14 ವರ್ಷದ ಬಾಲಕಿ ಅಪಹರಣ, ಇಸ್ಲಾಮಿಗೆ ಮತಾಂತರ, 4 ವರ್ಷದ ಬಳಿಕ ತಪ್ಪಿಸಿಕೊಂಡ ಆಕೆಯ ಗೋಳು ಹೇಳತೀರದು…

ಭೋಪಾಲ್: ದೇಶದಲ್ಲಿ ದಿನೇದಿನೆ ಲವ್ ಜಿಹಾದ್ ಹಾಗೂ ಬಲವಂತದ ಮತಾಂತರ ಪ್ರಕರಣಗಳು ಜನರನ್ನು ದಂಗುಬಡಿಸುತ್ತಿರುವ ಬೆನ್ನಲ್ಲೇ ಮತ್ತೊಂದು ಲವ್ ಜಿಹಾದ್ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಶಾಜಾಪುರದಲ್ಲಿ ಘಟನೆ ನಡೆದಿದ್ದು, 2013ರಲ್ಲಿ ಆಸಿಫ್ ಎಂಬ ವ್ಯಕ್ತಿ ರಾಜಾ ಎಂದು ಹೆಸರು ಬದಲಾಯಿಸಿಕೊಂಡು ಶಾಜಾಪುರಕ್ಕೆ ಬಂದು ಟೀ ಅಂಗಡಿ ಇಟ್ಟಿದ್ದ. ಟೀ ಮಾರಿಕೊಂಡಿರದೆ ಬಾಲಕಿಯೊಬ್ಬಳಿಗೆ ದಿನಾಲೂ ಪೀಡಿಸಿ, ಮಾತುಕತೆ ನಡೆಸುತ್ತಿದ್ದ. ಅಲ್ಲದೆ ಆಕೆಗೆ ಹೊಸ ಬಟ್ಟೆ ಕೊಡಿಸಿ ಮರಳು ಮಾಡಿದ್ದ ಎಂದು ತಿಳಿದುಬಂದಿದೆ.
ಅದಾದ ನಂತರ ಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರಗೈದಿದ್ದ. ಅಲ್ಲದೆ ಬಲವಂತವಾಗಿ ಇಸ್ಲಾಮಿಗೆ ಮತಾಂತರಗೊಳಿಸಿದ್ದ, ಅದೂ ಅಲ್ಲದೆ ಬಾಲಕಿ ಕೈ ಮೇಲಿದ್ದ ಓಂ ಅಕ್ಷರವನ್ನು ಆ್ಯಸಿಡ್ ಹಾಕಿ ಸುಟ್ಟಿದ್ದ ಎಂಬ ಕರಾಳ ಸತ್ಯ ಹೊರಬಿದ್ದಿದೆ.
ಅದಾಗಲೇ ಆಸಿಫ್ ಗೆ ಮದುವೆಯಾಗಿದ್ದು ಮಕ್ಕಳು ಸಹ ಇವೆ ಎಂದು ಮೂಲಗಳು ತಿಳಿಸಿವೆ. ಇಷ್ಟಾದರೂ ಬಾಲಕಿಯನ್ನು ಅಪಹರಿಸಿ ಆಯೇಷಾ ಎಂದು ಹೆಸರು ಬದಲಾಯಿಸಿದ್ದ. 2 ವರ್ಷದ ಹಿಂದೆ ಬಾಲಕಿಗೆ ಮಗು ಸಹ ಆಗಿದೆ ಎಂದು ತಿಳಿದುಬಂದಿದೆ.
ಕೊನೆಗೂ ಎಚ್ಚೆತ್ತುಕೊಂಡ ಬಾಲಕಿ ಬಟ್ಟೆ ಹೊಲೆಸಿಕೊಂಡು ಬರುತ್ತೇನೆ ಎಂದು ಹೊರಬಂದು ತಪ್ಪಿಸಿಕೊಂಡಿದ್ದಾಳೆ. ಬಾಲಕಿ ಈಗ ಪೋಷಕರ ಬಳಿಯಿದ್ದು, ಆಸಿಫ್ ನೀಡಿದ ನೀಡಿದ ಕಿರುಕುಳದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಹಿಂದೂ ಸಂಘಟನೆಗಳ ಮುಖಂಡರು ಜಿಲ್ಲಾ ವರಿಷ್ಠಾಧಿಕಾರಿ ಶೈಲೇಂದ್ರ ಸಿಂಗ್ ಅವರಿಗೆ ದೂರು ನೀಡಿದ್ದು, ಆರೋಪಿ ವಿರುದ್ಧ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯನ್ವಯ ಹಾಗೂ ಅಪಹರಣ ಕುರಿತು ಪ್ರಕರಣ ದಾಖಲಿಸಲಾಗಿದೆ. ದೇವಾಸ್ ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Leave A Reply