ಜಮ್ಮು-ಕಾಶ್ಮೀರ ಗಡಿಯಲ್ಲಿ 2 ವರ್ಷದಲ್ಲಿ 94 ನಾಲ್ಕು ಒಳನುಸುಳುಕೋರರ ಉಗ್ರರ ಸಂಹಾರ!
ಶ್ರೀನಗರ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ ಜಮ್ಮು-ಕಾಶ್ಮೀರದಲ್ಲಿ ರಾಜ್ಯ ಸರ್ಕಾರಕ್ಕೆ ಸ್ವಾತಂತ್ರ್ಯ ಹಾಗೂ ಸೇನೆಗೆ ಪ್ರತಿದಾಳಿಯ ಅಧಿಕಾರ ನೀಡಿದ ಬಳಿಕ ಉಗ್ರರ ಸಂಹಾರ ಅಧಿಕವಾಗಿದ್ದು, 2017ರಲ್ಲೇ 215 ಉಗ್ರರನ್ನು ಹತ್ಯೆ ಮಾಡುವ ಮೂಲಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲಾಗಿದೆ.
ಈಗ ಒಳನುಸುಳುಕೋರರ ದಾಳಿ ಕುರಿತು ರಾಜ್ಯ ಸರ್ಕಾರ ಮಾಹಿತಿ ನೀಡಿದ್ದು, ಕಳೆದ 2 ವರ್ಷದಲ್ಲಿ ಜಮ್ಮು-ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಒಳನುಸುಳಲು ಯತ್ನಿಸಿದ 94 ಪಾಕಿಸ್ತಾನಿ ಉಗ್ರರನ್ನು ಸೇನೆ ಹತ್ಯೆ ಹಾಗೂ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ.
ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ರಾಜೇಶ್ ಗುಪ್ತಾ ಕೇಳಿದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿರುವ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, “2016ರಲ್ಲಿ 35 ಹಾಗೂ 2017ರಲ್ಲಿ 59 ಉಗ್ರರನ್ನು ಒಳನುಸುಳಲು ಯತ್ನಿಸಿದಾಗ ದಾಳಿ ಮಾಡಿ ಹತ್ಯೆಗೈಯಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಇಷ್ಟಾದರೂ ಪಾಕಿಸ್ತಾನ ಉಪಟಳ ಮಾಡಿದ್ದು, ಉಗ್ರರ ದಾಳಿಯಲ್ಲಿ 25 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಹಾಗೂ 162 ಸಾರ್ವಜನಿಕರು ಗಾಯಗೊಂಡಿದ್ದಾರೆ. ಆದರೂ ನಾವು ಪಾಕಿಸ್ತಾನದ ಕುತಂತ್ರ ಮಟ್ಟಹಾಕಲು ಈ ವರ್ಷವೂ ಸನ್ನದ್ಧರಾಗಿದ್ದೇವೆ ಎಂದು ಮುಫ್ತಿ ತಿಳಿಸಿದ್ದಾರೆ.
Leave A Reply