ಜನಸಾಮಾನ್ಯನಿಗೆ ಮತ್ತೆ ಎಲ್‍ಪಿಜಿ ದರ ಏರಿಕೆ ಬರೆ!
Posted On November 2, 2017
0

>> ಬೆಂಗಳೂರಿನಲ್ಲಿ ಸಬ್ಸಿಡಿ ದರ ರೂ. 598.50 ರಿಂದ ರೂ. 603ಕ್ಕೆ ಜಿಗಿತ
ನವದೆಹಲಿ: ಜು. 2016ರಿಂದ 19ನೇ ಬಾರಿಗೆ ಎಲ್‍ಪಿಜಿ ಸಿಲಿಂಡರ್ ದರದಲ್ಲಿ ಏರಿಕೆ ಕಂಡುಬರುತ್ತಿದ್ದು ಬುಧವಾರ ತಡರಾತ್ರಿಯಿಂದ ಸಬ್ಸಿಡಿ ಅನಿಲ ದರ 4.50ರೂ. ಹೆಚ್ಚಾಗಿದೆ.
ಸಬ್ಸಿಡಿ ರಹಿತ ಅನಿಲ ಸಿಲಿಂಡರ್ ದರ 93ರೂ. ಏರಿಕೆಯಾಗಿದ್ದು, ಜೆಟ್ ಇಂಧನ ದರ ಕೂಡ 2% ಜಿಗಿತ ಕಂಡಿದೆ.
ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಗಲ್ಫ್ ರಾಷ್ಟ್ರಗಳು ಹಣದ ಮುಗ್ಗಟ್ಟು ಅನುಭವಿಸುತ್ತಿರುವುದರ ಪರಿಣಾಮವಿದು ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ವರ್ಷದಿಂದ ಇದುವರೆಗೂ ರೂ. 76.51 ರಷ್ಟು ಎಲ್‍ಪಿಜಿ ದರದಲ್ಲಿ ಏರಿಕೆಯಾಗಿ ಗ್ರಾಹಕರ ಜೇಬಿಗೆ ಕತ್ತರಿಹಾಕಿದೆ.
Trending Now
ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ
July 31, 2025