ಬೆಂಗಳೂರು ಮಳೆ ನಿರ್ಲಕ್ಷಿಸಿದ ಸರ್ಕಾರದಿಂದ 14ನೇ ಬಲಿ
Posted On October 16, 2017

>> ಪೂರ್ವ ಬೆಂಗಳೂರಿನ ಕೃಷ್ಣಪ್ಪ ಗಾರ್ಡನ್ ನಿವಾಸಿ ನರಸಮ್ಮ (18) ಮೃತ ಯುವತಿ
>> ಲಗ್ಗೆರೆ ನಗರ ನಿವಾಸಿ ಪುಷ್ಪಾ (22) ಶವ ಭಾನುವಾರ ಪತ್ತೆ, ಜೊತೆಗೆ ಕೊಚ್ಚಿಹೋಗಿದ್ದ ತಾಯಿ ಮೀನಾಕ್ಷಿ (57) ಶವಕ್ಕಾಗಿ ಹುಡುಕಾಟ
ಬೆಂಗಳೂರು : ಕಳೆದ ಆರು ವರ್ಷಗಳಿಂದ ಕರ್ನಾಟಕ ಭೀಕರ ಬರಗಾಲ ಎದುರಿಸುತ್ತಿತ್ತು. ಈ ಬಾರಿಯೂ ಹವಾಮಾನ ಇಲಾಖೆ ಮುನ್ಸೂಚನೆ ನೋಡಿದರೆ ಸಾಧಾರಣಕ್ಕಿಂತ ಕಡಿಮೆ ಮಳೆ ಎಂಬುದಿತ್ತು. ಆದರೆ ದೇವರ ದಯೆಯಿಂದ ಒಳ್ಳೆಯ ಮಳೆಯೇ ರಾಜ್ಯಾದ್ಯಂತ ಸುರಿಯುತ್ತಿದೆ. ಮುಂಗಾರು ಮುಗಿಯುವ ಲಕ್ಷಣಗಳೇ ಇಲ್ಲದ ಹೊತ್ತಲ್ಲಿ ಜನರು ಮಳೆಗೆ ಶಾಪಹಾಕಲು ಆರಂಭಿಸಿದ್ದಾರೆ.
ಬರ ಮುಗಿದು ತಂಪು ಬಂತು ಎಂದು ಖುಷಿಪಡುವ ಕನಿಷ್ಠ ಅರಿವೂ ಇಲ್ಲದ ಜನರು ಆಫೀಸ್‍ಗೆ ಲೇಟಾಯಿತು, ಬಟ್ಟೆ ಒಣಗಿಲ್ಲ, ಹೊರಗೆ ಹೊಗುವಂತಿಲ್ಲ ಎಂದು ಗೊಣಗುವುದು ಸಾಮಾನ್ಯವಾಗಿ ಹೋಗಿದೆ.
ಇದೇ ಮಾದರಿಯಲ್ಲಿ ಮಳೆ ಅವಾಂತರಕ್ಕೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ ಎಂದು ಸುದ್ದಿ ಬರುತ್ತಿವೆ. ಅಲ್ಲ ಸ್ವಾಮಿ, ರಾಜ್ಯ ಸರ್ಕಾರ ಮೂಲಭೂತ ಸೌಕರ್ಯಗಳ ಕನಿಷ್ಢ ನಿರ್ವಹಣೆಯನ್ನೂ ಮಾಡದೆ, ಮಳೆ ನೀರು ಹರಿಯುವ ಜಾಗಗಳಲೆಲ್ಲಾ ಕಟ್ಟಡ ನಿರ್ಮಿಸಲು ಅನುಮತಿ, ಅತಿಕ್ರಮಣಕ್ಕೆ ಅವಕಾಶ ಕೊಟ್ಟರೆ ಇನ್ನೇನು ಆಗುತ್ತದೆ.

ಮೊನ್ನೆ ರಸ್ತೆ ಗುಂಡಿಗೆ 6 ಬಲಿಯಾಗಿದೆ ಎಂದು ಸುದ್ದಿ ಬಂದಿದೆ. ಇದಕ್ಕೆ ರಸ್ತೆ ಸರಿಯಾಗಿ ಡಾಂಬರು ಹಿಡಿದುಕೊಂಡಿಲ್ಲ ಎಂದು ದೂರಲಾಗುತ್ತದೆಯೇ? ಅಥವಾ ಡಾಂಬರು ಕಳ್ಳಾಟದಿಂದ ಮನುಷ್ಯರ ಬಲಿ ಎಂದು ಚೀರಾಡಲಾಗುತ್ತದೆಯೇ?
ಭ್ರಷ್ಟಾಚಾರದ ಉತ್ತುಂಗದಿಂದ ನಿರ್ಮಿಸಿ, ಮತ್ತೆ ದುಡ್ಡು ನುಂಗಲೆಂದೇ ಮರೆತ ರಸ್ತೆ ನಿರ್ವಹಣೆಯಿಂದ ತಾನೇ ನಾಗರಿಕರು ಬಲಿಯಾಗುತ್ತಿರುವುದು. ಅದರಂತೆ ಮಳೆ ಸುರಿದು ಯಾರನ್ನು ಬಲಿ ತೆಗೆದುಕೊಳ್ಳುತ್ತಿಲ್ಲ. ಬದಲಾಗಿ ಮುಂದಿನ ವರ್ಷ ಪೂರ್ತಿ ಒಳ್ಳೆಯ ಬಳೆ, ಸಮೃದ್ಧಿ ರಾಜ್ಯಾದ್ಯಂತ ಕಾಣಬಹುದು.
ಆದರೆ ಮಳೆ ನೀರು ಹರಿಯಲು ಬಿಡದೆ ಕಟ್ಟಿಕೊಂಡ ಮನೆಗಳು, ಯದ್ವಾತದ್ವಾ ಆಗಿರುವ ವಾಹನಗಳ ಸಂಚಾರ, ರಾಜಧಾನಿಯೇ ಕರ್ನಾಟಕವೇನೋ ಎಂಬಂತೆ ಪ್ರತಿದಿನ ಹರಿದುಬರುತ್ತಿರುವ ಜನಸಾಗರವೇ ನಾಗರಿಕರ ಸಾವಿಗೆ ಕಾರಣ. ಅಂದರೆ ನಮ್ಮಸಾವಿಗೆ ನಾವೂ ಹೊಣೆ. ಸರ್ಕಾರದ ಪಾಲು ಅದರಲ್ಲಿ ಸೇರುತ್ತಿದೆ.
- Advertisement -
Leave A Reply