ಮುಂದುವರಿದ ಕಪ್ಪು ಹಣದ ವಿರುದ್ಧದ ಹೋರಾಟ, 1.2 ಲಕ್ಷ ನಕಲಿ ಕಂಪನಿಗಳ ನೋಂದಣಿ ರದ್ದು
ದೆಹಲಿ: ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದ ಬಳಿಕ ಘೀಳಿಟ್ಟವರಿಗೆ ಲೆಕ್ಕವಿಲ್ಲ. ನೋಟ್ ಬ್ಯಾನ್ ಯಶಸ್ವಿಯಾದರೂ ಅದರಿಂದ ದೇಶಕ್ಕೆ ಯಾವ ಲಾಭವಾಯಿತು ಎಂದು ಪ್ಯಾದೆಗಳ ಹಾಗೆ ಕೇಳುವವರಿಗೇನೂ ಕಡಿಮೆಯಿಲ್ಲ. ಆದರೂ, ಯಾರು ಏನೇ ಅಂದರೂ ಸಹ ನೋಟು ನಿಷೇಧದಿಂದ ಮಾತ್ರ ಕಪ್ಪು ಹಣ ತಹಬಂದಿಗೆ ಬಂದಿದೆ ಎಂಬುದು ಮಾತ್ರ ಸುಳ್ಳಲ್ಲ.
ಈ ದಿಸೆಯಲ್ಲಿಯೇ ಕೇಂದ್ರ ಸರ್ಕಾರ ಮುನ್ನುಗ್ಗುತ್ತಿದ್ದು, 1.2 ಲಕ್ಷ ನಕಲಿ ಕಂಪನಿಗಳ ನೋಂದಣಿಯನ್ನು ರದ್ದುಗೊಳಿಸಿದ್ದು, ಕಪ್ಪು ಕುಳಗಳಿಗೆ ಭಾರಿ ಒಡಪೆಟ್ಟು ನೀಡಿದೆ.
ನೋಟು ನಿಷೇಧದ ಬಳಿಕ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ, ವಹಿವಾಟು ನಡೆಸಿದ ಆರೋಪದಲ್ಲಿ ವಿವಿಧ ಇಲಾಖೆಗಳಿಂದ ಇಷ್ಟು ಕಂಪನಿಗಳ ನೋಂದಣಿಯನ್ನು ರದ್ದುಪಡಿಸಲಾಗಿದೆ.
ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ನಕಲಿ ಕಂಪನಿಗಳ ಹೆಸರು ರದ್ದುಗೊಳಿಸಲಾಗಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಇಲಾಖೆ ಸಹಾಯಕ ಸಚಿವ ಪಿ.ಪಿ. ಚೌಧರಿ ಮಾಹಿತಿ ನೀಡಿದ್ದಾರೆ.
ನೋಟು ನಿಷೇಧದ ಬಳಿಕ ಇದುವರೆಗೆ 2.26 ಲಕ್ಷ ನಕಲಿ ಕಂಪನಿಗಳ ನೋಂದಣಿ ರದ್ದುಪಡಿಸಲಾಗಿತ್ತು. ಈ ಪಟ್ಟಿಗೆ ಮತ್ತೆ 1.2 ಲಕ್ಷ ಕಂಪನಿಗಳು ಸೇರಿವೆ. ಅಲ್ಲದೆ ವಿವಿಧ ಕಂಪನಿಗಳ 3.09 ಲಕ್ಷ ನಿರ್ದೇಶಕರನ್ನು ಸಹ ಸರ್ಕಾರ ಕಿತ್ತೊಗೆದಿದೆ. ಒಟ್ಟಿನಲ್ಲಿ ನೋಟು ನಿಷೇಧದ ಬಳಿಕ ಕಪ್ಪುಕುಳಗಳಿಗೆ ಮಾತ್ರ ಸರ್ಕಾರ ತಕ್ಕಪಾಠ ಕಲಿಸುತ್ತಿದೆ.
Leave A Reply