ಉನ್ನತ ಸಮುದಾಯದ ಬಡವರಿಗೂ ಮೀಸಲು ಸಿಗಲಿ: ಹೈ ಕೋರ್ಟ್
ಚೆನ್ನೈ: ಉನ್ನತ ವರ್ಗದ ಸಮುದಾಯಗಳ ಬಡ ಅಭ್ಯರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಕಲ್ಪಿಸುವಮತೆ ಮದ್ರಾಸ್ ಹೈಕೋರ್ಟ್ ಮಹತ್ತರವಾದ ಸಲಹೆಯನ್ನು ಸರ್ಕಾರಕ್ಕೆ ನೀಡಿದೆ.
ನ್ಯಾಯಮೂರ್ತಿ ಎನ್.ಕಿರುಬಾಕರನ್ ಈ ಸಲಹೆ ನೀಡಿದ್ದು, ಉನ್ನತ ವರ್ಗದವರಲ್ಲೂ ಹಲವು ಬಡವರಿದ್ದಾರೆ. ಅವರಲ್ಲೂ ಸಾಮಾಜಿಕ, ಅರ್ಥಿಕ ಸಮಸ್ಯೆಯುಳ್ಳ ಜನರಿದ್ದಾರೆ. ಅವರಿಗೂ ಮೀಸಲು ಕಲ್ಪಿಸಬೇಕು. ಎಲ್ಲ ವರ್ಗಗಳಿಗೂ ಸಮಾನ ಸೌಲಭ್ಯಗಳು ದೊರೆಯಬೇಕು. ಇಲ್ಲಿದ್ದಿದ್ದರೇ ಸಮಸ್ಯೆ ಉದ್ಭವವಾಗಲಿದೆ ಎಂದು ಹೇಳಿದ್ದಾರೆ.
ಉನ್ನತರ ಸಮುದಾಯಗಳ ಬಡವರಿಗೆ ಮೀಸಲು ಕಲ್ಪಿಸುವುದು ಎಂದರೆ, ಹಿಂದಿನಿಂದಲೂ ಮೀಸಲು ಸೌಲಭ್ಯ ಪಡೆಯುತ್ತಿರುವ ಸಮುದಾಯಗಳ ಮೀಸಲನ್ನು ಕಿತ್ತುಕೊಳ್ಳಲಾಗುವುದು ಎಂದು ಪರಿಗಣಿಸುವುದಲ್ಲ. ಸೌಲಭ್ಯ ವಂಚಿತರಿಗೆ, ಸಂಕಷ್ಟದಲ್ಲಿರುವವರಿಗೆ ಸಕಲ ಸೌಲಭ್ಯ ಒದಗಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಾವುದೇ ಸಮುದಾಯವಿದ್ದರೂ ಬಡವರು, ಬಡವರೇ ಅವರಿಗೂ ಆರ್ಥಿಕ ಸಾಮಾಜಿಕ ನ್ಯಾಯ ಒದಗಿಸಬೇಕು. ಈ ಕುರಿತು ಯಾರೂ ಮಾತನಾಡುವುದಿಲ್ಲ. ಮಾತಾಡಿದರೆ ಪ್ರತಿಭಟನೆ ಎದುರಿಸುವ ಸ್ಥಿತಿ ಇದೆ. ಆದ್ದರಿಂದ ಎಲ್ಲ ವರ್ಗದ ಬಡವರಿಗೆ ಸೂಕ್ತ ಸೌಲಭ್ಯಗಳನ್ನು ನೀಡಬೇಕು. ಮುಂದುವರಿದ ಸಮುದಾಯದ ಬಡವರಿಗೆ ಮೀಸಲು ಒದಗಿಸುವ ಇರುವ ಅಂಶಗಳ ಕುರಿತು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ಸೂಚಿಸಿದೆ.
Leave A Reply