ಕಾಂಗ್ರೆಸ್ ಗೆ ನುಂಗಲಾರದ ತುತ್ತಾದ ಗುಜರಾತ್ ಫಲಿತಾಂಶ
‘ಅಕ್ಕಿ ಮೇಲಾಸೆ ಬೀಗರ ಮೇಲೆ ಪ್ರೀತಿ’ ಉತ್ತರ ಕರ್ನಾಟಕದ ಪ್ರಸಿದ್ಧ ಗಾದೆ ಇದು. ಈ ಗಾದೆ ಇದೀಗ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಗೆ ಎದುರಾಗಿರುವ ಸ್ಥಿತಿ. ಅತ್ತ ಇವಿಎಂ ನ್ನು ದೂಷಿಸಬೇಕೆಂದರೆ ತಕ್ಕ ಮಟ್ಟಿಗೆ ಕಾಂಗ್ರೆಸ್ ಸೀಟ್ ಗಳು ಬಂದಿವೆ. ವಿಜಯೋತ್ಸವ ಆಚರಿಸಬೇಕು ಎಂದರೆ ಬಹುಮತಕ್ಕೆ ಬೇಕಾದ ಸ್ಥಾನಗಳು ಬಂದಿಲ್ಲ. ಆದ್ದರಿಂದ ಬಿಜೆಪಿ ಗೆಲುವನ್ನು ವಿರೋಧಿಸಲು ಯಾವುದೇ ಬತ್ತಳಿಕೆ ಇಲ್ಲದೇ ಕಾಂಗ್ರೆಸ್ ಯುವರಾಜ್ ರಾಹುಲ್ ಗಾಂಧಿ ದೆಹಲಿಯ 10 ಜನಪಥ್ ಮನೆಯಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾರೆ ಎಂಬ ಮಾಹಿತಿ ಇದೆ.
ತಮ್ಮ ಮೂಗಿನ ನೇರಕ್ಕೆ ಚುನಾವಣೆ ಆಯೋಗವನ್ನು ಶಪಿಸಿದ್ದ ಕಾಂಗ್ರೆಸ್ ಮತ್ತು ಸಾಥಿಗಳಾದ ಜಿಗ್ನೇಶ್ ಮೇವಾನಿ, ಅಲ್ಪೇಶ್ ಠಾಕೂರ್ ಮತ್ತು ಹಾರ್ದಿಕ್ ಪಟೇಲ್ ಗೆ ಇದೀಗ ಫಲಿತಾಂಶ ಹೇಗೆ ಸ್ವೀಕರಿಸಬೇಕು ಎಂಬ ಗಾಡ ಚಿಂತೆ ಮೂಡಿದೆ. ಇದೇ ಅಲ್ಲವೇ ಪ್ರಜಾಪ್ರಭುತ್ವದ ಸೌಂದರ್ಯ.
ಕಾಂಗ್ರೆಸ್ ಮತ್ತು ತಂಡ ಮೋದಿ ಹಾಗೂ ಬಿಜೆಪಿ ವಿರುದ್ಧ ಹೋರಾಟ, ಹಾರಾಟ, ದೂಷಣೆ ಮಾಡಿದರೂ ಕೊನೆಗೆ ಪ್ರಜ್ಞಾವಂತ ಗುಜರಾತ್ ಮತದಾರ ಮೋದಿಗೆ ಜೈ ಅಂದಿದ್ದಾನೆ. ಜಿಎಸ್ ಟಿಯನ್ನು ಪ್ರಬಲವಾಗಿ ಬಳಸಿಕೊಂಡು ಉದ್ಯಮಿಗಳನ್ನು ಎತ್ತಿಕಟ್ಟಲು ಪ್ರಯತ್ನಿಸಿದರೂ ಅವರು ಕೂಡ ಮೋದಿಗೆ ಜೈ ಅಂದಿದ್ದಾರೆ. ಅದಕ್ಕೆ ಹೆಚ್ಚು ಉದ್ಯಮಿಗಳೇ ಇರುವ ಸುರತ್ ನ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ನೋಟ್ ಬ್ಯಾನ್ ನ್ನು ವಿರೋಧಿಸಿದ ಎಲ್ಲ ಪಕ್ಷಗಳಿಗೂ ಜನರು ಪಂಚ ರಾಜ್ಯಗಳಲ್ಲಿ ತಕ್ಕ ಉತ್ತರ ನೀಡಿದ್ದಾರೆ. ಅಲ್ಲಿಗೆ ಬತ್ತಳಿಕೆ ಖಾಲಿ ಮಾಡಿ ಕುಳಿತುಕೊಂಡಿರುವ ಕಾಂಗ್ರೆಸ್ ಇದೀಗ ಅಕ್ಷರಶಃ ಬೀದಿಗೆ ಬಿದ್ದಿದೆ ಎಂದರೆ ಅಚ್ಚರಿಯಾಗಲಾಗದು.
Leave A Reply