ರಾಹುಲ್ ಗಾಂಧಿ ಭೂಕಂಪ ಹೇಳಿಕೆಗೆ ಮೋದಿ ಹೇಗೆ ಟಾಂಗ್ ಕೊಟ್ಟರು ಗೊತ್ತಾ?
ದೆಹಲಿ: ರಾಹುಲ್ ಗಾಂಧಿ ಭೂಕಂಪ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸರಿಯಾಗಿಯೇ ಟಾಂಗ್ ನೀಡಿದ್ದು, “ಕೊನೆಗೂ ಭೂಕಂಪವಾಗಿದೆ, ಪ್ರಾಯಶಃ ಭೂತಾಯಿ ಸಿಟ್ಟಾಗಿರಬೇಕು” ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದಾರೆ.
ಉತ್ತರಾಖಂಡ, ದೆಹಲಿ ಸೇರಿ ಹಲವೆಡೆ ಭೂಕಂಪವಾದ ಕುರಿತು ಸಂಸತ್ತಿನ ಮುಂಗಡಪತ್ರ ಅಧಿವೇಶನದಲ್ಲಿ ಮಾತನಾಡಿದ ಮೋದಿ, ಭೂಕಂಪದ ಉದಾಹರಣೆ ನೀಡಿಯೇ ರಾಹುಲ್ ಗಾಂಧಿಯವರನ್ನು ಟೀಕಿಸಿದರು. ನಾನು ಸಂಸತ್ತಿನಲ್ಲಿ ಮಾತನಾಡಿದರೆ ಭೂಕಂಪವಾಗುತ್ತದೆ ಎಂದು ಹಿಂದೆ ರಾಹುಲ್ ಗಾಂಧಿ ಹೇಳಿದ್ದರು.
ಅಲ್ಲದೆ ಭೂಕಂಪ ಸಂಭವಿಸಿದ ರಾಜ್ಯಗಳಲ್ಲಿ ರಕ್ಷಣೆ ಒದಗಿಸಲು ಸಹ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಆಯಾ ರಾಜ್ಯ ಸರ್ಕಾರಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಮೊದಲು ಜನ ನಾವು ಕಳೆದುಕೊಂಡಿದ್ದು ಎಷ್ಟು ಎಂದು ನನ್ನನ್ನು ಪ್ರಶ್ನಿಸುತ್ತಿದ್ದರು. ಆದರೆ ಈಗ ಮೋದಿ ಅವರೇ ಎಷ್ಟು ತಂದಿದ್ದೀರಿ ಎಂದು ಪ್ರಶ್ನಿಸುತ್ತಾರೆ. ಅಷ್ಟರಮಟ್ಟಿಗೆ ಜನ ಜಾಗೃತರಾಗಿದ್ದಾರೆ. ಅಷ್ಟಕ್ಕೂ ಸ್ಕ್ಯಾಮ್ ಎಂಬ ಪದದಲ್ಲಿ ಸೇವೆ ಹುಡುಕಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿದ್ದಾಗಲೇ ನೋಟು ನಿಷೇಧ ಮಾಡಿದೆವು. ಇಷ್ಟಕ್ಕೂ ನಮ್ಮ ದೇಹ ಸದೃಢವಾಗಿದ್ದಾಗಲೇ ತಾನೆ ಆಪರೇಷನ್ ಮಾಡೋದು? ಅದಕ್ಕಾಗಿಯೇ ನೋಟು ನಿಷೇಧಿಸಿ ಕಪ್ಪು ಹಣ ಹೊರತೆಗೆದೆವು ಎಂದು ಮೋದಿ ನೋಟು ನಿಷೇಧದ ಕುರಿತು ಹೇಳಿದರು.
Leave A Reply