ಹೊರಗುತ್ತಿಗೆ ನೇಮಕಾತಿ ನೌಕರಿಯಲ್ಲಿಯೂ ಬಿಹಾರದಲ್ಲಿ ಮೀಸಲಾತಿ ಜಾರಿ
Posted On November 2, 2017
0

** ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ಇದು ಮುನ್ನುಡಿ ಎಂದ ಜೆಡಿಯು
ಪಟನಾ : ಹೊರಗುತ್ತಿಗೆ ಆಧಾರದಲ್ಲಿ ಭರ್ತಿಮಾಡಲಾಗುವ ನೌಕರಿಗೂ ರಾಜ್ಯ ಮೀಸಲಾತಿ ನೀತಿಯನ್ನು ನಿತೀಶ್ ಕುಮಾರ್ ಸರ್ಕಾರ ವಿಸ್ತರಿಸಿದೆ.
ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿಯಿಂದ ಹಿಡಿದು ಅವರಿಗೆ ನೀಡಲಾಗುವ ಎಲ್ಲ ಸೌಲಭ್ಯಗಳಲ್ಲಿಯೂ ಮೀಸಲಾತಿ ಅನ್ವಯವಾಗುವಂತೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಸಂಪುಟ ಕಾರ್ಯದರ್ಶಿ ಬ್ರಜೇಶ್ ಮಲ್ಹೋತ್ರಾ ತಿಳಿಸಿದ್ದಾರೆ. ಸುಮಾರು 10 ಸಾವಿರ ಮಂದಿ ಹೊರಗುತ್ತಿಗೆ ಆಧಾರದಲ್ಲಿ ಬಿಹಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಚ್ಚಾಗಿ ಡಾಟಾ ಎಂಟ್ರಿ ಆಪರೇಟರ್‍ಗಳಿದ್ದಾರೆ. ಎಸ್‍ಸಿಗೆ 16%, ಎಸ್‍ಟಿಗೆ 1%, ಇಬಿಸಿ(ಆರ್ಥಿಕವಾಗಿ ಹಿಂದುಳಿದ)ಗೆ 18% ಮತ್ತು ಒಬಿಸಿಗೆ 12% ಮೀಸಲಾತಿ ಕಂಪನಿ ಹೊರಗುತ್ತಿಗೆಗೆ ಪ್ರಸ್ತುತ ಬಿಹಾರದಲ್ಲಿ ಜಾರಿಯಿದೆ. ಮುಂದಿನ ದಿನಗಳಲ್ಲಿ ಖಾಸಗಿ ವಲಯದಲ್ಲಿಯೂ ಮೀಲಸಾತಿ ಜಾರಿಗೆ ಇದು ಮುನ್ನುಡಿಯಾಗಲಿದೆ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಶ್ಯಾಂ ರಝಾಕ್ ಹೇಳಿದ್ದಾರೆ.
Trending Now
ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
August 30, 2025
ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
August 30, 2025