ರಾಹುಲ್ ಗಾಂಧಿಯ ನಿತ್ಯ ಅಸಂಬದ್ಧ ಹೇಳಿಕೆಗಳಿಂದ ನಿಮ್ಮ ಪಕ್ಷದವರೇ “ಸೂ..ಮ… ಮತ್ತೆ ಬಾಯ್ಬಿಟ್ಟ” ಎನ್ನುತ್ತಿದ್ದಾರೆ!
ಕರ್ನಾಟಕ ರಾಜ್ಯ ಸರಕಾರ ಸಚಿವ ರೋಶನ್ ಬೇಗ್ 500 ಮತ್ತು 1000 ರೂಪಾಯಿ ನೋಟ್ ಗಳು ಅಪಮೌಲ್ಯ ಗೊಂಡು ಒಂದು ವರ್ಷದ ನಂತರವೂ ಆ ಹೊಡೆತದಿಂದ ಹೊರಗೆ ಬಂದಿಲ್ಲ ಎನ್ನುವುದು ಸ್ಪಷ್ಟ. ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ತೆಗೆದಿಟ್ಟಿದ್ದ ಸಾವಿರಾರು ಕೋಟಿ ಐನೂರು ಮತ್ತು ಒಂದು ಸಾವಿರ ರೂಪಾಯಿ ನೋಟುಗಳು ಹಾಗೆ ಮಾಯಾವತಿ, ಅಖಿಲೇಶ್ ಸಿಂಗ್, ಕಾಂಗ್ರೆಸ್ ನಾಯಕರ ತಿಜೋರಿಯಲ್ಲಿ ಕೊಳೆತು ಹೋದ ಕಾರಣ ಜನರಿಗೆ ಪ್ರತಿ ಬಾರಿ ಹಣಕೊಟ್ಟು ಪುಸಲಾಯಿಸಿ ಗೆದ್ದು ಬರುತ್ತಿದ್ದ ಈ ಪಕ್ಷಗಳು ಈ ಪರಿ ಹೇಗೆ ಸೋತಿವೆ ಎನ್ನುವುದನ್ನು ಇಡೀ ರಾಷ್ಟ್ರ ನೋಡಿದೆ. ಇನ್ನು ನೋಟ್ ಅಪಮೌಲ್ಯದ ನಂತರ ಭಾರತದ ತೆರಿಗೆದಾರರ ಸಂಖ್ಯೆ ಹೆಚ್ಚಾಗಿರುವುದು ದೇಶದ ಆರ್ಥಿಕ ದೃಷ್ಟಿಕೋನದಿಂದ ಒಳ್ಳೆಯದು ಎನ್ನುವುದನ್ನು ಪಿಯುಸಿಯಲ್ಲಿ ಇಕಾನಾಮಿಕ್ಸ್ ಕಲಿತ ಯುವಕ ಕೂಡ ಹೇಳಬಲ್ಲ. ಇನ್ನೂ ದೇಶದ ಪರ್ಯಾಯ ಆರ್ಥಿಕ ವ್ಯವಸ್ಥೆಯಾಗಿದ್ದ ಕಳ್ಳನೋಟು, ನಕಲಿ ನೋಟು ಹಾವಳಿ ಹೇಗೆ ನಿಯಂತ್ರಣಕ್ಕೆ ಬಂತು ಎನ್ನುವುದನ್ನು ಅರ್ಥ ಶಾಸ್ತ್ರಜ್ಞರು ನೋಡಿದ್ದಾರೆ. ಅದರೊಂದಿಗೆ ಯಾವೆಲ್ಲ ಖಾತೆಗಳಲ್ಲಿ ಅಕ್ರಮ ಹಣ ಜಮೆಯಾಗಿದೆ ಮತ್ತು ಎಷ್ಟು ನಕಲಿ ಶೆಲ್ ಕಂಪೆನಿಗಳು ಇವೆ ಅದರಲ್ಲಿ ಎಷ್ಟು ಉದ್ದಿಮೆದಾರರು ಹಣ ಬಿಳಿ ಮಾಡುತ್ತಿದ್ದರು ಎಂದು ಕೂಡ ಕೇಂದ್ರ ಸರಕಾರ ಪಟ್ಟಿ ಹಿಡಿದು ಕುಳಿತಿದೆ. ಒಟ್ಟಿನಲ್ಲಿ ಕೆಲವು ದಿನ ಜನರಿಗೆ ಆದ ತೊಂದರೆ ರಾಷ್ಟ್ರದ ಹಿತದೃಷ್ಟಿಯಿಂದ ದೂರಗಾಮಿ ಪರಿಣಾಮಗಳನ್ನು ತೋರಿಸುವುದನ್ನು ದೇಶದ ಜನ ಗಮನಿಸುತ್ತಿದ್ದಾರೆ. ಇಷ್ಟು ವರ್ಷ ತೆರಿಗೆ ಕಳ್ಳರಿಗೆ ಅಭಯಹಸ್ತ ನೀಡುತ್ತಾ, ತನ್ನ ಹುಂಡಿಯನ್ನು ತುಂಬಿಸಿ ದೇಶ ಏನು ಬೇಕಾದರೂ ಆಗಲಿ ನಾವು ಚೆನ್ನಾಗಿದ್ದರೆ ಸಾಕು ಎನ್ನುವ ಧೋರಣೆಯನ್ನು ನಡೆಸಿಕೊಂಡು ಬರುತ್ತಿದ್ದ ಕಾಂಗ್ರೆಸ್ ಮಾತ್ರ ಆ ಶಾಕ್ ನಿಂದ ಹೊರಬಂದೇ ಇಲ್ಲ. ಆದರೆ ನರೇಂದ್ರ ಮೋದಿ ಪ್ರಧಾನಿಯಾದ ನಂತರ ತಾನು ತಿನ್ನಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂದು ಹೇಳಿದ ಬಳಿಕ ಅದನ್ನು ಒಂದೊಂದೇ ಹಂತಗಳಲ್ಲಿ ಪಾಲಿಸಿಕೊಂಡು ಬಂದಿದ್ದಾರೆ. ಅದಕ್ಕೆ ವಿರುದ್ಧವಾಗಿ ರಾಹುಲ್ ಗಾಂಧಿ ನಾಟಕ ಮಾಡಲು ಬ್ಯಾಕೊಂದರ ಹೊರಗೆ ಕ್ಯೂನಲ್ಲಿ ನಿಂತು ಮೂರ್ನಾಕು ಸಾವಿರ ತೆಗೆದುಕೊಂಡು ಹೋದದ್ದನ್ನು ಜನ ನೋಡಿದ್ದಾರೆ.
ಆದರೆ ಈಗ ಚುನಾವಣೆ ಹತ್ತಿರ ಬರುವಾಗ ಆವತ್ತು ರೂಪಾಯಿ ಅಪಮೌಲ್ಯದಿಂದ ತಮ್ಮ ತೀಜೊರಿಗೆ ಆದ ಹೊಡೆತವನ್ನು ಜೀರ್ಣಿಸಿಕೊಳ್ಳಲಾರದೆ ರೋಶನ್ ಬೇಗ್ ಅವರ ರೋಶ ಹೊರಗೆ ಬಂದಿದೆ. ರೂಪಾಯಿ ಅಪಮೌಲ್ಯದಿಂದ ಬಿಜೆಪಿಯವರೇ ಮೋದಿಯನ್ನು ಕೆಟ್ಟ ಅಸಹ್ಯ ಪದಗಳಿಂದ ಬಯ್ಯುತ್ತಿದ್ದಾರೆ ಎಂದಿದ್ದಾರೆ. ಆ ಶಬ್ದಗಳು ರೋಶನ್ ಬೇಗ್ ಘನತೆಗೆ ಮತ್ತು ವರ್ಚಸ್ಸಿಗೆ ಸಮಾನವಾಗಿರುವುದರಿಂದ ಇಲ್ಲಿ ಬರೆಯುವುದು ಕೂಡ ಪಾಪಕರ ಎನ್ನುವುದು ನಮ್ಮ ಅನಿಸಿಕೆ. ಮೊದಲನೇಯದಾಗಿ ಮೋದಿಯವರನ್ನು ಯಾವುದೇ ಕಾರಣಕ್ಕೂ ಬೈಯುವಂತಹ ಕೆಲಸ ಅವರು ಮಾಡಿಲ್ಲ. ಒಂದು ವೇಳೆ ಯಾರಾದರೂ ಬೈದರೆ ಆತ ಬಿಜೆಪಿ ಕಾರ್ಯಕರ್ಥನೊ ಅಥವಾ ಕಾಂಗ್ರೆಸ್ ಕರ್ಯಕರ್ಥನೋ ಎಂದು ರೋಶನ್ ಬೇಗ್ ಪರೀಕ್ಷಿಸುವುದು ಒಳ್ಳೆಯದು. ಯಾಕೆಂದರೆ ಆ ಅಕ್ಷರಗಳಲ್ಲಿ ಬೈಯುವುದು ನಿಮ್ಮ ಸಂಸ್ಕೃತಿ. ಒಂದು ವೇಳೆ ತೆರಿಗೆ ತಪ್ಪಿಸುತ್ತಾ ಮೋದಿಯವರಿಂದ ತೊಂದರೆಯಾಯಿತು ಎಂದು ಆ ಶಬ್ದಗಳಲ್ಲಿ ಬೈಯುವವ ಬಿಜೆಪಿಯಲ್ಲಿ ಇರುವುದಕ್ಕಿಂತ ಸೋನಿಯಾ ಗಾಂಧಿ ಪಾದ ನೆಕ್ಕಲಿ.
ಇನ್ನೊಂದು ರೋಶನ್ ಬೇಗ್ ಅವರೇ, ನಿಮ್ಮ ರಾಹುಲ್ ಗಾಂಧಿಯವರನ್ನು ಟೀಕಿಸುವುದು ತಪ್ಪು ಎನ್ನುತ್ತಿರಲ್ಲ, ಅವರು ಹೊಗಳುವುದು ಏನು ಮಾಡಿದ್ದಾರೆ ಎಂದು ನೀವೆ ಹೇಳಿ. ಅವರಿಗೆ ಹೊಗಳುವಂತದ್ದು ಏನಾದರೂ ಇದೆಯಾ ಎಂದು ಇಡೀ ರಾಷ್ಟ್ರದಲ್ಲಿ ದುರ್ಬೀನು ಹಿಡಿದುಕೊಂಡು ಹುಡುಕಿದರೂ ಏನಾದರೂ ಸಿಗುತ್ತದೆಯಾ? ಇದೇ ರಾಹುಲ್ ಗಾಂಧಿ ತಲೆಕೆಟ್ಟವರಂತೆ ಆಗಾಗ ಅಸಂಬದ್ಧ ಸ್ಟೇಟ್ ಮೆಂಟ್ ಕೊಡುವಾಗ ನಿಮ್ಮ ಪಕ್ಷದವರೇ ಸೂ……ಮ….. ಮತ್ತೆ ಬಾಯಿ ಬಿಟ್ಟನಲ್ಲಪ್ಪಾ ಎಂದು ಹೇಳಿದ್ದನ್ನು ಯಾರು ಬೇಕಾದರೂ ಯಾವಾಗ ಬೇಕಾದರೂ ಕೇಳಬಹುದು. ಒಂದು ವೇಳೆ ರೋಶನ್ ಬೇಗ್ ನಿಮಗೆ ಡೌಟಿದ್ದರೆ ನಾಳೆ, ನಾಡಿದ್ದರಲ್ಲಿ ಯಾವುದಾದರೂ ಪತ್ರಿಕೆ ತೆಗೆದು ನೋಡಿ, ನಿಮ್ಮ ರಾಹುಲ್ ಗಾಂಧಿ ಹೇಳಿಕೆ ಯಾವುದಾದರೂ ಇರುತ್ತೆ, ಆಗ ಗ್ಯಾರಂಟಿಯಾಗಿ ಹೇಳ್ತೆನೆ, ನಿಮ್ಮ ಬಾಯಿಯಿಂದ ಬರಲಿದೆ ” ಸೂ….ಮ….. ಮತ್ತೆ ಬಾಯ್ಬಿಟ್ಟ!”
Leave A Reply