14 ಮುಸ್ಲಿಮರು ಸ್ವಯಂ ಪ್ರೇರಿತರಾಗಿ ಹಿಂದೂ ಧರ್ಮಕ್ಕೆ ಮತಾಂತರ, ಮಾಧ್ಯಮಗಳಿಗೇಕೆ ಉರಿ?
ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಎಡಪಂಥೀಯದ ಪರ ಒಲವಿರುವ ಮಾಧ್ಯಮಗಳನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪೋಷಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ, ಇದೇ ಮಾಧ್ಯಮಗಳ ಮತ್ತೊಂದು ಮುಖವಾಡ ಬಯಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಹಿಂದೂ ಧರ್ಮದ ಆಚರಣೆಗಳಿಗೆ ಸರ್ಕಾರ ಉದ್ದೇಶ ಪೂರ್ವಕವಾಗಿ ತಡೆಯೊಡ್ಡಿದರೂ, ಇಸ್ಲಾಂ ಮೂಲಭೂತವಾದಿಗಳ ಮತಾಂತರ ಪರ್ವ, ಲವ್ ಜಿಹಾದ್ ಇದ್ದರೂ ಸುಮ್ಮನಿರುವ ಈ ಎಡಪಂಥೀಯ ಮಾಧ್ಯಮಗಳು, ಈಗ 14 ಮುಸ್ಲಿಮರು ಸ್ವಯಂ ಪ್ರೇರಿತರಾಗಿ ಹಿಂದೂ ಧರ್ಮಕ್ಕೆ ಮತಾಂತರವಾಗುವುದನ್ನು ತಡೆಯಲು ಪಶ್ಚಿಮ ಬಂಗಾಳದಲ್ಲಿ ಗಲಾಟೆ ಆರಂಭಿಸಿದ್ದಾರೆ.
ಧರ್ಮತಲಾದ ರಾಣಿ ರಾಸ್ಮೋನಿ ಎಂಬಲ್ಲಿ ಹಿಂದೂ ಸಂಹಾತಿ ಎಂಬ ಸಂಸ್ಥೆಯ 10ನೇ ವಾರ್ಷಿಕೋತ್ಸವದಲ್ಲಿ ಸುಮಾರು 14 ಮುಸ್ಲಿಮರು ಸ್ವಯಂ ಪ್ರೇರಿತರಾಗಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ. ಇದನ್ನು ಸಹಿಸದ ಕೆಲ ಮಾಧ್ಯಮದವರು ಸ್ಥಳಕ್ಕೆ ದೌಡಾಯಿಸಿ, ಮತಾಂತರಗೊಂಡ ಕುಟುಂಬಸ್ಥರ ಜತೆ ಮಾತನಾಡಬೇಕು ಎಂದಿದ್ದಾರೆ. ಇನ್ನೂ ಕಾರ್ಯಕ್ರಮವೇ ಮುಗಿದಿಲ್ಲ, ಬಳಿಕ ಸಂದರ್ಶಿಸಿ ಎಂದು ಸಂಘಟಕರು ಹೇಳಿದ್ದಕ್ಕೇ ಗಲಾಟೆ ಮಾಡಿದ್ದಾರೆ.
ಕೊನೆಗೆ ಕಾರ್ಯಕ್ರಮ ಮುಗಿಯುವ ತನಕ ಸಂದರ್ಶನಕ್ಕೆ ಅವಕಾಶವಿಲ್ಲ ಎಂದು ಹೇಳಿದ ಕಾರಣಕ್ಕಾಗಿ ಕುಪಿತರಾದ ಮಾಧ್ಯಮದವರು ಗಲಾಟೆಯನ್ನೇ ಮಾಡಿದ್ದಾರೆ. ಅಲ್ಲದೆ ಇದು ಬಲವಂತದ ಮತಾಂತರ ಎಂದು ಸುಳ್ಳು ಸುದ್ದಿ ಹರಡಿದ್ದಾರೆ. ಕೊನೆಗೆ ಪೊಲೀಸರು ಬಂದು ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ.
Leave A Reply