ಶಸ್ತ್ರಾಸ್ತ್ರ ಕೊರತೆಯ ಸಿಎಜಿ ವರದಿ ವಾಸ್ತವತೆಗೆ ದೂರ: ನಿರ್ಮಲಾ
ಒಂದು ಹಂತದಲ್ಲಿ ಚೀನಾ ಇನ್ನೂ ಡೋಕ್ಲಾಮ್ ನನ್ನದೇ ಎಂದು ಬೀಗಿತ್ತು!
ದೆಹಲಿ: ಸಿಕ್ಕಿಂನ ಡೋಕ್ಲಾಮ್ ತ್ರಿವಳಿ ಚೌಕದಲ್ಲಿ ರಸ್ತೆ ನಿರ್ಮಿಸಲು ಹೊರಟ ಚೀನಾ ಸೇನೆಗೆ ಭಾರತೀಯ ಯೋಧರು ತಡೆಯೊಡ್ಡಿ ಸಣ್ಣದಾಗಿ ಯುದ್ಧದ ಸಾಧ್ಯತೆಗಳ ಕಿಚ್ಚು ಹೊತ್ತಿತ್ತು. ಮಾಧ್ಯಮಗಳಂತೂ ಕ್ಷಣಗಣನೆಯನ್ನೇ ಆರಂಭಿಸಿ ಈ ಹಿಂದಿನ ಭಾರತ-ಚೀನಾ ಯುದ್ಧದ ಫಲಿತಾಂಶ ಆಧರಿಸಿ ಗಂಟೆಗೊಂದು ವಿಶ್ಲೇಷಣೆ ಆರಂಭಿಸಿದ್ದವು. ಇಂಥ ಪರಿಸ್ಥಿತಿಯಲ್ಲಿ ದೇಶದ ಮಹಾಲೇಖಪಾಲರು (ಸಿಎಜಿ) ಸಲ್ಲಿಸಿದ್ದಂಥ ವರದಿಂಯೊಂದು ಮಹಾಸ್ಫೋಟವ್ನನೇ ಸೃಷ್ಟಿಸಿತ್ತು. ಭಾರತೀಯ ಸೇನಾ ಸಂಗ್ರಹಾಗಾರದಲ್ಲಿ ಶಸ್ತ್ರಾಸ್ತ್ರಗಳ ಕೊರತೆಯಿದೆ. ಒಂದು ವೇಳೆ ಈ ಕ್ಷಣದಲ್ಲಿ ಯುದ್ಧ ಎದುರಾದರೆ ಕೇವಲ 20 ದಿನಗಳಲ್ಲಿ ಶಸ್ತ್ರಗಳು ಬರಿದಾಗುತ್ತವೆ ಎಂಬ ಶತ್ರು ಹುಮ್ಮಸ್ಸು ಇಮ್ಮಡಿಗೊಳಿಸುವ ವರದಿಯೊಂದನ್ನು ಸಿಎಜಿ ನೀಡಿತ್ತು. ಇದು ಸರ್ಕಾರ ಸೇರುವ ಮುನ್ನ ಮಾಧ್ಯಮಗಳ ಕಿರುಗಣ್ಣಿಗೆ ಕಂಡಷ್ಟು ಸೋರಿಕೆಯಾಗಿ ಭಾರಿ ಅವಾಂತರಕ್ಕೆ ಕಾರಣವಾಗಿತ್ತು.
ಒಂದು ಹಂತದಲ್ಲಿ ಚೀನಾ ಇನ್ನೂ ಡೋಕ್ಲಾಮ್ ನನ್ನದೇ ಎಂದು ಬೀಗಿತ್ತು ಕೂಡ.
ರಕ್ಷಣಾ ಸಚಿವ ಜೇಟ್ಲಿ ಮಾತು ನಂಬಲೇ ಇಲ್ಲ:
ಈ ಸಂರ್ಧದಲ್ಲಿ ರಕ್ಷಣಾ ಖಾತೆ ಹೊಂದಿದ್ದ ಅರುಣ್ ಜೇಟ್ಲಿ ವರದಿ ತುಂಬಾ ಹಳೆಯದು, 2016ರಲ್ಲಿನ ಶಸ್ತ್ರಾಸ್ತ್ರ ಪ್ರಮಾಣ ಆಧರಿಸಿ ತಯಾರಿಸಲಾಗಿದೆ ಎಂದು ಸಮಜಾಯಿಷಿ ನೀಡಿದ್ದರು. ಆದರೆ ಇದನ್ನು ಮಾಧ್ಯಮಗಳು ಎತ್ತಿ ಆಡದೆ ಕಡೆಗಣಿಸಿದ್ದರಿಂದ ಎಲ್ಲರೂ ಶಸ್ತ್ರಾಸ್ತ್ರ ಕೊರತೆಯನ್ನೇ ನಂಬಿಕೊಂಡಿದ್ದರು. ಕೊನೆಗೆ ಪ್ರಧಾನಿ ಮೋದಿ ಅವರ ಚಾಣಾಕ್ಷ ರಾಜತಾಂತ್ರಿಕ ನಡೆಯಿಂದ ಚೀನಾ ಸೇನೆ ಡೋಕ್ಲಾಂನಿಂದ ತನ್ನ ಹೆಜ್ಜೆ ಹಿಂದಕ್ಕಿಟ್ಟಿತು. ಪರಸ್ಪರ ಶಾಂತಿಯುತವಾಗಿ ಬಿಕ್ಕಟ್ಟು ಅಂತ್ಯಗೊಂಡಿತ್ತು.
ವರದಿ ವಾಸ್ತವತೆಗೆ ದೂರ ಎಂದ ಮೊದಲ ಮಹಿಳಾ ರಕ್ಷಣಾ ಮಂತ್ರಿ:
ಸಂಪುಟ ಪುನಾರಚನೆಯಿಂದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ರಾಜ್ಯ ಸಚಿವೆ ಸ್ಥಾನದಿಂದ ರಕ್ಷಣಾ ಖಾತೆಗೆ ಜಿಗಿದ ನಿರ್ಮಲಾ ಸೀತಾರಾಮನ್ ಮೊದಲು ಮಾಡಿದ ಕೆಲಸವೆಂದರೆ ವರದಿ ಕುರಿತು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು. ಶೀಘ್ರದಲ್ಲಿಯೇ ವರದಿ ಕುರಿತು ಪ್ರಶ್ನೆ ಏಳುತ್ತದೆ ಎಂದು ಅರಿತಿದ್ದ ಜಾಣ ಹೆಣ್ಣು, ಸಂಪೂರ್ಣ ಮಾಹಿತಿಯನ್ನು ಸೇನೆಯ ಮೂರು ವಿಭಾಗಗಳಿಂದ ತರಿಸಿಕೊಂಡಿದ್ದರು.
ಐಎನ್‍ಎಸ್ವಿ ತಾರಿಣಿಯಲ್ಲಿ ನೌಕಾದಳದ ಆರು ಮಹಿಳೆಯರ ಸಾಗರ ಪರಿಕ್ರಮ ಸಾಹಸಕ್ಕೆ ಹಸಿರು ನಿಶಾನೆ ತೋರಿದ ನಂತರ ವರದಿಗಾರರು ಸಿಎಜಿ ವರದಿಯನ್ನು ಉಲ್ಲೇಖಿಸಿದರು. ” ನೋಡಿ ಈ ವರದಿ ವಾಸ್ತವತೆ ದೂರವಿದೆ. ಶಸ್ತ್ರಾಸ್ತ್ರ ಖರೀದಿ ಎಂಬುದು ನಿರಂತರ ಪ್ರಕ್ರಿಯೆ. ಇಂದು ಖಾಲಿ ಎನಿಸಿದರೆ ನಾಳೆಯೇ ತುಂಬಿಕೋಮಡಿರುತ್ತದೆ. ಖಾಲಿ ಕೈಯಲ್ಲಿ ಯುದ್ಧ ಮಾಡುವ ದಡ್ಡರು ನಾವಲ್ಲ ‘ ಎಂದು ಜಾಡಿಸಿದ್ದಾರೆ. ಸೆ.2016ರಲ್ಲಿ ಲಭ್ಯವಿದ್ದ ಶಸ್ತ್ರಾಸ್ತ್ರ ಪ್ರಮಾಣ ಆಧರಿಸಿ ಮಾಹಿತಿ ನೀಡಿದ್ದ ಸಿಎಜಿ ಜಾಗತಿಕವಾಗಿ ಬೇರಯೇ ಸಂದೇಶ ರವಾನಿಸಿತ್ತು.
Leave A Reply