ಹಫೀಜ್ ಸಯೀದ್ ರ್ಯಾಲಿ ನಡೆಸಲು ಅನುಮತಿ ಹಾಗೂ ಭದ್ರತೆ ನೀಡಿತೆ ಪಾಕಿಸ್ತಾನ?
ಇಸ್ಲಾಮಾಬಾದ್: ಈ ಪಾಕಿಸ್ತಾನ ಎಂದರೇನೆ ಹಾಗೆ. ಒಂದೋ ಆ ರಾಷ್ಟ್ರ ಹೊರಗಿನ ಭಯೋತ್ಪಾದಕರನ್ನು ಬೆಂಬಲಿಸುತ್ತದೆ ಇಲ್ಲವೇ ತನ್ನ ರಾಷ್ಟ್ರದಲ್ಲೇ ಉಗ್ರರನ್ನು ಸಾಕಿ ಸಲಹುತ್ತದೆ.
ಈ ಮಾತಿಗೆ ಈಗ ಮತ್ತೊಂದು ನಿದರ್ಶನ ಸಿಕ್ಕಿದ್ದು, ಹಫೀಜ್ ಸಯೀದ್ ಪಾಕಿಸ್ತಾನದ ರಾವಲ್ ಪಿಂಡಿಯಲ್ಲಿ ಬೃಹತ್ ಸಭೆ ಆಯೋಜಿಸಲು ಅನುಮತಿ ನೀಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮೂಲಗಳ ಪ್ರಕಾರ ರಾವಲ್ ಪಿಂಡಿಯಲ್ಲಿ ಜಮಾತ್ ಉದ್ ದವಾ ಮುಖ್ಯಸ್ಥ, ಮುಂಬೈ ಮೇಲಿನ ಬಾಂಬ್ ದಾಳಿಯ ರೂವಾರಿ ಹಫೀಜ್ ಸಯೀದ್ ಗೆ ಬೆಂಬಲಿಗರನ್ನೊಳಗೊಂಡ ಬೃಹತ್ ರ್ಯಾಲಿಗೆ ಅವಕಾಶ ನೀಡಿದೆ. ಅಲ್ಲದೆ ಅವನ ಭದ್ರತೆಗೆ ಸಿಬ್ಬಂದಿಯನ್ನು ನಿಯೋಜಿಸಿದೆ ಎಂದು ತಿಳಿದುಬಂದಿದೆ.
ಆದಾಗ್ಯೂ ಹಫೀಜ್ ಸಯೀದ್ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಹಾಗೂ ಆತನ ಹಿಂದೆ ಸೆಕ್ಯುರಿಟಿ ಎಂದು ಬರೆದಿರುವ ಬಟ್ಟೆ ತೊಟ್ಟು, ಕೈಯಲ್ಲಿ ಗನ್ ಹಿಡಿದುಕೊಂಡು ನಿಂತಿರುವ ಇಬ್ಬರು ಭದ್ರತಾ ಸಿಬ್ಬಂದಿಯನ್ನೊಳಗೊಂಡ ಫೋಟೋ ಒಂದು ಈಗ ಚರ್ಚೆಯ ವಿಷಯವಾಗಿದೆ.
ಅಲ್ಲದೆ, ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿ ಎಂದು ಘೋಷಿಸಿದ ಬಳಿಕ ಭಾರತ ಅದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿರುವ ಪಾಲೇಸ್ತೀನ್ ರಾಯಭಾರಿ ವಲೀದ್ ಅಬು ಅಲಿ ಈ ಫೋಟೋ ಶೇರ್ ಮಾಡಿದ್ದಾರೆ.
Leave A Reply