ಹಿಂದೂ ಯುವಕನ ಅಪಹರಣ, ಹಣಕ್ಕಾಗಿ ಬೇಡಿಕೆ, ನೀಡದಕ್ಕೆ ಸಾಯಿಸಿಯೇ ಬಿಟ್ಟ ಮುಸ್ಲಿಂ ಯುವಕರು!
ಕೋಲ್ಕತ್ತಾ: ಒಂದೆಡೆ ಲವ್ ಜಿಹಾದ್, ಇನ್ನೊಂದೆಡೆ ಬಲವಂತದ ಮತಾಂತರಕ್ಕೆ ಸಿಲುಕಿ ಹಿಂದೂಗಳು ಪರಿತಪಿಸುತ್ತಿದ್ದಾರೆ. ಇದರ ನಡುವೆಯೇ ಹಿಂದೂ ಯುವಕನನ್ನು ಅಪಹರಣ ಮಾಡಿದ್ದ ಮೂವರು ಮುಸ್ಲಿಂ ಯುವಕರು ಕುಟುಂಬಸ್ಥರು ಹಣ ನೀಡಲಿಲ್ಲ ಎಂದು ಯುವಕನನ್ನೇ ಕೊಂದಿದ್ದಾರೆ.
ಹೌದು, ಪಶ್ಚಿಮ ಬಂಗಾಳದ ಉತ್ತರ ಪರಗಣಾಸ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಜನವರಿ 20ರಿಂದ ನಾಪತ್ತೆಯಾಗಿದ್ದ 12ನೇ ತರಗತಿ ವಿದ್ಯಾರ್ಥಿಯ ಶವ ನೈಹಾತಿಯ ಜುಬಿಲಿ ಬ್ರಿಡ್ಜ್ ನದಿಯಲ್ಲಿ ಪತ್ತೆಯಾಗಿದೆ.
ಕುಟುಂಬಸ್ಥರ ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಮೂವರು ಮುಸ್ಲಿಮರನ್ನು ಬಂಧಿಸಿದ್ದು, ಅವರನ್ನು ಸರ್ಫರಾಜ್, ವಾಕಿಲ್ ಹಾಗೂ ಜಾಹೀದ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕೊಲೆ ಮಾಡಿರುವುದಾಗಿ ಒಪ್ಪಿದ್ದಾರೆ.
ನನ್ನ ಸಹೋದರ ಟ್ಯೂಷನ್ಗೆ ಹೋಗಲು ತಯಾರಾಗುತ್ತಿದ್ದ. ಆಗ ಈ ಮೂವರು ಬಂದು ಆತನನ್ನು ಹೊರಗಡೆ ಕರೆದುಕೊಂಡು ಹೋದರು. ಆಗ ಸಂಜೆ ಸುಮಾರು 5 ಗಂಟೆಯಾಗಿತ್ತು. ಆದರೆ 8 ಗಂಟೆಯಾದರೂ ನನ್ನ ಅಣ್ಣ ಮನೆಗೆ ಬರಲಿಲ್ಲ. 8.45 ನಿಮಿಷಕ್ಕೆ ಮನೆಯ ಫೋನಿಗೆ ಕರೆ ಬಂತು. ನಿಮ್ಮ ಅಣ್ಣ ಅಭಿಷೇಕ್ ಚೌಬೇಯನ್ನು ಅಪಹರಿಸಿದ್ದು, ಆತ ಜೀವಂತವಾಗಿ ಬೇಕಿದ್ದರೆ 10 ಲಕ್ಷ ರೂ. ನೀಡಲು ಬೇಡಿಕೆ ಇಟ್ಟಿದ್ದರು ಎಂದು ಅಭಿಷೇಕ್ ಸಹೋದರಿ ಮಾಹಿತಿ ನೀಡಿದ್ದಾರೆ.
ಇದರಿಂದ ಭಯಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಆರೋಪಿಗಳು ಮತ್ತೆ ಕರೆ ಮಾಡಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಒಂದು ಸಲ ಅಭಿಷೇಕ್ ಜತೆ ಮಾತನಾಡಲು ಇಚ್ಛಿಸಿದ್ದಕ್ಕೆ ಹಣದ ಮೊತ್ತ 15 ಲಕ್ಷ ರೂಪಾಯಿಗೆ ಏರಿಕೆ ಮಾಡಿದ್ದಾರೆ. ಅದಕ್ಕೂ ಕುಟುಂಬಸ್ಥರು ಒಪ್ಪಿದ್ದರು ಎಂದು ತಿಳಿದುಬಂದಿದೆ.
ಏತನ್ಮಧ್ಯೆಯೇ ಕುಟುಂಬಸ್ಥರನ್ನು ಆ ಜಾಗಕ್ಕೆ ಬನ್ನಿ, ಇಲ್ಲಿಗೆ ದುಡ್ಡು ತೆಗೆದುಕೊಂಡು ಬನ್ನಿ ಎಂದು ವಿನಾಕಾರಣ ಅಲೆದಾಡಿಸಿದ್ದು, ಅಲ್ಲಿಗೆ ಹೋದರೆ ಯಾರೂ ಇರುತ್ತಿರಲಿಲ್ಲ. ಕೊನೆಗೆ ಮೊಬೈಲ್ ನೆಟ್ ವರ್ಕ್ ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಕೊಲೆ ಮಾಡಿರುವುದಾಗಿಯೂ, ನದಿಗೆ ಬಿಸಾಕಿರುವುದಾಗಿಯೂ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Leave A Reply