ರಾಷ್ಟ್ರಗೀತೆ ಹಾಡಿಸಲು ಸಿನಿಮಾ ಮಂದಿರವೇನು ಶಾಲೆಯೇ: ವಿದ್ಯಾಬಾಲನ್ ಅವಿದ್ಯಾವಂತ ಪ್ರಶ್ನೆ
ನಮ್ಮ ದೇಶದ ಜನರೇ ಹಾಗೆ, ರೇಷನ್ ಗಾಗಿ ಇಡೀ ದಿನಕಾಯುತ್ತೇವೆ, ಜಿಯೋ ಸಿಮ್ ಪಡೆಯಲು ಎರಡು ತಾಸು ಸಾಲಿನಲ್ಲಿ ನಿಲ್ಲಲು ನಮಗೆ ಏನೂ ತೊಂದರೆಯಾಗಲ್ಲ. ಅಷ್ಟೇ ಅಲ್ಲ, ಸಿನಿಮಾ ಮಂದಿರದಲ್ಲಿ ಅರ್ಧತಾಸು ಗುದ್ದಾಡಿಯಾದರೂ ಮೊದಲ ಶೋಗೆ ಟಿಕೆಟ್ ತರುತ್ತೇವೆ. ಆದರೆ, ಸಿನಿಮಾ ಮಂದಿರದಲ್ಲಿ ರಾಷ್ಟ್ರಗೀತೆ ಮೊಳಗಿದರೆ 52 ಸೆಕೆಂಡ್ ನಿಲಲ್ಲು ನಮ್ಮ ನರಗಳಲ್ಲಿ ಶಕ್ತಿಯಿರಲ್ಲ.
ಅಲ್ಲದೆ, ಇದು ದೇಶಭಕ್ತಿಯ ವಿಷಯವೂ ಆಗಿರುವುದರಿಂದ ಕೆಲವು ಎಡಬಿಡಂಗಿಗಳು, ನರಸತ್ತವರು, ವಿಚಾರಹೀನರು, ವಿಕ್ಷಿಪ್ತ ಮನಸ್ಸಿನ ರಾಜಕಾರಣಿಗಳು ಮಾತ್ರ ನಾವೇಕೆ ರಾಷ್ಟ್ರಗೀತೆ ಎದ್ದು ನಿಲ್ಲಬೇಕು ಎನ್ನುತ್ತಾರೆ.
ಈ ಸಾಲಿಗೆ ಬಾಲಿವುಡ್ ನಟಿ ವಿದ್ಯಾಬಾಲನ್ ಸಹ ಸೇರಿದ್ದು, “ರಾಷ್ಟ್ರಗೀತೆ ಹಾಡಿಸಲು ಸಿನಿಮಾ ಮಂದಿರವೇನು ಶಾಲೇಯೇ?” ಎಂದು ಪೆದ್ದಾಗಿ ಪ್ರಶ್ನೆ ಕೇಳಿದ್ದಾರೆ.
ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಬಾರದು. ದೇಶಭಕ್ತಿಯನ್ನು ಬಲವಂತವಾಗಿ ಹೇರಬಾರದು ಎಂದಿದ್ದಾರೆ.
ಅಲ್ಲ, ವಿದ್ಯಾಬಾಲನ್, ದೇಶಭಕ್ತಿಯನ್ನು ಬಲವಂತವಾಗಿ ಹೇರುತ್ತಿದ್ದಾರೆ ಎನ್ನಲು, ರಾಷ್ಟ್ರಗೀತೆ ಎರಡು ತಾಸಿನದ್ದಲ್ಲ. ಟಿಕೆಟಿಗಾಗಿ ಅರ್ಧತಾಸು ಬಡಿದಾಡುವ ನಾವು ರಾಷ್ಟ್ರಗೀತೆಗೆ ಎದ್ದು ನಿಲ್ಲುವಷ್ಟು ತಾಳ್ಮೆ ಇಲ್ಲ ಎಂದರೆ ಹೇಗೆ? ಅಷ್ಟಕ್ಕೂ ಬರೀ ಶಾಲೆಯಲ್ಲಿ ಮಾತ್ರ ರಾಷ್ಟ್ರಗೀತೆ ಹಾಡಬೇಕೆ?
ಇನ್ನೂ ಮುಂದುವರಿದು ನಾನು ಎಲ್ಲೇ ರಾಷ್ಟ್ರಗೀತೆ ಕೇಳಿದರೂ ಎದ್ದು ನಿಲ್ಲುತ್ತೇನೆ ಎನ್ನುತ್ತೀರಿ.ಮತ್ತೆ ಸಿನಿಮಾ ಮಂದಿರದಲ್ಲಿ ರಾಷ್ಟ್ರಗೀತೆ ಬೇಡ ಎನ್ನುತ್ತೀರಿ. ನಿಮ್ಮ ಈ ಇಬ್ಬಂದಿತನಕ್ಕೆ ಏನೆನ್ನಬೇಕು?
ಇನ್ನು ನಮ್ಮ ತಂದೆಗೆ ರಾಷ್ಟ್ರಗೀತೆ ಕೇಳಿಸಲಾದರೂ ನಾನು ಒಲಿಂಪಿಕ್ ನಲ್ಲಿ ಪದಕ ಗೆಲ್ಲಬೇಕು ಎಂದುಕೊಂಡಿದ್ದೆ ಎಂದು ಪದಕ ಗೆದ್ದ ಬಳಿಕ ಸೈನಾ ನೆಹ್ವಾಲ್ ಹೇಳಿದ್ದರು. ರಾಷ್ಟ್ರಗೀತೆ ಅಷ್ಟರಮಟ್ಟಿಗೆ ಸ್ಫೂರ್ತಿ ನೀಡುವಂಥಾದ್ದು. ಆದರೆ ಅಂಥ ಗೀತೆಯನ್ನೇ ಬೇಡ ಎನ್ನುತ್ತಿರುವ ವಿದ್ಯಾಬಾಲನ್ “ಡರ್ಟಿ” ಮನಸ್ಥಿತಿಗೆ ಬೇಸರ ವ್ಯಕ್ತಪಡಿಸದೆ ಬೇರೆ ದಾರಿಯಿಲ್ಲ.
Leave A Reply