ಕೇವಲ ಶಂಕುಸ್ಥಾಪನೆಯಲ್ಲ ಸ್ವಾಮಿ, ಚಾಲನೆ ಕೂಡ ಮಾಡುವೆ : ಕಾಂಗ್ರೆಸ್‍ಗೆ ಮೋದಿ ಟಾಂಗ್
>> ತುಳಸಿ ದಾಸರ ಮಂದಿರದಲ್ಲಿ ರಾಮಾಯಣ ಸ್ಟ್ಯಾಂಪ್ ಬಿಡುಗಡೆ ಮಾಡಿದ ಪ್ರಧಾನಿ
ವಾರಾಣಸಿ : ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ತಮ್ಮ ಲೋಕಸಭೆ ಕ್ಷೇತ್ರ ವಾರಾಣಸಿಗೆ ಶುಕ್ರವಾರ ಭೇಟಿ ನೀಡಿದ್ದರು. ಹಲವು ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಪ್ರತಿಪಕ್ಷಗಳ ಟೀಕೆಗೆ ತಮ್ಮ ಎಂದಿನ ಹಾಸ್ಯ ಚಟಾಕಿಯಿಂದ ಕುಟುಕಿದ ಪ್ರಧಾನಿ ” ನಾನು ಕೇವಲ ಶಂಕುಸ್ಥಾಪನೆ ಮಾತ್ರ ಮಾಡಿ ಬಿಡುವುದಿಲ್ಲ. ನಂತರ ಬಂದು ಉದ್ಘಾಟಿಸಿ ಚಾಲನೆ ಕೂಡ ನೀಡುತ್ತೇನೆ’ ಎಂದು ಕಾಂಗ್ರೆಸ್ ಕಡೆ ಬೆರಳು ಮಾಡಿದರು. 60 ದಶಕಗಳ ಸರ್ದಾರ್ ಸರೋವರ್ ಡ್ಯಾಂ, ಈಶಾನ್ಯದ ಸೇತುವೆ ಸೇರಿದಂತೆ ಹಲವು ಯೋಜನೆಗಳಿಗೆ ತನ್ನ ಆಡಳಿತದಲ್ಲಿ ಶಂಕುಸ್ಥಾಪನೆಯಾಗಿದ್ದು ಎಂದು ಕಾಂಗ್ರೆಸ್ ಬೀಗಿದ್ದಕ್ಕೆ ಪ್ರಧಾನಿ ಮುಟ್ಟು ನೋಡಿಕೊಳ್ಳುವಂತೆ ಉತ್ತರಿಸಿದ್ದಾರೆ.
ರಾಮಾಯಣ ಸ್ಟ್ಯಾಂಪ್ ಬಿಡುಗಡೆ: ನವರಾತ್ರಿಯ ವಿಶೇಷ ಸಂದರ್ಭದಲ್ಲಿ ವಾರಾಣಸಿಯಲ್ಲಿ ಪ್ರಧಾನಿ ಪ್ರಭು ರಾಮನ ಜೀವನಚರಿತ್ರೆ ರಾಮಾಯಣದ ವಿಶೇಷ ಸ್ಟ್ಯಾಂಪನ್ನು ಬಿಡುಗಡೆ ಮಾಡಿದರು. ತುಳಸಿ ಮಂದಿರದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ” ರಾಮನ ಜೀವನ ಎಲ್ಲರಿಗೂ ಪ್ರೇರಣೆ. ಗಾಂಧೀಜಿಗೆ ರಾಮ ಮಂತ್ರ ಚಿಕ್ಕಂದಿನಿಂದಲೂ ಪ್ರೇರಣೆಯಾಗಿತ್ತು. ರಾಮನಂಥ ಮಹಾಪುರುಷ ಮತ್ತು ಚೈತನ್ಯಪುರುಷನ ಜೀವನ ಚರಿತ್ರೆ ನಮ್ಮನ್ನು ಸದಾಕಾಲ ಪ್ರಭಾವಿಸಲಿ” ಎಂದು ಹೇಳಿದರು.
ಶ್ರೀರಾಮನ ಅನೇಕ ಸ್ಟ್ಯಾಂಪ್‍ಗಳಿವೆ. ಆದರೆ ಜೀವನದ ಬಗೆಗಿನ ಈ ಸ್ಟ್ಯಾಂಪ್ ವಿಶೇಷ. ಇದರ ಬಿಡುಗಡೆ ಭಾಗ್ಯ ನನಗೆ ದೊರೆತಿದ್ದು ನನ್ನ ಪುಣ್ಯ ಎಂದು ಪ್ರಧಾನಿ ಮೋದಿ ಸಂತಸ ವ್ಯPಕ್ತಪಡಿಸಿದರು. ತುಳಸಿ ದಾಸರ ಈ ಪವತ್ರ ಮಂದಿರವೇ ಸರಿ ಜಾಗವೆನಿಸಿ ಇಲ್ಲಿಯೇ ಸ್ಟ್ಯಾಂಪ್ ಬಿಡುಗಡೆ ಮಾಡಿದೆ. ಇಲ್ಲದಿದ್ದರೆ ದೆಹಲಿಯಲ್ಲಿಯೇ ಮಾಡಬಹುದಿತ್ತು ಎಂದರು. ನಂತರ ಅವರು ದುರ್ಗಾ ಮಾತೆ ಮಂದಿರಕ್ಕೆ ಭೇಟಿ ನೀಡಿದರು.
Leave A Reply