ಭಯೋತ್ಪಾದನೆ ನಿಲ್ಲಿಸದಿದ್ದರೇ ಪಾಕ್ ಜತೆ ಕ್ರಿಕೆಟ್ ಇಲ್ಲ: ಸುಷ್ಮಾ ಸ್ವರಾಜ್
ದೆಹಲಿ: ಪಾಕಿಸ್ತಾನ ಭಾರತದ ವಿರುದ್ಧ ನಿರಂತರವಾಗಿ ಷಡ್ಯಂತ್ರ ರೂಪಿಸುತ್ತಿದ್ದು, ಪಾಕ್ ಗಡಿಯಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿರುವುದು ಸೇರಿ ಹಲವು ಕಾರ್ಯಚಟುವಟಿಕೆಗಳ ಮೂಲಕ ಭಾರತದ ನೆಮ್ಮದಿಗೆ ಭಂಗ ನೀಡುತ್ತಿರುವ ಪಾಕ್ ಜತೆ ಕ್ರಿಕೆಟ್ ಪಂದ್ಯಾವಳಿ ಸಾಧ್ಯವಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಯೋಧರ ಹತ್ಯೆ ಮತ್ತು ಸೇನಾ ಶಿಬಿರಗಳ ಮೇಲೆ ಪಾಕ್ ಸೈನಿಕರ ದಾಳಿ ಸೇರಿ ಹಲವು ಪಾಕ್ ಉಗ್ರ ಚಟುವಟಿಕೆಗಳಿಗೆ ಪಾಕ್ ಕಡಿವಾಣ ಹಾಕಲು ವಿಫಲವಾಗಿದೆ. ಅಲ್ಲದೇ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು ಹೋದಾಗ ತಾಯಿ ಮತ್ತು ಪತ್ನಿಯನ್ನು ಅವಮಾನಿಸಿದ್ದರಿಂದ ಕೇಂದ್ರ ಪಾಕ್ ಜೊತೆ ಯಾವುದೇ ರೀತಿಯ ಸಂಬಂಧ ಮುಂದುವರಿಸುವುದು ಕಷ್ಟವಾಗುತ್ತದೆ. ಅಲ್ಲದೇ ಆದ್ದರಿಂದ ಪಾಕಿಸ್ತಾನದ ಜತೆ ಕ್ರಿಕೆಟ್ ಆಡುವುದು ಅಸಾಧ್ಯ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಸಂಸದೀಯ ಸಲಹಾ ಸಮಿತಿ ಜತೆಗಿನ ವಿದೇಶಾಂಗ ವ್ಯವಹಾರಗಳ ಸಭೆಯಲ್ಲಿ ಮಾತನಾಡಿ, ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡಿ, ಭಾರತದಲ್ಲಿ ಉಗ್ರ ಕೃತ್ಯಗಳನ್ನು ನಡೆಸಲು ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ಪಾಕ್ ಮಧ್ಯೆ ನಿರ್ಮಾಣವಾಗಿರುವ ಬಿಗುವಿನ ವಾತಾವರಣವನ್ನು ಉಭಯ ರಾಷ್ಟ್ರಗಳ ನಡುವೆ ಕ್ರಿಕೆಟ್ ಪಂದ್ಯ ಏರ್ಪಡಿಸುವ ಮೂಲಕ ಕೈಗೊಳ್ಳಬಹುದಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುಷ್ಮಾ ಸ್ವರಾಜ್ ‘ಕ್ರಿಕೆಟ್ ಆಡಲು ಇದು ಸೂಕ್ತ ಸಮಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Leave A Reply