• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಶಾಸಕರೇ, ಕುಡ್ಸೆಂಪ್ ಯೋಜನೆಯ 218 ಕೋಟಿ ಎಲ್ಲಿಗೆ ಹೋಯ್ತು?

Hanumantha Kamath Posted On January 12, 2018
0


0
Shares
  • Share On Facebook
  • Tweet It

ಸುರತ್ಕಲ್, ಬಜಾಲ್, ಪಚ್ಚನಾಡಿ ಹಾಗೂ ಮುಲ್ಲಕಾಡಿನಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ಕೊಟ್ಟು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡ್ಸೆಂಪ್ ವತಿಯಿಂದ 218 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಸಲಾದ ಒಳಚರಂಡಿ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎನ್ನುವ ಶಂಕೆ ಉಂಟಾಗಿದೆ ಎಂದು ಹೇಳಿರುವುದನ್ನು ಮಾಧ್ಯಮಗಳು ಉಲ್ಲೇಖ ಮಾಡಿವೆ. ಇಲ್ಲಿ ಶಂಕೆ ಅಲ್ಲ ಗ್ಯಾರಂಟಿ ಅವ್ಯವಹಾರ ನಡೆದಿದೆ ಎಂದು ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ಅವರು ಕೂಡ ಇತ್ತೀಚೆಗೆ ಸುರತ್ಕಲ್ ಮತ್ತು ಆಸುಪಾಸಿನ ಸ್ಥಳಗಳಿಗೆ ಭೇಟಿಕೊಟ್ಟು ಇದೇ ಮಾತನ್ನು ಹೇಳಿದ್ದಾರೆ. ಇಷ್ಟೇ ಅಲ್ಲ ಇನ್ನು ಖಡಕ್ಕಾಗಿ ಹೇಳಿದ್ದಾರೆ. ಕುಡ್ಸೆಂಪ್ ಕಾಮಗಾರಿ ನಡೆದಾಗ ಯಾರೆಲ್ಲ ಅದರ ಮೇಲ್ವಿಚಾರಣೆ ವಹಿಸಿದ್ದರೋ ಅವರು ಈಗ ಎಂಟು, ಹತ್ತು ವರ್ಷಗಳ ನಂತರ ಯಾವ ಪೋಸ್ಟಿನಲ್ಲಿದ್ದರೂ, ಎಷ್ಟೇ ಉನ್ನತ ಅಧಿಕಾರದಲ್ಲಿದ್ದರೂ ತಾವು ಅವರ ವಿರುದ್ಧ ತನಿಖೆಗೆ ಆದೇಶಿಸುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಸಿಒಡಿ ತನಿಖೆಗೆ ಕೂಡ ರಾಜ್ಯ ಸರಕಾರ ಮುಂದಾಗಲಿದೆ ಎನ್ನುವ ಮಾತನ್ನು ಕೂಡ ಅದಕ್ಕೆ ಸೇರಿಸಿದ್ದರು. ಯಾಕೆಂದರೆ ರೋಶನ್ ಬೇಗ್ ಅವರಿಗೆ ಆ ಯೋಜನೆಯ ಕಳಪೆತನ ನೋಡಿ ದಿಗ್ರಮೆಯಾಗಿತ್ತು. 218 ಕೋಟಿ ರೂಪಾಯಿಯ ಯೋಜನೆಯೊಂದು ಬುದ್ಧಿವಂತರ ನಗರದಲ್ಲಿ ಈ ಪರಿ ಕುಲಗೆಟ್ಟು ಹೋಗಿರುವುದರ ಕುರಿತು ಅವರಿಗೆ ಸಹಜ ಸಿಟ್ಟು ಬಂದಿರಬಹುದು. ಇದನ್ನು ನೋಡಿದ ತಕ್ಷಣ ತನ್ನ ಇಷ್ಟು ವರ್ಷದ ಸಾರ್ವಜನಿಕ ಬದುಕಿನಲ್ಲಿ ನೋಡಿದ ಅತ್ಯಂತ ಕಳಪೆ ಕಾಮಗಾರಿ ಇದು ಎನ್ನುವ ಭಾವನೆ ಅವರ ಮನಸ್ಸಿಗೆ ಬಂದಿರಬಹುದು. ಈ ಬಾರಿ ಸಂಸದರು ಹೋಗಿ ನೋಡಿ ಬಂದಿದ್ದಾರೆ, ಅವ್ಯವಹಾರದ ಶಂಕೆ ವ್ಯಕ್ತಪಡಿಸಿದ್ದಾರೆ. ನಿನ್ನೆ ಸಂಸದರು ಮೊನ್ನೆ ನಗರಾಭಿವೃದ್ಧಿ ಸಚಿವರು ಹೋದ ಕಡೆಯಲ್ಲೆಲ್ಲ ಕಣ್ಣಿದ್ದ ಯಾರೂ ಕೂಡ ಕೆಲಸ ಕಳಪೆಯಾಗಿದೆ ಎಂದು ಹೇಳಬಲ್ಲರು. ಕುರುಡರನ್ನು ಕರೆದುಕೊಂಡು ಹೋದರೆ ಆತ ವಾಸನೆಯಿಂದ ಡ್ರೈನೇಜ್ ಕಾಮಗಾರಿ ಸರಿಯಾಗಿಲ್ಲ ಎಂದು ಹೇಳಬಲ್ಲ.

ಆದ್ದರಿಂದ ರೋಶನ್ ಬೇಗ್ ಅವರು ತಾವು ಸಿಒಡಿ ತನಿಖೆಗೆ ಕೊಡುತ್ತೇವೆ ಎಂದು ಹೇಳಿದ್ದನ್ನೇ ನಂಬುವುದಾದರೆ ಆವತ್ತು ಕುಂಡ್ಸೆಪು ಕಾಮಗಾರಿ ನಡೆದಾಗ ಅದರ ನಿರ್ದೇಶಕರಾಗಿದ್ದವರು ಈಗಿನ ಶಾಸಕ ಜೆಆರ್ ಲೋಬೋ. ತಾವು 2009 ರಲ್ಲಿ ಅದರಿಂದ ಹೊರಗೆ ಬಂದಿದ್ದೇನೆ. ಕಾಮಗಾರಿ 2011 ರ ತನಕ ನಡೆದಿದೆ ಎಂದು ಈಗ ಶಾಸಕರು ಹೇಳಿ ಬೀಸುವ ದೊಣ್ಣೆಯಿಂದ ಪೆಟ್ಟು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಏನು ಕೂಡ ಹೇಳಬಹುದು. ಯಾಕೆಂದರೆ ಅವರದ್ದೇ ಸರಕಾರ ಇರುವಾಗ ಅವರದ್ದೇ ಮಂತ್ರಿಯೊಬ್ಬರು ಯಾರನ್ನೂ ಕೂಡ ಬಿಡುವ ಪ್ರಶ್ನೆನೆ ಬರುವುದಿಲ್ಲ ಎಂದು ಹೇಳಿರುವುದು ಶಾಸಕರಿಗೆ ಕಸಿವಿಸಿ ಉಂಟು ಮಾಡಿರಬಹುದು. ಜೆ ಆರ್ ಲೋಬೋ ಅವರು ಹೇಳುವಂತೆ ಕಾಮಗಾರಿ 2011ರ ತನಕ ನಡೆದಿರಬಹುದು. ಆ ಬಗ್ಗೆ ನನ್ನ ಹತ್ತಿರವೂ ಅಂಕಿಅಂಶ ಇದೆ. 2011ರ ಮಾರ್ಚ್ 31 ರ ತನಕ ಕೆಲಸ ನಡೆದು ಯೋಜನೆ ಆವತ್ತಿಗೆ ಪೂರ್ಣವಾಗಿದೆ. ಅದರ ಮೊದಲು 31/5/2010 ರ ಒಳಗೆ 302 ಕಿಲೋ ಮೀಟರ್ ಒಳಚರಂಡಿ ಕಾಮಗಾರಿ ಮುಗಿದಿತ್ತು. ಸುರತ್ಕಲ್ ಪರಿಸರದ ಕೃಷ್ಣಾಪುರ, ಕಾಟಿಪಳ್ಳ, ಬೊಳ್ಳರೆ, ರಾಮನಗರದ 94% ಕಾಮಗಾರಿ ಫಿನಿಶ್ ಆಗಿತ್ತು. 43920 ಮೀಟರ್ ಒಳಚರಂಡಿ ಲೇನ್, 1666 ಆಳುಗುಂಡಿಗಳು ಆಗಿದ್ದವು. ಹಾಗೆ ಸುರತ್ಕಲ್ ಭಾಗದ ಇತರ ಪ್ರದೇಶಗಳಾದ ಕುಳಾಯಿ, ಹೊಸಬೆಟ್ಟು, ನಂದನ್ ಜಲ್ಲಾ, ಮತ್ತೊಟ್ಟು, ತಡಂಬೈಲ್, ಗುಡ್ಡೆಕೊಪ್ಪಳದ 88% ಕಾಮಗಾರಿಗಳು ಆಗಿದ್ದವು. 33360 ಒಳಚರಂಡಿ ಲೇನ್ ಮತ್ತು 1209 ಅಳುಗುಂಡಿ ಆಗಿತ್ತು. ಅಂದರೆ ಕಾಮಗಾರಿಯ ಸಿಂಹಪಾಲು ಮುಗಿದಿತ್ತು. ಹಾಗಿದ್ದ ಮೇಲೆ ಆವತ್ತು ಅದರ ನಿರ್ದೇಶಕರಾಗಿದ್ದವರು ತಪ್ಪಿಸಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ.

ಒಂದು ವೇಳೆ ಕುಡ್ಸೆಂಪ್ ಕಾಮಗಾರಿಯ ಸ್ಕೆಚ್, ರೂಪುರೇಶೆ ಇಂಜಿನಿಯರ್ ಗಳು ತಯಾರಿಸಿದ್ದು ಆಗಿದ್ದರೂ ಅದರ ಮೇಲ್ವಿಚಾರಣೆ ನೋಡಿ ಎಂದು ಜವಾಬ್ದಾರಿ ಕೊಟ್ಟಿದ್ದು ಜೆ ಆರ್ ಲೋಬೊ. ಅವರಿಗೆ ಯಾಕೆ ಕೊಡಲಾಗಿತ್ತು ಎನ್ನುವುದು ನಿಮಗೆ ಗೊತ್ತೆ ಇರಬಹುದು. ಒಬ್ಬ ಅಧಿಕಾರಿಯಾಗಿ ಜೆ ಆರ್ ಲೋಬೊ ಅವರ ಹೆಸರಿನಲ್ಲಿ ಒಂದು ದಾಖಲೆ ಇದ್ದರೂ ಇರಬಹುದು. ಅಂದರೆ ತಮ್ಮ ಸೇವಾವಧಿ(!)ಯ 35 ವರ್ಷಗಳನ್ನು ಹೆಚ್ಚು ಕಡಿಮೆ ಒಂದೇ ಜಿಲ್ಲೆಯಲ್ಲಿ ಪೋಸ್ಟಿಂಗ್ ಹಾಕಿಸಿಕೊಂಡ ಹೆಗ್ಗಳಿಕೆ ಅವರಿಗಿದೆ. ಇಷ್ಟಾದ ಮೇಲೆ ಅವರಿಗೆ ಮಂಗಳೂರಿನ ಭೌಗೋಳಿಕ ಚಿತ್ರಣ, ಇಲ್ಲಿನ ಪರಿಸರ, ಮಳೆಯ ಪ್ರಮಾಣ, ಮಣ್ಣಿನ ಸಾಂದ್ರತೆ ಎಲ್ಲ ಗೊತ್ತಿರದೇ ಇರಲು ಸಾಧ್ಯವಿಲ್ಲ. ಇಷ್ಟಿದ ಮೇಲೆಯೂ ಕುಡ್ಸೆಂಪ್ ಕಾಮಗಾರಿ ಈ ಪರಿ ಹಳ್ಳ ಹಿಡಿದಿದೆ ಎಂದರೆ 218 ಕೋಟಿಯ ಲೆಕ್ಕ ಯಾರತ್ರ ಕೇಳೋಣ ಸ್ವಾಮಿ? ಹೊಟ್ಟೆ ಉರಿಯಲ್ವಾ? ಎಡಿಬಿ ಕೊಟ್ಟ ಸಾಲವೇ ಇರಬಹುದು. ಆದರೆ ಅದನ್ನು ನಾಳೆ ಮರುಪಾವತಿ ಮಾಡಬೇಕಾಗಿರುವುದು ನಾವೇ ಅಲ್ವಾ? ಒಬ್ಬ ಜನಸಾಮಾನ್ಯ ತಾನು ಕಷ್ಟಪಟ್ಟು ದುಡಿದು ತೆರಿಗೆ ಕಟ್ಟಿದ್ದೂ ಹೀಗೆ ಒಂದೇ ಗಂಟಿನಲ್ಲಿ ಕಳಚಿ ಹೋದರೆ ಉತ್ತರ ಕೊಡುವುದು ಯಾರು? 2025 ರ ತನಕ ಕಾಮಗಾರಿ ಬರುವುದು ದೂರದ ವಿಚಾರ ಈಗಲೇ ಅದರ ಜಾತಕ ಗೊತ್ತಾಗಿಬಿಟ್ಟಿದೆಯಲ್ಲ.
ಇನ್ನು ಇದೇ ಹಣದಲ್ಲಿ 2025 ರ ತನಕ ಮಂಗಳೂರಿಗೆ 24*7 ನೀರು ಕೊಡಲಾಗುತ್ತೆ ಎಂದು ಹೇಳಲಾಗಿತ್ತು. ಲೋಬೋ ಅವರೇ ನೀವು ಈಗ ಮಂಗಳೂರು ನಗರ ದಕ್ಷಿಣದ ಶಾಸಕರು. ಎಷ್ಟು ಏರಿಯಾದಲ್ಲಿ ಇಡೀ ದಿನ ನೀರು ಬರುತ್ತೆ ಎಂದು ನನಗಿಂತ ನಿಮಗೆ ಚೆನ್ನಾಗಿ ಗೊತ್ತು. ಹೃದಯಭಾಗದಲ್ಲಿರುವ ಮಣ್ಣಗುಡ್ಡೆ, ಉರ್ವಾ, ಅಶೋಕನಗರದಲ್ಲಿಯೇ ನೀರು ಇಡೀ ದಿನ ಬರಲ್ಲ, ಬೇರೆ ವಾರ್ಡ್ ಗಳ ಕಥೆ ಬೇರೆನೆ ಇದೆ. ನಿಜ ಹೇಳಿ ಶಾಸಕರೇ, ಕುಡ್ಸೆಂಪ್ ಕಾಮಗಾರಿಯ 218 ಕೋಟಿ ಎಲ್ಲಿಗೆ ಹೋಯಿತು, ಎಡಿಬಿ ಸಾಲವನ್ನು ಹೇಗೆ ಖರ್ಚು ಮಾಡಲಾಗಿದೆ?

0
Shares
  • Share On Facebook
  • Tweet It


KUDCEMP Mangaluru


Trending Now
ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
Hanumantha Kamath July 11, 2025
ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
Hanumantha Kamath July 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
  • Popular Posts

    • 1
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 2
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 3
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • 4
      ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • 5
      ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!

  • Privacy Policy
  • Contact
© Tulunadu Infomedia.

Press enter/return to begin your search