ವಿಶ್ವ ಆರ್ಥಿಕ ವೇದಿಕೆಯಲ್ಲೂ ಪತಂಜಲಿ ಆಚಾರ್ಯರಿಂದ ಯೋಗ ಶಿಬಿರ
ದೆಹಲಿ: ಭಾರತದ ಯೋಗ ಸಂಸ್ಕೃತಿಗೆ ಇಡೀ ವಿಶ್ವವೇ ಮಾರು ಹೋಗಿದೆ. ಇತ್ತೀಚೆಗೆ ಕಟ್ಟರ ಮುಸ್ಲಿಂ ರಾಷ್ಟ್ರ ಸೌದಿ ಕೂಡ ಯೋಗವನ್ನು ಅಳವಡಿಸಿಕೊಂಡಿತ್ತು. ಇದೀಗ ಯೋಗ ವಿಶ್ವ ಆರ್ಥಿಕ ವೇದಿಕೆಗೆ ಕಾಲಿಟ್ಟಿದೆ. ವಿಶ್ವ ಆರ್ಥಿಕ ವೇದಿಕೆಯ ಇತಿಹಾಸದಲ್ಲೆ ಪ್ರಥಮ ಬಾರಿಗೆ ಯೋಗ ಶಿಬಿರವನ್ನು ಏರ್ಪಡಿಸಲಾಗಿದೆ
ಪತಂಜಲಿ ಯೋಗ ಸಂಸ್ಥೆ ಮೂಲಕ ವಿಶ್ವದ್ಯಂತ ಯೋಗ ಶಕ್ತಿಯನ್ನು ಪಸರಿಸುತ್ತಿರುವ ಸ್ವಾಮಿ ಬಾಬಾ ರಾಮದೇವ್ ಅವರ ಶಿಷ್ಯರಾದ ಆಚಾರ್ಯ ಭಾರದ್ವಾಜ್ ಮತ್ತು ಆಚಾರ್ಯ ಸ್ಮಿತ್ ವಿಶ್ವ ಆರ್ಥಿಕ ವೇದಿಕೆಯಲ್ಲಿ ಯೋಗ ಶಿಬಿರ ನಡೆಸಿಕೊಡಲಿದ್ದಾರೆ.
ಜನವರಿ ಕೊನೆ ವಾರದಲ್ಲಿ ಯೋಗ ಶಿಬಿರ ಆರಂಭವಾಗಲಿದ್ದು, ಈ ಕುರಿತು ಬಾಬಾ ರಾಮ್ ದೇವ ಟ್ವಿಟರ್ ನಲ್ಲಿ ಆಚಾರ್ಯ ಭಾರದ್ವಾಜ್ ಮತ್ತು ಆಚಾರ್ಯ ಸ್ಮಿತ್ ಡೆವೋಸ್ ನಲ್ಲಿನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಯೋಗ ಶಿಬಿರ ನಡೆಸಿಕೊಡಲಿದ್ದಾರೆ ಎಂದು ಪ್ರಕಟಿಸಿದ್ದಾರೆ.
ಸ್ವೀಟ್ಜರ್ ಲ್ಯಾಂಡ್ ನಲ ಡೆವೋಸ್ ನಲ್ಲಿ ಜನೆವರಿ ಕೊನೆಯಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆ ಐದು ದಿನ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವ ಅರುಣ ಜೇಟ್ಲಿ, ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಸುರೇಶ್ ಪ್ರಭು, ರೈಲ್ವೆ ಸಚಿವ ಪಿಯೂಷ್ ಗೋಯಲ್, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭಾಗವಹಿಸಲಿದ್ದಾರೆ.
Leave A Reply