ಸೌಜನ್ಯ ಮರೆತ ಕಾಂಗ್ರೆಸ್ ಸಂಸದರು, ಗದ್ದಲದ ಮಧ್ಯೆ ಕಾಂಗ್ರೆಸ್ ಬಂಡವಾಳ ಹೊರಹಾಕಿದ ಮೋದಿ
ದೆಹಲಿ: ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಪ್ರತಿಪಕ್ಷಗಳ ಸದಸ್ಯರು ಸೌಜನ್ಯ ಮರೆತವರಂತೆ ವರ್ತಿಸುವ ಮೂಲಕ ತಮ್ಮ ಅಸಹಿಷ್ಣುತೆಯನ್ನು ಹೊರಹಾಕಿದ್ದಾರೆ. ಬಿಜೆಪಿ ನೇತೃತ್ವದ ಎನ್ ಡಿಎ ಒಕ್ಕೂಟ ಆಡಳಿತಕ್ಕೆ ಬಂದ ನಂತರ ದೇಶದಲ್ಲಿ ಯಾವ ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದು ಪ್ರಶ್ನಿಸಿದ್ದ ಕಾಂಗ್ರೆಸ್ ಗೆ ಗದ್ದಲದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ತಕ್ಕ ಉತ್ತರ ನೀಡಿದರು.
ಕಾಂಗ್ರೆಸ್ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವದ ಕೊಲೆ ಮಾಡಿದೆ, ಭಾರತವನ್ನು ಜಾತಿ, ಧರ್ಮಗಳ ಆಧಾರದಲ್ಲಿ ಒಡೆಯುವ ಹೀನ ವೃತ್ತಿಗಿಳಿದಿದೆ, ಕಾಶ್ಮೀರ ಸಮಸ್ಯೆಗೆ ಮುಕ್ತಿ ನೀಡುವ ತಾಕತ್ತು ಹೊಂದಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೂ ಕಾಂಗ್ರೆಸ್ ವಂಚಿಸಿದೆ ಎಂದು ಕಾಂಗ್ರೆಸ್ ನ ಹುಳುಕುಗಳನ್ನು ಒಂದೋಂದೆ ಹೊರ ಹಾಕಿದರು.
ದೇಶದ ಇಂದಿನ ಇಂತಹ ದುಸ್ತಿತಿಗೆ 70 ವರ್ಷದ ನಿರಾಕಸ್ತಿಯುಳ್ಳ ಕಾಂಗ್ರೆಸ್ ನ ಆಡಳಿತವೇ ಕಾರಣ. ಕಾಂಗ್ರೆಸ್ ಸುಸ್ಸಜ್ಜಿತ ಆಡಳಿತ ನೀಡಿದ್ದರೇ ಇಂದು ದೇಶ ಯಾವುದೇ ಹಂತದಲ್ಲಿರುತ್ತಿತ್ತು. ಕಾಂಗ್ರೆಸ್ ಅಧಿಕಾರದಿಂದ ಮುಕ್ತವಾದ ಮೂರ್ನಾಲ್ಕು ವರ್ಷದಲ್ಲೇ ಭಾರತದ ಚಿತ್ರಣ ತಕ್ಕ ಮಟ್ಟಿಗೆ ಬದಲಾಗಿದೆ. 20022ರ ಹೊತ್ತಿಗೆ ಭಾರತ ನವ ಯುಗಕ್ಕೆ ನಾಂಧಿ ಹಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ವ್ಯಕ್ತಪಡಿಸಿದರು.
ಗಾಂಧಿ ಕುಟುಂಬಕ್ಕೆ ಸೇರಿದ್ದ ಒಂದೇ ಕಾರಣಕ್ಕೇ ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷ ಸ್ಥಾನಕ್ಕೇರಿಸಲಾಗಿದೆ. ಅದು ಪ್ರಜಾಪ್ರಭುತ್ವ ವಿರೋಧಿಯಲ್ಲವೇ. ರಾಜೀವ ಗಾಂಧಿ ಹೈದರಾಬಾದ್ ಗೆ ಪ್ರಧಾನಿಯಾಗಿದ್ದಾಗ ಭೇಟಿ ನೀಡಿದ್ದಾಗ ಸ್ವಾಗತಕ್ಕೆ ಬಂದಿದ್ದ ದಲಿತ ಮುಖಂಡನನ್ನು ಅವಮಾನಿಸಿದ್ದರು. ಇದೆಲ್ಲವನ್ನು ದೇಶ ಮರೆತ್ತಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಗೆ ಮೋದಿ ವಾಗ್ಭಾಣಗಳು
- ದೇಶ ಡೋಕ್ಲಾಮ್ ನಲ್ಲಿ ಹೋರಾಡುತ್ತಿದ್ದರೇ, ಕಾಂಗ್ರೆಸ್ ಚೀನಾ ಜತೆ ಆಲಂಗಿನ ಮಾಡಿಕೊಳ್ಳುತ್ತಿತ್ತು.
- ಆರೋಪ ಮಾಡಿದಷ್ಟು ಕಮಲ ಅರಳಲಿದೆ,
- ಸ್ವಚ್ಛ ಭಾರತ ಕಸಕ್ಕೆ ಮಾತ್ರ ಸಿಮೀತವಲ್ಲ, ದೇಶದ ಆಡಳಿತವನ್ನು ಕಸದಿಂದ ಮುಕ್ತ ಮಾಡುವುದು
- ರೈತರಿಗಾಗಿ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಅದು ಸಾಕಾರಗೊಳ್ಳುತ್ತಿದೆ.
- ದೇಶದಲ್ಲಿ ಉದ್ಯೋಗಗಳು ನಿರ್ಮಾಣವಾಗಿವೆ. ನಿಮ್ಮ ಕಣ್ಣು ತೆರೆದು ನೋಡಿ
- ಎನ್ ಡಿಎ ಅಧಿಕಾರದಲ್ಲಿ ಇರದೇ ಇರುವ ನಾಲ್ಕು ರಾಜ್ಯಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಯಾಗಿವೆ. ಅದಕ್ಕೆ ಕೇಂದ್ರದ ಪಾಲು ಹೆಚ್ಚಿದೆ. ನೀವು ಅದೇ ಹಳೇ ಹಾಡು ಹಾಡುತ್ತಿದ್ದೀರಿ.
- ಎನ್ ಡಿಎ ದೇಶದಲ್ಲಿ ಕಾರ್ಯನಿರ್ವಹಣೆಯ ಪದ್ಧತಿಯನ್ನೇ ಬದಲಾಯಿಸಿ, ಸರ್ವರನ್ನು ತಲುಪುತ್ತಿದೆ.
Leave A Reply