ಭಾರತದ ಪ್ರಮುಖರ ಹತ್ಯೆಗೆ ಸಂಚು ರೂಪಿಸಿದ ಉಗ್ರನ ಹೆಡೆಮುರಿ ಕಟ್ಟಿದ ಮಹಾ ಪೊಲೀಸ್
ಮುಂಬೈ: ಭಾರತದ ವಿರುದ್ಧ ಮತ್ತು ದೇಶದಲ್ಲಿ ಕುಕೃತ್ಯಗಳನ್ನು ನಡೆಸಲು ಸದಾ ಪ್ರಯತ್ನಿಸುವ ಪಾಕಿ ಮೂಲದ ಭಯೋತ್ಪಾದಕರ ದೇಶದ ಪೊಲೀಸರ ಕೈಗೆ ಸಿಲುಕಿ ಏಟು ತಿನ್ನುವುದು ಸಾಮಾನ್ಯ. ಇದೀಗ ದೇಶದ ಪ್ರಮುಖ ನಾಯಕರನ್ನು ಗುರಿಯಾಗಿಟ್ಟುಕೊಂಡು ಕುಕೃತ್ಯಗಳನ್ನು ನಡೆಸಲು ಯೋಜಿಸಿದ ಭಯೋತ್ಪಾದಕನ್ನೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
32 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ಭಯೋತ್ಪಾದಕ ನಿಯಂತ್ರಣ ದಳ ಬಂಧಿಸಿದ್ದು, ಭಾರತದ ಪ್ರಮುಖ ಮುಖಂಡರನ್ನು ಹತ್ಯೆ ಮಾಡಲು ಈತ ಸಂಚು ರೂಪಿಸುತ್ತಿದ್ದ ಎನ್ನಲಾಗಿದೆ. ಪಾಕಿಸ್ತಾನದ ಕರಾಚಿಯಲ್ಲಿ ಭಯೋತ್ಪಾದಕ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದುಕೊಂಡಿದ್ದಾನೆ ಎಂದು ಎಟಿಎಸ್ ತಿಳಿಸಿದೆ.
ಆರೋಪಿ ಭಾರಿ ಆಗಂತುಕ ಬಾಂಬ್ ಗಳನ್ನು, ಸೊಫಿಸ್ಟಿಕೇಟೆಡ್ ಮದ್ದುಗುಂಡುಗಳನ್ನು, ಸುಸೈಡ್ ಬಾಂಬ್ ಗಳನ್ನು, ಗನ್ ಗಳನ್ನು ಬಳಸುವ ತರಬೇತಿಯನ್ನು ಕರಾಚಿ ಮೂಲದ ಭಯೋತ್ಪಾದಕ ಸಂಘಟನೆಯಲ್ಲಿ ತರಬೇತಿ ಪಡೆದಿದ್ದಾನೆ.
ಈತ ಮುಂಬೈನಲ್ಲಿ ಪೊಲೀಸರ ಲಿಸ್ಟ್ ನಲ್ಲಿರುವ ವ್ಯಕ್ತಿಯೊಬ್ಬನ ಜೊತೆ ಸಂಪರ್ಕ ಸಾಧಿಸಿದ್ದು, ಆತನ ಮೂಲಕ ಶಾರ್ಜಾಗೆ ಪ್ರಯಾಣಿಸಿ, ಅಲ್ಲಿ ಆತನ ಪತ್ರವನ್ನು ತೋರಿಸಿ ಭಯೋತ್ಪಾದಕ ಸಂಘಟನೆ ಸೇರಿದ್ದಾನೆ. ದುಬೈನಿಂದ ಕರಾಚಿಗೆ ಹೋಗಿ ಅಲ್ಲಿ ಭಯೋತ್ಪಾದಕ ಸಂಘಟನೆಯಿಂದ ತರಬೇತಿ ಪಡೆದುಕೊಂಡಿದ್ದಾನೆ. ಈತನನ್ನು ಮೇ.11 ರಂದು ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ ಬಂಧಿಸಿ, ವಿಚಾರಣೆ ಆರಂಭಿಸಿದೆ.
ಬಂಧಿತ ವ್ಯಕ್ತಿ ಸಾರ್ವಜನಿಕರು ಸೇರುವ ಸ್ಥಳದಲ್ಲಿ ಮತ್ತು ದೇಶದ ಪ್ರಮುಖ ವ್ಯಕ್ತಿಗಳನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ. ಶಂಕಿತ ಉಗ್ರನನ್ನು ಸಿಟಿ ಸಿವಿಲ್ ಕೋರ್ಟ್ ಗೆ ಹಾಜರುಪಡಿಸಿದ್ದು, ಮೇ.21ರವರೆಗೆ ಪೊಲೀಸರ ವಶಕ್ಕೆ ನೀಡಲಾಗಿದೆ.
Leave A Reply