ಲವ್ ಜಿಹಾದ್ ಕುರಿತು ಈ ಮುಸ್ಲಿಂ ಯುವಕ ಏನು ಹೇಳಿದ ಎಂದು ನೀವೇ ಕೇಳಿ!
ದೇಶದಲ್ಲಿ ಹದಿಯಾ ಪ್ರಕರಣದ ಬಳಿಕ ಲವ್ ಜಿಹಾದ್ ಪ್ರಕರಣಗಳು ದಿನೇದಿನೆ ಜಾಸ್ತಿಯಾಗುತ್ತಿವೆ. ಮಂಗಳೂರಿನಲ್ಲಿ ಹಿಂದೂ ಯುವತಿಯೊಬ್ಬಳು ಮದುವೆಗೂ ಮುನ್ನವೇ ನಾಪತ್ತೆಯಾಗಿದ್ದು ಲವ್ ಜಿಹಾದ್ ಶಂಕೆ ಮೂಡಿಸುತ್ತಿದ್ದರೆ, ಮುಸ್ಲಿಂ ಯುವಕರ ಮೇಲೆ ಶಂಕೆ ಮೂಡುತ್ತಿದೆ.
ಅಲ್ಲದೆ ಕೇರಳದಲ್ಲಿ ಲವ್ ಜಿಹಾದ್ ತನಿಖೆ ನಡೆಯುತ್ತಿದ್ದರೆ, ಪಂಜಾಬ್, ಮುಂಬೈ ಸೇರಿ ಇಂಥ ಪ್ರಕರಣ ಬೆಳಕಿಗೆ ಬರುತ್ತಿರುವುದು ಜನರನ್ನು ಆತಂಕಕ್ಕೀಡುಮಾಡಿದೆ.
ಏತನ್ಮಧ್ಯೆಯೇ, ಹಿಂದೂಗಳೆಲ್ಲರೂ ಬೆಚ್ಚಿಬೀಳಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲವ್ ಜಿಹಾದಿನ ಕರಾಳ ಮುಖ ಅನಾವರಣವಾಗಿದೆ.
ಹೌದು, ಹಿಂದೂ ಯುವತಿಯನ್ನು ಪ್ರೀತಿಸುತ್ತಿರುವ ಮುಸ್ಲಿಂ ಯುವಕನೊಬ್ಬನನ್ನು ಹಲವು ಜನ ಲವ್ ಜಿಹಾದ್ ಕುರಿತು ಪ್ರಶ್ನಿಸಿದ್ದು, “ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪ್ರೀತಿಸಿದರೆ, ಮದುವೆಯಾಗಿ ಮತಾಂತರಗೊಳಿಸಿದರೆ ಹಣ ನೀಡಲಾಗುತ್ತದೆ” ಎಂಬ ಮಾಹಿತಿ ಹೊರಹಾಕಿದ್ದಾನೆ.
ನನಗೂ ಸಹ ಇದೇ ಆಫರ್ ಇದ್ದು, ಯುವತಿಯನ್ನು ಪ್ರೀತಿಸಿದ್ದಕ್ಕೆ 50 ಸಾವಿರ ಹಾಗೂ ಮುಂದೆ ಮದುವೆಯಾದರೆ ಬಹುಮಾನವಾಗಿ 5 ಲಕ್ಷ ರೂಪಾಯಿ ಸಿಗುತ್ತದೆ ಎಂದು ಧೈರ್ಯವಾಗಿ ಹೇಳಿದ್ದಾನೆ.
ಅಲ್ಲದೆ, ನಾನು ಹೇಳುತ್ತಿರುವುದೆಲ್ಲ ಸತ್ಯ. ಅಲ್ಲಾನ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ, ನಾನು ಹೇಳುತ್ತಿರುವುದರಲ್ಲಿ ಸುಳ್ಳಿಲ್ಲ. ಹೀಗೆ ಹಿಂದೂ ಯುವತಿಯರನ್ನು ಪ್ರೇಮದ ಬಲೆಗೆ ಸಿಕ್ಕಿಸಿದರೆ ಮಸೀದಿಗಳಿಂದ ಹಣ ಸಂದಾಯವಾಗುತ್ತದೆ ಎಂದು ತಿಳಿಸಿದ್ದಾನೆ.
ಆದಾಗ್ಯೂ, ದೇಶದ ಮಸೀದಿಗಳಿಗೆ ಇಸ್ಲಾಮಿಕ್ ದೇಶಗಳಿಂದ ಹಣ ಹರಿದುಬರುತ್ತಿದೆ ಎಂಬ ಆರೋಪ ಸಹ ಇದೆ.
Leave A Reply