ವಿದ್ಯೆ ಎಲ್ಲ ಧರ್ಮವನ್ನು ಪ್ರೀತಿಸಲು ಹೇಳಿಕೊಡಬೇಕೇ ವಿನ:…
ಶಾಲೆಗಾಗಿ, ವಿದ್ಯೆಗಾಗಿ ಹಿಂದುಗಳು ಅದೆಷ್ಟೋ ಸಂಸ್ಕೃತಿಯನ್ನು ಬದಿಗಿಟ್ಟಿದ್ದಾರೆ. ಶಾಲೆಗಳಲ್ಲಿ ದೇವರ ಬಗ್ಗೆ ಹಿಂದೂ ಸಂಸ್ಕೃತಿಯ ಬಗ್ಗೆ ಅವಹೇಳನಗಳನ್ನು ಮಾಡುವುದು ಇದೇನು ಮೊದಲಲ್ಲ. ಈ ಹಿಂದೆ ಬೇಕಾದಷ್ಟು ನಡೆಯುತ್ತಿತ್ತು ಆದರೆ ಈಗ ಕಾಲ ಬದಲಾಗಿದೆ. ಇಂದು ಸಮಾಜಕ್ಕೆ ಈಗ ವಿದ್ಯೆಯು ಬೇಕು ಸಂಸ್ಕೃತಿಯು ಬೇಕು. ಮತಾಂಧತೆಯ ಹಾಗೂ ಮತಾಂತರದ ಮನಸ್ಥಿತಿಯ ಪರಿಸ್ಥಿತಿಗೆ ಬಲಿಯಾದ ಹಿಂದೂ ಸಮಾಜ ಇಷ್ಟು ವರ್ಷಗಳ ಕಾಲ ಸಹಿಸಿದ್ದೆ ದೊಡ್ದ ವಿಚಾರ. ಈಗ ಗೊತ್ತಾಗುತ್ತಿದೆ ವಿದ್ಯೆಯಿಂದ ಸಂಸ್ಕೃತಿ ಬರಲು ಸಾಧ್ಯವಿಲ್ಲ. ಸಂಸ್ಕೃತಿ ಎನ್ನುವುದು ಸಂಸ್ಕಾರದಿಂದ ಮಾತ್ರ ಬರಲು ಸಾಧ್ಯ. ಈ ವಿದ್ಯೆ ಸಂಸ್ಕಾರವನ್ನು ಎಳ್ಳಿನಷ್ಟು ಕೊಡುತ್ತಿಲ್ಲ ಎನ್ನುವುದು ಗೊತ್ತಾದ ಪರಿಣಾಮವೇ ಈ ಪ್ರತಿರೋಧ.
ಈ ಕೆಟ್ಟ ವಾತಾವರಣದಿಂದ ಮಕ್ಕಳನ್ನು ಬದಿಗಿಡಲು ಅಷ್ಟು ಸುಲಭವಲ್ಲ. ಅದಕ್ಕಾಗಿಯೆ ಈ ಹಿಂದೆ ಪಾಠದ ಮೂಲಕ ಹೊಸ ಬದಲಾವಣೆಯನ್ನು ತಂದಿದ್ದರು. ಆದರೆ ಅದನ್ನು ಹಿಂದುಗಳ ಒಳಗೆ ಒಂದು ರಾಜಕೀಯದ ರಾದ್ಧಾಂತದ ಮೂಲಕ ಜಾತಿ ಜಾತಿಗಳನ್ನು ತಾಗಿಸಿ ಅದನ್ನು ವಿವಾದವನ್ನಾಗಿ ಮಾಡಿದರು. ಮತ್ತೆ ಅಧಿಕಾರಕ್ಕೆ ಬಂದ ಪಕ್ಷ ಪಠ್ಯವನ್ನು ಕಿತ್ತೊಗೆಯುವ ಮೂಲಕ ಸಂತೋಷಪಟ್ಟುಗೊಂಡಿತು. ಆದರೆ ಈಗ ಪಠ್ಯದ ಬದಲಿಗೆ ಪಾಠ ಮಾಡುವವರನ್ನು ಕಿತ್ತೊಗೆಯುವ ಪರಿಸ್ಥಿತಿ ಬಂದಿದೆ.
ಇದು ಕೌರವರ ನಾಶಕ್ಕೆ ತೊಡೆ ತಟ್ಟಿದ ದ್ರೌಪದಿಯ ಸಂಸ್ಕೃತಿ. ಇಲ್ಲಿರುವುದು, ಎದುರಿನ ಬೆಟ್ಟದಲ್ಲಿ ಹಾರಾಡುತ್ತಿರುವ ಶತ್ರುವಿನ ಧ್ವಜದಿಂದ ನನಗೆ ರವಕೆಯನ್ನು ತೊಡಿಸು ಎಂದ ಜೀಜಾಬಾಯಿಯ ಮಕ್ಕಳು. ಇದು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹುಟ್ಟಿದ ಸಮಾಜ. ಇದು ಕಿತ್ತೂರು ರಾಣಿ ಚೆನ್ನಮ್ಮ ಹೋರಾಡಿದ ನೆಲ. ಇದು ಹಿಂದೂ ಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿದ ಅಹಲ್ಯಾಬಾಯಿ ಹೋವಲ್ಕರ್ನ ಪರಂಪರೆ. ಹಿಂದೂ ಸಮಾಜದಲ್ಲಿ ಹೆಣ್ಣು ಮಗಳು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು ದೂರುವ ಯಾವುದೇ ಮತದಲ್ಲಿಯೂ ಕೂಡ ಇಂತಹ ಕನ್ಯಾಮಣಿಗಳು ಹುಟ್ಟಿ ಬರಲಿಲ್ಲ. ಇವತ್ತು ಕೂಡ ಇಂತಹ ಸಿ0ಹಿಣಿಗಳು ದೇಶದಲ್ಲಿ ಬೇಕಾದಷ್ಟು ಇದ್ದಾರೆ. ಅದರ ಒಂದು ಝಲಕ್ ನಾವಿಲ್ಲಿ ಕಂಡದ್ದಷ್ಟೇ.
ಹಿಂದೂ ಸಮಾಜದಲ್ಲಿ ಹೆಣ್ಣು ಮಕ್ಕಳು ಕೂಡ ಹೀಗೆ ಧೈರ್ಯವಾಗಿ ತಮ್ಮ ಧರ್ಮ ನಿಷ್ಠೆಯನ್ನು ತೋರಿಸುತ್ತಾರೆ ಎನ್ನುವುದನ್ನು ಕನಸಲ್ಲೂ ಎಣಿಸಿರಲಿಲ್ಲ. ಆದರೆ ಇವತ್ತು ಅದನ್ನು ಕಾಣುತ್ತಿದ್ದೇವೆ. ಇಷ್ಟು ವರ್ಷಗಳಿಂದ ಅನುಭವಿಸುತ್ತಿದ್ದ ವೇದನೆಯನ್ನು ಮರೆತು ನಮ್ಮತನವನ್ನು ತೋರಿಸುವ ಕಾಲ ಬರುತ್ತಿದೆ. ನಮ್ಮೊಳಗಿರುವ ಹುಳುಕನ್ನು ದೊಡ್ಡದಾಗಿಸಿ ಬಿಂಬಿಸಿ ನಮ್ಮನ್ನು ಕಾಲ ಕಸವಾಗಿಸಿದ ಮತೇತರ ಸಮಾಜದ ನಡುವೆ ಧೈರ್ಯವಾಗಿ ಭಾರತ ಮತ್ತೆ ತಲೆ ಎತ್ತಿ ನಿಲ್ಲುತ್ತಿದೆ. ಹೆಣ್ಣು ಮಕ್ಕಳಿಗೆ ಸಂಸ್ಕೃತಿಯ ಬಗ್ಗೆ ಅಭಿಮಾನ ಬಂದರೆ ಹೊಸ ಪರಂಪರೆ ತಯಾರಾಗುತ್ತದೆ.
ಧರ್ಮನಿಷ್ಠ ರಾಜ ದೇಶವನ್ನು ಹೇಗೆ ಧರ್ಮದ ದಾರಿಗೆ ತರಬಲ್ಲ ಎನ್ನುವುದಕ್ಕೆ ಇವತ್ತು ಭಾರತ ಸಾಕ್ಷಿಯಾಗುತ್ತಿದೆ. ಆದ್ದರಿಂದಲೇ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿಯವರಂತಹ MLA ಗಳು ನಮಗೆ ಸಿಕ್ಕಿದ್ದು. ರಾಮನ ಪಲ್ಲಕ್ಕಿಯನ್ನು ಹೆಗಲಿಗೆರಿಸಿಕೊಳ್ಳುವುದೆಂದರೆ ಕೇವಲ ವೈಭವದ ಸಂಕೇತವಲ್ಲ. ಹಾಗೂ ಅದೊಂದು ಕೇವಲ ಆಚರಣೆಯು ಅಲ್ಲ. ರಾಮನ ಆದರ್ಶವನ್ನು ಎತ್ತಿ ಹಿಡಿಯುತ್ತೇನೆ ಎಂದರ್ಥ. ತಾಯಿ, ತಾಯ್ನೆಲ, ಆ ನೆಲದ ಸಂಸ್ಕೃತಿಯನ್ನು ಸ್ವರ್ಗಕ್ಕಿಂತಲೂ ಮಿಗಿಲು ಎಂದುಕೊಂಡವ ಶ್ರೀರಾಮ. ಇಂತಹ ರಾಮನನ್ನು ತನ್ನಲ್ಲಿ ಹೊತ್ತುಕೊಂಡವ ಸಂಸ್ಕೃತಿಯ ವಿರೋಧವನ್ನು ಕಿತ್ತೊಗೆಯುತ್ತಾನೆ ವಿನಃ ಸಂಸ್ಕೃತಿಯನ್ನು ಕಿತ್ತೊಗೆಯುವುದಿಲ್ಲ. ನಮಗೆ ಇನ್ನಾದರೂ ಸಂಸ್ಕೃತಿಯನ್ನು ಕಿತ್ತೊಗೆಯುವರು ಬೇಕೊ ಅಥವಾ ಕೊಳೆಯನ್ನು ಕಿತ್ತೊಗೆಯುವವರು ಬೇಕೋ ಎನ್ನುವುದು ಯೋಚಿಸುವುದು ಒಳ್ಳೆಯದು.
Leave A Reply