ಕಳ್ತಪ್ಪಿಸಿಕೊಂಡಿದ್ದ ಕಾಂಗ್ರೆಸ್‍ಗೆ ಮತ್ತೆ ಹೆಗಲೇರಲಿದೆ ಬೋಫೋರ್ಸ್ ಬೇತಾಳ
>> ರಾಜೀವ್ ಗಾಂಧಿ ಪಾಪದ ಕೂಸು ಬಗ್ಗೆ ಮರುತನಿಖೆಗೆ ಮೋದಿ ಸರ್ಕಾರ ಅನುಮತಿ ಕೊಡುವುದೇ?
>> ಹಿಂದುಜಾ ಸಹೋದರರ ಅಪರಾಧ ಸಾಬೀತಾಗುವುದೇ?
>> 2005ರಿಂದಲೇ ಸಿಬಿಐಗೆ ಅನುಮತಿ ನೀಡದೇ ಯುಪಿಎ ಸರ್ಕಾರ ಮೌನ ವಹಿಸಿದ್ದು ಯಾಕೆ?
ದೆಹಲಿ : ಸುಪ್ರೀಂಕೋರ್ಟ್‍ನಲ್ಲಿ ಕಾಂಗ್ರೆಸ್ ಪ್ರಧಾನಿ ರಾಜೀವ್ ಗಾಂಧಿ ಆಡಳಿತದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ “ಬೋಫೋರ್ಸ್’ ಬಗ್ಗೆ ಮರುತನಿಖೆಗೆ ಅನುಮತಿ ನೀಡಲು ಸಿಬಿಐ ಮತ್ತೆ ಎಸ್‍ಎಲ್‍ಪಿ ನಡೆಸಲು ಮುಂದಾಗಿದೆ. ಅಂದರೆ ವಿಶೇಷ ಅರ್ಜಿ ಸಲ್ಲಿಸಿ ಕೋರ್ಟ್‍ನ ರಜಾವಧಿಯಲ್ಲಿ ವಿಚಾರಣೆಗೆ ನಡೆಸಲು ಮನವಿ ಮಾಡಲು ಸಿಬಿಐ ಕೇಂದ್ರ ಸರಕಾರದ ಅನುಮತಿ ಕೇಳಿದೆ. ಶುಕ್ರವಾರ ಕೇಂದ್ರೀಯ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಸಿಬಿಐ ಈ ಕುರಿತು ಪತ್ರ ಬರೆದಿದೆ.
2005ರಿಂದಲೂ ಸಿಬಿಐ ಎಸ್‍ಎಲ್‍ಪಿ ಸಲ್ಲಿಕೆಗೆ ಯುಪಿಎ ಸರಕಾರಕ್ಕೆ ಅನುಮತಿ ಕೋರುತ್ತಲೇ ಇತ್ತು. ಆದರೆ ತನ್ನ ಪ್ರಧಾನಿ ರಾಜೀವ್ ಹೆಸರು ಕೆಡುವ ಆತಂಕದಿಂದ ಸೋನಿಯಾ ಗಾಂಧಿ ನೇತೃತ್ವದ ಮನಮೋಹನ್ ಸಿಂಗ್ ಆಡಳಿತ ಮೌನಕ್ಕೆ ಶರಣಾಗಿತ್ತು.
ಯುರೋಪ್‍ನಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿಕೊಂಡು ಅಲ್ಲೇ ನೆಲಸಿರುವ ಹಿಂದುಜಾ ಸೋದರರ ವಿರುದ್ಧ ಬಫಫೋರ್ಸ್ ಹಗರಣದಲ್ಲಿ ದಾಖಲಾಗಿದ್ದ ಎಫ್‍ಐಆರ್ ದೆಹಲಿ ಹೈಕೋರ್ಟ್‍ನಿಂದ ಮೇ. 31, 2005ರಲ್ಲಿ ರದ್ದಾಗಿತ್ತು. ಇದನ್ನು ಎಸ್‍ಎಲ್‍ಪಿ ಸಲ್ಲಿಕೆಯಲ್ಲಿ ಪ್ರಶ್ನಿಸಲಾಗುತ್ತಿದೆ. ನಂತರ ದೆಹಲಿ ಹೈಕೋರ್ಟ್ ನ್ಯಾ. ಜೆ.ಡಿ.ಕಪೂರ್ ಬೋಫೋರ್ಸ್ ಹಗರಣದಲ್ಲಿ ಆರೋಪ ಕೇಳಿಬಂದಿದ್ದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ನಿರಪರಾಧಿ ಎಂದು ತೀರ್ಪು ನೀಡಿದ್ದರು. ಅವರ ಸಹಿಯನ್ನು ಬೋಫೋರ್ಸ್ ಒಪ್ಪಂದದಲ್ಲಿ ನಕಲು ಮಾಡಲಾಗಿದೆ. ಅದರ ವಿರುದ್ಧ ತನಿಖೆಗೆ ಆದೇಶಿಸಿದ್ದರು.
ಪತ್ತೆದಾರಿ ಹೆರ್ಷ್‍ಮನ್ ಬಾಯ್ಬಿಟ್ಟ ಸ್ವಿಸ್ ಬ್ಯಾಂಕ್ ಸತ್ಯ
ಇತ್ತೀಚೆಗೆ ಬೋಫೋರ್ಸ್ ಬಗ್ಗೆ ಅಂದಿನ ಹಣಕಾಸು ಸಚಿವ ವಿ.ಪಿ.ಸಿಂಗ್ ನೇಮಿಸಿದ್ದ ಅಮೆರಿಕ ಮೂಲದ ಖಾಸಗಿ ಪತ್ತೆದಾರಿ ಕಂಪನಿ ಫೇರ್‍ಫ್ಯಾಕ್ಸ್ ಮುಖ್ಯಸ್ಥ ಮೈಕೆಲ್ ಹೆರ್ಷ್‍ಮೆನ್ ಭಾರತಕ್ಕೆ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದರು. ಮಾಧ್ಯಮಗಳು ನಡೆಸಿದ ಸಂದರ್ಶನದಲ್ಲಿ ಅವರು,
Leave A Reply