ಶಿಷ್ಟಾಚಾರ ನೆಪವೊಡ್ಡಿ ರಾಜಕಾರಣ ಮಾಡಲು ಕರೆದರೆ ಟಿಪ್ಪುಗೆ ಮಂಗಳಾರತಿ ಗ್ಯಾರೆಂಟಿ
Posted On October 22, 2017

ಬೆಂಗಳೂರು : ಯಾರು ಏನೇ ಹೇಳಿದರೂ, ಟಿಪ್ಪು ಜಯಂತಿ ಆಚರಿಸಿ ಮುಸ್ಲಿಂ ವೋಟು ದಕ್ಕಿಸಿಕೊಂಡು ಗೆಲ್ಲುವೆವು ಎಂದು ಉದ್ಧಟತನ ಪ್ರದರ್ಶಿಸುತ್ತಿದ್ದ ರಾಜ್ಯ ಸರಕಾರಕ್ಕೆ ಸಂಸದ ಅನಂತಕುಮಾರ್ ಹೆಗಡೆ ಅದೇ ಉದ್ಧಟತನವನ್ನೇ ಮದ್ದಾಗಿ ಕೊಟ್ಟಿದ್ದಾರೆ.
ನೋಡಿ, ನನ್ನನ್ನು ಟಿಪ್ಪು ಜಯಂತಿ ಆಚರಣೆಗೆ ಕರೆಯಬೇಡಿ ಎಂದು ಹೇಳಿದ್ದೇನೆ. ಶಿಷ್ಟಾಚಾರದ ನೆಪವೊಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿಯೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದರೆ ,ನ.10ರ ವೇದಿಕೆ ಮೇಲೆ ಟಿಪ್ಪು ನಡೆಸಿದ ಹತ್ಯಾಕಾಂಡ, ಅನಾಚಾರಗಳನ್ನು ಬಯಲು ಮಾಡಬೇಕಾಗುತ್ತದೆ. ಇದನ್ನು ಸಿದ್ದರಾಮಯ್ಯ ಎದುರಿಸಲು ಎಂದು ಹೆಗಡೆ ಸವಾಲು ಎಸೆದಿದ್ದಾರೆ.
ಸಂಸದರು ಬರುವುದಿಲ್ಲ ಎಂದು ರಾಜಕೀಯ ದಾಳಕ್ಕೆ ತಾವಾಗಿಯೇ ಸಿಕ್ಕಿಬಿದ್ದಿದ್ದಾರೆ ಎಂದು ಒಳಗೊಳಗೆ ನಗುತ್ತಿದ್ದ ಸಿದ್ದರಾಮಯ್ಯ ಬಣಕ್ಕೆ ಈಗ ಪುಕ್ಕುಲುತನ ಶುರುವಾಗಿದೆ. ವೇದಿಕೆ ಮೇಲೆಯೇ ಮುಸ್ಲಿಮರಿಗೆ ಮುಜುಗರ ಆಗುವ ರೀತಿ ನಿಷ್ಠುರವಾದಿ ಹೆಗಡೆ ಮಂಗಳಾರತಿ ಮಾಡಿದರೆ ಹೇಗೆ ಎಂದು ಸಿಎಂ ಸಿದ್ದು ಬಣ ಆಲೋಚಿಸುತ್ತಿದೆ.
- Advertisement -
Leave A Reply