ಗಡಿ ದಾಟಿ ಬಂದ ಪಾಕಿಸ್ತಾನದ 12 ವರ್ಷದ ಮೂಕ ಬಾಲಕನನ್ನು ಭಾರತ ಸರ್ಕಾರ ಏನು ಮಾಡಿತು ಗೊತ್ತೆ..?
ದೆಹಲಿ: ಸದಾ ಭಾರತದ ವಿರುದ್ಧ ಹಲ್ಲು ಮಸೆಯುವ ಪಾಕಿಸ್ತಾನ ಮಾನವೀಯತೆ ಮರೆತು ವರ್ತಿಸಿದರೂ, ಭಾರತ ಮಾತ್ರ ತನ್ನ ಕರುಣೆಯನ್ನು ಆಗಗ ತೋರುತ್ತಲೇ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಸುಮಾರು ಏಳು ತಿಂಗಳ ಹಿಂದೆ ಭಾರತದ ಗಡಿ ದಾಟಿ ಬಂದ ಪಾಕಿಸ್ತಾನದ 12 ವರ್ಷದ ಮೂಕ ಬಾಲಕನನ್ನು ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಕಳುಹಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿದೆ.
ಮಾತು ಬಾರದ ಬಾಲಕ ಮೇ 2017ರಂದು ಪ್ರಮಾದ್ ವಶಾತ್ ಭಾರತದ ಗಡಿ ದಾಟಿ ಬಂದಿದ್ದ. ಆತನ ಬಳಿ 20 ರೂಪಾಯಿಯ ಪಾಕಿಸ್ತಾನದ ಡಾಲರ್ ಇದ್ದಿರುವುದು, ಆತ ಪಾಕಿಸ್ತಾನದ ಪ್ರಜೆ ಎಂಬುದು ಪತ್ತೆ ಹಚ್ಚಲು ಸಹಾಯಕವಾಗಿದೆ. ಅಟ್ಟರಿ ವಾಗಾ ಗಡಿಯಲ್ಲಿ ಬಾಲಕನನ್ನು ಭಾರತೀಯ ಸೇನೆಯ ನೇತೃತ್ವದಲ್ಲಿ ವಾಪಸ್ಸ ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗಿದೆ.
ಪಾಕಿಸ್ತಾನದ ಹೈ ಕಮಿಷನರ್ ಉಪಸ್ಥಿತಿಯಲ್ಲಿ, ಪಾಕ್ ಭಾರತದ ರಾಯಭಾರಿ ಸೇರಿ ಹಲವು ಅಧಿಕಾರಿಗಳು ಉಪಸ್ಥಿತಿಯಲ್ಲಿ ಬಾಲಕನನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ.
ಬಾಲಕನ್ನು ಫರೀದ್ ಕೋಟ್ ಜೈಲಿನಲ್ಲಿ ಬಾಲಾಪರಾಧಿ ಎಂದು ವಿಚಾರಣೆ ನಡೆಸಲಾಗಿತ್ತು. ನಂತರ ಪಾಕಿಸ್ತಾನ ವಿದೇಶಾಂಗ ಸಚಿವಾಲಯದೊಂದಿಗೆ ಮಾತುಕತೆ ನಡೆಸಿ ಬಾಲಕನನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕ ಕೆಲವು ಉರ್ದು ಪದಗಳನ್ನು ಬರೆಯುತ್ತಿರುವುದು ಆತನ ಮೂಲ ಪತ್ತೆ ಹಚ್ಚಲು ಅನುಕೂಲವಾಗಿದೆ. ಆತ ಪಾಕಿಸ್ತಾನದ ರೂಪಾಯಿಯನ್ನು, ಪಾಕಿಸ್ತಾನದ ಧ್ವಜವನ್ನು ಗುರುತಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತದ ಗಡಿಯೊಳಗೆ ಪ್ರಮಾದ್ ವಶಾತ್ ಪ್ರವೇಶಿಸಿದ ಬಾಲಕನನ್ನು ಭಾರತೀಯ ಅಧಿಕಾರಿಗಳು ಗೌರವಯುತವಾಗಿ ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಪಾಕಿಸ್ತಾನ ಭಾರತದ ವಿಷಯದಲ್ಲಿ ಈ ರೀತಿಯ ಮಾನವೀಯ ನಡೆಗಳನ್ನು ಇಡದೆ ತನ್ನ ವಿಧ್ವಂಸಕ ಮನಸ್ಥಿತಿಯನ್ನು ಮುಂದುವರಿಸಿರುವುದು ಮಾತ್ರ ದುರಂತ.
Leave A Reply