• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಡಿಕೆಶಿ ಮುಂದಿನ ಸಿಎಂ ಎಂದು ಹೇಳುವ ಗಂಡ್ಸು ಕಾಂಗ್ರೆಸ್ಸಿನಲ್ಲಿಲ್ಲ, ಯಾಕೆಂದರೆ!!

Hanumantha Kamath Posted On June 24, 2021


  • Share On Facebook
  • Tweet It

ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಯ ಎರಡು ವರ್ಷ ಮೊದಲೇ ತಮ್ಮ ಸಿಎಂ ಅಭ್ಯರ್ಥಿ ಯಾರು ಎಂದು ಪ್ರಚಾರಪಡಿಸುವ ಸಂಪ್ರದಾಯ ಹಿಂದಿನಿಂದಲೂ ಇಲ್ಲ. ಅಲ್ಲಿ ಪಕ್ಷ ಅಧಿಕಾರಕ್ಕೆ ಬಂದು ಶಾಸಕಾಂಗ ಸಭೆ ನಡೆಯುವಾಗಲೇ ದೆಹಲಿಯಿಂದ ಬರುವ ದೂತನೊಬ್ಬ ವಿಮಾನ ನಿಲ್ದಾಣದಿಂದ ನೇರವಾಗಿ ವಿಧಾನಸೌಧಕ್ಕೆ ಬಂದು ಅಲ್ಲಿ ಮುಚ್ಚಿದ ಕವರ್ ಪಕ್ಷದ ಅಧ್ಯಕ್ಷರ ಕೈಯಲ್ಲಿ ಕೊಟ್ಟು ಹೋಗಿಬಿಡುವುದು ವಾಡಿಕೆ. ಆ ಕವರ್ ಒಳಗೆ ಯಾರ ಹೆಸರು ಬರೆದಿರುತ್ತದೆಯೋ ಅವರೇ ಸಿಎಂ. ಕೆಲವು ರಾಜ್ಯಗಳಲ್ಲಿ ದೆಹಲಿಯಿಂದ ಕವರ್ ಬರುವುದು ತಡವಾಗಿ ಶಾಸಕಾಂಗ ಸಭೆಯಲ್ಲಿ ಶಾಸಕರು ಕಾದು ಕುಳಿತುಕೊಂಡದ್ದು ಇದೆ. ಆದ್ದರಿಂದ ಆ ಪಕ್ಷದ ಕವರ್ ಸಂಸ್ಕೃತಿ ಇಂದಿರಾ ಗಾಂಧಿಯ ಮಗ ಸಂಜಯ್ ಗಾಂಧಿಯಿಂದ ಹಿಡಿದು ಯುಪಿಎ ಎರಡನೇ ಅವಧಿಯ ಕಡೆಯ ತನಕ ಹಾಗೆ ನಡೆದುಕೊಂಡು ಬಂದಿತ್ತು.

ಆದರೆ ಯಾವಾಗ ಪಕ್ಷ ಬಹುತೇಕ ರಾಜ್ಯಗಳಲ್ಲಿ ವೆಂಟಿಲೇಟರ್ ನಲ್ಲಿರುವ ವೃದ್ಧನ ಲೆವೆಲ್ಲಿಗೆ ಬಂದುಬಿಟ್ಟಿತ್ತೋ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ಸನ್ನು ತಮ್ಮದೇ ಬಲದ ಮೂಲಕ ತಂದ ನಾಯಕರು ಜಿಗಿತುಕೊಂಡು ಬಿಟ್ಟರು. ಇವತ್ತಿಗೂ ಪಂಜಾಬ್ ಎಂದರೆ ಅಮರೀಂದರ್ ಸಿಂಗ್ ಹೆಸರು ಮೊದಲು ಬರುತ್ತದೆ. ಆ ಬಳಿಕ ಕಾಂಗ್ರೆಸ್ ಚಿನ್ನೆ. ಪರಿಸ್ಥಿತಿ ಹೀಗಿರುವಾಗ ಕರ್ನಾಟಕದಲ್ಲಿ ಚುನಾವಣೆಗೆ 20 ತಿಂಗಳು ಇರುವಾಗಲೇ ಅರಸೊತ್ತಿಗೆಯ ಗಲಾಟೆ ಶುರುವಾಗಿದೆ. ಆ ಗಲಾಟೆಯಲ್ಲಿ ಜನಬಲ, ಧನಬಲ ಮತ್ತು ಜಾತಿಬಲ ಮೂರು ಕೂಡ ಇರುವ ಡಿಕೆಶಿವಕುಮಾರ್ ಏಕಾಏಕಿ ಜಾತ್ರೆಯಲ್ಲಿ ತಪ್ಪಿಸಿಕೊಂಡ ಮಗುವಿನಂತಾಗಿದ್ದಾರೆ. ಒಂದೇ ಏಟಿಗೆ ಲಕ್ಷ ಜನರನ್ನು ಸೇರಿಸಿ ಸಮಾವೇಶ ಮಾಡಿಸಬಲ್ಲ, ಕೋಟಿಕೋಟಿ ಖರ್ಚು ಮಾಡಿ ಕಾರ್ಯಕ್ರಮ ಮಾಡಬಲ್ಲ, ಜಾತಿಯಲ್ಲಿ ರಾಜ್ಯದ ಪ್ರಬಲ ಒಕ್ಕಲಿಗ ಜಾತಿಗೆ ಸೇರಿದ ಮೂಲ ಕಾಂಗ್ರೆಸ್ಸಿಗ ಡಿಕೆಶಿಯೇ ಮುಂದಿನ ಸಿಎಂ ಎಂದು ಹೇಳುವಂತಹ ಒಂದೇ ಒಂದು ಗಂಡ್ಸು ರಾಜ್ಯ ಕಾಂಗ್ರೆಸ್ ಪಾಳಯದಲ್ಲಿಲ್ಲ. ಹೆಚ್ಚೆಂದರೆ ಡಿಕೆಶಿ ರಾಜ್ಯದಲ್ಲಿ ಪಕ್ಷದ ಸುಪ್ರೀಂ ಎಂದು ಪರಮೇಶ್ವರ್ ಮೆಲ್ಲನೆ ಹೇಳಿ ತಮ್ಮ ಹಳೆ ಸೋಲಿನ ಕೋಪವನ್ನು ಸಿದ್ಧು ಮೇಲೆ ತೆಗೆಯುತ್ತಾರೆ ಬಿಟ್ಟರೆ ಒಬ್ಬನೇ ಒಬ್ಬ ಹಿರಿಯ ನಾಯಕ ಏಯ್, ಡಿಕೆಶಿ ಸಿಎಂ ಆಗ್ತಾರೆ ಎಂದು ಹೇಳಲು ಹೋಗುತ್ತಿಲ್ಲ. ಅದಕ್ಕೆ ಕಾರಣ ಡಿಕೆಶಿ ಹಿನ್ನಲೆ.

ಮೊದಲನೇಯದಾಗಿ ರಾಜಕೀಯವಾಗಿ ಡಿಕೆಶಿ ಸೆರಗಿನ ಕೆಂಡ ಎಂದು ದೆಹಲಿಯ ಜನಪಥ್ 10ನಲ್ಲಿ ಕುಳಿತಿರುವ ವಯೋವೃದ್ಧರು ನಂಬಿದ್ದಾರೆ. ಡಿಕೆಶಿ ಮೇಲಿರುವ ಆರೋಪಗಳು ಅವರನ್ನು ತಿಹಾರ್ ಜೈಲಿನೊಳಗೆ ವಾರಗಟ್ಟಲೆ ಇಟ್ಟ ಕಾರಣ ಅಂತವರನ್ನು ಸಿಎಂ ಎಂದು ಹೇಳುವುದು ಹೇಗೆ ಎನ್ನುವುದು ಸೋನಿಯ ಬಣದ ಆತಂಕ. ಮುಂದೆ ಚುನಾವಣೆ ಹತ್ತಿರ ಬರುವಾಗ ಒಳ್ಳೆಯ ಸಮಯ ನೋಡಿ ಬಿಜೆಪಿ ದೆಹಲಿ ಮುಖಂಡರು ಡಿಕೆಶಿ ಫೈಲ್ ಗಳನ್ನು ಅಧಿಕಾರಿಗಳಿಗೆ ಕರುಣಿಸಿ ಇದರಲ್ಲಿರುವ ಆರೋಪಿ ಯಾವುದೇ ಕಾರಣಕ್ಕೂ ಹೊರಗೆ ಬರಬಾರದು ಎಂದರೆ ಅದು ಕಾಂಗ್ರೆಸ್ ಪಾಲಿಗೆ ದೊಡ್ಡ ಅಪಮಾನ. ಈಗಾಗಲೇ ಕಾಂಗ್ರೆಸ್ಸನ್ನು ಹೊರಗೆ ಇಟ್ಟು ಶರದ್ ಪವಾರ್ ನೇತೃತ್ವದಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಕಾಂಗ್ರೆಸ್ಸಿನ ದಯನೀಯ ಸ್ಥಿತಿಯನ್ನು ವಿವರಿಸುತ್ತವೆ. ರಾಜ್ಯದಲ್ಲಿ ಹೇಗೋ ಡಿಕೆಶಿ ಯಡ್ಡಿಯೊಂದಿಗೆ ಚೌಕಾಶಿ ಮಾಡಿ ರಾಜಕೀಯ ಮಾಡುತ್ತಾ ಇರಬಹುದು. ಆದರೆ ಮೇಲೆ ಅಮಿತ್ ಶಾಗೆ ಇನ್ನು ಕೂಡ ಅಹ್ಮದ್ ಪಟೇಲ್ ಚುನಾವಣೆಯ ಸಂದರ್ಭದಲ್ಲಿ ಡಿಕೆಶಿ ಆಡಿದ ಆಟದಿಂದ ಇನ್ನೂ ಕೋಪ ಆರಿಲ್ಲ.

ಅಷ್ಟಕ್ಕೂ ಈ ಸಿಎಂ ಬೆಂಕಿಗೆ ಪ್ರತಿ ಬಾರಿ ತುಪ್ಪ ಸುರಿಯೋದು ಯಾರೆಂದು ನೋಡಿದರೆ ಅದೇ ಸಿದ್ಧು ಹಳೇ ದೋಸ್ತ್ ಜಮೀರು. ದಳದಲ್ಲಿ ಇದ್ದಾಗ ಸಿದ್ದು ಟೀಚರ್ ಆಗಿದ್ದರೆ ಜಮೀರು ನರ್ಸರಿ ವಿದ್ಯಾರ್ಥಿ. ಈಗ ಜಮೀರು ಡಿಗ್ರಿ ಸ್ಟುಡೆಂಟ್ ಆದರೆ ಸಿದ್ಧು ಅದೇ ಕಾಲೇಜಿನ ಪ್ರಿನ್ಸಿಪಾಲ್. ಆದ್ದರಿಂದ ತನಗೆ ರಾಜಕೀಯ ಎಬಿಸಿಡಿ ಕಲಿಸಿದ ಗುರುವಿಗೆ ವಂದಿಸದೇ ಜಮೀರು ಬೇರೆ ಏನು ಮಾಡಬಲ್ಲರು? ಇನ್ನು ಅನೇಕ ಒಕ್ಕಲಿಗ ಮತ್ತು ಲಿಂಗಾಯಿತ ಕಾಂಗ್ರೆಸ್ ಶಾಸಕರಿಗೆ ತಮ್ಮ ಕ್ಷೇತ್ರದಲ್ಲಿ ಕುರುಬ ವೋಟುಗಳೇ ನಿರ್ಣಾಯಕ. ಸಿದ್ಧು ಸೈಡ್ ಲೈನ್ ಆದರೆ ಇವರಿಗೆ ದೇವರೇ ಗತಿ. ಸಿದ್ಧು ಲೆವೆಲ್ಲಿಗೆ ಬಿಜೆಪಿಯಲ್ಲಿಯೂ ಕುರುಬ ನಾಯಕ ಇನ್ನೊಬ್ಬನಿಲ್ಲ. ಈಶು ಇದ್ದಾರಾದರೂ ಅವರನ್ನು ಕುರುಬರ ಪರಮೋಚ್ಚ ನಾಯಕ ಅಂತ ಶಿವಮೊಗ್ಗದವರೇ ಒಪ್ಪಲ್ಲ.

ಇನ್ನು ಸಿದ್ಧು ತಮ್ಮ ಜೊತೆ ದಳದಿಂದ ಬಂದ ಯಾರನ್ನು ಕೈ ಬಿಟ್ಟಿಲ್ಲ. ಅದಕ್ಕೆ ಬೇಕಾದರೆ ಐವನ್ ಡಿಸೋಜಾ ಎನ್ನುವ ವಿಧಾನಪರಿಷತ್ತಿನ ಮಾಜಿ ಸದಸ್ಯರೊಬ್ಬರನ್ನೇ ತೆಗೆದುಕೊಳ್ಳಿ. ಐವನ್ ಅವರಿಗೆ ವಿಧಾನಪರಿಷತ್ ಗೆ ಆಯ್ಕೆಯಾಗಲು ಇದ್ದ ಏಕೈಕ ಅರ್ಹತೆ ಎಂದರೆ ಅವರು ಹಿಂದೆ ದಳದಲ್ಲಿ ಇದ್ದರು ಎನ್ನುವುದು ಮಾತ್ರ. ಇನ್ನು ಸಿದ್ಧು ಕಾಂಗ್ರೆಸ್ಸನ್ನು ಅಧಿಕಾರದ ರುಚಿ ತೋರಿಸಿದ ನಾಯಕ ಎನ್ನುವುದು ಕಾಂಗ್ರೆಸ್ಸಿನಲ್ಲಿ ಇರುವ ಹಿರಿಯರಿಗೆ ಗೊತ್ತೇ ಇದೆ. ಎಸ್ ಎಂ ಕೃಷ್ಣ ನಂತರ ರಾಜ್ಯದಲ್ಲಿ ಸೊರಗಿದ್ದ ಕಾಂಗ್ರೆಸ್ಸಿಗೆ ಸಿದ್ಧು ಬೇಕಿತ್ತು. ತಮ್ಮ ನೇರ ನುಡಿಯ, ಹೋಂವರ್ಕ್ ಮಾಡಿಕೊಂಡೇ ಕಣಕ್ಕೆ ಇಳಿಯುವ, ಭ್ರಷ್ಟಾಚಾರದ ಆರೋಪ ಹಾಕಲು ಸಾಕ್ಷ್ಯಗಳೇ ಇಲ್ಲದ ಮತ್ತು ಅಹಿಂದ ಮತಗಳನ್ನು ಈಗಲೂ ಕಿಸೆಯಲ್ಲಿಟ್ಟೇ ನಡೆಯುವ ಸಿದ್ಧು ಬಗ್ಗೆ ಕಾಂಗ್ರೆಸ್ಸಿಗೆ ಪ್ರೀತಿ ಇದೆ. ಅದಕ್ಕಾಗಿ ಅವರಿಗೆ ಹಣದ ಗೋಣಿಯನ್ನೇ ದೆಹಲಿಯ ಜನಪಥ್ 10 ಹಿತ್ತಲಲ್ಲಿ ರಾಶಿರಾಶಿ ಹಾಕಬಲ್ಲ ಡಿಕೆಶಿಗಿಂತ ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋದ ಯಡ್ಡಿ ಎದುರು ಸಿದ್ಧುವೇ ಸೂಕ್ತ ಎಂದು ಅನಿಸುತ್ತದೆ. ಆದ್ದರಿಂದ ಅಧಿಕಾರಕ್ಕೆ ಮರಳದಿದ್ದರೂ ಸಿದ್ಧು ವಿಪಕ್ಷದ ಶಾಸಕಾಂಗ ಪಕ್ಷದ ನಾಯಕನಾಗಿರುವುದು ಮತ್ತು ಡಿಕೆಶಿ ಅತ್ತು ಕರೆದು ರಾಜ್ಯಾಧ್ಯಕ್ಷನಾಗಿರುವುದು!!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search