ವಾಜಪೇಯಿಗೆ ನೂರು ತುಂಬುವಾಗ ಇಡೀ ಭಾರತ ಕೇಸರಿಮಯವಾಗಬಹುದಾ!
ದೇಶದ ಚುಕ್ಕಾಣಿ ಹಿಡಿದು ಕೆಲವು ಅವಿಷ್ಕಾರ, ಕೆಲವು ಪ್ರಯತ್ನ ಮತ್ತು ಕೆಲವು ಹೊಸ ಪರಂಪರೆಗೆ ನಾಂದಿ ಹಾಡಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 94ನೇ ಹುಟ್ಟುಹಬ್ಬ ಇವತ್ತು . 1924, ಡಿಸೆಂಬರ್ 25 ರಂದು ಜನ್ಮ ತಾಳಿದ ಅಟಲ್ ಜಿ ಅವರು ಇವತ್ತು 93 ವರ್ಷಗಳ ಸಾರ್ಥಕ ಜೀವನವನ್ನು ಮುಗಿಸಿ 94 ಕ್ಕೆ ಕಾಲಿಟ್ಟಿದ್ದಾರೆ. ಅವರು ಆವತ್ತು 1957 ರಲ್ಲಿ ಲೋಕಸಭೆಯಲ್ಲಿ ತೋರಿಸುತ್ತಿದ್ದ ಪಾಂಡಿತ್ಯವನ್ನು ನೋಡುತ್ತಿದ್ದ ಆಗಿನ ಪ್ರಧಾನಿ ಜವಹಾರ್ ಲಾಲ್ ನೆಹರೂ ಮುಂದೊಂದು ದಿನ ಈ ಯುವಕ ದೇಶವನ್ನು ಆಳುತ್ತಾನೆ ಎಂದು ತಮ್ಮ ಆಪ್ತರನೊಡನೆ ಹೇಳಿದ್ದರಂತೆ. ನಂತರ ನೆಹರೂ ಮಗಳು ಇಂದಿರಾ ಕೂಡ “ಅಟಲ್ ಜಿ ಈಸ್ ಎ ರೈಟ್ ಪರ್ಸನ್ ಇನ್ ರಾಂಗ್ ಪಾರ್ಟಿ” ಎಂದಿದ್ದರು. ಅಂದರೆ ವಾಜಪೇಯಿ ತನ್ನ ಪಕ್ಷದಲ್ಲಿ ಇದ್ದರೆ ಒಳ್ಳೆಯದಿತ್ತು ಎಂಬ ಭಾವನೆ ಇಂದಿರಾಗೆ ಇತ್ತು ಎನ್ನುತ್ತಾರೆ ಆಗಿನ ರಾಜಕೀಯ ವಿಶ್ಲೇಷಕರು. ಆದರೆ ವಾಜಪೇಯಿ ಯಾವತ್ತೂ ರಾಜಕೀಯದಲ್ಲಿ ಅಧಿಕಾರದ ಹಿಂದೆ ಹೋಗಿರಲಿಲ್ಲ.
ಅವರು ಆಡಳಿತ ಪಕ್ಷದ ಲೋಪ, ದೋಷಗಳನ್ನು ಸಾಕ್ಷಿ ಸಮೇತ ಲೋಕಸಭೆಯಲ್ಲಿ ಮಂಡಿಸುತ್ತಿದ್ದಾಗ ನಿಮ್ಮದೇನೂ ಎರಡು ಸದಸ್ಯರ ಪಕ್ಷವಲ್ವಾ, ನಮ್ಮನ್ನು ಏನು ಮಾಡೋಕೆ ಆಗುತ್ತೆ ಎಂದು ಆಗಿನ ಕಾಂಗ್ರೆಸ್ ನಾಯಕರೊಬ್ಬರು ಛೇಡಿಸಿದಾಗ “ಇವತ್ತು ಎರಡೇ ಸದಸ್ಯರು ಇಲ್ಲಿರಬಹುದು. ಆದರೆ ಭವಿಷ್ಯದಲ್ಲಿ ಒಂದು ದಿನ ಇಡೀ ದೇಶ ಕೇಸರಿಮಯವಾಗುತ್ತದೆ, ನೋಡುತ್ತೀರಿ” ಎಂದಿದ್ದರು ಅಟಲ್ . ಅದು ಈಗ ಹಿಮಾಚಲ ಪ್ರದೇಶದ ಗೆಲುವಿನೊಂದಿಗೆ ನಿಜವಾಗಿದೆ. ನಮ್ಮ ರಾಷ್ಟ್ರದ 29 ರಾಜ್ಯಗಳಲ್ಲಿ 19 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. ಕೇಂದ್ರದಲ್ಲಿಯೂ ಬಿಜೆಪಿ ಇದೆ. ಅಂದು ವಾಜಪೇಯಿ ಕನಸು ಕಂಡದ್ದನ್ನು ಇವತ್ತು ಬಿಜೆಪಿಯ ಕೋಟ್ಯಾಂತರ ಕಾರ್ಯಕತ್ಥರು ನಿಜ ಮಾಡಿದ್ದಾರೆ. ವಾಜಪೇಯಿಯವರಿಗೆ ನೂರು ತುಂಬುವಾಗ ಇಡೀ ರಾಷ್ಟ್ರ ಕೇಸರಿಮಯವಾಗಿರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
1996 ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಪಡೆದ ಬಿಜೆಪಿಯನ್ನು ರಾಷ್ಟ್ರಪತಿಗಳು ಕರೆದಾಗ ಅಟಲ್ ಭಾರತದ 10 ನೇ ಪ್ರಧಾನ ಮಂತ್ರಿಯನ್ನಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಬಹುಮತ ಸಾಬೀತು ಪಡಿಸುವ ಸಮಯ ಬಂದಾಗ ಕೇವಲ ಒಂದು ವೋಟ್ ಕಡಿಮೆ ಇದೆ ಎನ್ನುವ ಕಾರಣಕ್ಕೆ ತಾವು ಯಾವುದೇ ಕಾರಣಕ್ಕೂ ಕುದುರೆ ವ್ಯಾಪಾರ ಮಾಡುವುದಿಲ್ಲ ಎಂದು ಬಗೆದು ರಾಜೀನಾಮೆ ನೀಡಿ ಕೆಳಗಿಳಿದಿದ್ದರು. ಅವರಿಗೆ ಅಧಿಕಾರಕ್ಕಿಂತ ಮುಖ್ಯ ನೈತಿಕತೆ ಆಗಿತ್ತು. ಆವತ್ತು ಅಟಲ್ ಜಿ ಹಾಡೊಂದನ್ನು ಬರೆಯುತ್ತಾರೆ.
“ಭಾರತ್ ಕೊಹಿ ಭೂಮಿ ಕಾ ತುಕುಡ ನಹೀ ಹೈ, ಭಾರತ್ ತೋ ಜೀತ್ ತಾ ಜಾಗ್ ತಾ ರಾಷ್ಟ್ರ ಪುರುಷ್ ಹೈ, ಏ ವಂದನ್ ಕೀ ಧರ್ಥಿ ಹೇ, ಏ ಅಭಿನಂದನ್ ಕಿ ಧರ್ಥಿ ಹೈ
ಏ ಅರ್ಪಣ್ ಕಿ ಭೂಮಿ ಹೇ, ಏ ತರ್ಪಣ್ ಕೀ ಭೂಮಿ ಹೈ, ಇಸ್ಕಿ ನದಿ ನದಿ ಹಮಾರೇಲಿಯೇ ಗಂಗಾ ಹೈ, ಇಸ್ಕಾ ಕಂಕರ್, ಕಂಕರ್ ಹಮಾರೇಲಿಯೇ ಶಂಕರ್ ಹೈ,
ಹಮ್ ಜಿಯೆಂಗೆ ತೋ ಇಸ್ ಭಾರತ್ ಕೆ ಲಿಯೇ, ಔರ್ ಮರೇಂಗೆ ತೋ ಇಸ್ ಭಾರತ್ ಕೆ ಲಿಯೇ, ಔರ್ ಮರ್ ನೆ ಕೆ ಬಾದ್ ಬೀ, ಗಂಗಾ ಜಲ್ ಮೇ ಬೆಹ್ತಿ ಅಸ್ತಿಯೊಂಕೋ ಕಾನ್ ಲಗಾಕರ್ ಸುನೇಗಾ, ತೋ ಏಕ್ ಹೀ ಆವಾಜ್ ಆಯೇಗಿ, ಭಾರತ್ ಮಾತಾ ಕೀ ಜೈ.
ಪ್ರಧಾನಿಯಾಗುವ ಮೊದಲು ವಾಜಪೇಯಿಯವರಿಗೆ ವಿದೇಶಾಂಗ ಸಚಿವರಾಗಿ ಕೆಲಸ ಮಾಡಿದ ಅನುಭವ ಕೂಡ ಇತ್ತು. ಇವತ್ತು ಮೋದಿ ಯಾವ ರೀತಿಯಲ್ಲಿ ಜಾಗತಿಕ ರಾಷ್ಟ್ರಗಳನ್ನು ತಮ್ಮೆಡೆಗೆ ಸೆಳೆದು ಭಾರತವನ್ನು ವಿಶ್ವಗುರು ಮಾಡಲು ಹೊರಟಿದ್ದಾರೋ ಅದಕ್ಕೆ ಅಟಲ್ 1977ರಲ್ಲಿಯೇ ಅಡಿಗಲ್ಲು ಹಾಕಿದ್ದರು. ಯುನೈಟೆಡ್ ನೇಶನ್ ನ ಜನರಲ್ ಅಸೆಂಬ್ಲಿಯಲ್ಲಿ ಭಾರತದ ಪರವಾಗಿ ಹಿಂದಿಯಲ್ಲಿ ಭಾಷಣ ಮಾಡಲು ಅವಕಾಶ ಪಡೆದ ಮೊದಲ ವಿದೇಶಾಂಗ ಸಚಿವ ಅಟಲ್ ಬಿಹಾರಿ ವಾಜಪೇಯಿ. ನ್ಯೂಕ್ಲಿಯರ್ ಟೆಸ್ಟ್, ಡೆಲ್ಲಿಯಿಂದ ಲಾಹೋರ್ ಗೆ ಬಸ್, ರಾಷ್ಟ್ರದಾದ್ಯಂತ ಚತುಷ್ಪಥ ರಸ್ತೆಗಳ ನಿರ್ಮಾಣ, ಕಾರ್ಗಿಲ್ ವಿಜಯ, ನದಿ ಜೋಡಣೆಯಂತಹ ಕಾರ್ಯಗಳಿಗೆ ಅಡಿಪಾಯ ಹಾಕಿದವರು ವಾಜಪೇಯಿ.
ಅಷ್ಟು ವರುಷ ರಾಜಕೀಯದಲ್ಲಿದ್ದರೂ ಅಟಲ್ ಜಿ ತನಗಾಗಿ, ತನ್ನ ಕುಟುಂಬಕ್ಕಾಗಿ ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಲ್ಲ. ಅಟಲ್ ಅವರಿಗೆ ಮದುವೆನೆ ಆಗಿಲ್ಲ. ತಾನು ತನ್ನ ಕವಿತೆಗಳೊಂದಿಗೆ ದೇಶಕ್ಕಾಗಿ ಚಿಂತನೆ ಮಾಡುವುದೊಂದೇ ಕರ್ಥವ್ಯ ಎಂದು ಅಂದುಕೊಂಡಿದ್ದ ಅಟಲ್ ಅವರನ್ನು ಇಂದಿನ ರಾಜಕೀಯ ನಾಯಕರು ನೋಡಿ ಕಲಿಯುವುದು ತುಂಬಾ ಇದೆ. ವಾಜಪೇಯಿಯವರ ಹುಟ್ಟುಹಬ್ಬದಂದು ಯಾಕೆ ಅವರನ್ನು ಪಕ್ಷಾತೀತವಾಗಿ ಹೊಗಳಬೇಕು ಎಂದರೆ ಅವರು ಸುಮಾರು ಐದು ದಶಕಗಳ ತನಕ ರಾಜಕೀಯದಲ್ಲಿ ಇದ್ದರೂ ಕೈ ಬಾಯಿ ಸ್ವಚ್ಚವಾಗಿ ಇಟ್ಟುಕೊಂಡ ಕಾರಣಕ್ಕೆ. ಈಗ ಏನಾಗಿದೆ ಅಂದರೆ ಮೂರು ಟರ್ಮ್ ಪಾಲಿಕೆಯಲ್ಲಿ ಸದಸ್ಯನಾಗಿದ್ದರೆ ಅವನು ಒಂದು ಪೀಳಿಗೆ ದುಡಿಯದೇ ಕೂತು ತಿನ್ನುವಷ್ಟು ಸಂಪಾದಿಸಿಬಿಡುತ್ತಾನೆ. ಎರಡು ಸಲ ಶಾಸಕನಾದರೆ ನಂತರ ಕೆಲಸ ಮಾಡುವ ಅವಶ್ಯಕತೆನೆ ಬರುವುದಿಲ್ಲ. ಆದ್ದರಿಂದ ವಾಜಪೇಯಿಯವರ ಫೋಟೋವನ್ನು ಪಕ್ಷಾತೀತವಾಗಿ ಎಲ್ಲ ಮುಖಂಡರು ತಮ್ಮ ಕಚೇರಿ, ಮನೆಯಲ್ಲಿ ಇಟ್ಟುಕೊಳ್ಳಬೇಕು. ಅದನ್ನು ನೋಡಿಯಾದರೂ ನೈತಿಕತೆ ನೆನಪಾಗಲಿ ಎನ್ನುವ ಕಾರಣಕ್ಕೆ.
ಇವತ್ತು ಬಿಜೆಪಿಯ ವಿವಿಧ ಘಟಕಗಳು ಅಟಲ್ ಜನ್ಮದಿನವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತಿವೆ. ಮಂಗಳೂರು ನಗರ ದಕ್ಷಿಣದ ಬಿಜೆಪಿ ಮುಖಂಡರು ಸರಕಾರಿ ಆಸ್ಪತ್ರೆಗಳಿಗೆ ವೀಲ್ ಚೇರ್ಸ್, ವಾಟರ್ ಹೀಟರ್, ಶುದ್ಧ ಕುಡಿಯುವ ನೀರಿನ ಯಂತ್ರ ಎಲ್ಲಾ ಕೊಟ್ಟು ಬಂದಿದ್ದಾರೆ. ಅದರೊಂದಿಗೆ ಅಶಕ್ತರಿಗೆ ಊಟ, ರೋಗಿಗಳಿಗೆ ಹಣ್ಣು ಹಂಪಲು ಕೊಡಲಾಗಿದೆ. ಇನ್ನು ಬಾಕಿ ಇರುವುದು ವಾಜಪೇಯಿ ಬದುಕನ್ನು ಬಿಜೆಪಿಯವರು ತಮ್ಮ ಜೀವನದಲ್ಲಿ ಅಳವಡಿಸುವುದು ಮಾತ್ರ
Leave A Reply