• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಳ್ಳರ ಮನಸ್ಸು ಹುಳ್ಳಗೆ; ಅದಕ್ಕೆ ವಾರ್ಡ ಕಮಿಟಿ ಆಗಿಲ್ಲ!

Hanumantha Kamath Posted On October 30, 2020


  • Share On Facebook
  • Tweet It

ನಮ್ಮನ್ನು ಗೆಲ್ಲಿಸಿದರೆ ನಾವು ವಾರ್ಡ ಕಮಿಟಿ ಮಾಡುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಕಳೆದ ಸಲದ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ಸಂದರ್ಭದಲ್ಲಿ ಹೇಳಿತ್ತು. ಅದೇ ಭರವಸೆಯನ್ನು ಭಾರತೀಯ ಜನತಾ ಪಕ್ಷದ ಮುಖಂಡರು ಕೂಡ ಹೋದ ಬಂದ ಕಡೆಯಲ್ಲೆಲ್ಲಾ ಹೇಳಿದರು. ಆದರೆ ನಾವು ಅವರನ್ನು ನಂಬಲಿಲ್ಲ. ಕಾಂಗ್ರೆಸ್ಸನ್ನು ನಂಬಿದೆವು. ಗಾಂಧೀಜಿಯವರ ಫೋಟೊ ಹಾಕಿರುತ್ತಾರಲ್ಲ, ಹಾಗೆ ಇವರು ಚುನಾವಣಾ ಪ್ರಚಾರದಲ್ಲಿ ಹೇಳಿದ್ದನ್ನು ಪಾಲಿಸಬಹುದು ಎಂದು ಮಂಗಳೂರಿನ ಮಹಾಜನರಿಗೆ ಅನಿಸಿತ್ತು. ಸರಿ, ಕಾಂಗ್ರೆಸ್ಸಿಗೆ ವೋಟ್ ಬಿತ್ತು. ಕಾಂಗ್ರೆಸ್ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂತು. ಐದು ಜನ ಮೇಯರ್ ಕೂಡ ಆದರು. ಆದರೆ ಕಾಂಗ್ರೆಸ್ ಕೊನೆಯ ತನಕ ವಾರ್ಡ ಕಮಿಟಿ ಬಗ್ಗೆ ಒಂದೂ ಚೂರು ಧಮ್ ತೆಗೆದಿಲ್ಲ. ಕಾಂಗ್ರೆಸ್ಸಿನ ಯಾವ ಸದಸ್ಯ ಕೂಡ ತಮ್ಮ ಪಕ್ಷದ ಮುಖಂಡರಿಗೆ ಈ ಬಗ್ಗೆ ನೆನಪಿಸಿಲ್ಲ. ಮತ್ತೆ ಚುನಾವಣೆ ಬಂತು ಮತ್ತೆ ವಾರ್ಡ ಕಮಿಟಿ ಸುದ್ದಿಗೆ ಬಂತು ಮತ್ತೆ ಚುನಾವಣಾ ಪ್ರಚಾರದ ಸಮಯದಲ್ಲಿ ಈ ವಿಷಯವನ್ನು ಎಲ್ಲಾ ಪಕ್ಷಗಳು ಎತ್ತಿದ್ದವು. ನಾವು ಯಾರು ಗೆದ್ದರೆ ಅದನ್ನು ಮಾಡಬಹುದು ಎನ್ನುವ ಗೊಂದಲಕ್ಕೆ ಬಿದ್ದೆವು. ನಾನು ಹೇಳುವುದಾದರೆ ಇನ್ನು ಯಾವುದಾದರೂ ಪಕ್ಷ ಚುನಾವಣೆಯಲ್ಲಿ ಪ್ರಚಾರಕ್ಕೆ ಹೊರಡುವಾಗ ಆಯಾ ಪಕ್ಷದ ಜಿಲ್ಲಾ ಅಧ್ಯಕ್ಷರನ್ನು ಏಕಕಾಲಕ್ಕೆ ಅವರಿಬ್ಬರು ತುಂಬಾ ನಂಬುವ ದೇವಸ್ಥಾನವೊ, ಮಸೀದಿಯೊ ಅಥವಾ ಚರ್ಚಗೆ ಕರೆದುಕೊಂಡು ಹೋಗಬೇಕಿತ್ತು. ಅಲ್ಲಿ ಅವರ ಪಕ್ಷಗಳ ಚುನಾವಣಾ ಭರವಸೆಯನ್ನು ಅವರವರು ಓದಬೇಕು. ಅದರ ನಂತರ ಚುನಾವಣಾ ಪ್ರಚಾರಕ್ಕೆ ಇಳಿಯಬೇಕು. ಉದಾಹರಣೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಡಪಕ್ಷಗಳು, ಆಮ್ ಆದ್ಮಿ ನಮ್ಮ ಪಾಲಿಕೆಯಲ್ಲಿ ಚುನಾವಣೆಗೆ ಸ್ಪರ್ಧಿಸಿಸುತ್ತವೆ ಎಂದು ಇಟ್ಟುಕೊಳ್ಳೋಣ. ಚುನಾವಣೆಗೆ ಮೊದಲು ಒಂದು ದಿನ ನಿಗದಿಪಡಿಸಿ ಇವರೆಲ್ಲರನ್ನು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಎದುರೊ ಅಥವಾ ಕಟೀಲು Durgaಪರಮೇಶ್ವರಿ ದೇವಿಯ ಎದುರೊ ನಿಲ್ಲಿಸಿ ಚುನಾವಣಾ ಭರವಸೆಗಳನ್ನು ಓದಿಸಿಬಿಡಬೇಕು. ಆಗ ಯಾವುದನ್ನು ಈಡೇರಿಸಲಾಗುತ್ತದೊ ಅದನ್ನೇ ಅವರು ಓದುತ್ತಾರೆ. ಇಲ್ಲದಿದ್ದರೆ ಹೀಗೆ ನಮ್ಮ ಮೊಣಕೈಗೆ ಐವತ್ತು ಗ್ರಾಂ ಬೆಣ್ಣೆ ತಾಗಿಸಿ, ನೆಕ್ಕಿ ಎಂದು ಹೇಳಿ ಅವರು ಆರಾಮವಾಗಿ ಎಸಿ ರೂಂನಲ್ಲಿ ಕುಳಿತು ಎಲ್ಲಿ ಹಣ ಮಾಡುವುದು ಎಂದು ಯೋಚಿಸುತ್ತಿರುತ್ತಾರೆ. ಅದಕ್ಕೆ ಅವಕಾಶ ಕೊಡಬಾರದು.
ವಾರ್ಡ ಕಮಿಟಿ ವಿಷಯದಲ್ಲಿಯೂ ಆದದ್ದು ಇದೇ. ಅಷ್ಟಕ್ಕೂ ವಾರ್ಡ ಕಮಿಟಿ ಪಾಲಿಕೆ ಸದಸ್ಯರು ಅಥವಾ ಆಯಾ ಪಕ್ಷದ ಮುಖಂಡರು ನಾಗರಿಕರಿಗೆ ಕೊಡುವ ಭಿಕ್ಷೆ ಅಲ್ಲ. ಅವರು ವಾರ್ಡ ಕಮಿಟಿ ಮಾಡಿದರೆ ನಾಗರಿಕರ ಹೊಟ್ಟೆ ತುಂಬಲ್ಲ. ವಾರ್ಡ ಕಮಿಟಿ ಮಾಡದಿದ್ದರೂ ನಾಗರಿಕರ್ಯಾರು ಕೂಡ ಬೀದಿಗೆ ಬೀಳಲ್ಲ. ಆದರೂ ವಾರ್ಡ ಕಮಿಟಿ ಆಗಲೇಬೇಕು. ಅಷ್ಟಕ್ಕೂ ಈ ಮಾತನ್ನು ನಾನು ಹೇಳುತ್ತಿಲ್ಲ. ಇದನ್ನು ಮಾನ್ಯ ಉಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ಎಲ್ಲಾ ಮಹಾನಗರಪಾಲಿಕೆಗೆ ಸೂಚನೆ ಕೊಟ್ಟಿದೆ. ಇದೇ ಮಾತನ್ನು ಅಡಿಟರ್ಸ್ ತಮ್ಮ ರಿಪೋರ್ಟನಲ್ಲಿ ಕೇಳಿದ್ದಾರೆ. ಯಾಕೆ ವಾರ್ಡ ಕಮಿಟಿ ಮಾಡಿಲ್ಲ? ಅಷ್ಟಕ್ಕೂ ವಾರ್ಡ ಕಮಿಟಿ ಆಗುವುದರಿಂದ ಯಾರಿಗೆ ಲಾಭ? ಆಗದಿದ್ದರೆ ಯಾರಿಗೆ ಲಾಭ? ವಾರ್ಡ ಕಮಿಟಿ ಮಾಡುವುದೆಂದರೆ ಪಾಲಿಕೆ ಸದಸ್ಯರು ಯಾಕೆ ಹಿಂಜರಿಯುತ್ತಾರೆ ಎನ್ನುವುದೇ ಗೊತ್ತಾಗುವುದಿಲ್ಲ. ಒಂದು ವೇಳೆ ಅವರು ನೆಟ್ಟಗಿದ್ದರೆ ವಾರ್ಡ ಕಮಿಟಿ ಮಾಡುವುದಕ್ಕೆ ಮೊದಲು ಮುಂದೆ ಬರಬೇಕು. ವಾರ್ಡ ಕಮಿಟಿಯಿಂದ ಒಬ್ಬ ಪಾಲಿಕೆ ಸದಸ್ಯನಿಗೆ ನಿಜಕ್ಕೂ ವಾರ್ಡನ ಅಭಿವೃದ್ಧಿಯ ಹೊರೆ ಕಡಿಮೆಯಾಗುತ್ತದೆ. ಆದರೆ ಆತ ಅಥವಾ ಆಕೆ ಯಾಕೆ ವಾರ್ಡ ಕಮಿಟಿ ಮಾಡಲ್ಲ ಎಂದರೆ ಪಾಲಿಕೆ ಎನ್ನುವುದನ್ನು ಸೇವೆಯ ಕಾರ್ಯಕ್ಷೇತ್ರವಾಗಿ ಎಷ್ಟು ಸದಸ್ಯರು ನೋಡುತ್ತಿದ್ದಾರೆ. ಕೆಲವು ಸದಸ್ಯರಿಗೆ ವಾರ್ಡ ಕಮಿಟಿ ಆಗಬೇಕು ಎನ್ನುವುದು ಮನಸ್ಸಿನಲ್ಲಿ ಇರಬಹುದು. ಆದರೆ ಜನರಲ್ ಆಗಿ ಎಲ್ಲರೂ ಇದರಲ್ಲಿ ಕೈಜೋಡಿಸಲು ಬರುವುದೇ ಇಲ್ಲ. ಯಾಕೆಂದರೆ ಹೆಚ್ಚಿನವರಿಗೆ ಮನಪಾ ಎಂದರೆ ಫುಲ್ ಟೈಮ್ ಜಾಬ್. ಇಲ್ಲಿಯೇ ಹೊರಳುವುದು, ಅಲ್ಲಿಯೇ ಏಳುವುದು. ಒಂದು ವೇಳೆ ವಾರ್ಡ ಕಮಿಟಿ ಜಾರಿಗೆ ಬಂದರೆ ಆಯಾ wardನಲ್ಲಿ ಒಂದೊಂದು ಅಭಿವೃದ್ಧಿಶೀಲ ಮನಸ್ಸುಗಳ ಗುಂಪು ರೆಡಿಯಾಗುತ್ತದೆ. ಆ ತಂಡ ತಮ್ಮ wardನ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ರೂಪುರೇಶೆ ಸಿದ್ಧಪಡಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಭ್ರಷ್ಟಾಚಾರ ಕಡಿಮೆಯಾಗುತ್ತದೆ, ಬಹುಶ: ಸಂಪೂರ್ಣವಾಗಿ ನಿಂತು ಹೋಗಲು ಬಹುದು. ಇದೇ ಉದ್ದೇಶ ಇಟ್ಟುಕೊಂಡೇ ಕರ್ನಾಟಕ ಮುನಸ್ಸಿಪಾಲಿಟಿ ಆಕ್ಸ್ಟ 1976 ಚಾಪ್ಟರ್ 3-ಎ ನಲ್ಲಿ ಏರಿಯಾ ಸಭಾ ಅರ್ಥಾತ್ ವಾರ್ಡ ಕಮಿಟಿ ಆಗಲೇಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಅದರ ಉದ್ದೇಶ ಇಷ್ಟೇ, ಭ್ರಷ್ಟಾಚಾರ ನಿಲ್ಲಿಸುವುದು. ಅಂದರೆ ಆವತ್ತೆ ಗೊತ್ತಿತ್ತು, ಸರಕಾರದಂತೆ ಆಳ್ವಿಕೆ ಮಾಡುವ ಸ್ಥಳೀಯಾಡಳಿತ ಸಂಸ್ಥೆಯಾಗಿರುವ ಮುನ್ಸಿಪಾಲಿಟಿಯಲ್ಲಿ ವಾರ್ಡ ಕಮಿಟಿಯಿಂದ ಮಾತ್ರ ಭ್ರಷ್ಟಾಚಾರ ನಿಲ್ಲುತ್ತೆ. ಆದರೆ ಈಗ 2020 ಬಂದು ಇನ್ನೇನೂ ಎರಡು ತಿಂಗಳ ಬಳಿಕ ಹೊಸ ವರುಷ ಬರುವ ಸಮಯ ಆದರೂ ವಾರ್ಡ ಕಮಿಟಿಯ ಸುಳಿವಿಲ್ಲ. ಹಾಗಾದ್ರೆ ವಾರ್ಡ ಕಮಿಟಿ ಆದರೆ ಮನಪಾ ಸದಸ್ಯ/ಸ್ಯೆಯ ಅಧಿಕಾರ ಮೊಟಕುಗೊಳ್ಳತ್ತಾ? ನೋ ಚಾನ್ಸ್. ವಾರ್ಡ ಕಮಿಟಿ ಆದರೆ ಒಬ್ಬ ಸದಸ್ಯನಿಗೆ ಹತ್ತು ಕೈಗಳು ಜೋಡಿಸಿದಂತೆ ಆಗುತ್ತದೆ. ಅಂದರೆ ಹತ್ತು ಜನರು ಸೇರಿ ಆ ವಾರ್ಡನ್ನು ಅಭಿವೃದ್ಧಿ ಮಾಡಿದಂತೆ ಆಗುತ್ತದೆ. ಹಾಗಾದ್ರೆ Corporatorಗೆ ಹೆದರಿಕೆ ಎನು? ನಿಜವಾಗಿ ಹೇಳಬೇಕೆಂದರೆ ಅಯಾ ವಾರ್ಡ ಕಮಿಟಿಗೆ ಅಲ್ಲಿನ ಸ್ಥಳೀಯ ಮನಪಾ ಸದಸ್ಯ/ಸ್ಯೆಯೇ ಅಧ್ಯಕ್ಷ/ಕ್ಷೆ. ಆದರೆ ಒಂದು ವ್ಯತ್ಯಾಸ ಎಂದರೆ ವಾರ್ಡ ಕಮಿಟಿ ಅಧ್ಯಕ್ಷರು ತಮಗೆ ಬೇಕಾದ ಹಾಗೆ ಕೆಲಸ, ಕಾಮಗಾರಿಗಳನ್ನು ಕೈಗೆತ್ತಿಗೊಳ್ಳುವಂತಿಲ್ಲ. ಅದನ್ನು ವಾರ್ಡ ಕಮಿಟಿಯ ಮುಂದೆ ಇಡಬೇಕು. ಅಷ್ಟಕ್ಕೂ ಅದರಲ್ಲೇನು ತಪ್ಪಿಲ್ಲ. ಪಾಲಿಕೆಯ ಸದಸ್ಯರು ಅವರ ಮನೆಯ ಕೆಲಸವೇನೂ ಮಾಡುವುದಲ್ಲವಲ್ಲ. ಹಾಗಾದರೆ ವಾರ್ಡನ ಕೆಲಸ ಮಾಡುವಾಗ ನಾಲ್ಕು ಜನರಲ್ಲಿ ಕೇಳುವುದರಲ್ಲಿ ತಪ್ಪೇನು? ಒಂದು ವೇಳೆ ತನ್ನ ವಾರ್ಡನಲ್ಲಿ ತಾನು ಬಯಸಿದ ಕಡೆಗಿಂತ ಬೇರೆ ಕಡೆ ಕೆಲಸ ಆಗುವ ಅಗತ್ಯ ಹೆಚ್ಚಿದ್ದಲ್ಲಿ ಅಲ್ಲಿ ಮಾಡಿಸುವುದರಲ್ಲಿ ತಪ್ಪೇನಿದೆ? ಕಾಮಗಾರಿ ಕಳಪೆ ಆಗುವುದಾದರೆ ಅಲ್ಲಿ ಹೋಗಿ ನೀವು ಮಾಡುತ್ತಿರುವುದು ಸರಿಯಿಲ್ಲ ಎಂದು ಜವಾಬ್ದಾರಿಯುತ ನಾಗರಿಕ ಹೇಳುವುದರಲ್ಲಿ ತೊಂದರೆ ಏನಿದೆ? ಒಂದೇ ಮಾತಿನಲ್ಲಿ ಹೇಳುವುದಾದರೆ ವಾರ್ಡ ಕಮಿಟಿಯಿಂದ ಊರಿನ ಅಭಿವೃದ್ಧಿಯೇ ವಿನ: ಬೇರೆ ಏನೂ ತೊಂದರೆ ಇಲ್ಲ. ಒಂದು ವೇಳೆ ಆವತ್ತು ಗುಜ್ಜರಕೆರೆ ಇರುವ wardನಲ್ಲಿ ವಾರ್ಡ ಕಮಿಟಿ ಇದ್ದಿದ್ರೆ ಆ ಒಂದು ಕೋಟಿ ಎಂಟು ಲಕ್ಷ ಉಳಿಯುತ್ತಿರಲಿಲ್ಲವೇ? ಇಂತಹ ಎಷ್ಟು ಕೋಟಿಗಳು ಇಲ್ಲಿಯ ತನಕ ವಾರ್ಡ ಕಮಿಟಿ ಜಾರಿಯಾಗದೇ ನಷ್ಟವಾಗಿ ಹೋಯಿತು.
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search