2018ಕ್ಕೆ ಅಷ್ಠ ರಾಜ್ಯಗಳಲ್ಲಿ ಚುನಾವಣೆ, ಭಾರತದ ರಾಜಕೀಯಕ್ಕೆ ಹೊಸ ಇತಿಹಾಸ
ದೆಹಲಿ: ಭಾರತದರಾಜಕೀಯ ಇತಿಹಾಸದಲ್ಲೇ 2018ನೇ ವರ್ಷ ಹೊಸ ಇತಿಹಾಸ ಬರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ದೇಶಾದ್ಯಂತ ವಿಜಯದುಂಧುಬಿ ಭಾರಿಸುತ್ತಿದ್ದು, 2018ರಲ್ಲಿ ಎಂಟು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದ್ದು, ಅಲ್ಲಿಯೂ ಮೋದಿ ವಿಜಯ ಯಾತ್ರೆ ಮುಂದುವರಿಯುವ ಲಕ್ಷಗಳು ಗೋಚರಿಸಿವೆ.
2018ರ ಆರಂಭದಲ್ಲಿ ನಾಗಾಲ್ಯಾಂಡ್, ತ್ರಿಪುರಾ, ಮೇಘಾಲಯ ಮತ್ತು ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿವೆ. ಅಲ್ಲದೇ ಬಿಜೆಪಿ ಆಡಳಿತದಲ್ಲಿರುವ ಆಂಧ್ರಪ್ರದೇಶ, ಚತ್ತಿಗಡ್, ರಾಜಸ್ಥಾನ ಸೇರಿ ಮಿಜೋರಾಮ್ ನಲ್ಲಿ ಚುನಾವಣೆ ನಡೆಯಲಿವೆ. ಒಂದು ವೇಳೆ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಂತ್ರಗಾರಿಕೆ ಮುಂದುವರಿದರೇ, ಕಾಂಗ್ರೆಸ್ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ಆಡಳಿತ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ತಂತ್ರಗಾರಿಕೆಯಿಂದ ಬಿಜೆಪಿ ನಿರಂತರವಾಗಿ ಹಲವು ರಾಜ್ಯಗಳಲ್ಲಿ ವಿಜಯ ಸಾಧಿಸುತ್ತಿದೆ. ಅದೇ ಸ್ಥಿತಿ ಮುಂದುವರಿಯುವ ಲಕ್ಷಣಗಳು ಗೋಚರಿಸಿವೆ. ಅತ್ತ ಕಾಂಗ್ರೆಸ್ ನೂತನ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೊಸ ಹುರುಪಿನೊಂದಿಗೆ ತೋಳೆರಿಸಿ ಚುನಾವಣೆ ಎದುರಿಸಲು ಸಜ್ಜಾಗಿದೆ.
ಕಾಂಗ್ರೆಸ್ ಸಂಸತ್ ನಲ್ಲಿ ಪ್ರತಿಪಕ್ಷದ ಸ್ಥಾನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವುದು, ಬಿಜೆಪಿ ನಿರಂತರವಾಗಿ ಒಂದೊಂದು ರಾಜ್ಯಗಳಲ್ಲಿ ಗೆಲುವು ಸಾಧಿಸುತ್ತಿರುವುದು 2018ರಲ್ಲಿಯೂ ಮುಂದುವರಿಯಲಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಇನ್ನೊಂದೆಡೆ ಸ್ಥಳೀಯ ಪಕ್ಷಗಳು ರಾಷ್ಟ್ರೀಯ ಪಕ್ಷಗಳ ಮೇಲೆ ಕಣ್ಣಿಟ್ಟಿದ್ದು, ಕಾದು ನೋಡುವ ತಂತ್ರಕ್ಕೆ ಶರಣಾಗಿವೆ. 2018ರಲ್ಲಿ ನಡೆಯುವ ಚುನಾವಣೆಗಳು 2019ರಲ್ಲಿ ನಡೆಯುವ ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರಲಿದೆ.
ಯಾವ ರಾಜ್ಯದಲ್ಲಿ ಚುನಾವಣೆ
ಕರ್ನಾಟಕ: ಕಾಂಗ್ರೆಸ್ ಅಧಿಕಾರದಲ್ಲಿದ್ದು, ನಿರಂತರವಾಗಿ ಹಿಂದೂ ವಿರೋಧಿ ನೀತಿ, ಆಡಳಿತ ವೈಫಲ್ಯ, ರೈತರ ಸಮಸ್ಯೆ ಬಗೆಹರಿಸದೇ ಇರುವುದು, ಹೇಸಿಗೆ ಬರುವಷ್ಟರ ಮಟ್ಟಿಗೆ ತುಷ್ಟೀಕರಣ ರಾಜಕಾರಣ ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಗೆ ತೊಡಕಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಜನಾಕ್ರೋಶವಿದ್ದು, ಮೋದಿ ಅಲೆ, ಅಮಿತ್ ಶಾ ತಂತ್ರ, ಬಿಜೆಪಿ ರಾಜ್ಯ ನಾಯಕರ ಒಗ್ಗಟ್ಟಿನ ಹೋರಾಟ ಫಲಿಸಿದರೇ ಕರ್ನಾಟಕವೂ ಕಾಂಗ್ರೆಸ್ ನಿಂದ ಕೈ ಜಾರಿ ಹೋಗಲಿದೆ. 208 ಮೇ ಅಥವಾ ಏಪ್ರಿಲ್ ನಲ್ಲಿ ಚುನಾವಣೆ ನಡೆಯಬಹುದು.
ಮಧ್ಯಪ್ರದೇಶ: ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು 2013ರಲ್ಲಿ ಬಿಜೆಪಿ 230 ಸ್ಥಾನಗಳಲ್ಲಿ 165 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಕಾಂಗ್ರೆಸ್ 57 ಸ್ಥಾನ, ಮೂರು ಬಾರಿ ನಿರಂತರವಾಗಿ ಮುಖ್ಯಮಂತ್ರಿ ಸ್ಥಾನವನ್ನು ಶಿವರಾಜ್ ಸಿಂಗ್ ಚೌಹಾಣ್ ಅಧಿಕಾರಕ್ಕೇರಿದ್ದು, 2018 ಡಿಸೆಂಬರ್ ನಲ್ಲಿ ಚುನಾವಣೆ ನಡೆಯಲಿವೆ.
ರಾಜಸ್ಥಾನ: ಬಿಜೆಪಿ ಅಧಿಕಾರದಲ್ಲಿರುವ ಮತ್ತೊಂದು ದೊಡ್ಡ ರಾಜ್ಯ ರಾಜಸ್ಥಾನ. ಮುಖ್ಯಮಂತ್ರಿ ವಸುಂಧರಾ ರಾಜೆ ಅಧಿಕಾರ ನಡೆಸುತ್ತಿದ್ದು, 2019ರ ಜನವರಿಯಲ್ಲಿ ಸರ್ಕಾರದ ಆಡಳಿತ ಮುಗಿಯಲಿದ್ದು, 2018ರ ಡಿಸೆಂಬರ್ ನಲ್ಲಿ ಚುನಾವಣೆ ನಡೆಯುವ ಸಂಭವವಿದೆ.
ಚತ್ತಿಸಗಡ್: ರಮಣಸಿಂಗ್ ಮುಖ್ಯಮಂತ್ರಿಯಾಗಿದ್ದು, ನಾಲ್ಕನೇ ಭಾರಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಕಾಂಗ್ರೆಸ್ ಗೆ ಚತ್ತಿಸಗಡ್ ದಲ್ಲಿ ಗೆಲುವು ಸಾಧಿಸುವುದು ಬಾರಿ ಕಷ್ಟಕರವಾಗಿದೆ. 2013ರಲ್ಲಿ ನಡೆದ ಚುನಾವಣೆಯಲ್ಲಿ 90 ಸ್ಥಾನಗಳಲ್ಲಿ ಬಿಜೆಪಿ 50 ಸ್ಥಾನ ಕಾಂಗ್ರೆಸ್ 39 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ನಾಗಾಲ್ಯಾಂಡ್: 2018ರಲ್ಲಿ ಪ್ರಥಮ ಬಾರಿ ಚುನಾವಣೆ ಎದುರಿಸಲಿರುವ ರಾಜ್ಯ ನಾಗಾಲ್ಯಾಂಡ. ನಾಗಾಲ್ಯಾಂಡ್ ನಲ್ಲಿ ಫೆಬ್ರವರಿಯಲ್ಲಿ ಚುನಾವಣೆ ನಡೆಯುವ ಸಂಭವವಿದೆ. ನಾಗಾಲ್ಯಾಂಡ್ ಪೀಪಲ್ ಫ್ರಂಟ್ ಅಧಿಕಾರಕ್ಕೇರಲು ಚುನಾವನೆ ರ್ಯಾಲಿಗಳನ್ನು ಆರಂಭಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಇಲ್ಲಿ ಕಠಿಣ ಪರೀಕ್ಷೆ ಇದೆ.
ಮೇಘಾಲಯ: ಕಾಂಗ್ರೆಸ್ ನೇತೃತ್ವದಲ್ಲಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅಧಿಕಾರದಲ್ಲಿದ್ದು, ಆಡಳಿತ ವಿರೋಧಿ ಅಲೆಯೇ ಇಲ್ಲಿದ್ದು, ಮೋದಿ ನಿರಂತರ ರ್ಯಾಲಿಗಳು ಮತ್ತು ಮೇಘಾಲಯ ಸೇರಿ ಈಶಾನ್ಯ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡಿರುವ ಅನುದಾನದ ಬಗ್ಗೆ ಹೊಸ ಅಲೆ ಸೃಷ್ಟಿಸುವ ಲಕ್ಷಗಳಿವೆ. ಇಲ್ಲಿಯೂ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ.
ತ್ರಿಪುರಾ: ಸಿಪಿಐ(ಎಂ) ಅಧಿಕಾರದಲ್ಲಿದ್ದು, 60 ಸ್ಥಾನಗಳಲ್ಲಿ 49 ಸ್ಥಾನಗಳನ್ನು ಸಿಪಿಐ(ಎಂ) ಪಡೆದಿದೆ. ಮಾಣಿಕ್ ಸರ್ಕಾರ್ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾರೆ.
ಮಿಜೋರಾಂ: ಮರಲ್ಯಾಂಡ್ ಡೆಮೋಕ್ರಾಟಿಕ್ ಫ್ರಂಟ್ ಜತೆಗೂಡಿ ಬಿಜೆಪಿ ಅಧಿಕಾರಕ್ಕೇರಲು ಸಿದ್ಧತೆ ನಡೆಸಿದೆ. ಕಾಂಗ್ರೆಸ್ ಗೆ ಇಲ್ಲಿ ಗೆಲುವು ಸಾಧಿಸುವುದು ಕಷ್ಟಕರವಾಗಿದೆ. 2013ರಲ್ಲಿ ಕಾಂಗ್ರೆಸ್ 34 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. 2018ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ ಮಿಜೋರಾಂ ಮೇಲೆ ಕಣ್ಣಿಟ್ಟಿದ್ದು, ಗೆಲಲ್ಲು ಎಲ್ಲ ಸಿದ್ಧತೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಒಟ್ಟು ಎಂಟು ರಾಜ್ಯಗಳಲ್ಲಿ 2018ರಲ್ಲಿ ಚುನಾವಣೆ ನಡೆಯಲಿದ್ದು, ಜನರು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಆಡಳಿತ ಮೆಚ್ಚಿ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಗೆದ್ದರೇ ಕಾಂಗ್ರೆಸ್ ಮುಕ್ತ ಭಾರತ ಕನಸು ನನಸಾಗಲಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಎಂಟು ರಾಜ್ಯಗಳಲ್ಲಿ ಬಿಜೆಪಿ ತಕ್ಕ ಮಟ್ಟಿಗೆ ಹಿಡಿತ ಕಾಯ್ದುಕೊಂಡಿದೆ. ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಮೇಲೆ ಇಟ್ಟಿರುವ ವಿಶ್ವಾಸ ಈಡೇರುತ್ತಿದ್ದು, ಕಾಂಗ್ರೆಸ್ ಮುಕ್ತ ಭಾರತಕ್ಕೆ ಇನ್ನೊಂದಿಷ್ಟು ರಾಜ್ಯಗಳು ಸೇರುವುದು ನಿಶ್ಚಿತ ಎನ್ನಲಾಗಿದೆ.
Leave A Reply