ಹಿಂದೂ ಧರ್ಮದ ಸಂಸ್ಕೃತಿಯಿಂದ ಪ್ರಭಾವಿತ, ತನ್ನ ಮಕ್ಕಳಿಗೆ ಹಿಂದೂ ಹೆಸರಿಟ್ಟ ಮುಸ್ಲಿಂ ವ್ಯಕ್ತಿ
ಲಖನೌ: ಹಿಂದೂ ಧರ್ಮ ವಿಶ್ವಕ್ಕೇ ಪ್ರಭಾವ ಬೀರಿದೆ ಎಂದರೆ ಅದರಲ್ಲಿ ಅತಿಶಯೋಕ್ತಿ ಅಲ್ಲ. ಸುಪ್ರೀಂ ಕೋರ್ಟೇ ಹಿಂದೂ ಒಂದು ಧರ್ಮ ಮಾತ್ರ ಅಲ್ಲ, ಅದೊಂದು ಜೀವನ ವಿಧಾನ ಎಂದು ಹೇಳಿದೆ.
ಈ ಮಾತಿಗೆ ಪೂರಕವಾಗಿ ಉತ್ತರ ಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮಕ್ಕಳಿಗೆ ಹಿಂದೂಗಳ ಹೆಸರಿಟ್ಟಿದ್ದು, ಹಿಂದೂ ಧರ್ಮದಿಂದ ಪ್ರಭಾವಿತನಾಗಿ ಹಿಂದೂಗಳ ಹೆಸರಿಟ್ಟಿದ್ದೇನೆ ಎಂದು ತಿಳಿಸಿದ್ದಾನೆ.
ಉತ್ತರ ಪ್ರದೇಶದ ಬಸ್ತಿಯಲ್ಲಿ ವಾಸವಿರುವ 65 ವರ್ಷದ ಬಾದಿಉಜ್ಜಾಮ ಸಿದ್ದಿಕಿ, ತನ್ನ ಇಬ್ಬರು ಮಕ್ಕಳಲ್ಲಿ ಮಗನಿಗೆ ಪಂಕಜ್ ಎಂದೂ ಹಾಗೂ ಮಗಳಿಗೆ ಪಾಲಕ್ ಎಂದು ಹೆಸರಿಟ್ಟಿದ್ದಾನೆ.
ವೃತ್ತಿಯಿಂದ ವಕೀಲನಾಗಿರುವ ಸಿದ್ದಿಕಿ ಅವಿಭಕ್ತ ಕುಟುಂಬದ ಮುಖ್ಯಸ್ಥನಾಗಿದ್ದು, ತನ್ನ ಸಂಬಂಧಿಕರಿಗೂ ಅನೂಪ್, ನೀರಜ್, ಅಲೋಕ್ ಹಾಗೂ ಅನಿಲ್ ಎಂದು ಹಿಂದೂಗಳ ಹೆಸರನ್ನೇ ಇಟ್ಟಿದ್ದಾನೆ.
ಇದಕ್ಕೆಲ್ಲ ಹಿಂದೂ ಧರ್ಮದ ಆಚರಣೆ, ಸಂಪ್ರದಾಯ, ಸೌಹಾರ್ದತೆ ಹಾಗೂ ಶ್ರೀಮಂತ ಸಂಸ್ಕೃತಿಯೇ ಕಾರಣ ಎಂದು ಸಿದ್ದಿಕಿ ತಿಳಿಸಿದ್ದು, ಕಳೆದ 40 ವರ್ಷಗಳಿಂದ ರಾಮಾಯಣ ಹಾಗು ಭಗವದ್ಗೀತೆ ಪಠಣ ಮಾಡುತ್ತಿದ್ದಾನೆ. ಹಾಗಂತ ಈತ ಮತಾಂತರವಾಗಿಲ್ಲ, ಇಸ್ಲಾಂ ಧರ್ಮ ವಿರೋಧಿಸುತ್ತಿಲ್ಲ. ಬದಲಾಗಿ ನಮಾಜಿನ ಜತೆಜತೆಗೇ ಭಗವದ್ಗೀತೆ ಪಠಣ ಮಾಡುತ್ತಿದ್ದಾನೆ.
ಒಬ್ಬ ಮುಸ್ಲಿಮನಾಗಿ ಇಷ್ಟೆಲ್ಲ ಮಾಡುತ್ತಿದ್ದರೂ, ಪುಣ್ಯವಶಾತ್ ಇದುವರೆಗೂ ಯಾವುದೇ ಮುಸ್ಲಿಂ ಧರ್ಮಗುರು ಫತ್ವಾ ಹೊರಡಿಸಿಲ್ಲ. ಹಿಂದೂ ಧರ್ಮದ ಆಚರಣೆ ಪಾಲಿಸುವ ಈ ಮುಸ್ಲಿಂ ವ್ಯಕ್ತಿಗೆ ನಮ್ಮದೊಂದು ನಮನವಿರಲಿ. ಜೈ ಹಿಂದ್.
Leave A Reply