ನಾನು ಚುನಾಯಿತ ಸಿಎಂ, ನಂಬಿ ಪ್ಲೀಸ್!
>> ವಿಧಾನಸಭೆಯಲ್ಲಿ ಮೈ ನೇಮ್ ಈಸ್ ಖಾನ್ ಸಿನಿಮಾ ಡೈಲಾಗ್ ಹೊಡೆದ ಕೇಜ್ರಿವಾಲ್
>> ಅತಿಥಿ ಶಿಕ್ಷಕರ ಖಾಯಂ ಮಸೂದೆ ತಿಕ್ಕಾಟ ಮತ್ತೆ ತಾರಕಕ್ಕೆ
ನವದೆಹಲಿ : ಪ್ರಧಾನಿ ಮೋದಿ ಅಣಕಿಸಿದೆ, ಮಫ್ಲರ್ ಕಟ್ಟಿಕೊಂಡು ಕೆಮ್ಮಿದೆ, ನನ್ನ ಕೈ ಕಟ್ಟಿಹಾಕಿದ್ದಾರೆ ಹಾಗಾಗಿ ಕೆಲಸ ಮಾಡಲಾಗುತ್ತಿಲ್ಲ ಎಂದು ಆರೋಪಿಸಿಯೇ ಕಾಲಹರಣ ಮಾಡುತ್ತಿದ್ದ ದೆಹಲಿ ಸಿಎಂ ಮತ್ತು ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ ಕೇಜ್ರಿವಾಲಾ ಮತ್ತೆ ಸುದ್ದಿಯಲ್ಲಿದ್ದಾರೆ.
ತಾವು ಕಳುಹಿಸಿದ ವಿಧೇಯಕಕ್ಕೆ ದೆಹಲಿ ಲೆಫ್ಟಿನೆಂಟ್ ಜನರಲ್ ಸಹಿ ಹಾಕಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ಕೋಪಗೊಂಡಿದ್ದಾರೆ. ಮಾತಿನ ಭರದಲ್ಲಿ “ನಾನನು ಚುನಾಯಿತ ಮುಖ್ಯಮಂತ್ರಿ. ಉಗ್ರ ಅಲ್ಲ’ ಎಂದು ತನ್ನನ್ನು ನಂಬಿ ಸಹಿ ಹಾಕಲು ಕೇಳಿದ್ದಾರೆ. ಅಸಮಾಧಾನ ಹೊರಹಾಕುವಾಗ ನಾಲಿಗೆ ಹೊರಳಿದ ಮಾತಿನಂತೆ “ನಾವು ದೆಹಲಯ ಮಾಲೀಕರು, ನೌಕರರಲ್ಲ ಎಂದು ವಿಧಾನಭೆಯಲ್ಲಿ ಗುಡುಗಿದ್ದಾರೆ. ಇವರ ಉತ್ತರ ಪೌರುಷಕ್ಕೆ ಆಪ್ ಶಾಸಕರು ಮೇಜು ಕುಟ್ಟಿ, ನಂತರ ನಾಯಕರೊಂದಿಗೆ ಕಲಾಪ ವಿಸರ್ಜಿಸಿದ್ದಾರೆ.
ಸುಮಾರು 15 ಸಾವಿರ ಅತಿಥಿ ಉಪನ್ಯಾಸಕರನ್ನು ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಖಾಯಂಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಧ್ವನಿ ಅಂಕಿತದ ಮೂಲಕ ಮಸೂದೆ ಅನುಮೋದನೆಗೊಂಡಿತ್ತು.
ಆದರೆ ಲೆಫ್ಟಿನೆಂಟ್ ಜನರಲ್ ಕೇಂದ್ರಾಡಳಿತದ ವಿಧಾನಸಭೆಗೆ ಸೇವಾವಧಿ ವಿಚಾರದಲ್ಲಿ ನಿರ್ಧರಿಸುವ ಸಂವಿಧಾನಾತ್ಮಕ ಅಧಿಕಾರವಿಲ್ಲ ಎಂದು ಮಸೂದೆಗೆ ಅಂಕಿತ ಹಾಕಿರಲಿಲ್ಲ. ಇದಕ್ಕೆ ಕೋಪಗೊಂಡು ಕೇಜ್ರಿವಾಲ್ ಶಾರುಖ್ ಕಾನ್ ಅವರ ಮೈ ನೇಮ್ ಈಸ್ ಖಾನ್ ಸಿನಿಮಾ ಡೈಲಾಗ್ ಹೇಳಿದ್ದಾರೆ. “ನಾನು , ಮನೀಷ್ ಸಿಸೊಡಿಯಾ ಚುನಾಯಿತರು. ಮಸೂದೆ ವಿಚಾರದಲ್ಲಿ ಮುಚ್ಚುಮರೆಬೇಡ. ನಾವು ಉಗ್ರರಲ್ಲ’ ಎಂದು ಸವಾಲೆಸೆದಿದ್ದಾರೆ.
Leave A Reply