• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬಸ್ಸುಗಳಲ್ಲಿ ಅನುಭವಿಸುವ ತೊಂದರೆಗಳನ್ನು ಹೇಳಲು ನವೆಂಬರ್ 30ಕ್ಕೆ ಜನಸ್ಪಂದನಕ್ಕೆ ಬನ್ನಿ!

Hanumantha Kamath Posted On November 27, 2017


  • Share On Facebook
  • Tweet It

ಇವತ್ತು ಸಂಜೆ ಅಥವಾ ರಾತ್ರಿ ಕುಳಿತು ಒಂದು ಬಿಳಿ ಹಾಳೆಯಲ್ಲಿ ನೀವು ಬಸ್ಸು ಪ್ರಯಾಣ ಮಾಡುವಾಗ ಅನುಭವಿಸಿದ ತೊಂದರೆಯನ್ನು ಬರೆಯಿರಿ. ಅದು ಖಾಸಗಿ ಬಸ್ಸುಗಳಾಗಿರಬಹುದು ಅಥವಾ ಸರಕಾರಿ ಬಸ್ಸುಗಳಾಗಿರಬಹುದು. ಪೊಲೀಸ್ ಕಮೀಷನರೇಟ್ ಕಚೇರಿಯಲ್ಲಿ ವಾರಕ್ಕೊಮ್ಮೆ ಪೊಲೀಸ್ ಕಮೀಷನರ್ ಹಾಗೂ ಇತರ ಅಧಿಕಾರಿಗಳು ಕುಳಿತು ಫೋನ್ ಇನ್ ಮಾಡುತ್ತಾರಲ್ಲ, ಅದರಲ್ಲಿ ಹೆಚ್ಚು ಫೋನ್ ಕರೆಗಳು ಬರುವುದು ಖಾಸಗಿ ಬಸ್ಸಿನ ಬಗ್ಗೆ. ಅದಕ್ಕೆ ಪೊಲೀಸ್ ಅಧಿಕಾರಿಗಳು ತಮ್ಮದೇ ಲೆವೆಲ್ಲಿನಲ್ಲಿ ಉತ್ತರ ಕೊಡುತ್ತಾರೆ. ಆದರೆ ನಾಡಿದ್ದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ವತಿಯಿಂದ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ. ನಾಡಿದ್ದು ಎಂದರೆ ನವೆಂಬರ್ 30 ರಂದು. ಆವತ್ತು ಬೆಳಿಗ್ಗೆ ಮಂಗಳೂರಿನ ಪುರಭವನ ಅಥವಾ ಮಿನಿ ವಿಧಾನಸೌಧದ ರಸ್ತೆಯಲ್ಲಿರುವ ಆರ್ ಟಿಒ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಜನಸ್ಪಂದನ ಕಾರ್ಯಕ್ರಮ ಪ್ರಾರಂಭವಾಗಲಿದೆ. ಆರ್ ಟಿಒ ಅಧಿಕಾರಿಗಳು ಮತ್ತು ರಾಜ್ಯದಿಂದ ಬೇರೆ ಅಧಿಕಾರಿಗಳು ಬರುವುದರಿಂದ ನಿಮ್ಮ ಸಮಸ್ಯೆಗಳನ್ನು ನೇರವಾಗಿ ಅಲ್ಲಿ ಅವರು ಕೇಳಲಿದ್ದಾರೆ. ನಾನು ಸಾಮಾನ್ಯವಾಗಿ ಲೋಕಲ್ ಚಾನೆಲ್ ಗಳಲ್ಲಿ ಈ ಬಸ್ಸುಗಳ ವಿಷಯದಲ್ಲಿ ಚರ್ಚೆಗೆ ಕುಳಿತಾಗ ಅನೇಕ ಜನ ವೀಕ್ಷಕರು ಕರೆ ಮಾಡಿ ಬಸ್ಸಿನ ಸಮಸ್ಯೆಗಳ ಬಗ್ಗೆ ಹೇಳಿದ್ದನ್ನು ಕೇಳಿದ್ದೇನೆ. ಆದರೆ ನಾನು ಆರ್ ಟಿಒ ಅಲ್ಲ ಅಥವಾ ಜನಪ್ರತಿನಿಧಿ ಅಲ್ಲ. ಆದರೂ ನೀವು ಹೇಳಿದ ಅನೇಕ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಅದನ್ನು ನಾನು ಜನಸ್ಪಂದನ ಕಾರ್ಯಕ್ರಮದಲ್ಲಿ ಹೇಳಲಿದ್ದೇನೆ. ಆದರೆ ಊರಿನ ಎಲ್ಲ ಸಮಸ್ಯೆಗಳನ್ನು ನಾನು ಹೇಳಲು ಆಗುವುದಿಲ್ಲವಲ್ಲ. ಹಾಗೆ ಹೇಳುತ್ತೇನೆ ಎಂದರೂ ಅಲ್ಲಿ ಬಿಡುವುದಿಲ್ಲ. ಬೇರೆಯವರಿಗೂ ಮಾತನಾಡಲು ಬಿಡಿ ಎನ್ನುತ್ತಾರೆ. ಬಸ್ಸುಗಳ ಬಗ್ಗೆ ನಿಮ್ಮ ಸಮಸ್ಯೆಗಳು ಬೇರೆ ಬೇರೆ ಇರಬಹುದು. ಕೆಲವು ಪ್ರದೇಶಗಳಲ್ಲಿ ಬಸ್ಸಿನವರು ಲಾಸ್ಟ್ ಟ್ರಿಪ್ ಅನ್ನು ಕಟ್ ಮಾಡಿರುತ್ತಾರೆ. ಯಾರಿಗೆ ಹೇಳುವುದು ಎಂದು ಗೊತ್ತಾಗದೆ ನೀವು ಗೊಣಗುತ್ತಾ ಒಂದು ಕಿ.ಮೀ ನಿತ್ಯ ನಡೆದು ಮನೆಗೆ ತಲುಪಿರುತ್ತೀರಿ. ಕೆಲವು ಬಸ್ಸುಗಳು ಲಾಸ್ಟ್ ಸ್ಟಾಪ್ ತನಕ ಬರುವುದೇ ಇಲ್ಲ. ಕೆಲವು ಬಸ್ಸುಗಳಲ್ಲಿ ಟಿಕೆಟ್ ಕೊಡುವುದಿಲ್ಲ. ಕೆಲವು ಬಸ್ಸುಗಳು ಬಸ್ ಸ್ಟಾಪಿನಲ್ಲಿ ನಿಲ್ಲುವುದಿಲ್ಲ. ಹೀಗೆ ಬೇರೆ ಬೇರೆ ಸಮಸ್ಯೆಗಳು ಇದ್ದೇ ಇರುತ್ತವೆ. ಅದನ್ನು ನೀವೆ ಅನುಭವಿಸಿ ಹೇಳಿದಾಗ ಅದಕ್ಕೆ ಮಹತ್ವ ಹೆಚ್ಚು. ಅದನ್ನು ಅಧಿಕಾರಿಗಳು ಕೇಳುತ್ತಾರೆ. ಅನೇಕ ಸಮಸ್ಯೆಗಳಿಗೆ ಅಲ್ಲಿಯೇ ಪರಿಹಾರ ಸಿಗಲೂ ಬಹುದು. ಹಾಗಂತ ನೇರವಾಗಿ ನವೆಂಬರ್ 30 ಕ್ಕೆ ಅಲ್ಲಿ ಬಂದು ಮಾತನಾಡುತ್ತೇನೆ ಎಂದು ಹೇಳಿದರೆ ನಿಮಗೆ ಅವಕಾಶ ಸಿಗುವ ಸಾಧ್ಯತೆ ತುಂಬಾ ಕಡಿಮೆ. ಅದರ ಬದಲು ನೀವು ನಾಳೆ ಅಂದರೆ ನವೆಂಬರ್ 28 ರ ಒಳಗೆ ನಿಮ್ಮ ಸಮಸ್ಯೆಯನ್ನು ಬರೆದು ಮತ್ತು ಯಾವ ಬಸ್ಸಿನಿಂದ ಏನು ತೊಂದರೆಯಾಗಿದೆ ಎಂದು ಉಲ್ಲೇಖಿಸಿ ಮತ್ತು ನಿಮ್ಮ ಪತ್ರಕ್ಕೆ ಒಂದು ವೇಟೇಜ್ ಬರಬೇಕಾದರೆ ತೊಂದರೆ ಆದ ಬಸ್ಸಿನ ರಿಜಿಸ್ಟ್ರೇಶನ್ ನಂಬ್ರ, ಉದಾಹರಣೆಗೆ: ಕೆಎ-19 ಬಿ-….. ಇಂತಿಂತಹ ನಂಬರಿನ ಬಸ್, ಇಂತಿಂತಹ ಹೆಸರು ಎಂದು ಬರೆದು ಕೊಟ್ಟು ಬಂದರೆ ಆಗ ಅದಕ್ಕೆ ತೂಕ ಹೆಚ್ಚು. ಸುಮ್ಮನೆ ಜನರಲ್ ಆಗಿ ಬರೆದರೆ ಅದನ್ನು ಪರಿಹರಿಸುವುದು ಕಷ್ಟ.


ನಿಮಗೆ ಯಾವ ಕಾಯಿಲೆ ಇದೆ ಎಂದು ವೈದ್ಯರಿಗೆ ಗೊತ್ತಾದರೆ ಅವರು ಅದಕ್ಕೆ ಸರಿಯಾದ ಮದ್ದು ಕೊಟ್ಟು ಗುಣ ಮಾಡಿಸಲು ಸುಲಭ, ಅದೇ ನೀವು ದೇಹಕ್ಕೆ ಆಗುತ್ತಿರುವ ತೊಂದರೆಯನ್ನು ಸರಿಯಾಗಿ ಹೇಳದಿದ್ದರೆ ವೈದ್ಯರಿಗೆ ಅದರ ತಲೆಬುಡ ಗೊತ್ತಾಗದೆ ನೂರೆಂಟು ಚಿಕಿತ್ಸೆ ಕೊಟ್ಟು ನಂತರ ಕಾಯಿಲೆಯನ್ನು ಪತ್ತೆ ಹಚ್ಚಬೇಕಾಗುತ್ತದೆ.
ನೀವು ನಾಳೆ ಒಳಗೆ ನಿಮ್ಮ ದೂರನ್ನು ಬರೆದು ಕೊಟ್ಟರೆ 30 ರಂದು ಸಭೆ ಪ್ರಾರಂಭವಾದ ನಂತರ ಸರದಿಯಲ್ಲಿ ನಿಮ್ಮ ಹೆಸರನ್ನು ಕೂಗಿ ಕರೆಯಲಾಗುತ್ತದೆ. ಆಗ ನಿಮ್ಮ ಕೈಯಲ್ಲಿ ಮೈಕ್ ಬಂದ ಬಳಿಕ ನೀವು ನಿಮ್ಮ ಸಮಸ್ಯೆಯನ್ನು ವಿಸ್ತಾರವಾಗಿ ಹೇಳಬಹುದು. ಸಭೆಗೆ ಬರಲು ಕಷ್ಟವಾಗುತ್ತದೆ, ಅರ್ಧ ದಿನ ರಜೆ ಹಾಕಬೇಕು, ಅಲ್ಲಿ ಕಾಯುವುದು ಯಾರು ಎನ್ನುವಂತಹ ಮನಸ್ಥಿತಿ ಬೇಡಾ. ನಿಮ್ಮ ಊರಿನ ಯುವಕ, ಯುವತಿ ಮಂಡಲದಲ್ಲಿ ಯಾರಾದರೂ ಒಬ್ಬರು ಬಂದರೂ ಸಾಕು ಅಥವಾ ನಿವೃತ್ತಿ ಜೀವನ ಸಾಗಿಸುವ ಯಾರಾದರೂ ಬಂದರೂ ಆಗುತ್ತದೆ, ಗೃಹಿಣಿಯರು ಒಂದಿಷ್ಟು ಹೊತ್ತು ಬಂದು ತಮ್ಮ ಜವಾಬ್ದಾರಿಯನ್ನು ಮೆರೆಯಲೂ ಬಹುದು. ಆ ಏರಿಯಾದ ಯಾವುದಾದರೂ ವಿದ್ಯಾರ್ಥಿ ಸಂಘಟನೆಯ ಯುವಕ, ಯುವತಿಯರು ಬಂದರೂ ಕೂಡ ಆಗುತ್ತದೆ. ಇಡೀ ಊರಿಗೆ ಊರೇ ಬರಬೇಕಾಗಿಲ್ಲ. ಒಬ್ಬರ ಧ್ವನಿ ಅನೇಕರ ಸಮಸ್ಯೆಗಳನ್ನು ಪರಿಹರಿಸಬಹುದು.


ಕೊನೆಯದಾಗಿ ಇದು ಸಮಾಜ ಸೇವೆಯ ಅಂಗ. ನಾನು ಅಲ್ಲಿ ನಿಂತು ಮಾತನಾಡಿ ನಮ್ಮ ಊರಿಗೆ ಬಸ್ಸು ಸರಿಯಾಗಿ ಬಂದರೆ ಅದರಲ್ಲಿ ನಾನೊಬ್ಬನೇ ಕುಳಿತುಕೊಂಡು ಹೋಗುವುದಿಲ್ಲ. ಆ ಏರಿಯಾದ ಎಲ್ಲರಿಗೂ ಅನುಕೂಲವಾಗುತ್ತದೆ. ಹಾಗೆ ವಿವಿಧ ರಾಜಕೀಯ ಪಕ್ಷಗಳ ವಾರ್ಡ್ ಪ್ರಮುಖರೋ ಬಂದು ಮಾತನಾಡಿದರೆ ಅವರಿಗೆ ಜನರ ಬಗ್ಗೆ ಇರುವ ಕಾಳಜಿ ಕೂಡ ಅರ್ಥವಾಗುತ್ತದೆ. ನಾನು ಈ ವಿಷಯವನ್ನು ನಿಮ್ಮ ಗಮನಕ್ಕೆ ತರುವುದು ತಡವಾಗಿರಬಹುದು. ಆದರೆ ಇನ್ನೂ ಕಾಲ ಮಿಂಚಿಲ್ಲ. ಒಂದು ಮನವಿ ಪತ್ರ ಬರೆಯಲು ನೀವೇನೂ ಆಕ್ಸಫರ್ಡ್ ಡಿಕ್ಷನರಿ ಓದಬೇಕಿಲ್ಲ. ಇತಿಹಾಸದ ಗ್ರಂಥಗಳನ್ನು ಅಧ್ಯಯನ ಮಾಡಬೇಕಿಲ್ಲ. ಕಾನೂನು ಪುಸ್ತಕಗಳನ್ನು ಜಾಲಾಡಬೇಕಿಲ್ಲ. ನಿಮ್ಮ ಮನಸ್ಸಿನ ಭಾವನೆಗಳಿಗೆ ಶಬ್ದದ ಮೂಲಕ ಪತ್ರ ತುಂಬಿಸಿ ಕೊಟ್ಟು ಬನ್ನಿ. ನಿಮ್ಮ ಊರಿನ ಬಸ್ಸಿನ ಸಮಸ್ಯೆಯನ್ನು ಪರಿಹರಿಸಿದ ಖುಷಿ ನಿಮ್ಮದಾಗಲಿ.

  • Share On Facebook
  • Tweet It


- Advertisement -


Trending Now
ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
Hanumantha Kamath July 2, 2022
ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
Hanumantha Kamath July 1, 2022
Leave A Reply

  • Recent Posts

    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
  • Popular Posts

    • 1
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 2
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 3
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 4
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 5
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search