ನರ ಬಲಿಗಾಗಿ ಕಾಯುತ್ತಿದೆ ಗುರುಪುರ ಸೇತುವೆ?
ಹೌದು,ಮಂಗಳೂರು-ಮೂಡಬಿದ್ರೆ-ಕಾರ್ಕಳದ ಮುಖ್ಯ ರಸ್ತೆಯಲ್ಲಿ ನಮಗೆ ಸಿಗುವಂತಹ ದೊಡ್ಡದಾದ ಸೇತುವೆ.ದಿನನಿತ್ಯ ಸಾವಿರಾರು ವಾಹನಗಳು ಈ ಸೇತುವೆ ಮೂಲಕವೇ ಸಂಚರಿಸುತ್ತದೆ. ಆದರೆ ಈ ಸೇತುವೇಯೇ ಈಗ ಕುಸಿಯುವ ಹಂತದಲ್ಲಿರುವುದು ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯ ವನ್ನು ಎದ್ದು ತೋರಿಸುತ್ತಿದೆ.
ಇದು ನನ್ನ ಸ್ವಂತ ಅನುಭವಮೂಡಬಿದ್ರೆಯಿಂದ ಮಂಗಳೂರಿಗೆ ದಿನನಿತ್ಯ ನಾನು ನನ್ನ ಕೆಲಸದ ನಿಮಿತ್ತ ಬಸ್ಸಿನಲ್ಲಿ ಈ ರಸ್ತೆಯಲ್ಲಿಯೇ ಸಂಚರಿಸುತ್ತೇನೆ.ಈ ಸೇತುವೆಯ ಮಧ್ಯದಲ್ಲೊಂದು ಗುಂಡಿ ಬಿದ್ದಿರುವುದು ನೀವೆಲ್ಲರೂ ಗಮನಿಸಿರಬಹುದು.ಮೊನ್ನೆ ಒಂದು ದಿನ ಬಸ್ಸಿನಲ್ಲಿ ಸಂಚರಿಸುತ್ತಿದ್ದಾಗ ಬಸ್ಸಿನ ಹಿಂಬದಿ ಚಕ್ರವು ಈ ಗುಂಡಿಗೆ ಬಿದ್ದು ಮೇಲೆ ಎದ್ದಾಗ ಸೇತುವೆಯ ಬದಿಯ ಕಬ್ಬಿಣದ ಸರಳುಗಳು(ಕಂಬಿಗಳು) ಒಮ್ಮೆಲೆ ಅಲುಗಾಡತೊಡಗಿದ್ದನ್ನು ಕಂಡು ನನಗೆ ಭಯವಾಯಿತು.ಅಪಘಾತ ಸಂಭವಿಸುವ ಮೊದಲೇ ಅಧಿಕಾರಿಗಳು ಇತ್ತಕಡೆ ಗಮನಹರಿಸಿದರೆ ಉತ್ತಮ.ದಿನನಿತ್ಯ ಅದೆಷ್ಟೋ ಶಾಲಾ ವಾಹನಗಳು ಈ ಸೇತುವೆಯ ಮೂಲಕವೇ ಹೋಗಿ ಬರುತ್ತವೆ.
ಏನಿದು ಸ್ವಾಮಿ,
ಏನಾದರೊಂದು ಅವಘಡ ಸಂಭವಿಸಿದರೆ ಮಾತ್ರ ಸಂಬಂಧ ಪಟ್ಟ ಜನಪ್ರತಿನಿಧಿಗಳು ಅಧಿಕಾರಿಗಳು ಎಚ್ಚೆತ್ತುಕೊಳ್ಳಬಹುದೇನೋ.???
Leave A Reply