ಚುನಾವಣೆಯ ಹೊಸ್ತಿಲಲ್ಲಿ ಪೂಜಾರಿಯವರ ಹೆಸರು, ಫೋಟೊ ದುರ್ಬಳಕೆ ಮಾಡಿದವರ್ಯಾರು?
ಭ್ರಷ್ಟಾಚಾರ ರಹಿತ, ಕಳಂಕರಹಿತ ರಾಜಕಾರಣಿ ಜನಾರ್ಧನ ಪೂಜಾರಿಯವರ ಕಾಲು ಹಿಡಿದು ಆರ್ಶೀವಾದ ಕೋರಿದವರು ಅವರನ್ನು ಈ ರೀತಿ ಬಳಸುತ್ತಾರೆ ಎಂದರೆ ಬಹುಶ: ಬಿಲ್ಲವರಿಗೆನೆ ಬೇಸರ ಮೂಡಬಹುದು. ಜನಾರ್ಧನ ಪೂಜಾರಿಯವರು ನೋವಿನಲ್ಲಿ ಮಾತನಾಡುತ್ತಿದ್ದ ಫೋಟೋವೊಂದನ್ನು ತಮ್ಮ ಸ್ವಾರ್ಥಕ್ಕೆ ಈ ಸಮಯದಲ್ಲಿ ಯಾರಾದರೂ ಉಪಯೋಗಿಸುತ್ತಿದ್ದಾರೆ ಎಂದರೆ ಸ್ವತ: ಪೂಜಾರಿಯವರಿಗೆನೆ ಮರುಕ ಉಂಟಾಗಬಹುದು. ಇನ್ನು ಪಕ್ಷ ಯಾವುದೇ ಇರಲಿ ಜನಾರ್ಧನ ಪೂಜಾರಿಯವರ ಬಗ್ಗೆ ಕನಸಿನಲ್ಲಿಯೂ ಯಾರೂ ಕೂಡ ಹಗುರವಾಗಿ ಮಾತನಾಡಲಾರರು. ಹಾಗಿರುವಾಗ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಫೋಟೊ ಬಳಸಿ ಅವರು ಪೂಜಾರಿಯವರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎನ್ನುವ ಭಾವನೆ ಬರುವ ಹಾಗೆ ಮಾಡಿರುವುದು ನಮ್ಮ ಜಿಲ್ಲೆಗೆ ಶೋಭೆ ತರುವಂತದ್ದಲ್ಲ. ಹೀಗೆಲ್ಲ ಮಾಡಿ ಬಿಜೆಪಿಯನ್ನು ನಾವು ಸೋಲಿಸುತ್ತೇವೆ ಎಂದು ಹೊರಡುತ್ತಾರಲ್ಲ ಅವರಿಗೆ ಶರತ್ ಮಡಿವಾಲ, ದೀಪಕ್ ರಾವ್, ಪ್ರಶಾಂತ್ ಪೂಜಾರಿ ಸಹಿತ ಹಿಂದೂ ಕಾರ್ಯಕರ್ತರ ಕೊಲೆಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ನೈತಿಕತೆ ಕೂಡ ಉಳಿಯುವುದಿಲ್ಲ.
ನಾವು ಧರ್ಮದ ಪರವಾಗಿದ್ದೇವೆ ಎಂದು ತೋರಿಸುವ ಕಾಲಘಟ್ಟದಲ್ಲಿ….
ಈ ಬಾರಿಯ ವಿಧಾನಸಭಾ ಚುನಾವಣೆ ದುಷ್ಟ ಆಡಳಿತ ಮತ್ತು ಶಿಷ್ಟ ರಕ್ಷಣೆಯ ನಡುವಿನ ಸಮರ. ನಾವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರು ದುಷ್ಟ ಆಡಳಿತದ ಪರ ಇದ್ದೆವೋ ಅಥವಾ ಮುಂದೆ ಬರುವ ಶಿಷ್ಟ ರಕ್ಷಣೆಯ ಸರಕಾರದ ಪರ ಇದ್ದೇವೋ ಎಂದು ಇವತ್ತು ನಿರ್ಧಾರ ಮಾಡಬೇಕು. ನಾವು ಗೋಹತ್ಯಾ ಪರ ಇರುವ ಸರಕಾರದ ಪರ ಇದ್ದೇವೋ ಅಥವಾ ಗೋವನ್ನು ತಾಯಿ ಎಂದು ಪೂಜಿಸುವವರ ಪರ ಇದ್ದೇವೋ ಎಂದು ಗ್ಯಾರಂಟಿ ಮಾಡಿಕೊಳ್ಳಬೇಕು. ನಾವು ದಕ್ಷ ಪೊಲೀಸ್ ಅಧಿಕಾರಿಗಳನ್ನು ಹಿಂಸಿಸಿ ಸಾಯಲು ಕಾರಣರಾದವರ ಪರ ಇದ್ದೇವೋ ಅಥವಾ ದಕ್ಷ ಪೊಲೀಸ್ ಅಧಿಕಾರಿಗಳಿಗೆ ನೈತಿಕ ಸ್ಥೈರ್ಯ ಕೊಡುವವರ ಪರ ಇದ್ದೆವೋ ಎಂದು ಆತ್ಮಾವಲೋಕನ ಮಾಡಬೇಕು. ಮಾಂಸ ತಿಂದು ದೇವಸ್ಥಾನಕ್ಕೆ ಪ್ರವೇಶಿಸುತ್ತೇನೆ, ಏನಾಗುತ್ತದೆ ಎನ್ನುವವರ ಪರ ಇದ್ದೇವೋ ಅಥವಾ ಉಪವಾಸ ಮಾಡಿ ದೇವರ ಪೂಜೆಯ ನಂತರ ಉಪಹಾರ ಸೇವಿಸುವವರ ಪರ ಇದ್ದೇವೋ ಎನ್ನುವುದನ್ನು ಇವತ್ತೇ ಗ್ಯಾರಂಟಿ ಮಾಡಿಕೊಳ್ಳಬೇಕು. ಹಿಂದೂ ಧರ್ಮ ಒಡೆದು ತಮ್ಮ ಮತಬ್ಯಾಂಕ್ ಹೆಚ್ಚಳ ಮಾಡುವವರ ಪರ ಇದ್ದೇವೋ ಅಥವಾ ಹಿಂದೂ ಧರ್ಮದ ಒಗ್ಗಟ್ಟನ್ನು ಸಾರುವವರ ಪರ ಇದ್ದೇವೋ ಎನ್ನುವುದನ್ನು ಇವತ್ತೆ ನಿಶ್ಚಯಿಸಿಬಿಡಬೇಕು. ಹೇಳಲು ಹೋದರೆ ತುಂಬಾ ಇದೆ. ಆದರೆ ಚುನಾವಣೆಯ ಹೊಸ್ತಿಲಲ್ಲಿ ನಿಂತಾಗ ಕಾಂಗ್ರೆಸ್ಸಿಗರು ತೆಗೆದಿರುವ ಜಾತಿ ಕಾರ್ಡ್ ಅನ್ನು ನೋಡಿ ಕೆಲವೇ ನಿಮಿಷಗಳ ಅತೃಪ್ತ ಆತ್ಮಗಳ ಕೋಪ ಕಳೆದ ಐದು ವರ್ಷಗಳ ಸಿದ್ಧರಾಮಯ್ಯನವರ ಆಡಳಿತದಲ್ಲಿ ರೈತರ ದಾಖಲೆಯ ಆತ್ಮಹತ್ಯೆ ಪ್ರಕರಣಗಳು, ಒಂದು ಕಿಲೋ ಮೀಟರ್ ರಸ್ತೆಗೆ ಚಂದ್ರಲೋಕಕ್ಕೆ ಹೋಗಿರುವುದಕ್ಕಿಂತಲೂ ಹೆಚ್ಚು ಖರ್ಚು ಮಾಡಿದ್ದು, ಇಂದಿರಾ ಕ್ಯಾಂಟೀನ್ ಗೋಲ್ ಮಾಲ್ ಎಲ್ಲವನ್ನು ಒಂದೇ ಗಂಟಿನಲ್ಲಿ ಪಕ್ಕಕ್ಕೆ ಸರಿಸಿ ಕೊನೆಗೆ ಜಾತಿಯೇ ಮುಖ್ಯ ಎನ್ನುವುದನ್ನು ಬಿಲ್ಲವರ ಹಣೆಗೆ ಕಾಂಗ್ರೆಸ್ಸಿಗರು ಬ್ರಾಂಡ್ ಮಾಡಿಬಿಡುತ್ತಾರೋ ಎನ್ನುವ ಆತಂಕ ಉಂಟಾಗುತ್ತಿದೆ.
ಈಗ ಪೂಜಾರಿ ಬೇಕಾಯಿತಾ…
ಜನಾರ್ಧನ ಪೂಜಾರಿಯವರು ಕೇವಲ ಬಿಲ್ಲವ ನಾಯಕರಲ್ಲ. ಅವರು ಎಲ್ಲಾ ಜಾತಿ, ಧರ್ಮ ಮೀರಿ ಬೆಳೆದ ನಾಯಕರು. ಅದಕ್ಕಾಗಿ ಅವರು ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಮಾಡುತ್ತಿದ್ದ ದುರಾಡಳಿತವನ್ನು ಪದೇ ಪದೇ ಖಂಡಿಸುತ್ತಾ ಬಂದವರು. ಅವರಲ್ಲಿ ಆ ನೈತಿಕತೆ ಯಾವತ್ತೂ ಇದೆ. ಅವರು ತಪ್ಪು ಮಾಡಿದಾಗ ಕಿವಿ ಹಿಂಡುತ್ತಾರೆ ಎನ್ನುವ ಕಾರಣಕ್ಕೆ ಅವರನ್ನು ಹಿಂದಿನಿಂದ ಕೆಟ್ಟ ಭಾಷೆಯಿಂದ ಕಾಂಗ್ರೆಸ್ಸಿಗರು ಬೈದಾಗ ಬಿಲ್ಲವರು ಬೇಸರಗೊಂಡಿದ್ದರು. ಕರಾವಳಿಯಲ್ಲಿ ಕಾಂಗ್ರೆಸ್ಸನ್ನು ಕಟ್ಟಿ ಬೆಳೆಸಿದ ಪೂಜಾರಿಯವರನ್ನೇ ಕಾಂಗ್ರೆಸ್ ಕಚೇರಿಗೆ ಕಾಲಿಡದಂತೆ ಮಾಡಿದಾಗ ಆಗ ಬಿಲ್ಲವರಿಗೆ ನೋವಾಗಿತ್ತು. ವೇದಿಕೆಗಳಲ್ಲಿ ಪೂಜಾರಿಯವರು “ನನ್ನ ತಾಯಿಯನ್ನು ಬೈದರು” ಎಂದು ಸಣ್ಣ ಮಗುವಿನಂತೆ ಮುಗ್ಧವಾಗಿ ಅತ್ತಾಗ ಬಿಲ್ಲವರ ಕಣ್ಣಲ್ಲಿಯೂ ನೀರು ಇಳಿದಿತ್ತು. ಇದೆಲ್ಲ ಆದ ಸತ್ಯ ಘಟನೆಗಳು. ಅದಕ್ಕೆ ಬಿಲ್ಲವ ಸಮಾಜ ಈ ಬಾರಿ ಉತ್ತರ ಕೊಡುತ್ತೇ ಎಂದು ಗೊತ್ತಾದ ಕೂಡಲೇ ಅದೇ ಪೂಜಾರಿಯವರ ಮನೆ ಯಾವ ದಿಕ್ಕಿನಲ್ಲಿ ಇದೆ ಎಂದು ಗೊತ್ತಿಲ್ಲದವರು ಕೂಡ ವೋಟ್ ಬ್ಯಾಂಕಿಗಾಗಿ ಮನೆ ಹುಡುಕಿ ಕಾಲಿಗೆ ಬಿದ್ದು ಫೊಟೋ ತೆಗೆಸಿಬಂದರು. ಇದನ್ನು ಕೂಡ ಬಿಲ್ಲವ ಸಮಾಜ ನೋಡುತ್ತಿದೆ. ಈಗ ಅದೇ ಪೂಜಾರಿಯವರು ಹೇಳಲೇ ಇಲ್ಲದ ಒಂದು ಹೇಳಿಕೆಯನ್ನು ಬರೆದು, ಸುಳ್ಳು ಸುದ್ದಿ ಪೋಣಿಸಿ ಕರಾವಳಿಯ ಮನೆಮನೆಯ ಪ್ರಖ್ಯಾತ ಪತ್ರಿಕೆ ಉದಯವಾಣಿಯ ಹೆಸರನ್ನು ಇಟ್ಟುಕೊಂಡು ಫೋಟೋಶಾಪ್ ಮಾಡಿ ಕೆಲವರು ಪ್ರಿಂಟ್ ಮಾಡಿ ಅದನ್ನು ಸಾಮಾಜಿಕ ತಾಣಗಳಲ್ಲಿ ಹರಡಿಸುತ್ತಿದ್ದಾರೆ.
ಕೋಟಿ ಚೆನ್ನಯ್ಯ ಅವರನ್ನು ದೈವದೇವರೆಂದು ಪೂಜಿಸುವ ನಾಡು ನಮ್ಮದು. ಅಂತಹ ಶ್ರೇಷ್ಟ ಕುಲದಲ್ಲಿ ಹುಟ್ಟಿದವರು ಹೀಗೆ ಹೊಲಸು ಕೆಲಸ ಮಾಡಲಾರರು. ಇದ್ಯಾವುದೋ ಪಾಕಿಸ್ತಾನದ ತಂದೆಗೆ ಹುಟ್ಟಿದವರು ಮಾಡಿದ ಹೀನ ಕೃತ್ಯ. ಕಟೀಲು ದುರ್ಗಾಪರಮೇಶ್ವರಿ ದೇವಿಗೆ, ಕೋಟಿ ಚೆನ್ನಯ್ಯರ ತಾಯಿಗೆ ಕೆಟ್ಟದಾಗಿ ಯಾರೋ ಬರೆದಾಗ ಅದನ್ನು ವಿರೋಧಿಸಿದ ಸೆಟೆದು ನಿಂತ ನಾಡು ನಮ್ಮದು. ಹಾಗೆ ಅಸಭ್ಯವಾಗಿ ಬರೆದವರಿಗೆ ಉತ್ತರ ಕೊಡಲು ಪಾದಯಾತ್ರೆ ಮಾಡಿದ ಮಣ್ಣು ನಮ್ಮದು. ಈಗ ಕೆಲವರು ಯಾರೋ ಕ್ರಾಸ್ ಬ್ರೀಡ್ ಗಳು ಅದೇ ಸಾಮಾಜಿಕ ತಾಣದಲ್ಲಿ ಪತ್ರಿಕೆಯ ಹೆಸರು ಬಳಸಿ ಸುಳ್ಳು ಸುದ್ದಿ ಹರಡಿಸಿ ಮತ್ತೆ ಅಧರ್ಮ ಗೆಲ್ಲಲಿ ನಾವು ರಾತ್ರಿ ಹೊಟ್ಟೆ ತುಂಬಾ ಕುಡಿದು ಮಲಗಿದರೆ ಸಾಕು ಎಂದು ಹೊರಡುತ್ತಾರಲ್ಲ, ಚುನಾವಣೆಯ ನಂತರ ಐದು ವರ್ಷ ದೇವರ ಎದುರು ಕೈ ಮುಗಿದು ನಿಂತಾಗ ಅವರಿಗೆ ತಮ್ಮ ಕೆಟ್ಟ ಕೆಲಸದ ಬಗ್ಗೆ ನಾಚಿಕೆ ಆಗಲ್ವಾ!
Leave A Reply