೆಯ ಅಪ್ಪಂಗಳ ಊರಿನ ಅಪ್ಪಚ್ಚಿರ ಮನೆತನದ ಮಹಾಪ್ರರಾಕ್ರಮಿ ಮಂದಣ್ಣ. ಮುಳ್ಳುಸೋಗೆ ಯುದ್ಧದಲ್ಲಿ ಈತ ನೇರ ಹೈದರಾಲಿಯ ಬಿಡಾರಕ್ಕೇ ಓಡಿದ್ದ. ಮಂದಣ್ಣನ ಕೈಯಲ್ಲಿದ್ದ ಒಡಿಕತ್ತಿ, ಆತನ ದೇಹದಾಢ್ಯತೆಗಳನ್ನು ಕಂಡ ಹೈದರಾಲಿ ಓಟಕಿತ್ತಿದ್ದ. ಹೈದರಾಲಿಯ ಮೂರನೆಯ ಮುತ್ತಿಗೆಗಿಂತ ಕೆಲವೇ ದಿನಗಳ ಮುನ್ನ ಮಂದಣ್ಣ ನಿಗೂಢವಾಗಿ ಸಾವನ್ನಪ್ಪಿದ. ಬಲೆಯಲ್ಲಿ ಬಂಧಿಸಿ ಆತನನ್ನು ಕೊಲ್ಲಲಾಯಿತು ಎಂದು ಕೊಡವರು ಇಂದಿಗೂ ಹೇಳುತ್ತಾರೆ.
ಕನ್ನಂಡ ದೊಡ್ಡಯ್ಯ
ಎರಡು ಬಾರಿ ಮುಸಲ್ಮಾನ ಸೈನ್ಯವನ್ನು ಹಿಂದಕ್ಕಟ್ಟಿದ ಮಹಾಪರಾಕ್ರಮಿ ಕನ್ನಂಡ ದೊಡ್ಡಯ್ಯ. 1776ರಲ್ಲಿ ಹೈದರಾಲಿ ಮತ್ತೆ ದಾಳಿ ನಡೆಸಿದಾಗ ಈ ಬಾರಿ ಆತನನ್ನು ಕೊಂದೇ ಮರಳುವುದಾಗಿ ಕೊಡಗಿನ ರಾಜ ಲಿಂಗರಾಜೇಂದ್ರನಿಗೆ ಹೇಳಿ ಕಾಜೂರು ಯುದ್ಧಕ್ಕೆ ಹೋಗಿದ್ದ. ಆದರೆ ಕಾಜೂರು ಯುದ್ಧದಲ್ಲಿ ಕೊಡಗಿನ ಸೇನೆಯೇನೋ ಗೆದ್ದಿತು. ಆದರೆ ದೊಡ್ಡಯ್ಯನನ್ನು ಹೈದರನ ಸರದಾರನಾಗಿದ್ದ ಬೊಳ್ಳಯ್ಯನಾಜಿ ಎಂಬವನು ಹಿಂಬದಿಯಿಂದ ಬಂದು ಕತ್ತರಿಸಿ ಹಾಕಿದ್ದ. ತನ್ನ ತಲೆ ಕತ್ತರಿಸಿದ್ದರೂ ಈ ದೊಡ್ಡಯ್ಯ ಬೊಳ್ಳಯ್ಯನಾಜಿಯನ್ನು ಅ ಉರುಳಿಸಿದ್ದ. ಅದೇ ಸ್ಥಿತಿಯ ದೊಡ್ಡಯ್ಯ ಮಡಿಕೇರಿ ಕೋಟೆಗೆ ಬಂದು ರಾಜನೆದುರು ಕುಸಿದು ಸತ್ತ. ಇಂದಿಗೂ ಕೊಡಗಿನಲ್ಲಿ ಜನ ದೊಡ್ಡಯ್ಯನನ್ನು ಕಾಜೂರಿನಿಂದ ಭದ್ರಕಾಳಿಯೇ ಹೊತ್ತುಕೊಂಡು ಮಡಿಕೇರಿ ಬಂತು ಎಂದು ನಂಬುತ್ತಾರೆ. ಮಡಿಕೇರಿಯಲ್ಲಿ ಪ್ರತೀ ವರ್ಷ ಮಾರ್ಚ್ ತಿಂಗಳಲ್ಲಿ ಈ ದೊಡ್ಡಯ್ಯನ ಸಮಾಧಿಯಲ್ಲಿ ಕೋಲ-ನೇಮಗಳು ವಿಜೃಂಭಣೆಯಿಂದ ಜರುಗುತ್ತವೆ.
11. ಕೊಡುಗು ಜಿಲ್ಲೆಯ ಮುಸ್ಲಿಂ ಜನಸಂಖ್ಯೆ
ಕೊಡಗಿನಲ್ಲಿ ಟಿಪ್ಪುವಿನಿಂದ ಆರಂಭಗೊಂಡ ಮುಸ್ಲಿಮರ ಸಂಖ್ಯಾಬಾಹುಳ್ಯ ಹೆಚ್ಚಳದ ಪ್ರಯತ್ನಗಳು ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಜಾರಿಯಲ್ಲಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯಲ್ಲಿ ಇದು ಸ್ಪಷ್ಟವಾಗಿ ಕಾಣುತ್ತಿದೆ. ಮುಸ್ಲಿಂ ಜನಸಂಖ್ಯೆಯ ಏರಿಕೆಯ ಪ್ರಮಾಣ ಗಾಬರಿ ಹುಟ್ಟಿಸುವಂತಿದೆ.
2011ರ ಜನಗಣತಿಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ ಶೇಕಡಾ 14.23 ಆದರೆ ಕೊಡಗಿನ ಎರಡು ತಾಲ್ಲೂಕುಗಳು ಈ ಪ್ರಮಾಣವನ್ನೂ ಮೀರಿ ಮುಸ್ಲಿಂ ಬಾಹುಳ್ಯವನ್ನು ಹೊಂದಿವೆ. ಮತ್ತು ಸೋಮವಾರಪೇಟೆ ತಾಲ್ಲೂಕು ಸಹ ಇದೇ ಹಾದಿಯಲ್ಲಿದೆ. ಇಡೀ ಜಿಲ್ಲೆಯ ಒಟ್ಟು ಮುಸಲ್ಮಾನರರ ಸಂಖ್ಯೆಯು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಮುಸಲ್ಮಾನರನ್ನು ಹೊಂದಿರುವುದರಲ್ಲಿ ಸಂಶಯವಿಲ್ಲ.
data
ಹಾಗೆಯೇ ಮೈಸೂರು ತಾಲ್ಲೂಕು ಸಹ ಮುಸಲ್ಮಾನರ ಸಂಖ್ಯೆಯಲ್ಲಿ (ಶೇ. 16.25) ರಾಷ್ಟ್ರೀಯ ಸರಾಸರಿಗಿಂತ ಮುಂದಿರುವುದನ್ನು ಗಮನಿಸ ಬೇಕಾದ ಸಂಗತಿಯೇ ಆಗಿದೆ.
ಮಾಹಿತಿ – ಫೌಂಡೇಷನ್ ಫಾರ್ ಇಂಡಿಕ್ ರಿಸರ್ಚ್ ಸ್ಟಡೀಸ್, ಬೆಂಗಳೂರು ಮತ್ತು ಕೇಂದ್ರ ಸರ್ಕಾರದ ಸೆನ್ಸಸ್ ಇಲಾಖೆಯ ವರದಿಗಳು
12. ಕನ್ನಡ ವಿರೋಧಿ – ಕರುನಾಡ ದ್ರೋಹಿ ಟಿಪ್ಪು
ಮಲಬಾರಿನ ಮುಸಲ್ಮಾನರು ಮಲೆಯಾಳಂ ಭಾಷೆಯನ್ನು, ತಮಿಳು ಮುಸ್ಲಿಮರು ತಮಿಳನ್ನು ಇಂದಿಗೂ ಮಾತನಾಡುತ್ತಾರೆ ಓದಿ ಬರೆಯುತ್ತಾರೆ. ಆದರೆ ಮೈಸೂರಿನ ಮುಸ್ಲಿಮರು ಇಂದಿಗೂ ಬರೇ ಉರ್ದುವಿನಲ್ಲಿ ಮಾತನಾಡುವುದು, ಕನ್ನಡ ವಿರೋಧಿ ಮನೋಭಾವ ಪ್ರದರ್ಶಿಸುವುದು ಟಿಪ್ಪು ಆರಂಭಿಸಿದ ಫಾರ್ಸಿ ಮತ್ತು ಉರ್ದು ವಿದ್ಯಾಭ್ಯಾಸ ಪದ್ಧತಿಯಿಂದ.
ಟಿಪ್ಪುವು 1796ರಲ್ಲಿ ಮೈಸೂರಿನ ರಾಜರ ಅರಮನೆಯನ್ನು ಲೂಟಿ ಮಾಡಿದಾಗ ಅರಮನೆಯ ಗ್ರಂಥಾಲಯದಲ್ಲಿದ್ದ ಅಮೂಲ್ಯ ಗ್ರಂಥಗಳು, ತಾಳೆಯೋಲೆಯ ಹಸ್ತಪ್ರತಿಗಳು ಮತ್ತು ಕಡತಗಳನ್ನು ಕುದುರೆಗಳಿಗೆ ಹುರಳಿ ಬೇಯಿಸಲು ಇಂಧನವಾಗಿ ಉಪಯೋಗಿಸುವಂತೆ ಅಪ್ಪಣೆ ಮಾಡಿದ.
ಕರ್ನಾಟಕದ ಹೆಮ್ಮೆಯ ವಿಜಯನಗರದ ಸಾಮ್ರಾಜ್ಯದ ಪರಂಪರೆಯಂತೆ ಮೈಸೂರಿನಲ್ಲು ನಡೆಯುತ್ತಿದ್ದ ವೈಭವದ ದಸರೆಯ ಮೆರವಣಿಗೆ, ನಾಡ ಹಬ್ಬಕ್ಕೆ ತಡೆ ಬಿದ್ದದ್ದು ಸಹ ಜಿಹಾದಿ ಮಾನಸಿಕತೆಯ ಟಿಪ್ಪುವಿನ ಕಾಲದಲ್ಲೇ ಎಂಬುದನ್ನು ಗಮನಿಸಬೇಕಾದ ಸಂಗತಿ.
ಇದು ಟಿಪ್ಪುವಿನ ಕನ್ನಡ ಪ್ರೇಮ ಮತ್ತು ನಾಡ ಸಂಸ್ಕೃತಿಗೆ ತೋರಿಸುತ್ತಿದ್ದ ಗೌರವ.
13. ಕನ್ನಡಕ್ಕೆ ತಿರಸ್ಕಾರ ಪರ್ಶಿಯನ್‌ಗೆ ಪುರಸ್ಕಾರ
ಟಿಪ್ಪುವನ್ನು ’ಕನ್ನಡದ ಕುವರ’ ಎಂದು ಬಿಂಬಿಸಲಾಗುತ್ತಿದೆ. ಆದರೆ ಮೈಸೂರು ಒಡೆಯರ ಕಾಲದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಟಿಪ್ಪು ಬದಲಿಸಿ ಫಾರ್ಸಿ ಭಾಷೆಯನ್ನು ತಂದ. ಸೈನ್ಯದ ಎಲ್ಲ ಯೋಜನೆಗಳಿಗೂ, ವಿಭಾಗಗಳಲ್ಲೂ ಇಸ್ಲಾಂ ಮತಾಧಾರಿತ ಹೆಸರುಗಳನ್ನಿಡುತ್ತಿದ್ದ.
ಮೈಸೂರಿನ ವಿವಿಧ ಇಲಾಖೆಗಳಲ್ಲಿ ಬಳಸುವ ಆಡಳಿತಾತ್ಮಕ ಶಬ್ದಗಳನ್ನು ಇಲ್ಲಿನ ಜನಕ್ಕೆ ಅತಿ ಅಪರಿಚಿತವಾಗಿದ್ದ ಫಾರ್ಸಿ ಭಾಷೆಯಲ್ಲಿ ಬಳಸುವಂತೆ ಮಾಡಿದ.
ಅಹ್ಮದಿ, ಸಾದಿಕ್, ಝೆಹ್ರಾ, ಔತ್ಮಾನೀ, ಫಾರೂಕ್, ಜಾಫರ್ ಇತ್ಯಾದಿ ಪಕ್ಕಾ ಅರೇಬಿಕ್ ಹೆಸರುಗಳುಳ್ಳ ನಾಣ್ಯಗಳನ್ನು ತಂದು ತನ್ನದು ಇಸ್ಲಾಮೀ ಆಡಳಿತ ಎಂದು ತೋರ್ಪಡಿಸಿದ.
ಖಾತೆ, ಖಿರ್ದಿ, ಪಹಣಿ, ಖಾನೀಸುಮಾರಿ, ಗುದಸ್ತಾ, ತಖ್ತೆ, ತರಿ, ಖುಷ್ಕಿ, ಬಾಗಾಯ್ತು, ಬಂಜರು, ಜಮಾಬಂದಿ, ಅಹವಾಲು ಇತ್ಯಾದಿ ಫಾರ್ಸಿ ಶಬ್ದಗಳು ಕಂದಾಯ ಇಲಾಖೆಯಲ್ಲಿ ನುಸುಳಿದ್ದು ಟಿಪ್ಪುವಿನಿಂದಲೇ. ದೂರದ ಅಳತೆ, ಸಮಯ ಇತ್ಯಾದಿ ಮಾಪನಗಳನ್ನೂ ಚಿತ್ರ ವಿಚಿತ್ರಗೊಳಿಸಿ ಗೊಂದಲದ ಗೂಡಾಗಿಸಿದ. ತಾನೇ ಅರವತ್ತು ವರ್ಷಗಳ ಕ್ಯಾಲೆಂಡರ್ ಒಂದನ್ನು ರೂಪಿಸಿ ತಿಂಗಳು, ದಿನಗಳಿಗೆ ಹೊಸ ಹೆಸರುಗಳನ್ನು ನೀಡಿ ಅದನ್ನೇ ತನ್ನ ಅಧಿಕೃತ ಪತ್ರಗಳಲ್ಲಿ ನಮೂದಿಸತೊಡಗಿದ.
ಇದಲ್ಲದೇ ಖಾವಂದ್, ಅಮಲ್ದಾರ, ಶಿರಸ್ತೇದಾರ ಹೀಗೆ ಪ್ರತಿಯೊಂದು ಅಧಿಕಾರ ಪದವಿಗಳನ್ನೂ ಫಾರ್ಸಿಯನ್ನಾಗಿಸಿ ತಾವು ವಿದೇಶಿ ಆಡಳಿತದಲ್ಲಿದ್ದೇವೇನೋ ಎಂಬ ಭ್ರಮೆ ಜನಸಾನ್ಯರಿಗೆ ಬರುವಂತೆ ಮಾಡಿದ.
ಕರಾವಳಿ ಪ್ರದೇಶಕ್ಕೆ ಯಾಮ್ ಸುಬಾ, ಮಲೆನಾಡಿಗೆ ತರನ್ ಸುಬಾ ಮತ್ತು ಬಯಲುಸೀಮೆಗೆ ಘಬ್ರಾ ಸುಬಾ ಎಂದು ಕರೆದ. ಸರಕಾರೀ ಕಡತ, ದಾಖಲೆಗಳಲ್ಲಿ ಆಡಳಿತ ವ್ಯವಹಾರಗಳಲ್ಲಿ ಇವೇ ಹೆಸರನ್ನು ಟಿಪ್ಪು ಚಾಲ್ತಿಗೆ ತಂದ.
14. ಬದಲಾದ ಊರಿನ ಹೆಸರುಗಳು
ಸ್ಥಳೀಯ ಸಂಸ್ಕೃತಿಯನ್ನು ನಾಶಗೊಳಿಸಿ ಬಲವಂತವಾಗಿ ಇಸ್ಲಾಮಿ ಸಂಸ್ಕೃತಿಯನ್ನು ಹೇರುವ ತನ್ನ ಕಾರ್ಯವನ್ನು ಊರುಗಳ ಮೂಲ ಹೆಸರುಗಳನ್ನು ಬದಲಿಸುವುದರ ಮೂಲಕವೂ ಟಿಪ್ಪು ಕೈಗೊಂಡಿದ್ದ. ಇಂತಹ ಬದಲಾವಣೆಗಳ ಪಟ್ಟಿ (ಕೆಲವು ಮಾತ್ರ) ಇಲ್ಲಿದೆ ನೋಡಿ.
ಬ್ರಹ್ಮಪುರಿ – ಸುಲ್ತಾನ್ ಪೇಟ್ ಮೊಳಕಾಲ್ಮೂರು – ಮುಹಮ್ಮದಾಬಾದ್
ಕಾಳೀಕೋಟೆ (ಕೇರಳ) – ಫರೂಕಾಬಾದ್ ಚಿತ್ರದುರ್ಗ – ಫಾರ್ರುಕ್ ಯಾಬ್ ಹಿಸ್ಸಾರ್
ಮಡಿಕೇರಿ – ಜಫರಾಬಾದ್ ಸತ್ಯಮಂಗಲ – ಸಲಾಮಾಬಾದ್
ದೇವನಹಳ್ಳಿ – ಯೂಸುಫಾಬಾದ್ ಬೇಕಲ್ – ರುಮುಟಾಬಾದ್
ದಿಂಡಿಗಲ್ – ಖಲೀಲಾಬಾದ್ ಗುತ್ತಿ – ಫೈಜ್ ಹಿಸ್ಸಾರ್
ಕೃಷ್ಣಗಿರಿ – ಫಲ್ಕ್ ಇಲ್ ಅಜಮ್ ಸಿರಾ – ರುಸ್ತುಮಾಬಾದ್
ಪೆನುಗೊಂಡ – ಫಕ್ತಾಬಾದ್ ಸಂಕ್ರಿದುರ್ಗ – ಮುಜ್ಜಿಫರಾಬಾದ್
ಸಕಲೇಶಪುರ – ಮಂಜ್ರಾಬಾದ್ ಸದಾಶಿವಗಢ – ಮಜೀದಾಬಾದ್
ಮಂಗಳೂರು – ಜಮಾಲಾಬಾದ್ ಧಾರವಾಡ – ಖುರ್ಷಿದ್ -ಸವಾದ್
ಹಾಸನ – ಖಯೀಮಾಬಾದ್ ಹೊನ್ನಾವರ – ಸದ್ದೈಹಾಸ್ ಗಢ
ಕುಂದಾಪುರ – ನಸ್ರುಲ್ಲಾಬಾದ್ ಬಸ್ರೂರು – ವಝೀರಾಬಾದ್
ಮೈಸೂರು – ನಜರಾಬಾದ್ (ಈಗ ನಜರಾಬಾದ್ ಎನ್ನುವುದು ಮೈಸೂರಿನ ಒಂದು ಮೊಹಲ್ಲಾ ಆಗಿದೆ).
ಈತನ ಅಪ್ಪ ಹೈದರಾಲಿಯೂ ಬಿದನೂರನ್ನು ವಶಪಡಿಸಿಕೊಂಡು ಅದನ್ನು ಹೈದರ್ ನಗರ್ ಎಂದು ಕರೆದಿದ್ದನಾದರೂ ಈ ಚಟವನ್ನಾತ ಮುಂದುವರೆಸಲಿಲ್ಲ. ಆದರೆ ತಲೆತುಂಬಾ ಇಸ್ಲಾಮೀಕರಣವನ್ನೇ ತುಂಬಿಕೊಂಡಿದ್ದ ಟಿಪ್ಪು ಮಾತ್ರ ಪ್ರತಿಯೊಂದು ಊರನ್ನೂ ಇಸ್ಲಾಂನ ಪ್ರತೀಕವೆನಿಸುವಂತೆ ಮರುನಾಮಕರಣ ಮಾಡುತ್ತಿದ್ದನು.
15. ಮಂಡಯಂ ಅಯ್ಯಂಗಾರರ ಹತ್ಯಾಕಾಂಡ
ಮೇಲುಕೋಟೆಯ ಮಂಡಯಂ ಅಯ್ಯಂಗಾರರ ಪಂಗಡಕ್ಕೆ ಸೇರಿದ ತಿರುಮಲ ರಾವ್ ಮತ್ತು ನಾರಾಯಣ ರಾವ್ ಎಂಬ ಸೋದರರು ಮಹಾರಾಣಿ ಲಕ್ಶ್ಮಮ್ಮಣಿಯ ನಿಷ್ಠಾವಂತ ಪ್ರಧಾನರಾಗಿದ್ದರು. ಇದೇ ಕಾರಣಕ್ಕೆ ಇವರನ್ನು ಬಗ್ಗು ಬಡಿಯಲು ಕ್ರೂರಿಯೂ ಮತಾಂಧನೂ ಆಗಿದ್ದ ಟಿಪ್ಪು ಸಮಯ ಕಾಯುತ್ತಲೇ ಇದ್ದ.
1783ರ ನರಕ ಚತುರ್ಥಿಯ ದಿನದಂದು ಟಿಪ್ಪು ಮೇಲುಕೋಟೆಗೆ ಮೇಲೆ ಎರಗಿದ. ಆತನ ಮುಸಲ್ಮಾನ ಸೈನ್ಯ ಹಬ್ಬಕ್ಕೆ ನೆರೆದಿದ್ದ ಅಯ್ಯಂಗಾರರನ್ನು ಸುತ್ತುವರಿತು. ಟಿಪ್ಪು ಕುದುರೆ ಮೇಲಿಂದಲೇ ಕತ್ತಿ ಬೀಸಿದ. ಬ್ರಾಹ್ಮಣನೊಬ್ಬನ ತಲೆ ಬಿತ್ತು. ಅದು ಉದ್ಘಾಟನೆ. ಮುಂದೆ ನಡೆದಿದ್ದು ಮಹಾ ಮಾರಣ ಹೋಮ. ಸುಮಾರು 800 ಮಂದಿ ಅಯ್ಯಂಗಾರರನ್ನು ಅಟ್ಟಾಡಿಸಿ ಕತ್ತರಿಸಲಾಯಿತು.
ಹೆಂಗಸರು-ಮಕ್ಕಳನ್ನೂ ತರಿದುಹಾಕಲಾಯಿತು. ಹೆಂಗಸರ ಮಾನ ಸೂರೆ ಮಾಡಲಾಯಿತು. ದೇವಸ್ಥಾನಗಳ ಊರು ಮೇಲುಕೋಟೆ ಮುಸ್ಲಿಮರ ಕ್ರೌರ್ಯದಿಂದ ಸಂಪೂರ್ಣ ಬದಲಾಯಿತು. ಊರಿನ 29 ಕಲ್ಯಾಣಿಗಳೂ ರಕ್ತದಿಂದ ಕೆಂಪಾದವು, ಅವುಗಳಲ್ಲಿ ಹೆಣಗಳು ತೇಲಿದವು. ಮಂಡಯಂ ಅಯ್ಯಂಗಾರರು ಹಬ್ಬಕ್ಕೆ ಸಜ್ಜಾಗಿದ್ದು ಅದೇ ಕೊನೆ.
ಅಂದಿನ ಆ ನೋವು ಇನ್ನೂ ಮಂಡಯಂ ಅಯ್ಯಂಗಾರರಲ್ಲಿ ಮಾಸಿಲ್ಲ. ಇಂದಿಗೂ ಅವರು ದೀಪಾವಳಿ ಆಚರಿಸುತ್ತಿಲ್ಲ.
ಪ್ರತೀ ದೀಪಾವಳಿಯೂ ಅವರಿಗೆ ಸೂತಕವೇ.
ಆಕರ – ’ದ ಮೈಸೂರು ಪ್ರಧಾನ್ಸ್’, ಎಂ ಎ ನಾರಾಯಣ ಅಯ್ಯಂಗಾರ್
16. ದುರ್ಗದ ಕೋಟೆಯೊಳಗೆ ಪಿತೂರಿ
ಟಿಪ್ಪು ಇನ್ನೂ ಅಧಿಕಾರಕ್ಕೆ ಬರುವ ಮುಂಚಿನಿಂದಲೂ ಹೈದರಾಲಿಗೂ ವೀರ ಮದಕರಿಗೂ ಅನೇಕ ವರ್ಷಗಳಿಂದ ಕಾಳಗ ನಡೆಯುತ್ತಲೇ ಇತ್ತು. ಆ ಎಲ್ಲಾ ಕಾಳಗಗಳಲ್ಲಿ ಟಿಪ್ಪು ಭಾಗವಹಿಸುತ್ತಿದ್ದ ಮತ್ತು ಪ್ರಮುಖ ಪಾತ್ರ ವಹಿಸುತ್ತಿದ್ದ. ಆದರೆ ಚಿತ್ರದುರ್ಗದ ಉಕ್ಕಿನ ಕೋಟೆ ಹೈದರನ ಕೈಗೆ ದಕ್ಕಲೇ ಇಲ್ಲ.
ಅದು 1780 ನೇ ಇಸವಿ. ಚಿತ್ರದುರ್ಗದ ಸೂನ್ಯದಲ್ಲಿದ್ದ ಮೂರು ಸಾವಿರ ಮುಸಲ್ಮಾನ ಸೈನಿಕರನ್ನು ಇಸ್ಲಾಮಿನ ಹೆಸರಲ್ಲಿ ತಲೆತಿರುಗಿಸಿ ಹೈದರಾಲಿ ತನ್ನ ಪರ ಮಾಡಿಕೊಂಡಿದ್ದ. ಅದುವರೆಗೆ ತಮ್ಮ ಒಡೆಯನ ಉಪ್ಪು ತಿಂದು ಸಂಸ್ಥಾನಕ್ಕೆ ವಿಧೇಯರಾಗಿದ್ದ ಸೈನ್ಯದ ಸರದಾರ ಕುತುಬುದ್ದೀನ್ ಖಾನ್, ಅವನ ಖಾಜಿ ಅಷಫ್ ಖಾನ್, ಖಾಜಿ ಜಮಾಲ್ ಸಾಹೇಬ್ ಜೆಹಾದ್‌ನ ಹೆಸರಿನಲ್ಲಿ ದುರ್ಗದ ಕೋಟೆಗೆ ಎರಡು ಬಗೆಯಲು ಒಪ್ಪಿಕೊಂಡರು.
ಇವರೆಲ್ಲರೂ ನಂತರ ದುರ್ಗದ ಕೋಟೆಯೊಳಗೆ ಪಿತೂರಿ ನಡೆಸಿ ಹೈದರಾಲಿಯ ಲಗ್ಗೆಗೆ ಸಹಕಾರ ನೀಡಿದರು. ಮುಸಲ್ಮಾನರ ಮೊಹರಂ ಹಬ್ಬ ಸಮೀಪಿಸುತ್ತಿದ್ದಂತೆ ಇವರೆಲ್ಲರೂ ಮದ್ದಿನ ಮನೆಯನ್ನು ಎಣ್ಣೆಯಿಂದ ನೆನೆಸಿದರು, ಫಿರಂಗಿ ಗುಂಡುಗಳು ಹಾರದಂತೆ ಮಾಡಿದರು. ಕೋವಿಗಳನ್ನು ಕೆಡಿಸಿಬಿಟ್ಟರು. ತೋಪುಗಳನ್ನು, ಉಕ್ಕಿನ ಬಾಣಗಳನ್ನೂ ಮುರಿದುಹಾಕಿದರು. ಹೈದರ್ ಸೇನೆ ಬಂದಾಗ ಇವರೆಲ್ಲರೂ ಕೋಟೆ ಇಳಿದು ಹೊರಗೆ ಹೋದವರು ಮರಳಿ ಬರಲೇ ಇಲ್ಲ.
ಕೆಚ್ಚೆದೆಯ ಹೋರಾಟ ಮಾಡಿದ ಮದಕರಿ ನಾಯಕ ಮತ್ತು ಆತನ ಬೇಡರ ಸೈನ್ಯ ಅಸಹಾಯಕತೆಯಿಂದ ಸೋಲನ್ನನುಭವಿಸಬೇಕಾಯಿತು
ಆಕರ – ಶ್ರೀನಿವಾಸ ಜೋಯಿಸರ “ಐತಿಹಾಸಿಕ ಲೇಖನಗಳು
17. ಮದಕರಿಯನ್ನು ಕಾಡಿದ ಸೈತಾನ
ಒಮ್ಮೆ ಮರಾಠ ಸೈನ್ಯದ ಕೈಲಿ ಸಿಕ್ಕು ಅಸಹಾಯಕನಾಗಿದ್ದ ಹೈದರಾಲಿಯನ್ನು ಅನುಕಂಪದಿಂದ ಬಿಡಿಸಿದವನೇ ಮದಕರಿ ನಾಯಕ. ಆದರೆ ಇದನ್ನು ಮರೆತು ಮೋಸ, ಕುಟಿಲ, ವಂಚನೆಗಳಿಂದ ಚಿತ್ರದುರ್ಗವನ್ನು ಗೆದ್ದ ಹೈದರಾಲಿ ಮುಂದೆ ನಡೆಸಿದ್ದು ಮಾತ್ರ ಘೋರ ಅತ್ಯಾಚಾರ. ಲೂಟಿ, ಕಗ್ಗೊಲೆಗಳ ಸರಮಾಲೆ.
ದುರ್ಗದ ವೀರರಾದ ಪರಶುರಾಮನಾಯಕ, ಕುಮಾರ ಭರಮಪ್ಪ ನಾಯಕ, ಅಳಿಯ ಹುಚ್ಚಪ್ಪನಾಯಕ, ಮಡದಿ ಕಡೂರಿ, ಗೌಡಿ ನಾಗಿಯನ್ನು ಮೋಸದಿಂದ ಸೆರೆಹಿಡಿದು ಚೌಕಿ ಪಹರೆಯಿಂದ ಶ್ರೀರಂಗಪಟ್ಟಣಕ್ಕೆ ಸಾಗಿಸಿ ಸೆರೆಯಲ್ಲಿರಿಸಿದನು.
ಮದಕರಿ ನಾಯಕನ ನೆಚ್ಚಿನ ಬಂಟರಾದ ಇಪ್ಪತ್ತು ಸಾವಿರ ಬೇಡರನ್ನು ಶ್ರೀರಂಗಪಟ್ಟಣಕ್ಕೆ ಸಾಗಿಸಿ ಮತಾಂತರ ಮಾಡಿದನು.
ವಯಸ್ಕರಾದ ಯುವಕರನ್ನು ಇಸ್ಲಾಮಿಗೆ ಮತಾಂತರಿಸಿ ಪ್ರತ್ಯೇಕವಾದ ’ಸರ್ಕಾರಿ ಚೇಲೆ’ ಎಂಬ ಸೈನ್ಯವನ್ನು ಕಟ್ಟಿದನು.
ಮದಕರಿ ನಾಯಕನನ್ನು ಸೆರೆಮನೆಯಲ್ಲಿಟ್ಟು ವಿಷವಿಕ್ಕಿ ಕೊಂದನೆಂತಲೂ ಕೆಲವರು ಹೇಳಿದರೆ ಸ್ವಾಭಿಮಾನಿಯಾಗಿದ್ದ ಮದಕರಿ ನಾಯಕನೇ ಕಠಾರಿಯಿಂದ ತಾನೇ ತಿವಿದುಕೊಂಡು ಪ್ರಾಣ ಬಿಟ್ಟನೆಂದೂ ಉಲ್ಲೇಖಗಳಿವೆ.
ಇಂಥ ಮೋಸವನ್ನು ದುರ್ಗ ಎಂದಾದರೂ ಮರೆತೀತೇ? ಹೈದರಾಲಿಯ ಈ ಎಲ್ಲಾ ಕಪಟಕ್ಕೆ ಸಾಕ್ಷಿಯಾಗಿದ್ದ, ಕ್ರೂರತೆಗೆ ಜೊತೆಯಾಗಿದ್ದ ಟಿಪ್ಪು ಜಯಂತಿ ಬೇಕೇ?
ಆಕರ – ಶ್ರೀನಿವಾಸ ಜೋಯಿಸರ “ಐತಿಹಾಸಿಕ ಲೇಖನಗಳು
18. ಹೆಣ್ಣುಬಾಕ ಟಿಪ್ಪು
ಇಸ್ಲಾಂನ ಅನುಯಾಯಿಯಾಗಿದ್ದ ಟಿಪ್ಪು ಕುರಾನ್ ನೀಡಿರುವ ಬಹುಪತ್ನಿತ್ವದ ಅವಕಾಶವನ್ನು ಸಂಪೂರ್ನವಾಗಿ ಪಡೆದು ಕೊಂಡಿದ್ದ. ಭಾರತದಲ್ಲಿ ಆಡಳಿತ ನಡೆಸಿದ ಬಹುತೇಕ ಮುಸ್ಲಿಂ ರಾಜರು ಹೆಣ್ಣುಬಾಕರೇ ಆಗಿದ್ದರೆಂಬುದು ಇತಿಹಾಸದಲ್ಲಿ ದಾಖಲಾದ ಸಂಗತಿ. ೧೭೭೪ರಲ್ಲಿ ತನ್ನ ೨೪ನೇ ವಯಸ್ಸಿನಲ್ಲಿ ಮೊದಲಬಾರಿಗೆ ಮದುವೆಯಾದ ಟಿಪ್ಪು ನಂತರ ಆದ ಮದುವೆಗಳಿಗೆ ಲೆಕ್ಕವೇ ಇಲ್ಲ. ತಾನು ಸೋಲಿಸಿದ ಪ್ರದೇಶಗಳ ರಾಜಮನೆತನಗಳ ಸ್ತ್ರೀಯರಿಂದ ಹಿಡಿದು ಬೇಕೆನಿಸಿದ ಪ್ರತಿಯೊಬ್ಬ ಸ್ತ್ರೀಯನ್ನೂ ಶ್ರೀರಂಗ ಪಟ್ಟಣಕ್ಕೆ ಹೊತ್ತೊಯ್ಯುತ್ತಿದ್ದ. ದಿವಾನ್ ಪೂರ್ಣಯ್ಯನ ತಮ್ಮನ ಮಗಳನ್ನೇ ಟಿಪ್ಪು ಬಲಾತ್ಕಾರದಿಂದ ಅಂತಃಪುರಕ್ಕೆಳೆದು ಕೊಂಡಿದ್ದ.
ದುರಾಚಾರಿ ಟಿಪ್ಪುವಿನ ದೃಷ್ಟಿಯಿಂದ ಕೊಡಗಿನ ರಾಜನ ಇಬ್ಬರು ಸೋದರಿಯರಾದ ದೇವಮ್ಮಾಜಿ ಮತ್ತು ನೀಲಮ್ಮಾಜಿ ಸಹ ಹೊರಗುಳಿಯಲಾಗಲಿಲ್ಲ ಇವರ ಜೊತೆಗೆ ಮೈಸೂರು ಒಡೆಯರ್ ಮನೆತನಕ್ಕೆ ಸೇರಿದ ಮೂವರು ಹೆಣ್ಣು ಮಕ್ಕಳು ಟಿಪ್ಪುವಿನ ಅಂತಃಪುರಕ್ಕೆ ದೂಡಲ್ಪಟ್ಟಿದ್ದರು. ತಾನು ಗೆದ್ದ, ಹಾಳು ಮಾಡಿದ ಅಥವಾ ತನ್ನ ಅಧೀನದಲ್ಲಿದ್ದ ಊರುಗಳ ಪಾಳೇಗಾರರು, ಮಾಂಡಲೀಕರು, ಸರದಾರರ ಹೆಣ್ಣುಮಕ್ಕಳು ಸಹ ಆತನ ಜನಾನದಲ್ಲಿದ್ದರು.
ಭಾರತದ ಅರ್ಕಾಟ್, ತಂಜಾವೂರು ಇತ್ಯಾದಿ ಪ್ರದೇಶಗಳ ಹೆಣ್ಣುಗಳ ಜೊತೆಗೆ ದೂರದ ಟರ್ಕಿ, ಪರ್ಶಿಯಾ, ಜಾರ್ಜಿಯಾದಂತಹ ದೇಶಗಳಿಂದ ಹೊತ್ತು ತಂದ ಅಥವಾ ಕೊಂಡು ತಂದ ಹೆಂಗಸರೂ ಇದ್ದರು.
ಟಿಪ್ಪುವಿನ ಸಹೋದರ ಅಬ್ದುಲ್ ಕರೀಮನ ಹೆಂಡತಿ ಸವಣೂರಿನ ನವಾಬನ ಮಗಳು ಮೊದಲು ಹೈದರನ ಜನಾನಾದಲ್ಲಿದ್ದಳಂತೆ. ಹೈದರ ಸತ್ತ ನಂತರ ಅವಳು ಟಿಪ್ಪುವಿನ ಜನಾನಾಕ್ಕೆ ಸೇರಿಸಲ್ಪಟ್ಟಳು. ನಂತರ ಕರೀಮನ ಜನಾನಕ್ಕೆ ಸೇರಿಸಲಾಯಿತು.
1799ರಲ್ಲಿ ಟಿಪ್ಪು ಸತ್ತ ನಂತರ ಕ್ಯಾಪ್ಟನ್ ಥಾಮಸ್ ಮ್ಯಾರಿಯೇಟ್ ನೀಡಿದ ಟಿಪ್ಪುವಿನ ಜನಾನದ (ರಾಣಿವಾಸ) ವರದಿಯು ಈ ಬಗ್ಗೆ ಬೆಳಕು ಚೆಲ್ಲುತ್ತದೆ. ಆತನ ಪತ್ತಿ, ಉಪಪತ್ನಿಯರೂ ಸೇರಿದಂತೆ ಮುನ್ನೂರಕ್ಕೂ ಹೆಚ್ಚು ಸ್ತ್ರೀಯರನ್ನು ಜನಾನದಲ್ಲಿ ಸೇರಿಸಲಾಗಿತ್ತು. ಪ್ರತಿಯೊಬ್ಬ ಪತ್ನಿಯ ಕೋಣೆಯನ್ನು ಕಾಯಲು ಖೋಜಾಗಳನ್ನು ನೇಮಿಸಲಾಗಿತ್ತು ಎಂದು ಅದರಲ್ಲಿ ತಿಳಿಸಲಾಗಿದೆ
ಆಧಾರ – ತಾರೀಖ್-ಎ-ಟಿಪ್ಪು, ಕಿರ್ಮಾನಿ
ಮಾಹಿತಿ: ಫೌಂಡೇಷನ್ ಫಾರ್ ಇಂಡಿಕ್ ರಿಸರ್ಚ್ ಸ್ಟಡೀಸ್, ಹತ್ಯಾಕಾಂಡ
Leave A Reply