ತ್ರಿವರ್ಣ ಧ್ವಜಕ್ಕೆ ಗೌರವ ನೀಡಿದ ಪಾಕ್ ಕ್ರಿಕೆಟಿಗ ಆಫ್ರೀದಿ, ಇದಲ್ಲವೇ ಕ್ರೀಡಾ ಸ್ಫೂರ್ತಿ
ಸೆಂಟ್ ಮಾರಿಟೇಜ್: ಭಾರತದ ಸಾಂಪ್ರದಾಯಿಕ ವೈರಿ ರಾಷ್ಟ್ರ ಪಾಕಿಸ್ತಾನ ಕ್ರಿಕೆಟ್ ಆಟಗಾರ, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಶಾಹೀದ್ ಆಫ್ರೀದಿ ಭಾರತದ ರಾಷ್ಟ್ರಧ್ವಜಕ್ಕೆ ಗೌರವ ನೀಡುವ ಮೂಲಕ ಭಾರತೀಯರ ಹೃದಯ ಗೆದ್ದಿದ್ದಾರೆ.
ಮಾರಿಟೇಜ್ ನಲ್ಲಿ ನಡೆದ ಕ್ರಿಕೆಟ್ ಟೂರ್ನಾಮೆಂಟ್ ಉದ್ಘಾಟನೆಯಲ್ಲಿ ಭಾಗವಹಿಸಲು ಆಗಮಿಸಿದ ಆಫ್ರೀದಿ ಅಭಿಮಾನಿಗಳತ್ತ ಕೈ ಬಿಸಿ, ಸೆಲ್ಫೀಗೆ ಫೋಸ್ ಕೊಡುವಾಗ ತ್ರಿವರ್ಣ ಧ್ವಜ ಹಿಡಿದ ಭಾರತೀಯ ಮಹಿಳೆಯೊಬ್ಬರ ಬಳಿ ಬಂದ ಆಫ್ರೀದಿ ಸೆಲ್ಫೀಗೆ ಫೋಸ್ ಕೊಡುವಾಗ ಧ್ವಜವನ್ನು ನೇರವಾಗಿ ಹಿಡಿಯಿರಿ ಎಂದು ಸಲಹೆ ನೀಡಿ ನಂತರ ಸೆಲ್ಫಿಗೆ ಫೋಸ್ ನೀಡಿದ್ದಾರೆ. ಈ ವಿಡಿಯೋವನ್ನು ಇನ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದು, ಆಫ್ರೀದಿ ಸರಳತನ ಕೋಟ್ಯಂತರ ಅಭಿಮಾನಿಗಳ ಶ್ಲಾಘನೆಗೆ ಕಾರಣವಾಗಿದೆ.
ಮಾರಿಟೇಜ್ ನಲ್ಲಿ ನಡೆದ ಕ್ರಿಕೆಟ್ ಟೂರ್ನಾಮೆಂಟ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ಸೇರಿ ನಾನಾ ರಾಷ್ಟ್ರಗಳ ಕ್ರಿಕೆಟ್ ಅಭಿಮಾನಿಗಳು ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
‘ನಾವು ಕ್ರಿಕೆಟರ್ ಗಳು ಎರಡು ರಾಷ್ಟ್ರಗಳ ಸಂಬಂಧವನ್ನು ಮೀರಿ ಬೆಳೆದಿರುತ್ತೇವೆ. ಅಲ್ಲದೇ ಎರಡು ರಾಷ್ಟ್ರಗಳ ಉತ್ತಮ ಸಂಬಂಧಕ್ಕೆ ಮುನ್ನುಡಿ ಬರೆಯುತ್ತೇವೆ. ನನ್ನ ಪ್ರಕಾರ ಪಾಕಿಸ್ತಾನ ಬಿಟ್ಟರೇ ನಮ್ಮ ಅತಿ ಹೆಚ್ಚು ಅಭಿಮಾನಿಗಳು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಅನ್ನ, ನೀರು, ಗಾಳಿ ಸೇವಿಸಿ ರಾಷ್ಟ್ರದ ವಿರುದ್ಧ ಘೋಷಣೆ ಕೂಗುವುದು, ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದು ಮಾಡುವ ವ್ಯಕ್ತಿಗಳು ದೇಶದಲ್ಲಿರುವಾಗ ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಆಫ್ರಿದಿ ವ್ಯಕ್ತಿತ್ವ ಭಿನ್ನವಾಗಿ ನಿಲ್ಲುತ್ತಾರೆ.
Leave A Reply