ಏಷಿಯಾದಲ್ಲೆ ಅರುಣಾಚಲದ ಭುಮ್ಜಾ ಗ್ರಾಮ ಶ್ರೀಮಂತ, ಮೋದಿಗೆ ಧನ್ಯವಾದ ಎಂದ ಜನ

ಗುವಾಹಟಿ: ಅರುಣಾಚಲ ಪ್ರದೇಶದ ಭುಮ್ಜಾ ಗ್ರಾಮ ಏಷಿಯಾದಲ್ಲೆ ಅತ್ಯಂತ ಶ್ರೀಮಂತ ರಾಷ್ಟ್ರವಾಗಿದ್ದು, ಭುಮ್ಜಾ ಗ್ರಾಮದ ಜನರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ.
ಇತ್ತೀಚೆಗೆ ಭುಮ್ಜಾ ಗ್ರಾಮದ ಪ್ರದೇಶವನ್ನು ಸೈನಿಕ ನೆಲೆ ಸ್ಥಾಪಿಸಲು ರಕ್ಷಣಾ ಇಲಾಖೆಗೆ ಖರೀದಿಸಲಾಗಿತ್ತು. ಇದೀಗ ಇಡೀ ಗ್ರಾಮಕ್ಕೆ ಹಣವನ್ನು ಕೇಂದ್ರ ಸರ್ಕಾರ ನೀಡಿದೆ. ಇದರಿಂದ ಭುಮ್ಜಾ ಗ್ರಾಮ ಏಷಿಯಾದಲ್ಲೇ ಶ್ರೀಮಂತ ಗ್ರಾಮವಾಗಿ ಹೊರ ಹೊಮ್ಮಿದೆ.
ಗ್ರಾಮಕ್ಕೆ ಒಟ್ಟು 40,80,38,400 ರೂಪಾಯಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಭೂಮಿ ಕಳೆದುಕೊಂಡವರಿಗೆ ಸೂಕ್ತ ನೆಲೆ ಒದಗಿಸಿ, ಭೂಮಿಗೆ ತಕ್ಕ ಮತ್ತು ಭವಿಷ್ಯಕ್ಕೆ ಬೇಕಾದ ಸೂಕ್ತ ಸೌಲಭ್ಯಗಳನ್ನು ಪಡೆಯಲು ಅವಶ್ಯ ಪರಿಹಾರ ಧನವನ್ನು ಕೇಂದ್ರ ಸರ್ಕಾರ ನೀಡಿದೆ.
ಭುಮ್ಜಾ ಗ್ರಾಮದ 31 ಕುಟುಂಬಗಳ 200.056 ಭೂಮಿಯನ್ನು ರಕ್ಷಣಾ ಇಲಾಖೆ ಖರೀದಿಸಿತ್ತು. ಇದೀಗ ಕೇಂದ್ರ ಸರ್ಕಾ-ರ ಹಣ ನೀಡಿರುವುದರಿಂದ ಗ್ರಾಮಸ್ಥರೆಲ್ಲರೂ ಕೋಟ್ಯಧೀಪತಿಗಳಾಗಿದ್ದಾರೆ. ಪ್ರತಿ ಕುಟುಂಬದ ಭೂಮಿಗೆ 2.44ಕೋಟಿ ಮತ್ತು ಹೆಚ್ಚುವರಿಯಾಗಿ 6.73 ಕೋಟಿಯ ಭಾರಿ ಮೊತ್ತವನ್ನು ಕೇಂದ್ರ ಸರ್ಕಾರ ಗ್ರಾಮಸ್ಥರಿಗೆ ನೀಡಿದೆ. ಇದೀಗ ಏಷಿಯಾದಲ್ಲೇ ಇಡೀ ಗ್ರಾಮದ ಪ್ರತಿಯೊಬ್ಬರು ಕೋಟ್ಯಧಿಪತಿಗಳಾಗಿರುವ ಗ್ರಾಮವಾಗಿ ಭುಮ್ಜಾ ಹೊರಹೊಮ್ಮಿದೆ.
ಪಡೆದ ಭೂಮಿಗೆ ತಕ್ಕ ಬೆಲೆ ನೀಡಿ, ರಾಜ್ಯದ ಅಭಿವೃದ್ಧಿ ಪೂರಕವಾಗುವಂತೆ ಕಾರ್ಯ ನಿರ್ವಹಿಸುತ್ತಿರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರಾಮಸ್ಥರು ಧನ್ಯವಾದಗಳನ್ನು ಹೇಳಿದ್ದಾರೆ. ಅರುಣಾಚಲ ಮುಖ್ಯಮಂತ್ರಿ ಪ್ರೇಮ ಕಂಡು ಸೋಮವಾರ ಗ್ರಾಮಸ್ಥರು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ವಿತರಿಸಿದರು. ಅಲ್ಲದೇ ಕೇಂದ್ರ ಸರ್ಕಾರ ನೀಡಿದ ಮಾತಿಗೆ ತಕ್ಕಂತೆ ಹಣ ನೀಡಿದ್ದನ್ನು ಶ್ಲಾಘಿಸಿದರು.
Leave A Reply