ಇಸ್ಲಾಮಿಗೆ ಮತಾಂತರವಾಗದ ಕಾರಣ ದಲಿತ ಕುಟುಂಬದ ಮೇಲೆ ಹಲ್ಲೆ, ಕೇಳೋರಿಲ್ಲವೇ ಅನ್ಯಾಯ?
ಚಂಡೀಗಡ: ದಲಿತರು ಎಂದರೆ ಇಡೀ ದೇಶಕ್ಕೇ ಕಾಳಜಿ. ಎಲ್ಲೇ ದಲಿತರ ಮೇಲೆ ಹಲ್ಲೆಯಾದರೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತದೆ. ದಮನೀತರು ಎಂಬ ಕಾರಣಕ್ಕೆ ಎಲ್ಲರೂ ಅವರನ್ನು ಬೆಂಬಲಿಸುವುದು ಸರಿಯೇ. ಆದರೆ ಹರಿಯಾಣದ ಈ ಒಂದು ಘಟನೆ ಮಾತ್ರ ದಲಿತರ ಹೆಸರಲ್ಲಿ ನಾಯಕರಾದವರ ಬಣ್ಣ ಬಯಲಾಗಿದೆ.
ಹರಿಯಾಣದ ಮೊಹಲೋಕದ ನಾಗಿನ ಬ್ಲಾಕ್ ನಲ್ಲಿ ದಲಿತ ಕುಟುಂಬವೊಂದು ಇಸ್ಲಾಮಿಗೆ ಮತಾಂತರಗೊಳ್ಳಲು ಒಪ್ಪಲಿಲ್ಲ ಎಂಬ ಒಂದೇ ಕಾರಣಕ್ಕೆ ಮುಸ್ಲಿಮರು ದಲಿತ ಕುಟುಂಬದ ಮೇಲೆ ಹಲ್ಲೆ ಮಾಡಿದ್ದರೂ, ದೇಶದ ಯಾವೊಬ್ಬ ದಲಿತ ನಾಯಕ, ಪ್ರಗತಿಪರ, ಬುದ್ಧಿಜೀವಿ ಧ್ವನಿಯೆತ್ತದೇ ಇರುವುದು ಇವರ ನಿಜವಾದ ಬಣ ಢಾಳಾಗುವಂತೆ ಮಾಡಿದೆ.
ಇತ್ತೀಚೆಗೆ ಮೇವಾತ್ ಜಿಲ್ಲೆಯಲ್ಲಿ ದಲಿತರನ್ನು ಇಸ್ಲಾಮಿಗೆ ಮತಾಂತರಗೊಳಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ, ನಾಗಿನ ಬ್ಲಾಕ್ ನಲ್ಲಿ ಮುಸ್ಲಿಮರು ಹಿಂದೂ ಕುಟುಂಬವನ್ನು ಮತಾಂತರಗೊಳಿಸಲು ಮುಂದಾಗಿದ್ದು, ದಲಿತರು ಅದಕ್ಕೆ ಒಪ್ಪಿಲ್ಲ.
ಇದರಿಂದ ಕುಪಿತರಾದ ಮುಸ್ಲಿಮರು ಹಗ್ಗ ಹಾಗೂ ದೊಣ್ಣೆಯಿಂದ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಬ್ಲಾಕಿನ ಜನ ತಿಳಿಸಿದ್ದಾರೆ. ಅಲ್ಲದೆ ಕಿಶನ್ ಎಂಬುವವರು ಒಬ್ಬ ಮಹಿಳೆ ಸೇರಿ ಐವರು ಮುಸ್ಲಿಮರಾದ ಇಸ್ಲಾಂ, ತೌಫಿಕ್, ಮೊಸ್ಸಿಂ, ಅತಾರು ಹಾಗೂ ಆಸ್ಮಿನಾ ಎಂಬುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಒಂದು ದಲಿತ ಕುಟುಂಬದ ಮೇಲೆ ಇಷ್ಟೆಲ್ಲ ಹಲ್ಲೆಯಾದರೂ, ಹಲ್ಲೆ ಮಾಡಿದವರು ಮುಸ್ಲಿಮರು ಎಂಬ ಕಾರಣಕ್ಕಾಗಿ ಯಾವೊಬ್ಬ ಪ್ರಗತಿಪರ, ಜೀವಪರರೂ ಈ ಕುರಿತು ಸೊಲ್ಲೆತ್ತದೇ ಇರುವುದು ದುರಂತವೇ ಸರಿ.
Leave A Reply