ಪುರುಷರು ಚಡ್ಡಿ ಧರಿಸಿ ಆಡುವ ಫುಟ್ಬಾಲ್ ವೀಕ್ಷಿಸುವುದು ಮುಸ್ಲಿಂ ಮಹಿಳೆಯರಿಗೆ ನಿಷಿದ್ಧವಂತೆ!
ಲಖನೌ: ಒಂದೆಡೆ ಮುಸ್ಲಿಂ ಮಹಿಳೆಯರ ಜೀವನಕ್ಕೆ ಕಂಟಕಪ್ರಾಯವಾಗಿರುವ ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸಲು ಕೇಂದ್ರ ಸರ್ಕಾರ ಶತಪ್ರಯತ್ನ ಮಾಡುತ್ತಿದ್ದರೆ, ಇತ್ತ ಕೆಲ ಮುಸ್ಲಿಂ ಸಂಘಟನೆಗಳು ಮಾತ್ರ ತಮ್ಮ ಧರ್ಮದ ಮಹಿಳೆಯರನ್ನು ಹತ್ತಿಕ್ಕಲು ದಿನೇದಿನೆ ಪ್ರಯತ್ನಿಸುತ್ತಲೇ ಇವೆ.
ಇದಕ್ಕೆ ಸಾಕ್ಷಿಯಾಗಿ ದರುಲ್ ಉಲೂಮ್ ದಿಯೋಬಂದ್ ಬಂದ್ ಎಂಬ ಇಸ್ಲಾಮಿಕ್ ಸಂಸ್ಥೆಯೊಂದು ಆದೇಶ ಹೊರಡಿಸಿದ್ದು, ಅದರ ಪ್ರಕಾರ ಪುರಷರು ಮೊಣಕಾಲು ಕಾಣುವ ಹಾಗೆ ಚಡ್ಡಿ ಹಾಕಿಕೊಂಡು ಆಡುವ ಫುಟ್ ಬಾಲ್ ವೀಕ್ಷಿಸುವುದು ಮುಸ್ಲಿಂ ಮಹಿಳೆಯರಿಗೆ ನಿಷಿದ್ಧವಂತೆ.
ಈ ಕುರಿತು ಸಂಸ್ಥೆಯ ಮೌಲ್ವಿ ಮುಫ್ತಿ ಅತಾರ್ ಕಸ್ಮಿ ಫತ್ವಾ ಹೊರಡಿಸಿದ್ದು, ಇನ್ನು ಮುಂದೆ ಮುಸ್ಲಿಂ ಮಹಿಳೆಯರ್ಯಾರೂ ಪುರುಷರ ಫುಟ್ಬಾಲ್ ಆಟ ವೀಕ್ಷಿಸಬಾರದು ಎಂದು ಆದೇಶಿಸಿದ್ದಾರೆ.
ಪ್ರಾರ್ಥನಾ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕಸ್ಮಿ, “ನಿಮಗೆ ನಾಚಿಕೆಯಾಗುವುದಿಲ್ಲವೇ? ಪುರುಷರ ತೊಡೆ ನೋಡಿದರೆ ನಿಮಗೇನು ಲಾಭ? ಅಲ್ಲಾಹ್ ಎಂದರೆ ನಿಮಗೆ ಭಯವೇ ಇಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಆದರೆ ಸರ್ವಾಧಿಕಾರ ಇರುವ ಸೌದಿ ಅರೇಬಿಯಾದಲ್ಲೇ ಮುಸ್ಲಿಂ ಮಹಿಳೆಯರು ಫುಟ್ ಬಾಲ್ ನೋಡುವ ಹಕ್ಕು ಹೊಂದಿದ್ದಾರೆ. ಆದರೆ ಜಾತ್ಯತೀತ, ಸಹಿಷ್ಣುತೆಯ ರಾಷ್ಟ್ರವಾದ ಭಾರತದಲ್ಲೇ ಮುಸ್ಲಿಂ ಮಹಿಳೆಯರಿಗೆ ಫುಟ್ ಬಾಲ್ ನೋಡಬಾರದು ಎಂದು ಆದೇಶ ಹೊರಡಿಸುವುದು ಎಷ್ಟು ಸರಿ? ಇದು ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡಂತಲ್ಲವೇ?
ದುರದೃಷ್ಟವಶಾತ್, ಮುಸ್ಲಿಂ ಮಹಿಳೆಯರಿಗೆ ಇಷ್ಟೆಲ್ಲ ಅನ್ಯಾಯವಾಗುತ್ತಿದ್ದರೂ, ಯಾವ ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ, ಜೀವಪರರು, ಪ್ರಗತಿಪರರು ಸೊಲ್ಲೆತ್ತದೇ ಇರುವುದು ಖಂಡನೀಯವಾಗಿದೆ.
Leave A Reply