• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಉಡುಪಿ ಕೃಷ್ಣಮಠದ ಮೇಲಿನ ಕೋಪದಿಂದ ಸಿದ್ಧರಾಮಯ್ಯ ಮಾಡಲು ಹೊರಟಿರುವುದೇನು?

Hanumantha Kamath Posted On December 12, 2017


  • Share On Facebook
  • Tweet It

ಎ ಗ್ರೇಡಿನ ದೇವಸ್ಥಾನಗಳ ಅರ್ಚಕರು ಪುಣ್ಯವಂತರು, ನಾವು ಸಿ ಗ್ರೇಡಿನ ದೇವಸ್ಥಾನಗಳ ಅರ್ಚಕರು ನತದೃಷ್ಟವಂತರು ಎಂದು ಯಾವ ಪುರೋಹಿತರು ಅಂದುಕೊಳ್ಳಬಾರದು. ಅಂತಹ ವಾತಾವರಣ ನಿರ್ಮಿಸುವ ಕೆಲಸ ರಾಜ್ಯ ಸರಕಾರಗಳು ಮಾಡಬೇಕು. ಅದರಿಂದ ಸರಕಾರಕ್ಕೆ ಏನೂ ಹೊರೆಯಾಗುವುದಿಲ್ಲ. ಅಡುಗೆ ಕೋಣೆಯಲ್ಲಿ ಅಡುಗೆ ಮಾಡಿ ವರಾಂಡದಲ್ಲಿ ಬಡಿಸಿದಷ್ಟೇ ಸುಲಭ. ಅಲ್ಲಿಂದ ತಂದು ಇಲ್ಲಿ ಬಡಿಸಿದರೇ ಆಯಿತು. ಇದೇನೂ ರಾಜ್ಯ ಸರಕಾರಕ್ಕೆ ಕಷ್ಟವಲ್ಲ. ಯಾಕೆಂದರೆ ರಾಜ್ಯ ಸರಕಾರಕ್ಕೆ ಇದನ್ನು ಬೇರೆ ವಿಷಯಗಳಲ್ಲಿ ಮಾಡಿ ಅಭ್ಯಾಸ ಇದೆ. ಉದಾಹರಣೆಗೆ ರಾಜ್ಯದಲ್ಲಿರುವ ಮಸೀದಿಗಳಲ್ಲಿರುವ ಧರ್ಮಬೋಧಕರಿಗೆ ರಾಜ್ಯ ಸರಕಾರ ವಕ್ಫ್ ಬೋರ್ಡ್ ಕಡೆಯಿಂದ ಗೌರವಧನ ಎಂದು ಕೊಡಲಾಗುತ್ತದೆ. ಅಂದರೆ ಅದು ಸರಕಾರದ ಹಣ. ಅದೇ ಮಸೀದಿಗಳಿಂದ ಎಷ್ಟು ಆದಾಯ ಸರಕಾರಕ್ಕೆ ಹೋಗುತ್ತದೆ. ಆದರೆ ದೇವಸ್ಥಾನಗಳ ವಿಷಯ ಆಗಲ್ಲ. ಎ ಗ್ರೇಡ್ ದೇವಸ್ಥಾನಗಳಿಂದ ಸರಕಾರಕ್ಕೆ ಹೋಗುವ ವಾರ್ಷಿಕ ಆದಾಯದಿಂದ ಎಷ್ಟೋ ಬೇರೆ ದೇವಸ್ಥಾನಗಳನ್ನು ಕಟ್ಟಬಹುದು. ಆದರೆ ಅದೇ ಎ ಗ್ರೇಡಿನ ದೇವಸ್ಥಾನವೊಂದರಲ್ಲಿ ಏನಾದರೂ ಅಭಿವೃದ್ಧಿ ಆಗಬೇಕು ಎಂದು ಹೇಳಿ ನೋಡಿ. ಅದರಷ್ಟು ನಿಧಾನವಾಗಿ ಬೇರೆ ಯಾವ ಕೆಲಸ ಕೂಡ ಆಗುವುದಿಲ್ಲ. ಎ ಗ್ರೇಡ್ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಊಟಕ್ಕೆ ಹೋಗುವ ದಾರಿಯಲ್ಲಿ ಸರದಿಯಂತೆ ಹೋಗಲು ಬ್ಯಾರಿಕೇಡಿನ ವ್ಯವಸ್ಥೆಯಂತಹ ಏನಾದರೂ ಚಿಕ್ಕ ಕೆಲಸವಾಗಬೇಕಾದರೂ ಅದಕ್ಕೆ ನಿರಂತರವಾಗಿ ಮೀಟಿಂಗ್ ಮಾಡಿ ಆ ಪ್ರಪೋಸಲ್ ಅನ್ನು ಧಾರ್ಮಿಕ ದತ್ತಿ ಇಲಾಖೆಗೆ ಕಳುಹಿಸಿ ಅಲ್ಲಿನ ಕಾರ್ಯದರ್ಶಿಗಳು ಅದನ್ನು ನೋಡಿ ಅವರು ಫ್ರೀ ಇದ್ದಾಗ ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ ನಂತರ ಅಲ್ಲಿಂದ ಹಣ ಬಂದಾಗ ಈ ಸಲದ ಮಳೆಗಾಲಕ್ಕೆ ಮಾಡಿಸಬೇಕು ಎಂದಿದ್ದು ಮುಂದಿನ ಬೇಸಿಗೆ ಬರುತ್ತದೆ. ಅಷ್ಟಕ್ಕೂ ಹಣ ಇದೇ ಎ ಗ್ರೇಡ್ ದೇವಸ್ಥಾನಗಳದ್ದು. ಸರಕಾರ ಏನೂ ಪ್ರೀತಿಯಿಂದ ಕೊಡುವುದಲ್ಲ. ಆದರೆ ಹಣ ಬಿಡುಗಡೆಯಾಗುವುದು ಮಾತ್ರ ಸರಕಾರದ ಕಡೆಯಿಂದ ಆದ ಕಾರಣ ಸರಕಾರದ ಕೆಲಸ ದೇವರ ಕೆಲಸ ಎನ್ನುವುದು ಇಲ್ಲಿ ಉಲ್ಟಾ ಆಗಿ ದೇವರ ಕೆಲಸ ಸರಕಾರದ ಕೆಲಸ ಅದಕ್ಕೆ ಇವತ್ತು ಹೇಳಿದರೆ ಮುಂದಿನ ವರ್ಷ ಆಗುತ್ತೆ ಎನ್ನುವ ಮಾತು ಪ್ರಚಲಿತದಲ್ಲಿದೆ. ಹೀಗೆ ದೇವಸ್ಥಾನಗಳ ಅಭಿವೃದ್ಧಿ ಕೆಲಸಗಳು ಆಮೆಗತಿಯಲ್ಲಿ ನಡೆಯುವುದರಿಂದ ಅಲ್ಲಿನ ಟ್ರಸ್ಟಿಗಳಿಗೆ, ಆಡಳಿತಾಧಿಕಾರಿಗಳಿಗೆ ಎಷ್ಟು ಆಸಕ್ತಿ ಉಳಿದಿರುತ್ತದೆ ಎನ್ನುವುದು ನಮಗೆ ಗೊತ್ತಿರುವ ವಿಚಾರ. ಇನ್ನು ತಮ್ಮ ಸರಕಾರಗಳು ಇರುವಷ್ಟು ದಿನ ಮಾತ್ರ ತಮಗೆ ವಿಐಪಿಗಳಿಗೆ ಹಾರ ಹಾಕುವುದು, ಫೋಟೋ ತೆಗೆಯುವುದು ಇರುತ್ತದೆ ಎಂದು ಗೊತ್ತಿರುವುದರಿಂದ, ಈ ಅಭಿವೃದ್ಧಿಗೆ ತಲೆ ಹಾಕಿದರೂ ಅದರಿಂದ ತಮ್ಮ ಪಬ್ಲಿಸಿಟಿ ಏನೂ ಆಗುವುದಿಲ್ಲ ಎಂದು ಅಂದುಕೊಂಡಿರುವುದರಿಂದ ಅಂತವರು ಆಸಕ್ತಿ ತೋರಿಸುವುದಿಲ್ಲ. ಜನಪ್ರತಿನಿಧಿಗಳ ಹಿಂಬಾಲಕರು ಎನ್ನುವ ಕಾರಣಕ್ಕೆ ಸಿಕ್ಕಿದ ಪೋಸ್ಟ್ ಗಳಿಂದ ಯಾವ ಸುಧಾರಣೆ ಕೂಡ ಆಗುವುದಿಲ್ಲ.
ಪ್ರಸ್ತುತ ಪರಿಸ್ಥಿತಿಯೇ ಹೀಗಿರುವಾಗ ನಮ್ಮ ರಾಜ್ಯ ಸರಕಾರ ಮಠ,ಮಂದಿರಗಳ ಮೇಲೆ ಕಣ್ಣು ಹಾಕಿದೆ. ಸರಕಾರ ಮಠಗಳನ್ನು ತನ್ನ ಸುಪರ್ಧಿಗೆ ತೆಗೆದುಕೊಳ್ಳಲು ಯೋಚಿಸುತ್ತಿದೆ. ಇಲ್ಲಿ ಒಂದು ವಿಷಯ ಸ್ಪಷ್ಟ. ಅದೇನೆಂದರೆ ಮಠ ಎಂದರೆ ಸಾರ್ವಜನಿಕ ದೇವಸ್ಥಾನ ಅಲ್ಲ. ಇದನ್ನು ರಾಜ್ಯ ಸರಕಾರ ಮೊದಲು ಅರ್ಥ ಮಾಡಿಕೊಳ್ಳಬೇಕು.
ಆಯಾ ಮಠಾಧಿಪತಿಗಳು ದೇವಸ್ಥಾನಗಳನ್ನು ಕಟ್ಟಿ ತಮ್ಮ ಮಠದ ಆರಾಧ್ಯ ದೇವರ ಮೂರ್ತಿಗಳನ್ನು ಪ್ರತಿಷ್ಟಾಪಿಸಿಪೂಜಿಸಲು ಮಾಡಿದ ವ್ಯವಸ್ಥೆ. ಅದರ ಆಯವ್ಯಯಗಳನ್ನು ಆಯಾ ಮಠಾಧಿಪತಿಗಳೇ ನೋಡಿಕೊಳ್ಳುತ್ತಾರೆ. ಉದಾಹರಣೆಗೆ ಉಡುಪಿಯ ಶ್ರೀಕೃಷ್ಣ ಮಠ. ಅದು ಕೇವಲ ಒಂದು ಮಠಕ್ಕೆ ಸಂಬಂಧಪಟ್ಟದ್ದಲ್ಲ. ಅದು ಅಷ್ಟಮಠದ ಸುಪರ್ಧಿಗೆ ಒಳಪಟ್ಟಿದ್ದು. ಸಾವಿರಾರು ವರ್ಷಗಳಿಂದ ಅಲ್ಲಿ ಅವರದ್ದೇ ಸಂಪ್ರದಾಯ ನಡೆದುಕೊಂಡು ಬಂದಿದೆ. ಅಂದರೆ ಪ್ರತಿ ಎರಡು ವರ್ಷಗಳಿಗೊಮ್ಮೆ ಶ್ರೀಕೃಷ್ಣನಿಗೆ ಪೂಜೆ ಮಾಡುವ ಪರ್ಯಾಯ ಸರದಿಯಂತೆ ಬದಲಾಗುತ್ತಾ ಹೋಗುತ್ತದೆ. ಪರ್ಯಾಯ ಪೀಠಾಧಿಪತಿಗಳು ತಮ್ಮ ಪರ್ಯಾಯದ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿ ಮಾಡುತ್ತಾರೆ. ಯಾವುದೇ ಖರ್ಚು ಅಥವಾ ಆರ್ಥಿಕ ಅವಶ್ಯಕತೆ ಎದುರಾದಾಗಲೂ ಅದನ್ನು ಪರ್ಯಾಯದ ಸ್ವಾಮೀಜಿಗಳೇ ಭರಿಸಬೇಕಾಗುತ್ತದೆ. ಅದನ್ನು ರಾಜ್ಯ ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳುವುದರಿಂದ ಗೊಂದಲ ಏಳುವುದು ಬಿಟ್ಟರೆ ಬೇರೆ ಏನೂ ಆಗುವುದಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಉಡುಪಿ ಶ್ರೀಕೃಷ್ಣಮಠದ ಮೇಲೆ ಕೋಪ ಇರಬಹುದು. ಹಾಗಂತ ಇಡೀ ಮಠವನ್ನು ರಾಜ್ಯ ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳುವುದರಿಂದ ಸಿದ್ಧರಾಮಯ್ಯನವರ ಕೋಪ ತಣಿಸಬಹುದು. ಅಲ್ಲಿನ ಸ್ವಾಮೀಜಿಗಳು ಪ್ರತಿಯೊಂದಕ್ಕೂ ಸರಕಾರದ ಮುಂದೆ ಅಂಗಲಾಚಿಸುವಂತೆ ಮಾಡಿದೆ ಎನ್ನುವ ಖುಷಿ ಸಿಎಂಗೆ ಬರಬಹುದು. ಆದರೆ ಅದರಿಂದ ಅವರು ಸಾಧಿಸುವಂತಹುದು ಏನು? ಕೃಷಮಠದ ಅಭಿವೃದ್ಧಿ ನಿಂತ ನೀರಾಗುತ್ತದೆ. ನಂತರ ಏನಾಗುತ್ತದೆ? ನಾನು ಮೊದಲೇ ಹೇಳಿದಂತೆ ಜನಪ್ರತಿನಿಧಿಗಳ, ರಾಜಕಾರಣಿಗಳ ಚಮಚಾಗಳು ಅಲ್ಲಿ ಬಂದು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಡುತ್ತಾರೆ. ಸರಕಾರ ಯಾರನ್ನು ಆಡಳಿತಾಧಿಕಾರಿಯಾಗಿ ನೇಮಿಸುತ್ತೆ ಎಂದು ಹೇಳಲು ಆಗುವುದಿಲ್ಲ. ಆಂಧ್ರಪ್ರದೇಶ ಸರಕಾರ ಕ್ರಿಶ್ಷಿಯನ್ ಮಹಿಳೆಯನ್ನು ಏಕ್ಸಿಕ್ಯೂಟಿವ್ ಆಫೀಸರ್ ಆಗಿ ನೇಮಿಸಿದಂತೆ ಮಠದ ಒಳಗೆ ಕಾಲಿಡದ ಕೇವಲ ಕಚೇರಿಯಲ್ಲಿ ಏಸಿ ಹಾಕಿ ತಿರುಗುವ ಖುರ್ಚಿಯಲ್ಲಿ ಕುಳಿತುಕೊಳ್ಳುವ ವ್ಯಕ್ತಿಯನ್ನು ಆಡಳಿತಕ್ಕೆ ಬಿಟ್ಟರೆ ಅಲ್ಲಿಗೆ ಮುಗಿಯಿತು!

  • Share On Facebook
  • Tweet It


- Advertisement -
SiddaramaihUdupi Krishna Mutt


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search