ಬ್ಯಾಂಕ್ ಸಿಬ್ಬಂದಿಯನ್ನು ಮದ್ವೆಯಾಗ್ಬಾರದಂತೆ: ಮುಸ್ಲಿಂ ಸಂಸ್ಥೆ ಫತ್ವಾ
ಲಖನೌ: ಬ್ಯಾಂಕ್ ನಲ್ಲಿ ಕೆಲಸ ಮಾಡುವವರನ್ನು ಮದ್ವೆಯಾಗಬಾರದು ಎಂದು ಲಖನೌನ ಮುಸ್ಲಿಂ ಸಂಸ್ಥೆ ಮೌಲ್ವಿ ದರೂಲ್ ಉಲೂಮ್ ದೇವಬಂದ್ ಫತ್ವಾ ಹೊರಡಿಸಿದೆ. ಬ್ಯಾಂಕ್ ನಲ್ಲಿ ಕೆಲಸ ಮಾಡುವವರು ಅನೈತಿಕವಾಗಿ ಹಣ ಗಳಿಸುತ್ತಾರೆ ಆದ್ದರಿಂದ ಅವರನ್ನು ಮದುವೆಯಾಗಬಾರದು. ಮದುವೆ ಪ್ರಸ್ತಾಪ ಬಂದರೆ ನಿರಾಕರಿಸಬೇಕು ಎಂದು ಫತ್ವಾ ಹೊರಡಿಸಿದ್ದಾರೆ.
ಬ್ಯಾಂಕ್ ನಲ್ಲಿ ಕೆಲಸ ಮಾಡುವವರು ಅನೈತಿಕವಾಗಿ, ಹರಾಮಿ ಹಣವನ್ನು ಗಳಿಸುತ್ತಾರೆ. ಅಂತಹ ಕುಟುಂಬ ಮದುವೆಯಾಗಲು ಯೋಗ್ಯವಲ್ಲ ಎಂದು ದರೂಲ್ ಉಲೂಮ್ ನ ನಿಯಮದಲ್ಲಿ ಹೇಳಲಾಗಿದೆ. ಬ್ಯಾಂಕ್ ನಲ್ಲಿ ಅನೈತಿಕವಾಗಿ ಹಣ ಗಳಿಸುತ್ತಿದ್ದು, ಅಂತವರು ಗೌರವಕ್ಕೂ ಅರ್ಹರಲ್ಲ. ಅವರು ಮೌಲ್ಯಗಳನ್ನು ಮರೆತು ಕಾರ್ಯನಿರ್ವಹಿಸುತ್ತಾರೆ. ಆದ್ದರಿಂದ ಪ್ರಾಮಾಣಿಕವಾಗಿ ಹಣ ಗಳಿಸುವವರನ್ನು ಮದುವೆಯಾಗಬೇಕು ಎಂದು ಫತ್ವಾದಲ್ಲಿ ಉಲ್ಲೇಖಿಸಲಾಗಿದೆ.
ಇಸ್ಲಾಂ, ಷರಿಯಾ ಕಾನೂನಿನ ಪ್ರಕಾರ ಬ್ಯಾಂಕ್ ನಲ್ಲಿ ವ್ಯವಹರಿಸುವಾಗ ಶುಲ್ಕ ಪಡೆಯುವುದು, ಬಡ್ಡಿ ಪಡೆಯುವುದು ನಿಷೀದ್ಧ. ಹಣ ಹೂಡಿಕೆ ಮಾಡಿ, ಲಾಭ ಪಡೆಯುವುದು ಕೂಡ ಇಸ್ಲಾಂ ಧರ್ಮದ ನಿಯಮಗಳ ವಿರುದ್ಧವಾದ್ದದ್ದು. ಈ ನಿಯಮಗಳು ಖುರಾನ್ ನನ್ನಲೇ ಉಲ್ಲೇಖವಾಗಿದ್ದು, ಅವುಗಳನ್ನು ಪಾಲಿಸಬೇಕು ಎಂದು ಫತ್ವಾದಲ್ಲಿ ತಿಳಿಸಲಾಗಿದೆ.
ಇಸ್ಲಾಂ ಬ್ಯಾಂಕಿಂಗ್ ಪದ್ಧತಿಯಾದ ರಿಬಾ ಪ್ರಕಾರ ಬಡ್ಡಿ ಪಡೆಯುವಂತಿಲ್ಲ, ಹೂಡಿಕೆದಾರರು ಇತರು ಮಾಡುವ ಕೆಲಸದಿಂದ ಲಾಭ ಪಡೆಯಲು ಅವಕಾಶ ನೀಡಬಾರದು ಎಂಬ ನಿಯಮವಿದೆ. ಕೆಲವು ರಾಷ್ಟ್ರಗಳಲ್ಲಿ ಇಸ್ಲಾಂ ಬ್ಯಾಂಕಿಂಗ್ ಪದ್ಧತಿಯಾದ ರಿಬಾ ಜಾರಿಯಲ್ಲಿದೆ. ಭಾರತದಲ್ಲೂ ಇಸ್ಲಾಂ ಬ್ಯಾಂಕಿಂಗ್ ಪದ್ಧತಿಯನ್ನು ಜಾರಿಗೆ ಮಾಡಲು ನಿರ್ಧರಿಸಿದ್ದಕ್ಕೆ 2008ರಲ್ಲೇ ಆರ್ ಬಿಐ ಗವರ್ನರ್ ಆಗಿದ್ದ ರಘುರಾಮ್ ರಾಜನ್ ತಕ್ಕ ಉತ್ತರ ನೀಡಿದ್ದು, ಭಾರತದಲ್ಲಿ ಇಸ್ಲಾಂ ಬ್ಯಾಂಕಿಂಗ್ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
Leave A Reply