ತೃತೀಯ ಲಿಂಗಿಗಳ ಅಭ್ಯುದಯ ನೀತಿಗೆ ಸಂಪುಟ ಅಸ್ತು
ಬೆಂಗಳೂರು : ತೃತೀಯ ಲಿಂಗಿಗಳು ಅಥವಾ ಮಂಗಳಮುಖಿಯರು ಅಥವಾ ತೀರಾ ಹಗುರವಾಗಿ ಕರೆಯಲಾಗುವಂತೆ “ಹಿಜಡಾ’ ಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ರಾಜ್ಯ ಸಚಿವ ಸಂಪುಟ ಹೊಸ ನೀತಿಗೆ ಒಪ್ಪಿಗೆ ಸೂಚಿಸಿದೆ.
ಇತ್ತೀಚೆಗೆ ಸುಪ್ರೀಂಕೋರ್ಟ್ ಆದೇಶದ ಅನ್ವಯ ನೀತಿ ರಚಿಸಲಾಗಿದೆ.
ಜೋಗಪ್ಪ, ಜಿಜ್ರಾ, ಹೆಣ್ಣಿನಿಂದ ಗಂಡು, ಗಂಡಿನಿಂದ ಹೆಣ್ಣು, ಅಂತರ್ಲಿಂಗಿ, ಕೊಥೀಸ್, ಜೋಗ್ತಾಸ್, ಶಿವಶಕ್ತೀಸ್ , ಅರಾವನೀಸ್ ಎಂಬ ವಿವಿಧ ಪಂಗಡಗಳನ್ನು ನೀತಿಗೆ ಸೇರಿಸಲಾಗಿದೆ.
ಶಾಲೆಗಳಲ್ಲಿ ಮಕ್ಕಳಿಗೆ ತೃತೀಯ ಲಿಂಗಿಗಳ ಬಗ್ಗೆ ಶಿಕ್ಷಣ, ಅಂಗನವಾಡಿ ಕಾರ್ಯಕರ್ತೆಯರಿಂದ ತೃತೀಯ ಲಿಂಗಿಗಳ ಮನೆಗೆ ಭೇಟಿ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ನೀತಿ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಲೈಂಗಿಕ ಕಿರುಕುಳ, ಭೇದ, ಬಹಿಷ್ಕಾರದಂಥ ಪಿಡುಗುಗಳ ಬಗ್ಗೆ ತೃತೀಯ ಲಿಂಗಿ ಮಕ್ಕಳಿಗೆ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ಹೊಂದಿಕೊಳ್ಳಲು ಸೂಕ್ತ ನೆರವನ್ನು ಸರ್ಕಾರ ಕಲ್ಪಿಸಲಿದೆ. ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಅವರಿಗೂ ಶಾಲೆಗಳಲ್ಲಿ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲು ಚಿಂತಿಸಲಾಗಿದೆ.
Leave A Reply